ಸಿಂಗಲ್ಲಾಗಿದೀನಿ ಎಂದು ಕೊರಗಬೇಡಿ! ನಿಮ್ಮನ್ನು ನೀವು ಪ್ರೀತಿಸುವುದ ಕಲಿಯಿರಿ

Srilakshmi kashyap   | Asianet News
Published : Feb 26, 2020, 04:32 PM IST
ಸಿಂಗಲ್ಲಾಗಿದೀನಿ ಎಂದು ಕೊರಗಬೇಡಿ! ನಿಮ್ಮನ್ನು ನೀವು ಪ್ರೀತಿಸುವುದ ಕಲಿಯಿರಿ

ಸಾರಾಂಶ

ನಮಗಿನ್ನೂ ಮದ್ವೆಯಾಗಿಲ್ಲ, ನಮಗ್ಯಾರು ಗರ್ಲ್‌ಫ್ರೆಂಡಿಲ್ಲ ಅಂತ ಬೇಜಾರ್‌ ಮಾಡ್ಕೊಂಡ್‌ ಬದುಕುವವರ ಮಧ್ಯೆಯೇ ಒಂದಷ್ಟು ಲೆಜೆಂಡ್‌ಗಳಿರುತ್ತಾರೆ. ಸಿಂಗಲ್‌ ಮಂದಿ ನಾವು, ನಮಗಾಗಿ ಬದುಕುತ್ತೇವೆ ಅಂತ ಹಾಡ್ಕೊಂಡು ಕುಣಿದಾಡ್ಕೊಂಡು ಬದುಕುತ್ತಿರುತ್ತಾರೆ. 

ನಮಗಿನ್ನೂ ಮದ್ವೆಯಾಗಿಲ್ಲ, ನಮಗ್ಯಾರು ಗರ್ಲ್‌ಫ್ರೆಂಡಿಲ್ಲ ಅಂತ ಬೇಜಾರ್‌ ಮಾಡ್ಕೊಂಡ್‌ ಬದುಕುವವರ ಮಧ್ಯೆಯೇ ಒಂದಷ್ಟು ಲೆಜೆಂಡ್‌ಗಳಿರುತ್ತಾರೆ. ಸಿಂಗಲ್‌ ಮಂದಿ ನಾವು, ನಮಗಾಗಿ ಬದುಕುತ್ತೇವೆ ಅಂತ ಹಾಡ್ಕೊಂಡು ಕುಣಿದಾಡ್ಕೊಂಡು ಬದುಕುತ್ತಿರುತ್ತಾರೆ. ಅಂಥಾ ಮಂದಿ ಆಗಲೂ ಇದ್ದರು. ಈಗಲೂ ಇದ್ದಾರೆ.

ಈಗಿನ ಮಂದಿಯಾದರೂ ಒಳಗೊಳಗೆ ಒಂಚೂರು ದುಃಖ ಪಡುತ್ತಿರುವುದು ಗೊತ್ತಾಗುವಂತಿರುತ್ತದೆ. ಅವರೆಲ್ಲರಿಗೂ ಒಂಚೂರು ಧೈರ್ಯ ತುಂಬುವ ಸಲುವಾಗಿ ಹಿರಿಯರು ಹೇಳಿದ ನಾಲ್ಕೈದು ಕೋಟ್‌ಗಳನ್ನು ಇಲ್ಲಿ ನೀಡಲಾಗಿದೆ. ಅದರರ್ಥ ಇಷ್ಟೇ- ಸಿಂಗಲ್ಲಾಗಿರುವುದೇ ಪರಮಸುಖ.

ಪ್ರೀತಿಯಲ್ಲಿ ನಮ್ಮನ್ನು ನಾವು ಮರೆಯಬಾರದು; ಒಂಚೂರು ಸ್ಪೇಸ್ ಇದ್ರೆ ಒಳ್ಳೆದು!

1. ರಿಪೋರ್ಟ್‌ ಕೊಡಲಿಕ್ಕಿಲ್ಲ

ನಾನು ಕೆಲಸದ ಕಡೆಗೆ ಪೂರ್ತಿ ಗಮನ ಕೊಟ್ಟು ಕೆಲಸ ಮಾಡುತ್ತಿರುತ್ತೇನೆ. ಮನೆಗೆ ಹೋಗಲೇಬೇಕಾದ ಅನಿವಾರ್ಯತೆ ಇಲ್ಲ, ಯಾರಿಗೋ ಇವತ್ತು ಏನಾಯಿತು ಎಂದು ಹೇಳಬೇಕಾದ ಅವಶ್ಯತೆಯೂ ಇಲ್ಲ.

ಈ ಕೋಟ್‌ ಹೇಳಿದ್ದು ಮಿಂಡ ಕಲಿಂಗ್‌ ಎಂಬ ನಟಿ.

2. ಒಂಟಿಯಾಗಿರುವುದೇ ಸುಖ

‘ನೀವು ಒಬ್ಬರೇ ಇದ್ದರೆ ಅದೇ ಸುಖ. ಯಾರಿಗೂ ನಿಮ್ಮನ್ನು ನೀವು ಪ್ರೂವ್‌ ಮಾಡುವ ಅವಶ್ಯಕತೆ ಬೀಳುವುದಿಲ್ಲ.’ ಈ ಮಾತು ಹೇಳಿದ್ದು ಕವಯತ್ರಿ ಮಾಯಾ ಏಂಜೆಲೋ. ಒಬ್ಬರೇ ಇದ್ದರೆ ನಾವು ನಮಗೆ ಬೇಕಾದಂತೆ ಇರಬಹುದು ಅನ್ನುವುದು ಕೇಳುವುದೇ ಎಷ್ಟುಖುಷಿ ಅಲ್ಲವೇ.

3. ನಿಮ್ಮನ್ನು ನೀವು ಪ್ರೀತಿಸಿ

ಬಹಳ ದೊಡ್ಡ ಆಸ್ಕರ್‌ ವೈಲ್ಡ್‌ ಒಂದು ಕೋಟ್‌ ಹೇಳಿದ್ದಾನೆ. ಟು ಲವ್‌ ಒನ್‌ಸೆಲ್‌್ಫ ಇಸ್‌ ದ ಬಿಗಿನಿಂಗ್‌ ಆಫ್‌ ಲೈಫ್‌ಲಾಂಗ್‌ ರೊಮ್ಯಾನ್ಸ್‌ ಅಂತ. ಈ ಮಾತಿನ ತಾತ್ಪರ್ಯ ಏನು ಅನ್ನುವುದನ್ನು ಒಬ್ಬರೇ ಕುಳಿತು ಆಲೋಚಿಸಿ. ಹೊಳೆದರೆ ಬದುಕು ಸುಖಕರ ಪಯಣ.

4. ನಾನೇ ನನ್ನ ಸಂಗಾತಿ

ನಾನು ಒಬ್ಬಂಟಿಯಾಗಿ ಇರುವುದನ್ನು ಅರಗಿಸಿಕೊಳ್ಳಲು ತುಂಬಾ ಸಮಯ ತೆಗೆದುಕೊಂಡೆ. ಆದರೆ ಈಗ ನಾನೇ ನನ್ನ ಸಂಗಾತಿಯಾಗಿರುವುದರಿಂದ ಬಹಳ ಖುಷಿಯಾಗಿದ್ದೇನೆ. ಈ ಮಾತು ಹೇಳಿದ್ದು ನಟಿ ಎಮ್ಮಾ ವಾಟ್ಸನ್‌.

ಇನ್ನೊಬ್ಬರನ್ನು ಆಕರ್ಷಿಸಲು, ಎಲ್ಲರ ಕೇಂದ್ರ ಬಿಂದು ಆಗಲು ಹೀಗ್ ಮಾಡಿ

5. ಏನು ಮಾಡುತ್ತಿದ್ದೀರೋ ಅದನ್ನು ಇಷ್ಟಪಡಿ

ಕೆಲವು ಹುಡುಗಿಯರು ಹುಡುಗರ ಹಿಂದೆ ಹೋಗುತ್ತಾರೆ. ಇನ್ನು ಕೆಲವರು ಕನಸಿನ ಹಿಂದೆ ಹೋಗುತ್ತಾರೆ. ಆದರೆ ಒಂದು ಮಾತು ನೆನಪಿಡಿ, ಕರಿಯರ್‌ ಒಂದು ದಿನ ಎದ್ದು ನಿನ್ನನ್ನು ನಾನು ಪ್ರೀತಿಸುವುದಿಲ್ಲ ಎಂದು ಯಾವತ್ತೂ ಹೇಳುವುದಿಲ್ಲ. ಲೇಡಿ ಗಾಗಾ ಹೇಳಿದ ಮಾತಿದು. ಬದುಕು ಮುಖ್ಯ, ಇಂಡಿಪೆಂಡೆಂಟ್‌ ಆಗುವುದು ಮುಖ್ಯ ಎಂಬುದೂ ಆ ಮಾತಿನ ಅರ್ಥ ಎಂದು ತಿಳಿದುಕೊಳ್ಳಬಹುದು. ಇಲ್ಲದಿದ್ದರೆ ನಿಮಗೆ ಹೊಳೆದಿದ್ದೇ ಅರ್ಥ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಈ ತಿಂಗಳಲ್ಲಿ ಹುಟ್ಟಿದ ಹುಡುಗಿಗೆ ಈ ರೀತಿಯ ಗಂಡ ಸಿಗುತ್ತಾನೆ
ಈ 4 ರಾಶಿ ಜನಗಳೊಂದಿಗೆ ಜಾಗರೂಕರಾಗಿರಿ, ಅವರು ನಿಮ್ಮ ಮನಸ್ಸಿನಲ್ಲಿ ಏನಿದೆ ಎಂದು ಓದುತ್ತಾರೆ