ದಾಂಪತ್ಯದಲ್ಲಿ ಸಣ್ಣಪುಟ್ಟ ತಪ್ಪುಗಳಾದಾಗ ಅದನ್ನು ಕ್ಷಮಿಸಿ ಮುನ್ನಡೆಯೋದು ಅನಿವಾರ್ಯ. ಆದ್ರೆ ಕೆಲವೊಂದು ತಪ್ಪು ಗೊತ್ತಿಲ್ಲದೆ ನಡೆದು ಹೋಗಿದ್ರೂ ಅದನ್ನು ಕ್ಷಮಿಸೋದು ಕಷ್ಟ. ಮೊದಲಿನಂತೆ ಅವರನ್ನು ಸ್ವೀಕರಿಸೋದು ಎಲ್ಲರಿಗೂ ಸಾಧ್ಯವಿಲ್ಲ.
ಗಂಡ – ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುವ ಮಾತಿದೆ. ಅದು ಹಳೆಯ ಗಾದೆ. ಈಗ ಉಂಡು ಮಲಗಿದ ಮೇಲೆ ಜಗಳ ಶುರುವಾಗುತ್ತೆ. ಇದಕ್ಕೆ ಕಾರಣ ದಾಂಪತ್ಯ ದ್ರೋಹ. ಈಗಿನ ದಿನಗಳಲ್ಲಿ ಮದುವೆ ನಂತ್ರ ಅಕ್ರಮ ಸಂಬಂಧ ಬೆಳೆಸುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಅನೇಕರು ಈ ವಿಷ್ಯವನ್ನು ಮುಚ್ಚಿಡುವ ಪ್ರಯತ್ನ ಕೂಡ ಮಾಡೋದಿಲ್ಲ. ಮತ್ತೆ ಕೆಲವರು ಪರಸ್ಪರ ಒಪ್ಪಿ ಬೇರೊಂದು ಸಂಬಂಧ ಬೆಳೆಸ್ತಾರೆ. ಎಲ್ಲರಿಗೂ ತಮ್ಮ ಸಂಗಾತಿ ಇನ್ನೊಬ್ಬರಿಗೆ ಹತ್ತಿರವಾಗೋದು, ಸಂಬಂಧ ಬೆಳೆಸೋದು ಇಷ್ಟವಾಗೋದಿಲ್ಲ. ತಮಗಿಂತ ಸಂಗಾತಿ ಮೇಲೆ ಹೆಚ್ಚು ಪ್ರೀತಿ ಹೊಂದಿರುವ ಜನರು, ಸಂಗಾತಿಯನ್ನು ಯಾವುದೇ ಕಾಲಕ್ಕೂ ಬೇರೆಯವರ ಜೊತೆ ಹಂಚಿಕೊಳ್ಳೋದಿಲ್ಲ. ಅಪ್ಪಿತಪ್ಪಿ ಅವರಿಂದ ಮೋಸವಾದ್ರೆ ಅದನ್ನು ಸಹಿಸೋದು ಅವರಿಗೆ ಕಷ್ಟವಾಗುತ್ತದೆ. ಸಂಗಾತಿ ಮಾಡಿದ ತಪ್ಪನ್ನು ಕ್ಷಮಿಸಿ, ಅವರನ್ನು ಮತ್ತೆ ಮೊದಲಿನಂತೆ ಅಪ್ಪಿಕೊಳ್ಳುವುದು ಬಹಳ ದೂರದ ಮಾತು. ಪ್ರತಿ ಹಂತದಲ್ಲೂ ಸಂಗಾತಿ ಮಾಡಿದ ಮೋಸ ಅವರನ್ನು ಚುಚ್ಚುತ್ತಿರುತ್ತದೆ. ಈ ವ್ಯಕ್ತಿ ಕೂಡ ಈಗ ಅದೇ ಸ್ಥಿತಿಯಲ್ಲಿದ್ದಾನೆ.
ಸಾಮಾಜಿಕ ಜಾಲತಾಣ (Social Media ) ದಲ್ಲಿ ಜನರು ಗಂಭೀರ ವಿಷ್ಯಗಳ ಬಗ್ಗೆ ಚರ್ಚೆ ಮಾಡ್ತಾರೆ. ನಾಲ್ಕು ಕೋಣೆ ಮಧ್ಯೆ ಇರಬೇಕಾಗಿದ್ದ ದಾಂಪತ್ಯ ಗುಟ್ಟು, ಸಮಸ್ಯೆಯನ್ನು ಸಾಮಾಜಿಕ ಜಾಲತಾಣ ಬಳಕೆದಾರರ ಮುಂದಿಟ್ಟು ಅದಕ್ಕೆ ಪರಿಹಾರ ಕೇಳುತ್ತಾರೆ. ಐ ಆಮ್ ರಾಂಗ್ ಹೆಸರಿನ ಪೇಜ್ (Page) ನಲ್ಲಿ ವ್ಯಕ್ತಿ, ಮೋಸಗಾರ್ತಿ ಪತ್ನಿಗೆ ಇನ್ನೊಂದು ಅವಕಾಶ ನೀಡಿ ತಪ್ಪು ಮಾಡ್ತಿದ್ದೇನಾ ಎಂದು ಪ್ರಶ್ನೆ ಮಾಡಿದ್ದಾನೆ.
CHUKKI TAARE : ಬರ್ತಿದೆ ಅಪ್ಪ ಮಗಳ ಭಾಂದವ್ಯ ಬೆಸೆಯುವ ಹೊಸ ಕಥೆ ಚುಕ್ಕಿ ತಾರೆ
ಅವನಿಗೆ 39 ವರ್ಷ. ಪತ್ನಿಗೆ 33 ವರ್ಷ. ಇಬ್ಬರು ಹತ್ತು ವರ್ಷದ ಹಿಂದೆ ಮದುವೆ ಆಗಿದ್ದಾರೆ. ಏಳು ವರ್ಷದ ಮಗಳಿದ್ದಾಳೆ. ಸುಮಾರು 19 ವರ್ಷಗಳಿಂದ ಆತ ಪತ್ನಿಯನ್ನು ಬಲ್ಲವನಾಗಿದ್ದಾನೆ. ಇಬ್ಬರ ಮಧ್ಯೆ ಇದ್ದ ಅಪಾರ ಪ್ರೀತಿ ಗರ್ಲ್ಸ್ ಟ್ರಿಪ್ ನಂತ್ರ ಬದಲಾಗಿದೆ. ಪತ್ನಿ ಕೆಲ ದಿನಗಳ ಹಿಂದೆ ಗರ್ಲ್ಸ್ ಟ್ರಿಪ್ ಗೆ ಹೋಗಿದ್ದಳು. ಆಕೆ ಸಹೋದರಿ ಹಾಗೂ ಒಂದಿಷ್ಟು ಸ್ನೇಹಿತೆಯರ ಜೊತೆ ಪ್ರವಾಸಕ್ಕೆ ಹೊರಟಿದ್ದ ಪತ್ನಿಯನ್ನು ಪತಿ ತಡೆದಿರಲಿಲ್ಲ. ಆಕೆ ಮೇಲೆ ಅನುಮಾನಪಡುವ ಯಾವುದೇ ಕಾರಣ ಆಗ ಆತನಿಗಿರಲಿಲ್ಲ.
ಪತ್ನಿ ಮನೆಯಿಂದ ಅರ್ಧ ಗಂಟೆ ದೂರದಲ್ಲಿರುವ ಬಟ್ಲಿನ್, ಬ್ರಿಟನ್‌ನ (Britain) ಕಡಲತೀರದ ರೆಸಾರ್ಟ್ಸ್‌ಗೆ ಹೋಗಿದ್ದಳು. ಎಲ್ಲರೂ ಒಂದು ರಾತ್ರಿ ಮಾತ್ರ ಅಲ್ಲಿ ಉಳಿಯುವವರಿದ್ದರು. ಬೆಳಿಗ್ಗೆ ಪತ್ನಿ ಫೋನ್ ಮಾಡಿದಾಗ ವ್ಯಕ್ತಿಯೊಬ್ಬ ಫೋನ್ ತೆಗೆದುಕೊಂಡು, ನಿಮ್ಮ ಪತ್ನಿ ಅಳ್ತಿದ್ದಾಳೆ ಎಂದಿದ್ದಾನೆ. ಪತ್ನಿಯನ್ನು ಶಾಂತಗೊಳಿಸಿ ಏನಾಯ್ತು ಎಂದು ಕೇಳಿದಾಗ ಆಕೆ, ರಾತ್ರಿ ಅಪರಿಚಿತ ವ್ಯಕ್ತಿ ಜೊತೆ ಸಂಬಂಧ ಬೆಳೆಸಿರೋದಾಗಿ ಹೇಳಿದ್ದಾಳೆ. ಆಕೆ ಹತ್ತು ವರ್ಷ ಚಿಕ್ಕ ವಯಸ್ಸಿನ ವ್ಯಕ್ತಿ ಜೊತೆ ಸಂಬಂಧ ಬೆಳೆಸಿದ್ದಾಳೆ. ಒಂದೇ ರಾತ್ರಿ ಮೂರ್ನಾಲ್ಕು ಬಾರಿ ಇಬ್ಬರು ಶಾರೀರಿಕ ಸಂಬಂಧ ಬೆಳೆಸಿದ್ದಾರೆ. ಈ ವಿಷ್ಯ ತಿಳಿದ ಪತಿ ದಂಗಾಗಿದ್ದಾನೆ. ಮಗಳ ಜೊತೆ ಆರಾಮಾಗಿದ್ದ ಪತಿಗೆ ಪತ್ನಿಯ ಮೋಸ ಸಹಿಸಲು ಸಾಧ್ಯವಾಗ್ತಿಲ್ಲ. ಆಕೆ ಸದ್ಯ ತವರು ಮನೆಯಲ್ಲಿದ್ದಾಳೆ. ಪತ್ನಿ ಹಾಗೂ ಆಕೆ ಸಹೋದರಿ, ಸಹೋದರರಿಂದ ನಿರಂತರ ಕರೆ ಬರ್ತಿದೆ. ಕ್ಷಮಿಸುವಂತೆ ಕೇಳ್ತಿದ್ದಾರೆ. ಈ ಮಧ್ಯೆ ವ್ಯಕ್ತಿ ಅಮ್ಮನಿಗೆ ವಿಷ್ಯ ತಿಳಿಸಿದ್ದಾನೆ. ಅಮ್ಮ, ಸಂಸಾರದ ಬಗ್ಗೆ ಆಲೋಚನೆ ಮಾಡು. ಅದು ಅಫೇರ್ (Affair) ಆಗಿರಲಿಲ್ಲ ಎಂದಿದ್ದಾಳೆ. ಅಮ್ಮ ಹಾಗೂ ಪತ್ನಿ ಮಧ್ಯೆ ಸಂಬಂಧ ಚೆನ್ನಾಗಿದೆ. ವರ್ಷದ ಹಿಂದೆ ತಂದೆ ಸಾವನ್ನಪ್ಪಿದ ಮೇಲೆ ಅಮ್ಮನನ್ನು ಪತ್ನಿ ಪ್ರೀತಿಯಿಂದ ನೋಡಿಕೊಳ್ತಿದ್ದಾಳೆ. ಅಮ್ಮ ಕೂಡ ಸೊಸೆ ಪರ ಮಾತನಾಡ್ತಿದ್ದು, ನಾನು ಒಂಟಿಯಾಗಿದ್ದೇನೆ. ಏನು ಮಾಡ್ಬೇಕು ತಿಳಿಯುತ್ತಿಲ್ಲ ಎಂದು ವ್ಯಕ್ತಿ ಬರೆದಿದ್ದಾನೆ. ಇದಕ್ಕೆ 4500ಕ್ಕೂ ಹೆಚ್ಚು ಮಂದಿ ಪ್ರತಿಕ್ರಿಯಿಸಿದ್ದಾರೆ.
ಪ್ರೀತಿ ಒಂದೇ ಅಲ್ಲ, ಸಂಬಂಧದಲ್ಲಿ ಈ ವಿಷ್ಯಗಳೂ ತುಂಬಾ ಮುಖ್ಯ