ಸಕ್ಸಸ್, ಸ್ಪಿರಿಚುಯಾಲಿಟಿ ಬಗ್ಗೆ ರಜನಿ ಹೇಳೋ ಮಾತುಗಳು ನಮಗೂ ಹೆಲ್ಪ್ ಆಗಬಹುದು.
ನನ್ನ ಪ್ರಕಾರ ಸೂಪರ್‌ಸ್ಟಾರ್ ಅಂದ್ರೆ ಅಮಿತಾಭ್ ಬಚ್ಚನ್ ಮಾತ್ರ- ಅನ್ನುವುದು ರಜನಿಕಾಂತ್ ಹೇಳುವ ಮಾತು. ಅಂದ್ರೆ ಯಶಸ್ಸಿನ ದೊಡ್ಡ ಶಿಖರವನ್ನೇ ಏರಿದ್ರೂ ಅವರು ಉಳಿಸಿಕೊಂಡಿರುವ ವಿನಯ ಅವರಿಂದ ಈ ಮಾತು ಹೇಳಿಸುತ್ತೆ. ಸಕ್ಸಸ್, ಸ್ಪಿರಿಚುಯಾಲಿಟಿ ಬಗ್ಗೆ ರಜನಿ ಹೇಳೋ ಮಾತುಗಳು ನಮಗೂ ಹೆಲ್ಪ್ ಆಗಬಹುದು.
- ಮುನ್ನೂರು ರೂಪಾಯಿ ಸಂಬ್ಳ ಬರೋ ಬಸ್ ಕಂಡಕ್ಟರ್ ಆಗಿದ್ದೋನು ಸ್ಟಾರ್ ಆದ ಮೇಲೆ ಲಕ್ಷಗಳಲ್ಲಿ ಹಣ ಬರೋಕೆ ಶುರುವಾದ ಬಳಿಕ, ನನ್ನಲ್ಲಿ ಏನೋ ವಿಶೇಷತೆ ಇದೆ ಅಂದುಕೊಂಡೆ. ನಿಧಾನವಾಗಿ ಇದರಲ್ಲಿ ನನ್ದೇನೂ ಇಲ್ಲ, ಎಲ್ಲ ದೇವರ ದಯೆ ಅಂತ ಅರ್ಥವಾಯ್ತು.
undefined
- ಪ್ರತಿಯೊಂದು ಫಿಲಂ ಶೂಟಿಂಗ್ ಮುಗಿಸಿದ ಮೇಲೂ ನಾನು ಹಿಮಾಲಯಕ್ಕೆ ಹೋಗಿಬಿಡ್ತೀನಿ. ತುಂಬ ಒಳಗಡೆ, ಒಂಟಿಯಾಗಿ ಹಳ್ಳಿಗಳಿಗೆ ಹೋಗಿಬಿಡ್ತೀನಿ. ಅಲ್ಲಿನ ಪ್ರಶಾಂತತೆ ಅನುಭವಿಸ್ತೀನಿ. ಅದು ನನ್ನಲ್ಲಿ ಏನೋ ಹೊಸ ಎನರ್ಜಿ ತುಂಬುತ್ತೆ. ಅಲ್ಲಿ ಸುಮ್ಮನೆ ಇರೋದು ಕೂಡ ಒಂದು ಧ್ಯಾನದಂತೆ ಇರುತ್ತದೆ.
-ದೇವರು ನನಗೆ ನಟನ ಪಾತ್ರವನ್ನು ಕೊಟ್ಟಿದ್ದಾನೆ. ಅದನ್ನು ಸಂಪೂರ್ಣ ಶ್ರದ್ದೆಯಿಂದ ಮಾಡಿದ್ದೇನೆ.
- ದೇವರ ದಯೆಯಿಂದ, ನನಗೆ ತಂದೆ ತಾಯಿಗಳಿಂದ ಬಂದ ಏಕೈಕ ಆಸ್ತಿ ಎಂದರೆ ನನ್ನ ಆರೋಗ್ಯಪೂರ್ಣ ದೇಹ. ನೋ ಬಿಪಿ, ನೋ ಶುಗರ್. ಯಾವ ಆರೋಗ್ಯ ಸಮಸ್ಯೆಯೂ ಇಲ್ಲ. ಎಲ್ಲ ಮಕ್ಕಳಿಗೂ ತಂದೆ ತಾಯಿ ಕೊಡಬೇಕಿರೋದು ಇದನ್ನೇ.
- ಯುದ್ಧ ಅನಿವಾರ್ಯವಾದರೆ, ಯುದ್ಧದಲ್ಲಿ ಭಾಗವಹಿಸದೆ ಹಿಂದಕ್ಕೆ ಹೋಗಿನೊಡೋದು ಹೇಡಿತನ
- ತನ್ನನ್ನು ತಾನು ಅರ್ಥ ಮಾಡಿಕೊಳ್ಳೋದೇ ಮನುಷ್ಯನಿಗೆ ನಿಜವಾದ ಸವಾಲು. ಪ್ರತಿಯೊಬ್ಬ ಮನುಷ್ಯನೂ ನಿಜವಾಗಿ ಮಾಡಬೇಕಿರೋದು ಅದನ್ನೇ. ಅದೇ ಅವನ ಅಧ್ಯಾತ್ಮದ ಹುಡುಕಾಟ.
- ನಾನು ನನಗೆ ಯಾವಾಗಲೂ ಹೇಳಿಕೊಳ್ತಾ ವಿಷಯವೆಂದರೆ, ಕೆಲಸ ಮಾಡು ರಜನಿಕಾಂತ್. ಮಾಡ್ತಾನೇ ಇರು. ನಿಲ್ಲಿಸಬೇಡ. ಯಾವಾಗ ನಿಲ್ಲಿಸಬೇಕು ಎಂದರೆ, ದೇಹ ಇನ್ನು ಸಹಕರಿಸುವುದಿಲ್ಲ ಎಂದಾಗ ಮಾತ್ರ. ಆಗ ಉಸಿರೂ ನಿಂತಿರುತ್ತೆ.
ರಜನೀಕಾಂತ್ ಹಿಮಾಲಯದಲ್ಲಿ ರಹಸ್ಯವಾಗಿ ಭೇಟಿ ಮಾಡುವ ಆ ವ್ಯಕ್ತಿ ಯಾರು?
- ಆಧ್ಯಾತ್ಮವೇ ನನಗೆ ಅತ್ಯಂತ ಪ್ರಿಯವಾದದ್ದು. ನಟನೆ ಮತ್ತು ಆಧ್ಯಾತ್ಮದ ನಡುವೆ ನಾನು ಆಧ್ಯಾತ್ಮವನ್ನೇ ಆರಿಸಿಕೊಳ್ತೀನಿ. ಯಾಕೆಂದರೆ ಅದರಿಂದ ಇಡೀ ವಿಶ್ವವನ್ನೇ ನಿಯಂತ್ರಿಸಬಹುದಾದ ಶಕ್ತಿ ನಿಮಗೆ ಸಿಗುತ್ತೆ. ಇತರ ಯಾವುದೇ ಕ್ಷೇತ್ರದ ಹೆಸರು, ಹಣ ಇತ್ಯಾದಿಗಳಿಗಿಂತ ಅದು ಮಿಗಿಲು.
- ನಾನು ಅತ್ಯಂತ ಸಣ್ಣ ವಯಸ್ಸಿನಲ್ಲೇ ಸಂತರಿಂದ, ಯೋಗಿಗಳಿಂದ ಆಕರ್ಷಿತನಾದೆ. ರಾಮಕೃಷ್ಣ ಮಿಷನ್‌ಗೆ ಸೇರಿಕೊಂಡಿದ್ದೆ. ಅಲ್ಲಿ ನನಗೆ ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ, ರವೀಂದ್ರನಾಥ ಟಾಗೋರ್ ಮುಂತಾದವರ ಬಗ್ಗೆಯೆಲ್ಲಾ ಗೊತ್ತಾಯ್ತು.
- ಪ್ರತಿಯೊಂದು ಫಿಲಂ ಕೂಡ ನನಗೆ ಹೊಸದೇ. ಇದು ನನ್ನ ಮೊದಲ ಫಿಲಂ ಅಂದುಕೊಂಡೇ ನಾನು ಅದಕ್ಕೆ ಸಿದ್ಧವಾಗ್ತೀನಿ.
- ಇಲ್ಲಿ ಒಂದು ಸೃಷ್ಟಿ ಇದೆ. ಅಂದ ಮೇಲೆ ಒಬ್ಬ ಸೃಷ್ಟಿಕರ್ತನೂ ಇರಲೇಬೇಕು ಅಲ್ಲವೇ. ಹಾಗಾಗಿ ದೇವರಿದ್ದಾನೆ ಎಂದು ನಾನು ನಂಬುತ್ತೇನೆ.
- ಎಲ್ಲಿ ನಿಮ್ಮ ಮಹತ್ವಾಕಾಂಕ್ಷೆಗೆ ನೀವು ಕೊನೆ ಹಾಡುತ್ತೀರೋ ಅಲ್ಲಿ ನೆಮ್ಮದಿ ಆರಂಭವಾಗುತ್ತದೆ, ಮಹತ್ವಾಕಾಂಕ್ಷೆ, ಹುಡುಕಾಟಗಳು ನೆಮ್ಮದಿಯ ಶತ್ರು.
- ನಾನು ಪವಾಡಗಳಲ್ಲಿ ನಂಬಿಕೆಯಿಟ್ಟಿದ್ದೇನೆ. ಹಾಗಾಗಿಯೇ ನಿಮ್ಮ ಮುಂದೆ ಈ ರಜನಿ ಇರೋದು.
ಬಂಡೀಪುರ ಕಾಡಿನಲ್ಲಿ ರಜನಿ, ಅಕ್ಷಯ್ ಏನು ಶೂಟಿಂಗ್ ಮಾಡಿದ್ರು?
- ನೀವು ಮಾರುತಿ ಕಾರಿನಲ್ಲಿ ಹೋಗುತ್ತೀರೋ ಅಥವಾ ಬಿಎಂಡಬ್ಲ್ಯುವಿನಲ್ಲೋ, ದಾರಿ ಮಾತ್ರ ಬದಲಾಗಲ್ಲ. ಬ್ಯುಸಿನೆಸ್ ಕ್ಲಾಸಿನಲ್ಲಿ ಪ್ರಯಾಣ ಮಾಡ್ತೀರೋ ಅಥವಾ ಇಕಾನಮಿ ಕ್ಲಾಸಿನಲ್ಲೋ- ನಿಮ್ಮ ಗುರಿ ಮಾತ್ರ ಬದಲಾಗಲ್ಲ. ಟೈಟಾನ್ ವಾಚು ಕಟ್ಟುತ್ತೀರೋ ರೋಲೆಕ್ಸೋ- ಸಮಯ ಮಾತ್ರ ಬದಲಾಗಲ್ಲ. ಐಫೋನ್ ಹೊಂದಿದ್ದೀರೋ ಸ್ಯಾಮ್ಸಂಗೋ- ಜನ ನಿಮಗೆ ಕಾಲ್ ಮಾಡೋ ರೀತಿ ಬದಲಾಗಲ್ಲ.