ಪುರುಷರ ಅತೀ ಉದ್ದದ ʼPenisʼ ಸೈಝ್‌ ಎಷ್ಟು? ವಿಜ್ಞಾನಿಗಳೂ ಊಹಿಸಲಾಗದ ಸುಳ್ಳು!

By Suvarna NewsFirst Published Apr 18, 2023, 12:37 PM IST
Highlights

ಹೌದು, ಪುರುಷರು ತಮ್ಮ ಮದನಾಯುಧದ ಉದ್ದದ ಬಗ್ಗೆ ಸಿಕ್ಕಾಪಟ್ಟೆ ಉತ್ಪ್ರೇಕ್ಷೆ ಹೊಸೆದು ಹೇಳುತ್ತಾರಂತೆ. ಯೂನಿವರ್ಸಿಟಿ ಆಪ್‌ ಅಡ್ಗರ್‌ ಹಾಗೂ ಸ್ವೀಡಿಶ್‌ ಯೂನಿವರ್ಸಿಟಿ ಆಫ್‌ ಅಗ್ರಿಕಲ್ಚರಲ್‌ ಸೈನ್ಸಸ್‌ ಈಗ ಈ ವಿಷಯದಲ್ಲೇ ಅಧ್ಯಯನ ಮಾಡಿದೆ. ಈ ಸುಳ್ಳಿನಿಂದಾಗಿ, ವಿಜ್ಞಾನಿಗಳಿಗೆ ಅತೀ ಉದ್ದದ ʼಅದರʼ ಗಾತ್ರ (penis size) ನಿಜಕ್ಕೂ ಎಷ್ಟಿತ್ತು, ಎಷ್ಟಿದೆ ಎಂಬುದನ್ನು ಹುಡುಕಿ ದಾಖಲಿಸೋಕೇ ಇನ್ನೂ ಆಗಿಲ್ಲವಂತೆ!

ಪುರುಷರು ಹೆಚ್ಚಾಗಿ ಸುಳ್ಳು ಹೇಳುವುದು ಯಾದುವರ ಬಗ್ಗೆ? ತಾವು ಸಿಗರೇಟ್‌ ಸೇದತೀವಾ ಇಲ್ವಾ, ತಾವು ಕುಡೀತೀವಾ ಇಲ್ವಾ, ತಮಗೆ ಮನೆ ಹೊರಗಡೆ ಇನ್ನೊಂದು ಸಂಬಂಧ ಇದೆಯಾ ಇಲ್ವಾ- ಇಂಥ ವಿಷಯಗಳಲ್ಲೆಲ್ಲಾ ಸುಳ್ಳು ಹೊಸೆಯುವುದರಲ್ಲಿ ಪುರುಷರು ನಿಸ್ಸೀಮರು ಎಂಬುದು ನಿಮಗೆ ಗೊತ್ತೇ ಇದೆ. ಆದರೆ ಇನ್ನೊಂದು ಮಹಾ ಸುಳ್ಳು ಇದೆ. ಈ ಸುಳ್ಳಿನಿಂದಾಗಿ, ವಿಜ್ಞಾನಿಗಳಿಗೆ ಅತೀ ಉದ್ದದ ʼಅದರʼ ಗಾತ್ರ (penis size) ನಿಜಕ್ಕೂ ಎಷ್ಟಿತ್ತು, ಎಷ್ಟಿದೆ ಎಂಬುದನ್ನು ಹುಡುಕಿ ದಾಖಲಿಸೋಕೇ ಇನ್ನೂ ಆಗಿಲ್ಲವಂತೆ! ಹೌದು, ಇದು ʼಅದರʼ ವಿಷಯವೇ.

ಹೌದು, ಪುರುಷರು ತಮ್ಮ ಮದನಾಯುಧದ ಉದ್ದದ ಬಗ್ಗೆ ಸಿಕ್ಕಾಪಟ್ಟೆ ಉತ್ಪ್ರೇಕ್ಷೆ ಹೊಸೆದು ಹೇಳುತ್ತಾರಂತೆ. ಯೂನಿವರ್ಸಿಟಿ ಆಪ್‌ ಅಡ್ಗರ್‌ ಹಾಗೂ ಸ್ವೀಡಿಶ್‌ ಯೂನಿವರ್ಸಿಟಿ ಆಫ್‌ ಅಗ್ರಿಕಲ್ಚರಲ್‌ ಸೈನ್ಸಸ್‌ ಈಗ ಈ ವಿಷಯದಲ್ಲೇ ಅಧ್ಯಯನ ಮಾಡಿದೆ. ಈ ಸ್ಟಡಿಯಲ್ಲಿ ಪುರುಷರಿಗೆ ತಮ್ಮ ನಿಗುರಿದ ಶಿಶ್ನ ಎಷ್ಟು ಉದ್ದವಿರುತ್ತದೆ ಎಂದು ತಿಳಿಸಲು ಕೋರಲಾಯಿತು. ಜತೆಗೆ ಅವರ ಎತ್ತರ ಮತ್ತು ಫಿಟ್‌ನೆಸ್‌ ವಿವರ.

ವಿಜ್ಞಾನಿಗಳಿಗೇ ಗಾಬರಿಯಾಗುವಂತೆ, ಅತೀ ಉದ್ದದ ಸ್ವ- ಘೋಷಿತ ಶಿಶ್ನದ ಉದ್ದ 9000 ಮಿ.ಮೀ ಇತ್ತಂತೆ! ಇದು ಯಾವುದೇ ಒಂದು ಆನೆಯ ನಿಮಿರಿದ ಶಿಶ್ನದ ಉದ್ದಕ್ಕಿಂತ 50 ಪಟ್ಟು ಅಧಿಕ! ಯಾವುದೇ ವ್ಯಕ್ತಿ ಇಷ್ಟುದ್ದದ ಶಿಶ್ನ ಹೊಂದುವುದು ಅಸಾಧ್ಯ. ಇನ್ನೊಬ್ಬ ಪ್ರಸ್ತುತ ವಿಶ್ವ ದಾಖಲೆ ಹೊಂದಿರುವ ಶಿಶ್ನಕ್ಕಿಂತ ಉದ್ದದ್ದನ್ನು ತಾನು ಹೊಂದಿದೇನೆ ಎಂದು ರೀಲು ಬಿಟ್ಟ. ಅದೂ ನಿಜವಿರಲಿಲ್ಲ. ಆದರೆ ಉತ್ಪ್ರೇಕ್ಷೆ ಮಾಡಲು ಪುರುಷರಿಗೆ ಈ ವಿಷಯ ಅಡ್ಡ ಬಂದಿಲ್ಲ.

ಮಕ್ಕಳಿಗೆ ಬ್ಯಾಡ್, ಗುಡ್ ಟಚ್ ಪಾಠ ಮಾಡೋದು ಪೋಷಕರ ಕರ್ತವ್ಯ!

ಇಂಥ ʼಅತಿʼಗಳನ್ನು ಆಚೆಗಿಟ್ಟು ವಿಜ್ಞಾನಿಗಳು ಒಂದು ನಿರ್ಣಯಕ್ಕೆ ಬಂದಿದ್ದಾರೆ. ಅದೇನೆಂದರೆ ಪುರುಷನ ನಿಗುರಿದ ಶಿಶ್ನದ ಸರಾಸರಿ ಉದ್ದ 5.8 ಇಂಚಿಗಿಂತ ಸ್ವಲ್ಪ ಉದ್ದ ಎಂಬುದು. ಇದು ಡ್ಯಾನಿಶ್‌ ಪುರುಷರ ಅಳತೆ. ಯಾಕೆಂದರೆ ಸ್ಟಡಿ ನಡೆದುದು ಅಲ್ಲಿ. ಇದರಿಂದ ವಿಜ್ಞಾನಿಗಳು ಕಲಿತ ಪಾಠ ಏನೆಂದರೆ, ಪುರುಷತ್ವದ ಬಗ್ಗೆ ಸ್ವಯಂ ರೀಲುಗಳನ್ನು ಸಂಗ್ರಹಿಸಲು ಹೋಗಬಾರದು. ಏನಿದ್ದರೂ ಲ್ಯಾಬ್‌ನಲ್ಲಿಯೇ ಪರಿಶೀಲಿಸಬೇಕು.

ತಮ್ಮ ಶಿಶ್ನದ ಬಗ್ಗೆ ಕೀಳರಿಮೆ ಹೊಂದಿದವರು ಇಲ್ಲವೆ? ತಮ್ಮ ಸಂಗಾತಿಯ ಶಿಶ್ನದ ಬಗ್ಗೆ ಬೇಸರ ಹೊಂದಿದ ಸ್ತ್ರೀಯರಿಲ್ಲವೆ? ಅವರೂ ಇದ್ದಾರೆ. ಆದರೆ ಪುರುಷ ಸಂಖ್ಯೆ ಅಧಿಕ, ಸ್ತ್ರೀಯರು ಅದರ ಬಗ್ಗೆ ಅಷ್ಟು ತಲೆ ಕೆಡಿಸಿಕೊಳ್ಳುವುದಿಲ್ಲ. ಸುಮಾರು 85% ಪುರುಷರು ತಮ್ಮ ಆಯುಧದ ಉದ್ದ ಸಾಲದು ಎಂದು ಬೇಜಾರು ಮಾಡಿಕೊಂಡಿದ್ದಾರೆ. ಆದರೆ ಅವರ ಸಂಗಾತಿಗಳಲ್ಲಿ ಶೇ.55 ಮಂದಿಗೆ ಮಾತ್ರ ಆ ಬೇಸರ ತುಸು ಇದೆ ಅಷ್ಟೇ.

ಸೋ, ಹಾಗಿದ್ದರೆ, ಒಟ್ಟಾರೆ ಪಾಠ ಏನು? ಪುರುಷರು ಶಿಶ್ನದ ಗಾತ್ರದ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಬದಲಾಗಿ ಮದನ ಕಲೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಹಾಗೇ ತಮ್ಮ ಶಿಶ್ನವೊಂದು ಗದೆಯೋ ಎಂಬಂತೆ ಅದರ ಬಗ್ಗೆ ಸುಳ್ಳುಗಳನ್ನು ಪುಂಗುವುದನ್ನೂ ಬಿಡಬೇಕು. ಯಾಕೆಂದರೆ ಯಾರದೇ ಶಿಶ್ನ ಆರಿಂಚಿಗಿಂತಲೂ ಹೆಚ್ಚು ಇರುವುದಿಲ್ಲ.

ಮಗಳ ಡಿಎನ್‌ಎ ಟೆಸ್ಟ್ ಮಾಡಿಸಿದ ದಂಪತಿ, ರಿಪೋರ್ಟ್‌ ನೋಡಿದ್ರೆ ಇಬ್ಬರಿಗೂ ಮ್ಯಾಚ್ ಆಗ್ತಿಲ್ಲ!
 

click me!