ಅಭಿಮಾನಿಗಳು ನೀರಜ್ ಚೋಪ್ರಾ ಹಾಗೂ ಮನು ಭಾಕರ್ ಮಧ್ಯೆ ಪ್ರೇಮ ಸಂಬಂಧದ ಲಿಂಕ್ ಮಾಡಿರುವುದಕ್ಕೆ ಮನು ಭಾಕರ್ ತಂದೆ ಪ್ರತಿಕ್ರಿಯೆ ನೀಡಿದ್ದು, ಅವರು ಏನು ಹೇಳಿದ್ದಾರೆ ಅನ್ನೋದು ಇಲ್ಲಿದೆ ನೋಡಿ
ಪ್ಯಾರಿಸ್ ಒಲಿಂಪಿಕ್‌ನಲ್ಲಿ ಬೆಳ್ಳಿ ಪದಕ ಗಳಿಸಿದ ಕಾರಣಕ್ಕೆ ಜಾವೆಲಿನ್ ಥ್ರೂ ಪಟು ನೀರಜ್ ಚೋಪ್ರಾ ಹಾಗೂ ಶೂಟರ್ ಮನು ಭಾಕರ್ ಸಾಕಷ್ಟು ಚರ್ಚಿತರಾದವರು. ಆದರೆ ಇವರು ಈಗ ಚರ್ಚೆಲ್ಲಿರುವುದು ತಮ್ಮ ಸಾಧನೆಯ ಬದಲು ಬೇರೆಯದ್ದೇ ಕಾರಣಕ್ಕೆ, ಪ್ಯಾರಿಸ್ ಒಲಿಂಪಿಕ್ ನಂತರ ಇವರಿಬ್ಬರು ಮಾತುಕತೆ ನಡೆಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿತ್ತು, ನೆಟ್ಟಿಗರು ಇವರಿಬ್ಬರು ಮದುವೆಯಾದರೆ ಚೆನ್ನಾಗಿರುತ್ತದೆ ಜೋಡಿ ಚೆನ್ನಾಗಿದೆ ಎಂದೆಲ್ಲಾ ಮಾತನಾಡಿದ್ದರು. ಇದಾದ ನಂತರ ಮನು ಭಾಖರ್ ತಾಯಿ ಸುಮೇಧಾ ಭಾಕರ್ ನೀರಜ್ ಚೋಪ್ರಾ ಅವರ ಕೈ ಹಿಡಿದು ಮಾತನಾಡುತ್ತಿರುವ ವೀಡಿಯೋ ವೈರಲ್ ಆದಾಗ ಇದೇ ಸೋಶಿಯಲ್ ಮೀಡಿಯಾ ಬಳಕೆದಾರರು ಹೋ ಸಂಬಂದ ಖಚಿತ ಆಯ್ತು, ಮದುವೆ ಪಕ್ಕಾ ಎಂದೆಲ್ಲಾ ವೀಡಿಯೋಗೆ ಕಾಮೆಂಟ್ ಮಾಡಲು ಶುರು ಮಾಡಿದ್ದರು. ಹೀಗಾಗಿ ಭಾರತದ ಸಾಮಾಜಿಕ ಜಾಲತಾಣದಲ್ಲಿ ಈ ಕ್ರೀಡಾತಾರೆಯರ ಹೆಸರು ಸಖತ್ ಟ್ರೆಂಡಿಂಗ್‌ನಲ್ಲಿದೆ.
ಹೀಗಿರುವಾಗ ಮನು ಭಾಕರ್ ತಂದೆ ರಾಮ್ ಕಿಶನ್ ಭಾಕರ್ ಅವರು ಈ ಗಾಸಿಪ್ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ತಮ್ಮ ಪತ್ನಿ ಸುಮೇಧಾ ಭಾಕರ್, ನೀರಜ್ ಚೋಪ್ರಾ ಕೈ ಹಿಡಿದು ಮಾತನಾಡುತ್ತಿರುವ ವೀಡಿಯೋ ಬಗ್ಗೆ ಜನ ಹೀಗೆ ಪ್ರತಿಕ್ರಿಯಿಸುತ್ತಿದ್ದಾರೆ ಈ ಬಗ್ಗೆ ನೀವು ಏನು ಹೇಳುವಿರಿ ಎಂದು ಅವರನ್ನು ಕೆಲ ಮಾಧ್ಯಮಗಳು ಪ್ರಶ್ನಿಸಿದ್ದು, ಈ ವೇಳೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಪತ್ನಿ ನೀರಜ್ ಚೋಪ್ರಾ ಜೊತೆ ಖಂಡಿತವಾಗಿಯೂ ಕ್ರೀಡೆಯ ಬಗ್ಗೆಯೇ ಮಾತನಾಡಿರುತ್ತಾಳೆ. ಮನು ಇನ್ನು ಸಣ್ಣವಳು ನಾವು ಆಕೆಯ ಮದುವೆಯ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ ಎಂದು ಮನು ಭಾಕರ್ ತಂದೆ ರಾಮ್ ಕಿಶನ್ ಭಾಕರ್ ಹೇಳಿದ್ದಾರೆ.
undefined
ಜೋಡಿಯಾಗ್ತಾರಾ ಮನು ಭಾಕರ್-ನೀರಜ್ ಚೋಪ್ರಾ? ಸೋಶಿಯಲ್ ಮೀಡಿಯಾದಲ್ಲಿ ನ್ಯೂಸ್ ಫುಲ್ ವೈರಲ್!
ಅಂದಹಾಗೆ ಈ ಮೀರಜ್ ಚೋಪ್ರಾ ಹಾಗೂ ಮನು ಭಾಕರ್ ಇಬ್ಬರೂ ಹರ್ಯಾಣದವರಾಗಿದ್ದಾರೆ, ಈ ಬಾರಿಯ ಪ್ಯಾರಿಸ್ ಒಲಿಂಪಿಕ್‌ನಲ್ಲಿ ಭಾರತ ವೃತ್ತಿಪರ ಶೂಟರ್ ಆಗಿರುವ ಮನು ಭಾಕರ್ ಅವರು ಎರಡು ಕಂಚಿನ ಪದಕಗಳನ್ನು ಗೆಲ್ಲುವುದರೊಂದಿಗೆ ಇತಿಹಾಸ ನಿರ್ಮಿಸಿದ್ದಾರೆ. ಮಹಿಳೆಯರ ಸಿಂಗಲ್ಸ್ 10 ಎಂ ಏರ್ ಪಿಸ್ತೂಲ್ ವಿಭಾಗದಲ್ಲಿ ಹಾಗೂ ಪಿಸ್ತೂಲ್ ಮಿಕ್ಸ್ಡ್ ಟೀಮ್‌ನಲ್ಲಿ ಅವರು ದೇಶ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಹಾಗೆಯೇ ನೀರಜ್ ಚೋಪ್ರಾ ಪುರುಷರ ಜಾವೆಲಿನ್ ಥ್ರೋ ವಿಭಾಗದಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. 4 ವರ್ಷದ ಹಿಂದೆ ನಡೆದ ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಅವರು ಚಿನ್ನದ ಪದಕ ಗಳಿಸಿದ್ದರು.
ಪ್ಯಾರಿಸ್ ಒಲಿಂಪಿಕ್ ಬೆಳ್ಳಿ ಗೆದ್ದ ಹುಡುಗನ ಚಿನ್ನದಂತ ಹೃದಯ: ನೀರಜ್ ಚೋಪ್ರಾ ನಡೆಗೆ ವ್ಯಾಪಕ ಶ್ಲಾಘನೆ..!