ಜೋಡಿಯಾಗ್ತಾರಾ ಮನು ಭಾಕರ್-ನೀರಜ್ ಚೋಪ್ರಾ? ಸೋಶಿಯಲ್ ಮೀಡಿಯಾದಲ್ಲಿ ನ್ಯೂಸ್ ಫುಲ್ ವೈರಲ್!
Neeraj Chopra and Manu Bhaker are in Relationship? ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ 6 ಪದಕದೊಂದಿಗೆ ಕ್ರೀಡಾಕೂಟವನ್ನು ಮುಕ್ತಾಯ ಮಾಡಿದೆ. ನೀರಜ್ ಚೋಪ್ರಾ ಬೆಳ್ಳಿ ಜಯಿಸಿದರೆ, ಮನು ಭಾಕರ್ ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಸಾಧನೆ ಮಾಡಿದರು.
ಪ್ಯಾರಿಸ್ ಒಲಿಂಪಿಕ್ಸ್ ಮುಕ್ತಾಯವಾಗಿದೆ. ಐದು ಕಂಚು ಹಾಗೂ 1 ಬೆಳ್ಳಿ ಪದಕದೊಂದಿಗೆ ಭಾರತದ ಹೋರಾಟ ಮುಗಿದಿದೆ. ಚಿನ್ನದ ನಿರೀಕ್ಷೆ ಇಡಲಾಗಿದ್ದ ಅಥ್ಲೀಟ್ ನೀರಜ್ ಚೋಪ್ರಾ ದೇಶದ ಏಕೈಕ ಬೆಳ್ಳಿ ಪದಕ ಸಂಪಾದನೆ ಮಾಡಿದರೆ, ಮನು ಭಾಕರ್ ಅವಳಿ ಕಂಚಿನ ಪದಕವನ್ನು ಶೂಟಿಂಗ್‌ನಲ್ಲಿ ಜಯಿಸಿದರು. ಒಂದೇ ಒಲಿಂಪಿಕ್ಸ್‌ನಲ್ಲಿ ಅವಳಿ ಪದಕ ಗೆದ್ದ ಭಾರತದ ಮೊದಲ ಅಥ್ಲೀಟ್ ಎನ್ನುವ ಶ್ರೇಯಕ್ಕೆ ಮನು ಭಾಕರ್ ಪಾತ್ರರಾಗಿದ್ದಾರೆ. ಶೂಟಿಂಗ್ ವಿಭಾಗದ ಸ್ಪರ್ಧೆಗಳು ಮುಗಿದ ಬಳಿಕ ಭಾರತಕ್ಕೆ ವಾಪಸಾಗಿದ್ದ ಮನು ಭಾಕರ್, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಹಲವರನ್ನು ಭೇಟಿಯಾಗಿದ್ದರು. ಇದರ ನಡುವೆ ಅವರನ್ನು ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಪ್ಯಾರಿಸ್ ಒಲಿಂಪಿಕ್ಸ್‌ನ ಸಮಾರೋಪ ಸಮಾರಂಭದ ಧ್ವಜಧಾರಿಯಾಗಿ ಘೋಷಣೆ ಮಾಡಿತ್ತು. ಇದಕ್ಕಾಗಿ ಮತ್ತೊಮ್ಮೆ ಪ್ಯಾರಿಸ್‌ಗೆ ಹೋಗಿದ್ದ ಮನು ಭಾಕರ್ ಈ ಬಾರಿ ತಮ್ಮ ತಾಯಿ ಸುಮೇಧಾ ಭಾಕರ್ ಅವರನ್ನು ಕೂಡ ಕರೆದುಕೊಂಡು ಹೋಗಿದ್ದರು. ಪ್ಯಾರಿಸ್‌ನಲ್ಲಿ ತಮ್ಮ ತಾಯಿಯೊಂದಿಗೆ ಹಲವು ಪ್ರದೇಶಗಳಿಗೆ ಭೇಟಿಯಾದ ಫೋಟೋಗಳನ್ನು ಕೂಡ ಮನು ಹಂಚಿಕೊಂಡಿದ್ದರು. ಈ ನಡುವೆ ಸುಮೇಧಾ ಭಾಕರ್ ಅವರಿಗೆ ಪ್ಯಾರಿಸ್‌ನಲ್ಲಿ ನೀರಜ್ ಚೋಪ್ರಾ ಸಿಕ್ಕಿದ್ದಾರೆ. ಅವರೊಂದಿಗೆ ಮಾತನಾಡುತ್ತಿರುವ ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ ಹೆಚ್ಚಿನವರು ನೀರಜ್ ಚೋಪ್ರಾರನ್ನು ಅಳಿಯನನ್ನಾಗಿ ಮಾಡಿಕೊಳ್ಳುವ ಪ್ಲ್ಯಾನ್ ಮಾಡ್ತಿದ್ದಾರೆ ಎಂದು ರೂಮರ್ಸ್ ಹಬ್ಬಿಸಿದ್ದಾರೆ.
ವಿಡಿಯೋದಲ್ಲಿ ಮನು ಭಾಕರ್ ತಾಯಿ, ನೀರಜ್ ಚೋಪ್ರಾ ಅವರ ಕೈಯನ್ನು ಹಿಡಿದುಕೊಂಡು ಆತ್ಮೀಯವಾಗಿ ಮಾತನಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋಗೆ ಈಗಾಗಲೇ 5 ಲಕ್ಷಕ್ಕೂ ಅಧಿಕ ವೀವ್ಸ್‌ಗಳು ಬಂದಿವೆ. ಕಾಮೆಂಟ್ ಮಾಡಿರುವ ಹೆಚ್ಚಿನವರು, ಕೊನೆಗ ಮನು ಭಾಕರ್ ತಾಯಿ ತಮಗೆ ಸೂಕ್ತವಾದ ಅಳಿಯನನ್ನು ಹುಡುಕಿಕೊಂಡಿದ್ದಾರೆ ಎಂದು ತಮಾಷೆ ಮಾಡಿದ್ದಾರೆ.
'ಮದುವೆ ಮಾತುಕತೆಗಳು ನಡೆಯುತ್ತಿವೆ..' ಎಂದು ಕಾಮೆಂಟ್ ಸೆಕ್ಷನ್‌ನಲ್ಲಿ ಯೂಸರ್ ಒಬ್ಬರು ಬರೆದಿದ್ದಾರೆ. ಸಕ್ಸಸ್‌ಫುಲ್ ಆದ ಹುಡುಗನೊಂದಿಗೆ ಇಂಡಿಯನ್ ಮಮ್ಮಿ ಮಗಳ ಮದುವೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಇನ್ನೊಬ್ಬರು ಪೋಸ್ಟ್ ಮಾಡಿದ್ದಾರೆ.
ಅಳಿಯನಿಗಾಗಿ ಮಮ್ಮಜೀ ಮಿಷನ್ ಮೋಡ್‌ನಲ್ಲಿದ್ದಾರೆ ಎಂದು ಇನ್ನೊಂದು ತಮಾಷೆ ಮಾಡಿದ್ದಾರೆ. ಆಂಟೀ ಜೀ.. ಒಳ್ಳೆ ಜೋಡಿಯಾಗುತ್ತದೆ. ಹೇಗಾದರೂ ಮಾಡಿ ಈ ಕೆಲಸ ಮಾಡಿ ಬಿಡಿ ಎಂದು ನೀರಜ್ ಚೋಪ್ರಾ ಹಾಗೂ ಮನು ಭಾಕರ್ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟೇ ಬಿಟ್ಟಿದ್ದಾರೆ. ಮನು ಭಾಕರ್ ಹಾಗೂ ನೀರಜ್ ಚೋಪ್ರಾ ಇಬ್ಬರೂ ಹರಿಯಾಣ ಮೂಲದವರಾಗಿದ್ದಾರೆ. ಅದಲ್ಲದೆ, ಪ್ಯಾರಿಸ್‌ನಲ್ಲಿ ಇವರಿಬ್ಬರೂ ಜೊತೆಯಲ್ಲಿ ಮಾತನಾಡುತ್ತಿರುವ ವಿಡಿಯೋ ಕೂಡ ಸಖತ್ ವೈರಲ್ ಆಗಿದೆ.
ಪ್ಯಾರಿಸ್ ಒಲಿಂಪಿಕ್ ಬೆಳ್ಳಿ ಗೆದ್ದ ಹುಡುಗನ ಚಿನ್ನದಂತ ಹೃದಯ: ನೀರಜ್ ಚೋಪ್ರಾ ನಡೆಗೆ ವ್ಯಾಪಕ ಶ್ಲಾಘನೆ..!
"ಒಬ್ಬ ಹುಡುಗ ಮತ್ತು ಹುಡುಗಿ ಒಬ್ಬರಿಗೊಬ್ಬರು ಚೆನ್ನಾಗಿ ಮಾತನಾಡಿದರೆ ಭಾರತದಲ್ಲಿ ಜನರು ತಮ್ಮ ಊಹಿಸಲು ಪ್ರಾರಂಭಿಸುತ್ತಾರೆ" ಎಂದು ವೀಡಿಯೊದ ಕಾಮೆಂಟ್ ಸೆಕ್ಷನ್‌ನಲ್ಲಿ ಒಬ್ಬರು ಬರೆದಿದ್ದಾರೆ. ಭಾರತೀಯರು ಹುಟ್ಟಿನಿಂದಲೇ ಬಾಲಿವುಡ್‌ಗೆ ಸ್ಪ್ರಿಪ್ಟ್ ಬರೋದರಲ್ಲಿ ಎಕ್ಸ್‌ಪರ್ಟ್ ಆಗಿರ್ತಾರೆ ಎಂದು ಬರೆದಿದ್ದಾರೆ.
ಒಲಿಂಪಿಕ್ ಪದಕ ಗೆದ್ದು ಬಂದ ಮನು ಭಾಕರ್ ಮೊದಲು ಭೇಟಿಯಾಗಿದ್ದು ಸೋನಿಯಾ ಗಾಂಧಿಯನ್ನ..!