Real Story : ವಯಸ್ಸು, ಹಣ ನೋಡಿ ಈಕೆ ಲವ್ ಮಾಡೋದ್ಯಾಕೆ?

By Suvarna News  |  First Published Oct 28, 2022, 11:43 AM IST

ಕಣ್ಮುಚ್ಚಿ ಡೇಟಿಂಗ್ ಮಾಡಿದ್ರೆ ನಷ್ಟ ಜಾಸ್ತಿ ಎನ್ನುವುದು ಈ ಹುಡುಗಿಗೆ ತಿಳಿದಿದೆ. ಮೊದಲೆಲ್ಲ ಬಾಯ್ ಫ್ರೆಂಡ್ಸ್ ಗೆ ಹಣ ಖಾಲಿ ಮಾಡ್ತಿದ್ದ ಹುಡುಗಿ ಈಗ ಹೊಸ ದಾರಿ ನೋಡ್ಕೊಂಡಿದ್ದಾಳೆ. ಶ್ರೀಮಂತ ವ್ಯಕ್ತಿಗೆ ಮಾತ್ರ ಬಲೆ ಬೀಸ್ತಾಳೆ. 
 


ಪ್ರತಿಯೊಬ್ಬರೂ ಪರ್ಫೆಕ್ಟ್ ಪಾರ್ಟನರ್ ಬಗ್ಗೆ ಕನಸು ಕಾಣ್ತಾರೆ. ತನ್ನನ್ನು ಹೆಚ್ಚು ಪ್ರೀತಿಸುವ, ತನಗೆ ಗೌರವ ನೀಡುವ, ಕಷ್ಟ ಸುಖದಲ್ಲಿ ನನ್ನ ಜೊತೆ ಇರುವ ಸಂಗಾತಿ ಸಿಗಬೇಕೆಂದು ಎಲ್ಲರೂ ಆಸೆ ಹೊಂದಿರುತ್ತಾರೆ. ಆದ್ರೆ ಎಲ್ಲರಿಗೂ ಇಂಥ ಸಂಗಾತಿ ಸಿಗಲು ಸಾಧ್ಯವಿಲ್ಲ. ಕೆಲವು ಬಾರಿ ನಂಬಿ ಸಂಬಂಧ ಬೆಳೆಸಿರ್ತೇವೆ. ಆದ್ರೆ ನಂಬಿದ ವ್ಯಕ್ತಿಯೇ ನಮಗೆ ಮೋಸ ಮಾಡ್ತಾರೆ. ಒಂದೆರಡು ಬಾರಿ ಮೋಸ ಹೋದ್ಮೇಲೆ ಜನರು ಎಚ್ಚೆತ್ತುಕೊಳ್ತಾರೆ. ಸುರಕ್ಷಿತ ಸಂಬಂಧಕ್ಕಾಗಿ ಬೇರೆ ದಾರಿ ಹಿಡಿಯುತ್ತಾರೆ. ಅಮೆರಿಕಾದ ಅಂಬರ್ ಲ್ಯೂಕಾಸ್ ಜೀವನದಲ್ಲೂ ಇದೇ ಆಗಿದೆ. ಅಂಬರ್ ಲ್ಯೂಕಾಸ್ ಸಂಬಂಧದಲ್ಲಿ ಮೋಸ ಹೋಗಿದ್ದಾಳೆ. ಆಕೆ ಉದಾರತೆಯನ್ನು ಅನೇಕರು ಬಳಸಿಕೊಂಡಿದ್ದಾರಂತೆ. ಈ ಸತ್ಯ ಅರಿವಾದ್ಮೇಲೆ ಅಂಬರ್ ಲ್ಯೂಕಾಸ್ ತನ್ನ ದಾರಿ ಬದಲಿಸಿದ್ದಾಳೆ. ಸಾಮಾನ್ಯ ಜನರನ್ನು ಬಿಟ್ಟು, ಶ್ರೀಮಂತ ಹಾಗೂ ತನಗಿಂತ ಹಿರಿಯ ವ್ಯಕ್ತಿಗಳ ಜೊತೆ ಡೇಟಿಂಗ್ ಶುರು ಮಾಡಿದ್ದಾಳೆ. ಇದ್ರಿಂದ ಸಾಕಷ್ಟು ಕಲಿತಿದ್ದೇನೆ ಎನ್ನುತ್ತಾಳೆ ಅಂಬರ್ ಲ್ಯೂಕಾಸ್. 

ಅಂಬರ್ ಲ್ಯೂಕಾಸ್ (Amber Lucas) ಸಾಮಾಜಿಕ ಜಾಲತಾಣದಲ್ಲಿ ತನ್ನ ಜೀವನವನ್ನು ತೆರೆದಿಟ್ಟಿದ್ದಾಳೆ. ಆಕೆ ಹಿಂದಿನ ವರ್ಷ ತನ್ನ ಮೌಲ್ಯಮಾಪನದಲ್ಲಿ ತೊಡಗಿದ್ದಳಂತೆ. ಆಕೆ ತನ್ನ ಬಾಯ್ ಫ್ರೆಂಡ್ಸ್ (Boyfriends)  ಬಗ್ಗೆ ಆಲೋಚನೆ ಮಾಡಿದ್ದಳಂತೆ. ಆಕೆಯ ಅನೇಕ ಬಾಯ್ ಫ್ರೆಂಡ್ಸ್, ಆಕೆಯ ಭಾವನೆಗೆ ಧಕ್ಕೆಯುಂಟು ಮಾಡಿದ್ದರಂತೆ. ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಅಸಮರ್ಥರಿದ್ದ ಹುಡುಗರು, ಆರ್ಥಿಕವಾಗಿಯೂ ಸದೃಡರಾಗಿರಲಿಲ್ಲವಂತೆ. ಒಬ್ಬ ಹುಡುಗನಿಗೆ ಅಂಬರ್ ಲ್ಯೂಕಾಸ್ ಹಣ ನೀಡ್ತಿದ್ದಳಂತೆ. ಕುಡಿತಕ್ಕೆ ಹೆಚ್ಚು ಖರ್ಚು ಮಾಡಿದ್ದ ಆ ಹುಡುಗ ಮನೆ ಬಾಡಿಗೆ ನೀಡಲು ಅಸಮರ್ಥನಾಗಿದ್ದನಂತೆ.

Tap to resize

Latest Videos

ಇನ್ನೊಬ್ಬ ಹುಡುಗ ತುಕ್ಕು ಹಿಡಿದ ಕಾರನ್ನು ಅಂಬರ್ ಲ್ಯೂಕಾಸ್ ಮನೆ ಮುಂದೆ ಮೂರು ವಾರ ನಿಲ್ಲಿಸಿದ್ದನಂತೆ. ಅದನ್ನು ರಿಪೇರಿ ಮಾಡಿಸುವಷ್ಟು ಹಣ ಆತನ ಬಳಿ ಇರಲಿಲ್ಲವಂತೆ. ನಂತ್ರ ಅದಕ್ಕೂ ಅಂಬರ್ ಲ್ಯೂಕಾಸ್ ಹಣ ನೀಡಿದ್ದಳಂತೆ. ಅಂಬರ್ ಲ್ಯೂಕಾಸ್ ಜೀವನದಲ್ಲಿ ಬಂದ ಎಲ್ಲ ಹುಡುಗ್ರೂ ಒಂದಲ್ಲ ಒಂದು ರೀತಿಯಲ್ಲಿ ಅಸಮರ್ಥರಾಗಿದ್ದರಂತೆ. ಇದ್ರ ನಂತ್ರ ಅಂಬರ್ ಲ್ಯೂಕಾಸ್ ಮಹತ್ವದ ನಿರ್ಧಾರಕ್ಕೆ ಬಂದಿದ್ದಳಂತೆ. ಪ್ರಬುದ್ಧರಾದ, ಆಸಕ್ತಿದಾಯಕ ವಿಷಯಗಳನ್ನು ಮಾತನಾಡುವ ಮತ್ತು ಮುಕ್ತ ಮನಸ್ಥಿತಿಯೊಂದಿಗೆ ಸಂಬಂಧ ಬೆಳೆಸುವ ವ್ಯಕ್ತಿ ಜೊತೆ ಮಾತ್ರ ಡೇಟ್ ಎಂದು ನಿರ್ಧರಿಸಿದ್ದಳಂತೆ. 

ನಂತ್ರ ಲ್ಯೂಕಾಸ್, 'ಸೀಕಿಂಗ್' ಎಂಬ ವೆಬ್ಸೈಟ್ ನಲ್ಲಿ  ಪ್ರೊಫೈಲ್ ಅಪ್ಲೋಡ್ ಮಾಡಿದ್ದಳಂತೆ. ಅಂಬರ್ ಲ್ಯೂಕಾಸ್ 2021ರಲ್ಲಿ ಈ ವೆಬ್ಸೈಟ್ ಗೆ ಹೆಸರು ನೋಂದಾಯಿಸಿದಳಂತೆ. ಪ್ರಿಮಿಯರ್ ಮೇಂಬರ್ ಶಿಪ್ 275 ಡಾಲರ್ ಆಗಿತ್ತಂತೆ. ಇಲ್ಲಿರುವ ವ್ಯಕ್ತಿಗಳು ತಮ್ಮ ತಿಂಗಳ ಸಂಬಳದಿಂದ ಹಿಡಿದು ಎಲ್ಲ ವಿವರವನ್ನೂ ನೀಡುತ್ತಿದ್ದರಂತೆ.

ನಿಮ್ಮನ್ನು ಕಾಡ್ತಿದೆಯಾ Emotional Addiction ? ಇಲ್ಲಿವೆ ಪರಿಹಾರ

ತನ್ನ ಭಾವನೆ ಅರ್ಥ ಮಾಡಿಕೊಳ್ಳುವ ಹಾಗೂ ತನ್ನ ವ್ಯಾಪಾರದ ಕನಸನ್ನು ನನಸು ಮಾಡಲು ಸಹಾಯ ಮಾಡುವ ವ್ಯಕ್ತಿಯನ್ನು ಅಂಬರ್ ಲ್ಯೂಕಾಸ್ ಹುಡುಕುತ್ತಿದ್ದಳಂತೆ, ಈ ವೆಬ್ಸೈಟ್ ನಲ್ಲಿ ತುಂಬಾ ಜನರನ್ನು ನಾನು ಭೇಟಿಯಾಗಿದ್ದೇನೆ. ಅದ್ರಲ್ಲಿ ಬಹುತೇಕರು 50 ವರ್ಷ ಮೇಲ್ಪಟ್ಟವರು ಎನ್ನುತ್ತಾಳೆ ಅಂಬರ್ ಲ್ಯೂಕಾಸ್.

ಮಕ್ಕಳಾದ್ಮೇಲೆ ದಾಂಪತ್ಯವನ್ನೇ ಮರೆತಿದ್ದ ಜೋಡಿ ಮತ್ತೆ ಒಂದಾದ್ರು!

ಅಂಬರ್ ಲ್ಯೂಕಾಸ್, ಅನೇಕ ಜನರ ಜೊತೆ ಡೇಟ್ ಕೂಡ ಮಾಡಿದ್ದಾಳೆ. ಒಂದಿಬ್ಬರು ಆಕೆಯನ್ನು ಆಕರ್ಷಿಸಿದ್ದರಂತೆ. ಅವರ ಹಣದಲ್ಲಿ ಪ್ಯಾರಿಸ್ ಸೇರಿದಂತೆ ಅನೇಕ ಕಡೆ ಸುತ್ತಿ ಬಂದಿರುವ ಅಂಬರ್ ಲ್ಯೂಕಾಸ್, ಸೆಕ್ಸ್ ವಿಷ್ಯದಲ್ಲೂ ಅವರು ಪರ್ಫೆಕ್ಟ್ ಎನ್ನುತ್ತಾಳೆ. ಶ್ರೀಮಂತ ವ್ಯಕ್ತಿಗಳು ಸುಖವಾಗಿರ್ತಾರೆಂದು ಭಾವಿಸಿದ್ದೆ. ಆದ್ರೆ ಅವರಲ್ಲೂ ಅನೇಕ ಸಮಸ್ಯೆಗಳಿರುತ್ತವೆ. ಅವರು ಪ್ರೀತಿ ಅರಸುತ್ತಿರುತ್ತಾರೆ ಎನ್ನುತ್ತಾಳೆ ಅಂಬರ್ ಲ್ಯೂಕಾಸ್. ಬ್ಯುಸಿನೆಸ್ ವಿಷ್ಯದ ಬಗ್ಗೆ ಅವರಿಂದ ಸಾಕಷ್ಟು ಕಲಿತಿದ್ದೇನೆ ಎನ್ನುತ್ತಾಳೆ ಲ್ಯೂಕಾಸ್. ಶ್ರೀಮಂತ ಹಾಗೂ ಬುದ್ಧಿವಂತ, ಹಿರಿಯ ವ್ಯಕ್ತಿಗಳ ಜೊತೆ ಡೇಟಿಂಗ್ ನನಗೆ ನೆಮ್ಮದಿ, ಖುಷಿ ತಂದಿದೆ ಎನ್ನುತ್ತಾಳೆ ಲ್ಯೂಕಾಸ್. 
 

click me!