ಬದುಕು ಅನ್ನೋದು ಒಂದು ಸುಂದರ ಯಾನ. ಕೆಲವೊಬ್ಬರ ಪಾಲಿಗೆ ಸುಖ-ದುಃಖಗಳ ಪಯಣ. ಏಳು, ಬೀಳುಗಳ ನಡುವೆ ಜೀವನ ಸಾಗುತ್ತಲೇ ಇರುತ್ತದೆ. ಈ ಮಧ್ಯೆ ಹಲವು ಸಂಬಂಧಗಳು ಜೊತೆಯಾಗುತ್ತವೆ. ಇನ್ನಷ್ಟು ಭಾವಬಂಧ ಏರ್ಪಡುತ್ತದೆ. ರೋಚಕ ಬದುಕು, ದಾಂಪತ್ಯ ಸುಖ ಅಂದ್ರೇನು ಅಂತ ಹೇಳಿದ್ದಾರೆ ಪ್ರೊ.ಕೃಷ್ಣೇಗೌಡರು ಕೇಳಿ.
ಬದುಕು ಅನ್ನೋದು ಒಂದು ಸುಂದರ ಯಾನ. ಕೆಲವೊಬ್ಬರ ಪಾಲಿಗೆ ಸುಖ-ದುಃಖಗಳ ಪಯಣ. ಏಳು, ಬೀಳುಗಳ ನಡುವೆ ಜೀವನ (Life) ಸಾಗುತ್ತಲೇ ಇರುತ್ತದೆ. ಈ ಮಧ್ಯೆ ಹಲವು ಸಂಬಂಧಗಳು (Relationship) ಜೊತೆಯಾಗುತ್ತವೆ. ಇನ್ನಷ್ಟು ಭಾವಬಂಧ ಏರ್ಪಡುತ್ತದೆ. ಸಂಬಂಧಗಳ ಸುಂದರ ಗುಚ್ಛಗಳಲ್ಲೊಂದು ಮದುವೆ (Marriage). ಎಲ್ಲೆಲ್ಲಿಂದಲೋ ಬಂದವರು ಮದುವೆಯೆಂಬ ಸಂಬಂಧದಲ್ಲಿ ಜೊತೆಯಾಗುತ್ತಾರೆ. ಅಭಿಪ್ರಾಯ-ಭಿನ್ನಾಭಿಪ್ರಾಯಗಳ ಮಧ್ಯೆ ಕೆಲವೊಬ್ಬರು ಮುನಿಸಿಕೊಂಡು ದೂರವಾದರೆ, ಇನ್ನು ಕೆಲವರು ಅರಿತುಕೊಂಡು ಜೀವನಪೂರ್ತಿ ಖುಷಿಯಾಗಿರುತ್ತಾರೆ.
ಪ್ರೊ.ಕೃಷ್ಣೇಗೌಡರು, ಝೀ ಕನ್ನಡದ ಕಾರ್ಯಕ್ರಮವೊಂದರಲ್ಲಿ ರೋಚಕ ಬದುಕು, ದಾಂಪತ್ಯ (Married life) ಸುಖ ಅಂದ್ರೇನು ಅಂತ ಹೇಳಿದ್ದಾರೆ ಎರಡು ಭಿನ್ನ ಅಭಿರುಚಿಯವರು ಮದುವೆಯಾಗಿ ದಾಂಪತ್ಯ ಜೀವನ ನಡೆಸುವುದೇ ಅದ್ಭುತ ಎಂದು ಕೃಷ್ಣೇಗೌಡರು ಹೇಳುತ್ತಾರೆ. ಒಳ್ಳೆ ಗಂಡ ಅಂತ ಯಾರೂ ಇರಲ್ಲ. ಸಿಕ್ಕವನನ್ನೇ ಒಳ್ಳೆ ಗಂಡ (Husband) ಮಾಡ್ಕೋಬೇಕು. ಒಳ್ಳೆಯ ಹೆಂಡತಿ (Wife) ಅಂತ ಯಾರೂ ಇರಲ್ಲ. ಸಿಕ್ಕವಳನ್ನೇ ಒಳ್ಳೆಯ ಹೆಂಡತಿ ಮಾಡ್ಕೋಳ್‌ಬೇಕು ಎಂದು ತಿಳಿಸುತ್ತಾರೆ.
ಏನು ಮಾಯೆಯೋ.. 19ರ ತರುಣಿ ಮದ್ವೆ ಆಗಿ ರೋಮ್ಯಾನ್ಸ್‌ಗೆ ವಯಸ್ಸು ಮುಖ್ಯವಲ್ಲ ಎಂದ 70ರ ತಾತ
ಮದುವೆ ಸ್ವರ್ಗದಲ್ಲೇ ನಿರ್ಧಾರವಾಗಿರುತ್ತೆ
ನಮ್ಮಲ್ಲೊಂದು ನಂಬಿಕೆಯಿಂದ ಮದುವೆಯೆಂದು ಸ್ವರ್ಗದಲ್ಲೇ ನಿರ್ಧಾರವಾಗಿರುತ್ತೆ ಅನ್ನೋದು. ಅದು ನಿಜವಿರಬಹುದೇನೋ ಯಾಕೆಂದರೆ ಎಲ್ಲರೂ ಅದನ್ನೇ ನಂಬುತ್ತಾರೆ. marriages are decided in heaven ಅಂತಾರೆ. ನಮ್ಮಲ್ಲಿ ಬ್ರಹ್ಮಗಂಟು ಅಂತಾರೆ. ಅಂದ್ರೆ ಸ್ವರ್ಗದಲ್ಲಿ ದೇವರು ಜೋಡಿಗಳಿಗೆ ಗಂಟು ಹಾಕಿ ಕಳುಹಿಸಿದ್ದಾನೆಂದು. ಆದ್ರೆ ಪಾಶ್ಚಾತ್ಯರು ಅದನ್ನು They decided in heaven ಅಂತಾರೆ. ಎಲ್ಲೋ ಹುಟ್ಟಿದವರು, ಎಲ್ಲೋ ಬೆಳೆದವರು ಆಮೇಲೆ ಜೊತೆಯಾಗ್ತಾರೆ. ಬಹಳ ಆಶ್ಚರ್ಯವಾಗುವ ವಿಷಯ ಅದು ಎಂದು ಕೃಷ್ಣೇಗೌಡರು ತಿಳಿಸುತ್ತಾರೆ.
ಸಾಯಿಸುವಷ್ಟು ಸಿಟ್ಟು, ಕಾಲು ತೊಳೆದು ನೀರು ಕುಡಿಯುವಷ್ಟು ಪ್ರೀತಿ
ವಯಸ್ಸಾದ ಇಬ್ಬರು ಗಂಡ-ಹೆಂಡತಿ ಮದುವೆಯಾದ 50ನೇ ವರ್ಷವನ್ನು ಸೆಲಬ್ರೇಷನ್ ಮಾಡ್ತಿದ್ರು. ಅದು ಗೋಲ್ಡನ್ ಜ್ಯುಬಿಲಿ. ಅಮೇರಿಕಾದಲ್ಲಿ ಹುಟ್ಟಿದ ಅವರ ಮೊಮ್ಮಗು ನೀವೇನು ಮಾಡ್ತಿದ್ದೀರಿ ಅಂತ ಕೇಳುತ್ತೆ. ಅದಕ್ಕೆ ಅಜ್ಜ-ಅಜ್ಜಿ, ನಾವು ಮದುವೆಯಾಗಿ ಐವತ್ತು ವರ್ಷದಿಂದ ಜೊತೆಗಿದ್ದೇವೆ ಅದನ್ನು ಸೆಲಬ್ರೇಟ್ ಮಾಡುತ್ತಿದ್ದೇವೆ ಎಂದು ಹೇಳ್ತಾರೆ. ಅಮೇರಿಕಾದ ಮಗು (Children) ತಕ್ಷಣ Did you spend 50 long years with same husband ಅನ್ನೋದು. ಅಜ್ಜಿ ಹೌದು ಎಂದು ಉತ್ತರಿಸುತ್ತಾರೆ. ಅದಕ್ಕೆ ಮಗು ಮತ್ತೆ, ಯಾವಾಗ್ಲಾದ್ರೂ ನಿಂಗೆ ಈ ತಾತನ ಮೇಲೆ ಕೋಪ ಬಂದಿರಲ್ಲಿಲ್ವಾ ಎಂದು ಕೇಳ್ತಾನೆ. ಅದಕ್ಕೆ ಅಜ್ಜಿ, ಕೋಪ ಬಂದಿತ್ತು, ಮಲಗಿದ್ದಾಗ ಆತನ ತಲೆಯ ಮೇಲೆ ಸೈಜ್ ಕಲ್ಲು ಎತ್ತಿ ಹಾಕುವಷ್ಟು ಕೋಪ ಬಂತು. ಎಷ್ಟು ಪ್ರೀತಿ (Love) ಬಂತು ಅಂದ್ರೆ ಕಾಲು ತೊಳೆದು ನೀರು ಕುಡಿಯುವಷ್ಟು ಪ್ರೀತಿ ಬಂತು ಅಂತಾರೆ. ದಾಂಪತ್ಯ ಅಂದ್ರೆ ಇದುವೇ ಎಂದು ಕೃಷ್ಣೇಗೌಡರು ಹೇಳುತ್ತಾರೆ.
ಲೆಫ್ಟ್, ರೈಟ್ ಸಿದ್ಧಾಂತ ಸೈಡಿಗಿಟ್ಟು ಸ್ಟ್ರೈಟ್ ಆಗಿ ಹಸೆಮಣೆಯೇರಿದ ಕೇರಳದ ಜೋಡಿ
ಭಿನ್ನಾಭಿಪ್ರಾಯಗಳನ್ನು ಗೌರವಿಸುವುದೇ ದಾಂಪತ್ಯ
ಹೊಂದಾಣಿಕೆಯೆಂದರೆ ಗಂಡ ಹೀಗಿದ್ದಾನೆಂದು ಹೆಂಡತಿಯೂ ಹಾಗೆಯೇ ಆಗಿಬಿಡುವುದು ಅಥವಾ ಹೆಂಡತಿ ಹೀಗಿದ್ದಾಳೆಂದು ಗಂಡನೂ ಹಾಗೆಯೇ ಆಗಿಬಿಡುವುದಲ್ಲ. ಭಿನ್ನಾಭಿಪ್ರಾಯಗಳನ್ನು ಗೌರವಿಸುವುದೇ ದಾಂಪತ್ಯ. ನನ್ನ ಅಭಿರುಚಿ ಬೇರೆ, ಆಕೆಯ ಅಭಿರುಚಿ ಬೇರೆ ಅಂದ್ರೆ ಆಕೆಯ ಅಭಿರುಚಿಯನ್ನು ಗೌರವಿಸುವುದು ತುಂಬಾ ಒಳ್ಳೆಯ ದಾಂಪತ್ಯ. ಗಂಡ-ಹೆಂಡತಿ ಪರಸ್ಪರ ಅರ್ಥ ಮಾಡಿಕೊಳ್ಳುವುದು ಅಂತಾರಲ್ಲ. ಆದ್ರೆ ನನ್ನ ಪ್ರಕಾರ ಎಲ್ಲವೂ ಅರ್ಥವಾಗ್ಬಾರದು. ಪೂರ್ತಿ ಅರ್ಥವಾಗದೇ ಇರುವುದು ಒಳ್ಳೆಯ ಬಾಳು ಎನ್ನುತ್ತಾರೆ.