ಕೆಲವೊಮ್ಮೆ ಆಕಸ್ಮಿಕವಾಗಿ ನಿಮ್ಮ ಮಕ್ಕಳು ಇಂಟರ್ಪೋನೆಟ್ರ್ನ್‌ನಲ್ಲಿ ನೋಡಿಬಿಡಬಹುದು. ಆಗ ನೀವು ಮಾಡಬೇಕಾದ್ದೇನು? ಕೂಗಾಡುವುದರಿಂದ ಪ್ರಯೋಜನವಿಲ್ಲ.
ಇಂದಿನ ಮಕ್ಕಳು ಬಹುಬೇಗನೆ ಇಂಟರ್‌ನೆಟ್‌ನಲ್ಲಿ ಸಿಗುವ ಅಶ್ಲೀಲ ಕಂಟೆಂಟ್‌ಗೆ ಎಕ್ಸ್‌ಪೋಸ್ ಆಗಿಬಿಡುತ್ತವೆ. ಏಳು, ಎಂಟರ ಪ್ರಾಯದಲ್ಲೆಲ್ಲ ಪೋರ್ನ್ ಅದು ಹೇಗೋ ಅವರಿಗೆ ಸಿಕ್ಕಿಬಿಡುತ್ತದೆ. ನೀವು ಎಷ್ಟೇ ಅಡಗಿಸಿಟ್ಟರೂ ಸಹಪಾಠಿಗಳೋ, ಸೀನಿಯರ್‌ಗಳೋ ಕಲಿಸಿಬಿಡುತ್ತಾರೆ. ಅಥವಾ ವಾತಾವರಣವೇ ಅವರಿಗೆ ಕಲಿಸುತ್ತದೆ. ಕೆಲವೊಮ್ಮೆ ಹೆತ್ತವರ ಅಕೌಂಟ್‌ನಿಂದಲೇ ಪೋರ್ನ್ ಸಿಕ್ಕಿಬಿಡುತ್ತದೆ. ಆಗ ನೀವು ಏನೂ ಹೇಳುವ ನೈತಿಕ ನೆಲೆಯಲ್ಲಿರೋದಿಲ್ಲ. ಆದರೆ ತೀರಾ ಸಣ್ಣ ಮಕ್ಕಳು ಪೋರ್ನ್ ನೋಡಿದರೆ ಅವರ ಮನದಲ್ಲಿ ನೂರೆಂಟು ಪ್ರಶ್ನೆಗಳು ಮೂಡುತ್ತವೆ. ಕೆಲವರು ಅದನ್ನು ತಂದು ನಿಮ್ಮ ಬಳಿಯಲ್ಲಿಯೇ ತಮ್ಮ ಕುತೂಹಲಕ್ಕೆ ಉತ್ತರಗಳನ್ನು ಪಡೆಯಬಯಸಬಹುದು. ಆಗ ನೀವು ಏನು ಹೇಳುತ್ತೀರಿ, ಹೇಗೆ ವರ್ತಿಸುತ್ತೀರಿ ಎಂಬುದರ ಮೇಲೆ ಅವರ ಮುಂದಿನ ನಡವಳಿಕೆ ನಿರ್ಧಾರವಾಗುತ್ತದೆ.
- ಶಾಂತವಾಗಿರಿ. ಗಾಬರಿಯಾಗಬೇಡಿ. ಇದೆಲ್ಲ ಎಲ್ಲಿ ಕಲಿತೆ, ಬೇಡದಿದ್ದದ್ದೆಲ್ಲ ನಿಂಗೆ ಹೇಗೆ ಸಿಗ್ತದೆ, ಕಲಿಯೋದು ಬಿಟ್ಟು ಇಂಥದ್ದೆಲ್ಲ ಮಾಡ್ತೀಯಲ್ಲ ನಾಚ್ಕೆ ಆಗೋಲ್ವಾ ಎಂದೆಲ್ಲ ಆತುರಗೇಡಿಗಳಾಗಿ ಕೂಗಾಡಬೇಡಿ. ಹೀಗೆಲ್ಲ ನೀವು ಮಾತಾಡಿದರೆ ಮಕ್ಕಳು ಗಾಬರಿಯಾಗಿ, ತಾವು ಏನೋ ಮಹ ತಪ್ಪು ಮಾಡಿದ್ದೇವೆ ಎಂಬ ಪಶ್ಚಾತ್ತಾಪ ಬೆಳೆಸಿಕೊಳ್ಳುತ್ತಾರೆ. ಹಾಗೆಂದು ಪೋರ್ನ್ ಬಗ್ಗೆ ತಮ್ಮ ಮನದಲ್ಲಿ ಮೂಡಿದ ಕುತೂಹಲವನ್ನು ಹಾಗೇ ಉಳಿಸಿಕೊಳ್ಳುತ್ತಾರೆ. ಅದನ್ನು ಬೇರೊಂದು ಕಡೆ ತಿಳಿದುಕೊಳ್ಳಲು ಬಯಸಬಹುದು. ಇಂಟರ್‌ನೆಟ್‌ನಲ್ಲಿ ಹುಡುಕಬಹುದು, ಸೀನಿಯರ್‌ಗಳ ಅಥವಾ ಗೆಳೆಯರ ಬಳಿ ಆ ಬಗ್ಗೆ ಚಚಿಸಬಹುದು. ಇವರಲ್ಲಿ ಸರಿಯಾದ ಮಾಹಿತಿ ಸಿಕ್ಕಿದರೆ ಓಕೆ, ಇಲ್ಲವಾದರೆ ಅಪಾಯ ಕಟ್ಟಿಟ್ಟದ್ದು.\
undefined
ಲೈಂಗಿಕ ಸಮಸ್ಯೆಗಳಿಗೂ ಮನೆಯಲ್ಲಿಯೇ ಇದೆ ಪರಿಹಾರ ...
- ಅರ್ಥ ಮಾಡಿಕೊಳ್ಳುವುದು ಮುಖ್ಯ. ನಿಮ್ಮ ಮಗು ಏನು ಹೇಳುತ್ತದೆ ಎಂಬುದನ್ನು ಶಾಂತವಾಗಿ ಕೇಳಿ. ಮಗು ಪೋರ್ನ್ ನೋಡಿದ್ದು ಎಲ್ಲಿ, ಎಷ್ಟು ಎಂಬುದನ್ನು ವಿವರವಾಗಿ, ಶಾಂತವಾಗಿ ಕೇಳಿ ತಿಳಿದುಕೊಳ್ಳಿ. ಆಕಸ್ಮಿಕವಾಗಿ ನಿಮ್ಮ ಯಾವುದಾದರೂ ಗ್ಯಾಜೆಟ್‌ನಲ್ಲಿ ಮಗು ಇದನ್ನು ನೋಡಿದ್ದರೆ, ಮುಂದೆ ಸೇಫ್ಟಿ ಕ್ರಮ ಕೈಗೊಳ್ಳಲು ಅನುಕೂಲ.
- ಮಗುವನ್ನು ಶಿಕ್ಷಿಸಬೇಡಿ. ಅದು ಮುಂದೆ ಭವಿಷ್ಯದಲ್ಲಿ ಮಗುವಿಗೂ ನಿಮಗೂ ತೊಂದರೆ ಉಂಟುಮಾಡುತ್ತೆ. ಮಗು ಅಡ್ಡದಾರಿ ಹಿಡಿಯಲು ಕಾರಣವಾಗಬಹುದು. ಪೋರ್ನ್ ನೋಡಿ ಮಗು ಅಪ್‌ಸೆಟ್ ಆಗಿದ್ದರೆ, ಮಗುವನ್ನು ಶಾಂತಗೊಳಿಸಿ ಹಾಗೂ ಅದರಿಂದ ಆತನಿಗೆ/ಆಕೆಗೆ ಯಾವುದೇ ತೊಂದರೆ ಇಲ್ಲವೆಂಬ ಅಶ್ಯೂರೆನ್ಸ್ ಕೊಡಿ.
- ಮಗು ಹಾಗೂ ನೀವಿಬ್ಬರೂ ಶಾಂತಗೊಂಡ ಬಳಿಕ, ಪೋರ್ನೋಗ್ರಫಿಯ ಬಗ್ಗೆ ಮಾತನಾಡಬಹುದು.
- ನಿಮ್ಮ ಮಗುವಿನ ಪ್ರಾಯ ಎಷ್ಟು, ಮಗುವಿನ ಬೌದ್ಧೀಕ ಬೆಳವಣಿಗೆ ಎಷ್ಟು ಎಂಬುದರ ಆಧಾರದ ಮೇಲೆ ನೀವು ಮಗುವಿನೊಂದಿಗೆ ಪೋರ್ನ್ ಅಥವಾ ಸೆಕ್ಸ್ ಬಗ್ಗೆ ಎಷ್ಟು ಮಾತಾಡಬಹುದು ಎಂಬುದು ಅವಲಂಬಿಸಿದೆ.
ಮಕ್ಕಳು ಊಟ ಮಾಡುತ್ತಿಲ್ಲವೇ? ಹಾಗಿದ್ರೆ ಈ ಆಹಾರ ಟ್ರೈ ಮಾಡಿ ನೋಡಿ ...
- ಐದು ಅಥವಾ ಆರು ವರ್ಷದ ಮಗು ಪೋರ್ನ್ ಅನ್ನು ನೋಡಿದ್ದರೆ, ಆ ಬಗ್ಗೆ ತಿಳಿಯಲು ಇನ್ನೂ ಕೆಲವು ವರ್ಷಗಳಾಗಬೇಕು ಎಂದು ಮನದಟ್ಟು ಮಾಡಿಸಬಹುದು. ಆದರೆ ಎಂಟು, ಒಂಬತ್ತು ವರ್ಷದ ಮಗುವಿಗೆ ಹಾಗೆ ಮಾಡಲಾಗುವುದಿಲ್ಲ.
- ಮಗುವಿಗೆ ಸೆಕ್ಸ್ ಬಗ್ಗೆ ಅರಿವು ಮೂಡುವ ಹಾಗೆ ಮಾಡಿ. ಲವ್ ಎಂದರೇನು, ಸೆಕ್ಸ್ ಎಂದರೇನು, ಫ್ಯಾಮಿಲಿಗೆ ಸೆಕ್ಸ್ ಎಷ್ಟು ಅಗತ್ಯ, ಸೆಕ್ಸ್‌ಗೆ ಸಮ್ಮತಿ ಎಷ್ಟು ಅಗತ್ಯ, ಆತ್ಮೀಯವಾದ ಸೆಕ್ಸ್‌ಗೆ ಪ್ರೀತಿ ಹೇಗೆ ಅಗತ್ಯ ಎಂಬುದನ್ನೆಲ್ಲ ಹೇಳಬಹುದು. ಸೆಕ್ಸ್‌ನಲ್ಲಿ ಪ್ರೀತಿ, ನಂಬಿಕೆ ಹಾಗೂ ಸಮ್ಮತಿ ಎಷ್ಟು ಮುಖ್ಯ ಹಾಗೂ ಇದು ದಂಪತಿಗಳಲ್ಲಿ ಮಾತ್ರ ನಡೆಯಬೇಕಾದುದು ಎಂಬುದನ್ನು ನೀವು ಮಗುವಿಗೆ ಮನದಟ್ಟು ಮಾಡಿಸಬೇಕು.
#Feelfree: ಮಗಳು ನನ್ನ ಹತ್ರಾನೇ ಬರೋಲ್ಲ, ಏನು ಮಾಡಲಿ? ...
- ಇಂಟರ್ನೆಟ್‌ನಲ್ಲಿ ಇಂಥದ್ದನ್ನು ನೋಡಲು ಸಾಧ್ಯವಾಗದಂತೆ ಸೇಫ್ಟಿ ಕ್ರಮಗಳನ್ನು ಸೆಟ್ ಮಾಡಿ. ಹಾಗೇ, ಮಗುವಿಗೂ ಅಂಥ ಶಬ್ದಗಳನ್ನು ಸರ್ಚ್ ಮಾಡದಂತೆ ಹೇಳಿಕೊಡಿ. ಗ್ಯಾಜೆಟ್‌ಗಳನ್ನು ಒಂಟಯಾಗಿ ನೋಡುವ ಅಭ್ಯಾಸ ಮಾಡಿಸಬೇಡಿ. ಜೊತೆಯಲ್ಲಿ ಹೆತ್ತವರು ಯಾವಾಗಲೂ ಇರಲಿ. ಮಗುವಿನ ಸ್ವಚ್ಛತಾ ವರ್ತನೆಗಳಲ್ಲಿ ಒಂದು ನಿಗಾ ಇರಲಿ. ವರ್ತನೆಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸ ಕಂಡುಬಂದರೂ ಗಮನಿಸಿ, ಶಾಂತವಾಗಿ ಆ ಬಗ್ಗೆ ಚರ್ಚಿಸಿ.