ಅಕ್ಕ-ತಮ್ಮ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುವುದೊಂದು ಖುಷಿಯ ಸಂಗತಿ. ಇಂಥದ್ದೇ ಖುಷಿಯನ್ನು ಇಂಡಿಗೋ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ರಿಯಾ ರಾಜೇಶ್ ಹಾಗೂ ಹರ್ಷ್ ತಮ್ಮದಾಗಿಸಿಕೊಂಡಿದ್ದಾರೆ. ಸಹೋದರರನ್ನು ಪ್ರೀತಿಪೂರ್ವಕ ವಿಮಾನಕ್ಕೆ ಸ್ವಾಗತಿಸುವ ರಿಯಾ ಅವರ ವೀಡಿಯೋ ನೆಟ್ಟಿಗರ ಮನಸೂರೆಗೊಂಡಿದೆ.
ಮನೆಮಂದಿ, ತಂದೆ-ತಾಯಿ, ಸಹೋದರ-ಸಹೋದರರ ಕುರಿತ ಒಲವನ್ನು ವಿವರಿಸಲು ಸಾಧ್ಯವಿಲ್ಲ. ಎಲ್ಲರಿಗೂ ಮನೆಮಂದಿ ಎಂದರೆ ಗೌರವ, ಪ್ರೀತಿ ಸಾಮಾನ್ಯ. ಯಾವುದಾದರೂ ಚಿಕ್ಕದೊಂದು ವೈಮನಸ್ಯವಿದ್ದರೂ ಮನೆಮಂದಿಯ ಮೇಲೆ ಅಪಾರ ಪ್ರೀತಿ ಇದ್ದೇ ಇರುತ್ತದೆ. ಇತ್ತೀಚೆಗೆ ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿರುವ ವೀಡಿಯೋವೊಂದು ಕೌಟುಂಬಿಕ ಪ್ರೀತಿಯನ್ನು ಅನಾವರಣಗೊಳಿಸುವಲ್ಲಿ ಯಶಸ್ವಿಯಾಗಿದೆ. ಲಕ್ಷಾಂತರ ನೆಟ್ಟಿಗರು ಈ ವೀಡಿಯೋದಿಂದ ಸ್ಫೂರ್ತಿಗೊಂಡಿದ್ದಾರೆ. ಎಲ್ಲರ ಹೃದಯವನ್ನು ಸೂರೆಗೊಳ್ಳಲು ಇದು ಯಶಸ್ವಿಯಾಗಿದೆ. ಇದನ್ನು ಇಂಡಿಗೋ ಸಂಸ್ಥೆಯಲ್ಲಿ ಏರ್ ಹೋಸ್ಟೆಸ್ ಆಗಿರುವ ರಿಯಾ ರಾಜೇಶ್ ದೇವ್ ಕರ್ ಎನ್ನುವವರು ಶೇರ್ ಮಾಡಿದ್ದು, ಕೆಲವೇ ಸಮಯದಲ್ಲಿ ವೈರಲ್ ಆಗಿದೆ. ಇಂಡಿಗೋ ಏರ್ ಲೈನ್ಸ್ ಸಂಸ್ಥೆಯಲ್ಲಿ ಅಟೆಂಡಂಟ್ ಆಗಿರುವ ರಿಯಾ ಅವರು ತಮ್ಮ ಸಹೋದರ ಹರ್ಷ್ ಅವರನ್ನು ಎದುರಾದ ಸನ್ನಿವೇಶವನ್ನು ಈ ವೀಡಿಯೋ ಒಳಗೊಂಡಿದೆ. ಹರ್ಷ್ ಇದೇ ಸಂಸ್ಥೆಯ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರೀರ್ವರ ಸಹೋದರ ಬಾಂಧವ್ಯ ಇಲ್ಲಿ ವ್ಯಕ್ತವಾಗಿರುವ ಪರಿಗೆ ನೆಟ್ಟಿಗರು ಮೂಕವಿಸ್ಮಿತರಾಗಿದ್ದಾರೆ.
ಪಿಒವಿ ಆಫ್ ಪ್ರೌಡ್ ಸಿಸ್ಟರ್
ವೀಡಿಯೋಕ್ಕೆ “ಪಿಒವಿ ಆಫ್ ಪ್ರೌಡ್ ಸಿಸ್ಟರ್’ ಎನ್ನುವ ತಲೆಬರಹ (Title) ನೀಡಲಾಗಿದ್ದು, ಹರ್ಷ ಅವರು ವಿಮಾನಕ್ಕೆ (Aircraft) ಕಾಲಿಡುತ್ತಿದ್ದಂತೆಯೇ ಸಹೋದರಿ (Sister) ರಿಯಾ ರಾಜೇಶ್ ಅವರನ್ನು ಸ್ವಾಗತಿಸುವುದು ಕಂಡುಬರುತ್ತದೆ. ರಿಯಾ ಅವರು ತಮ್ಮ ಇಂಡಿಗೋ (Indigo) ಸಂಸ್ಥೆಯ ಅಟೆಂಡಂಟ್ (Attendant) ಯೂನಿಫಾರ್ಮ್ ನಲ್ಲಿ ಇದ್ದರೆ ಹರ್ಷ್ ಸಿಬ್ಬಂದಿ (Staff) ದಿರಿಸಿನಲ್ಲಿ ಕಂಡುಬರುತ್ತಾರೆ. ಭ್ರಾತೃತ್ವ ಪ್ರೇಮ (Brotherly Love) ಇಬ್ಬರನ್ನೂ ಹೇಗೆ ಆವರಿಸಿಕೊಂಡಿದೆ ಎನ್ನುವುದು ಇದರಲ್ಲಿ ತಿಳಿದುಬರುತ್ತದೆ.
'ನಂಗೂ ಭಯ ಆಗುತ್ತೆ..!': ಗರ್ಲ್ ಫ್ಯಾನ್‌ಗೆ ಯಶಸ್ವಿ ಜೈಸ್ವಾಲ್ ಹೀಗಂದಿದ್ದೇಕೆ..? ವಿಡಿಯೋ ವೈರಲ್
ಈ ಸನ್ನಿವೇಶದ ಹೆಚ್ಚಿನ ವಿಶೇಷತೆ ಎಂದರೆ, ರಿಯಾ ತಮ್ಮ ಸಹೋದರನನ್ನು ಸ್ವಾಗತಿಸುವುದನ್ನು ಪ್ಲಾನ್ ಮಾಡಿದ್ದರು, ಪ್ರೀತಿಪೂರ್ವಕ ಓಲೆಯನ್ನೂ (Letter) ಬರೆದಿದ್ದರು ಹಾಗೂ ವಿಶೇಷ ಉಡುಗೊರೆಯನ್ನೂ ಇಟ್ಟಿದ್ದರು. ವೀಡಿಯೋದಲ್ಲಿ, ಇಂಡಿಗೋ ವಿಮಾನಕ್ಕೆ ಆಗಮಿಸಿದ ಸಹೋದರನನ್ನು ಆಲಿಂಗಿಸಿಕೊಂಡು ಸ್ವಾಗತಿಸುವ ರಿಯಾ ರಾಜೇಶ್ ಅವರ ಪ್ರತಿಯೊಂದು ನಡೆಯಲ್ಲೂ ಸಹೋದರನ ಬಗ್ಗೆ ಹೊಂದಿರುವ ಹೆಮ್ಮೆ, ತಮ್ಮನಿಗೆ ನೀಡುವ ಬೆಂಬಲ ವ್ಯಕ್ತವಾಗುತ್ತದೆ. ಹರ್ಷ್ ಇತ್ತೀಚೆಗಷ್ಟೇ ಇಂಡಿಗೋ ಸಂಸ್ಥೆ ಸೇರಿಕೊಂಡಿದ್ದು, ಸಹಾಯಕ ತಾಂತ್ರಿಕ (Technical) ಸಿಬ್ಬಂದಿಯಾಗಿ ಆಯ್ಕೆಯಾಗಿದ್ದಾರೆ.
“ದೇವ್ ಕರ್ ಕುಟುಂಬದಿಂದ 6ಇ ಕುಟುಂಬದವರೆಗೆ, ನನ್ನ ಪುಟ್ಟ ಸಹೋದರನ ಬಗ್ಗೆ ನನಗೆ ಅಪಾರ ಹೆಮ್ಮೆಯಿದೆ. ಐ ಲವ್ ಯು ಸೋ ಮಚ್. ಅಭಿನಂದನೆಗಳು’ ಎನ್ನುವ ಪೋಸ್ಟ್ ಮಾಡಿದ್ದಾರೆ ರಿಯಾ. ಕೆಲವೇ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ (Social Media) ಈ ಪೋಸ್ಟ್ ವೈರಲ್ ಆಗಿದೆ. ತಮ್ಮನ ಬಗ್ಗೆ ರಿಯಾ ಅವರಿಗಿರುವ ಪ್ರೇಮವನ್ನು, ಭಾವನೆಯನ್ನು (Feelings) ಎಲ್ಲರೂ ಮೆಚ್ಚಿಕೊಂಡಿದ್ದಾರೆ.
ಸೋ ಸ್ವೀಟ್
ಸದ್ಯ ವೈರಲ್ ಆಗಿರುವ ವೀಡಿಯೋವನ್ನು 4.7 ಮಿಲಿಯನ್ ಜನ ವೀಕ್ಷಣೆ ಮಾಡಿದ್ದು, ಸಾವಿರಾರು ಕಾಮೆಂಟ್ ಗಳು ಬಂದಿವೆ. ಜಗತ್ತಿನ ಎಲ್ಲ ಭಾಗದ ಜನ ಇವರಿಗೆ ಶುಭ ಹಾರೈಸಿದ್ದಾರೆ. ಇವರ ಬಾಂಧವ್ಯವನ್ನು ಕಂಡು ಹನಿಗಣ್ಣಾಗಿದ್ದಾರೆ.
ಇದೇನ್ ಇಷ್ಟೊಂದು ಸಣ್ಣ ಆಗ್ಬಿಟ್ಟಿದ್ದಾರೆ 'ಕಾಂತಾರ'ದ ಲೀಲಾ, ಸಪ್ತಮಿ ಗೌಡ ನೋಡಿ ಫ್ಯಾನ್ಸ್‌ಗೆ ಗಾಬರಿ!
“ದಿಸ್ ಇಸ್ ಸೋ ಸ್ವೀಟ್ (Sweet)’ ಎಂದು ಎಲ್ಲರೂ ಹೇಳಿದ್ದಾರೆ. “ದೇವರೇ, ಇದು ಅದ್ಭುತ ಅಚ್ಚರಿ (Surprise) ನೀಡುವ ವಿಚಾರ’ ಎಂದು ಕೆಲವರು ಉದ್ಗರಿಸಿದ್ದರೆ, “ಇದು ಮತ್ತೊಂದು ಹಂತದ ಅಚ್ಚರಿ’ ಎಂದು ಬಹಳಷ್ಟು ಜನ ಮೆಚ್ಚಿಕೊಂಡಿದ್ದಾರೆ. ಕೆಲವರು ತಮಗೆ ಮಾತೇ ಹೊರಡುತ್ತಿಲ್ಲ ಎಂದು ವಿಸ್ಮಿತರಾಗಿದ್ದಾರೆ.