Relationship Tips : ಜಗಳದ ನಂತ್ರ ಮತ್ತೆ ಒಂದಾಗೋದು ಹೀಗೆ…

By Suvarna NewsFirst Published Oct 28, 2022, 3:35 PM IST
Highlights

ಪ್ರೀತಿ ಇದ್ದಲ್ಲಿ ಜಗಳ ಇದ್ದಿದ್ದೆ. ದಂಪತಿ ಮಧ್ಯೆ ಆಗಾಗ ಜಗಳವಾಗ್ತಿರಬೇಕು. ಆದ್ರೆ ಇದೇ ಜಗಳ ಮಿತಿ ಮೀರಿದ್ರೆ ದಾಂಪತ್ಯ ಬಿರುಕು ಬಿಡುತ್ತದೆ. ಸಂಗಾತಿ ಮಧ್ಯೆ ತಾರಕಕ್ಕೇರಿದ ಗಲಾಟೆ ಶಾಂತವಾದ್ಮೇಲೆ ಏನು ಮಾಡ್ಬೇಕು ಗೊತ್ತಾ? 
 

 ಪತಿ - ಪತ್ನಿ ಅಥವಾ ಬಾಯ್ ಫ್ರೆಂಡ್ – ಗರ್ಲ್ ಫ್ರೆಂಡ್ ಜೊತೆ ಜಗಳ ನಡೆಯೋದು ಸಾಮಾನ್ಯ ಸಂಗತಿ. ಸಣ್ಣ ವಿಷ್ಯಕ್ಕೆ ಕೂಡ ಜಗಳ ಆಡೋರಿದ್ದಾರೆ. ಜಗಳ ಆಡುವಾಗ ಏನೂ ಅನ್ನಿಸೋದಿಲ್ಲ. ಕೋಪದಲ್ಲಿ ಬಾಯಿಗೆ ಬಂದಿದ್ದೆಲ್ಲ ಮಾತನಾಡಿರ್ತೀರಿ. ಆದ್ರೆ ಜಗಳವಾದ ಮೇಲೆ ಬೇಸರವಾಗುತ್ತದೆ. ಸಣ್ಣ ವಿಷ್ಯಕ್ಕೆ ಇಷ್ಟೊಂದು ಗಲಾಟೆ ಬೇಕಿತ್ತಾ ಎನ್ನಿಸುತ್ತದೆ. ಸಂಗಾತಿ ಶಾಂತವಾಗಿ ಮಾತನಾಡಿದ್ರೆ ಸಾಕು ಎನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸಂಗಾತಿ ಜೊತೆ ನಡೆದ ವಿವಾದವನ್ನು ಬೇಗ ಬಗೆಹರಿಸಲು ಪ್ರಯತ್ನಿಸಿದ್ರೆ ಒಳ್ಳೆಯದು. ಜಗಳದ ನಂತ್ರ ಅಹಂಕಾರದಿಂದ ಇಬ್ಬರೂ ದೂರ ಉಳಿದ್ರೆ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುತ್ತದೆ. ಯಾವುದೇ ಜಗಳವಾಗಿರಲಿ, ಸ್ವಲ್ಪ ಸಮಯದ ನಂತ್ರ ಇಬ್ಬರಲ್ಲಿ ಒಬ್ಬರು ಸಂಧಾನಕ್ಕೆ ಮುಂದಾಗಬೇಕು. ನಿಮ್ಮ ಸಂಗಾತಿ ಜೊತೆ ಪದೇ ಪದೇ ಜಗಳವಾಗ್ತಿದೆ ಎಂದಾದ್ರೆ ಅದನ್ನು ಹೇಗೆ ಶಾಂತಗೊಳಿಸಬೇಕೆಂದು ನಾವು ಹೇಳ್ತೇವೆ. 

ಸಂಗಾತಿ ಜೊತೆ ಜಗಳ (Fight) ವಾದ್ರೆ ಏನು ಮಾಡ್ಬೇಕು ಗೊತ್ತಾ? : 

ಸಮಯ (Time) ನೀಡುವುದು ಮುಖ್ಯ : ಸಂಗಾತಿ ಜೊತೆ ಜಗಳವಾಗಿದ್ದರೆ ಆ ಕ್ಷಣಕ್ಕೆ ವಿವಾದ ಬಗೆ ಹರಿಯಲು ಸಾಧ್ಯವಿಲ್ಲ. ಅವರು ಕೋಪದಲ್ಲಿರುವ ಕಾರಣ ನಿಮ್ಮ ಮಾತನ್ನು ಕೇಳದೆ ಇರಬಹುದು. ಯಾವುದು ಸರಿ, ಯಾವುದು ತಪ್ಪು ಎಂಬ ನಿರ್ಧಾರಕ್ಕೆ ಬರಲು ಸಾಧ್ಯವಾಗದೆ ಇರಬಹುದು. ಹಾಗಾಗಿ ಅವರು ಶಾಂತವಾಗಿ ಆಲೋಚನೆ (Thought) ಮಾಡಲು ಅವರಿಗೆ ಸಮಯ ನೀಡಿ. ಸ್ವಲ್ಪ ಸಮಯದ ನಂತ್ರ ಪರಿಸ್ಥಿತಿ ತಿಳಿಯಾಗಿದೆ ಅಂದಾಗ ನೀವು ಅವರ ಬಳಿ ಹೋಗಿ.  

ಮಾತಿನಿಂದ ಬಗೆಹರಿಯದ ಸಮಸ್ಯೆಯಿಲ್ಲ : ಅನೇಕ ಬಾರಿ ಸಂಗಾತಿ ಮಧ್ಯೆ ಗಲಾಟೆ ವಿಪರೀತಕ್ಕೆ ಹೋಗಿರುತ್ತದೆ. ಜಗಳವಾಗಿ ಒಂದು ದಿನವಾದ್ರೂ ಇಬ್ಬರು ಮಾತನಾಡುವುದಿಲ್ಲ. ಬೆನ್ನು ಹಾಕಿ ಓಡಾಡುತ್ತಾರೆ. ಆ ಸಮಯದಲ್ಲಿ ಅಹಂಕಾರ ಬಿಟ್ಟು ನೀವು ಸಂಗಾತಿ ಬಳಿ ಮಾತನಾಡಲು ಪ್ರಯತ್ನಿಸಬೇಕು. ಯಾಕೆಂದ್ರೆ ಸಣ್ಣ ವಿಷಯಕ್ಕೆ ಶುರುವಾದ ಜಗಳ ತುಂಬಾ ದೊಡ್ಡದಾಗುವ ಸಾಧ್ಯತೆಯಿರುತ್ತದೆ. ನಿಮ್ಮಿಬ್ಬರ ಮಧ್ಯೆಯ ಅಂತರ ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಮಾತು ಶುರು ಮಾಡುವುದು ಒಳ್ಳೆಯದು. ವಿವಾದಗಳನ್ನು ಯಾವಾಗಲೂ ಮಾತನಾಡುವ ಮೂಲಕ ಬಗೆಹರಿಸಿಕೊಳ್ಳಬಹುದು. ಸಂಗಾತಿ ಸಮಸ್ಯೆ ಏನು ಎಂಬುದನ್ನು ನೀವು ಚರ್ಚಿಸಬೇಕು. ಮೊದಲೇ ಹೇಳಿದಂತೆ ಸಂಗಾತಿ ಶಾಂತವಾಗಲು ಸಮಯ ನೀಡಬೇಕು ನಿಜ. ಆದ್ರೆ ಈ ಸಮಯ ಮಿತಿಮೀರಿದ್ರೆ ಸಮಸ್ಯೆಯಾಗುತ್ತದೆ. ಸಂಗಾತಿ ಮಾತಿಗೆ ಬರ್ತಾರೆಂದು ಕಾಯುವ ಬದಲು ನೀವೇ ಒಂದು ಹೆಜ್ಜೆ ಮುಂದಿಡಬೇಕು.

ನಿಮ್ಮ ಮಾತನ್ನೇ ಒಪ್ಪಿಕೊಳ್ಳಬೇಕೆಂಬ ಹಠ ಬೇಡ : ಯಾವಾಗ್ಲೂ ನಿಮ್ಮ ಸಂಗಾತಿಯೇ ತಪ್ಪು ಮಾಡೋದಿಲ್ಲ. ಕೆಲವು ಬಾರಿ ನೀವೂ ಮಾಡಿರ್ತೀರಿ. ಆದ್ರೆ ಇದನ್ನು ಒಪ್ಪಿಕೊಳ್ಳುವುದಿಲ್ಲ. ಹಾಗೆ ನೀವು ಹೇಳಿದ್ದೇ ನಡೆಯಬೇಕೆಂದು ಸಂಗಾತಿ ಮುಂದೆ ಪಟ್ಟು ಹಿಡಿಯುತ್ತೀರಿ. ಇದು ಸಂಗಾತಿಗೆ ಹಿಂಸೆಯಾಗಬಹುದು. ಇದ್ರಿಂದ ಮತ್ತಷ್ಟು ಜಗಳವಾಗಬಹುದು. ಹಾಗಾಗಿ ಅವರಿಗೂ ಸ್ವಾತಂತ್ರ್ಯ ನೀಡಿ. 

REAL STORY : ವಯಸ್ಸು, ಹಣ ನೋಡಿ ಈಕೆ ಲವ್ ಮಾಡೋದ್ಯಾಕೆ?

ಕ್ಷಮೆ ಕೇಳೋದು ದೊಡ್ಡತನ : ಜಗಳವಾದ್ಮೇಲೆ ಸಂಗಾತಿ ಮುಂದೆ ಕ್ಷಮೆ ಕೇಳಲು ಅನೇಕರು ಹಿಂದೇಟು ಹಾಕ್ತಾರೆ. ನನ್ನದೇ ಸರಿ ಎಂಬ ಅಹಂಕಾರ ಇದಕ್ಕೆ ಕಾರಣ. ಕ್ಷಮೆ ಕೇಳಿದ್ರೆ ನೀವು ಸಣ್ಣವರಾಗುವುದಿಲ್ಲ. ತಪ್ಪು ನಿಮ್ಮಿಂದಾಗಿದ್ದರೆ ನೀವು ಕ್ಷಮೆ ಕೇಳಲೇಬೇಕು. ಹಾಗೆಯೇ ನೇರವಾಗಿ ಕ್ಷಮೆ ಕೇಳಲು ಸಾಧ್ಯವಾಗ್ತಿಲ್ಲ ಎಂದಾದ್ರೆ ಗಿಫ್ಟ್ ನೀಡಿ, ಲೆಟರ್ ಬರೆದು ಹೀಗೆ ಬೇರೆ ಬೇರೆ ವಿಧಾನದ ಮೂಲಕ ನೀವು ಕ್ಷಮೆ ಕೇಳಬಹುದು. 

Parallel Parenting: ಮಾತನಾಡ್ದೆ ಮಗು ನೋಡಿಕೊಳ್ಳುವ ವಿಧಾನ ಇದು

ಜಗಳಕ್ಕೆ ಕಾರಣ ತಿಳಿದುಕೊಳ್ಳಿ : ಪದೇ ಪದೇ ಜಗಳವಾಗ್ತಿದ್ದರೆ ನೀವು ಕ್ಷಮಿಸ್ತಾ ಹೋಗ್ಬೇಕಾಗಿಲ್ಲ. ಮೊದಲು ಜಗಳಕ್ಕೆ ಕಾರಣವೇನು ಎಂಬುದನ್ನು ನೀವು ತಿಳಿಬೇಕು. ಜಗಳಕ್ಕೆ ನೀನು ಕಾರಣ, ನೀನು ಕಾರಣ ಎಂದು ಒಬ್ಬರಿಗೊಬ್ಬರು ಬೊಟ್ಟು ಮಾಡ್ತಾ ಹೋದ್ರೆ ಗಲಾಟೆ ಮತ್ತೆ ದೊಡ್ಡದಾಗುತ್ತದೆ. ಹಾಗಾಗಿ ಜಗಳದ ವೇಳೆ ಯಾರ ತಪ್ಪಿದೆಯೋ ಅವರು ಒಪ್ಪಿಕೊಂಡು ಮುಂದೆ ಇಂಥ ಘಟನೆ ಮರುಕಳಿಸದಂತೆ ನೋಡಿಕೊಳ್ಳಿ.   

click me!