ಲೈಂಗಿಕ ಅನಾರೋಗ್ಯ ತರುತ್ತೆ ನೂರಾರು ಸಮಸ್ಯೆ, ಅದಕ್ಕಿದ್ದಾರೆ ಸೆಕ್ಸ್ ಥೆರಪಿಸ್ಟ್

By Web Desk  |  First Published Nov 14, 2019, 3:03 PM IST

ಸೆಕ್ಸ್ ಥೆರಪಿ ಬಗ್ಗೆ ಜನಸಾಮಾನ್ಯರಲ್ಲಿ ಬಹಳಷ್ಟು ಅಪನಂಬಿಕೆಗಳು, ಅತಿಯಾದ ಕಲ್ಪನೆಗಳು, ಭಯ, ಅನುಮಾನ, ಗೊಂದಲಗಳು ತುಂಬಿರುತ್ತವೆ. ಆದರೆ ನಿಜಕ್ಕೂ ಅಲ್ಲಿ ಏನು ನಡೆಯುತ್ತದೆ ತಿಳ್ಕೋಬೇಕಾ?


ಲೈಂಗಿಕ ಆರೋಗ್ಯವು ಮನುಷ್ಯನ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಒಂದು ಭಾಗ. ಲೈಂಗಿಕ ಆರೋಗ್ಯದಲ್ಲಿ ಏರುಪೇರಾದರೆ ಅದರಿಂದ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅಥವಾ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿಂದಲೇ ಲೈಂಗಿಕ ಆರೋಗ್ಯ ಹದಗೆಟ್ಟಿರಬಹುದು. ಆದರೆ ಇಂಥ ಲೈಂಗಿಕ ಸಮಸ್ಯೆಗಳ ಬಗ್ಗೆ ಮಾತ್ರ ಬಾಯಿ ಬಿಚ್ಚಲು ಎಲ್ಲರೂ ಹಿಂಜರಿಯುವುದರಿಂದ ಸಮಸ್ಯೆ ಸಮಸ್ಯೆಯಾಗಿಯೇ ಉಳಿಯುತ್ತದೆ, ಅಲ್ಲಿಯೇ ಬೆಳೆಯುತ್ತದೆ.

ಪಾರ್ಟ್ನರ್ ಜೊತೆ ಆಗಾಗ ಜಗಳವಾಡೋದು ಸಂಬಂಧಕ್ಕೆ ಒಳ್ಳೆಯದಂತೆ!

Tap to resize

Latest Videos

ಇಂಥ ಸಮಸ್ಯೆಯ ಕುರಿತು ಸಹಾಯ ಪಡೆಯಲು ನಿಮಗೆ ಮುಜುಗರವೆನಿಸುತ್ತಿದ್ದರೆ ತಿಳಿದಿರಲಿ, ಶೇ.43ರಷ್ಟು ಮಹಿಳೆಯರು ಹಾಗೂ ಶೇ.31ರಷ್ಟು ಪುರುಷರು ಒಂದಿಲ್ಲೊಂದು ಲೈಂಗಿಕ ಸಮಸ್ಯೆ ಎದುರಿಸುತ್ತಿರುತ್ತಾರೆ. ಅಂದರೆ, ಇದು ಸಾಮಾನ್ಯ ಸಮಸ್ಯೆಯೇ ಆಗಿದ್ದು, ಅದಕ್ಕೆ ಪರಿಹಾರ ಪಡೆಯಲು ಹಿಂಜರಿಯಬೇಕಿಲ್ಲ. ಇಂಥ ಸಮಸ್ಯೆಗಳಿಗೆ ಪರಿಹಾರವೇ ಸೆಕ್ಸ್ ಥೆರಪಿ. 

ಏನಿದು ಸೆಕ್ಸ್ ಥೆರಪಿ? 

ಸಾಮಾನ್ಯವಾಗಿ ಮಾನಸಿಕ ಸಮಸ್ಯೆಗಳಿಂದ ಲೈಂಗಿಕ ಸಮಸ್ಯೆಗಳು ಉದ್ಭವವಾದಾಗ ದಂಪತಿಯು ಮನೋತಜ್ಞರು, ಮನಶಾಸ್ತ್ರಜ್ಞರು, ವಿವಾಹ ಕೌನ್ಸೆಲರ್ ಅಥವಾ ಸೆಕ್ಸ್ ಕೌನ್ಸೆಲರ್ ಬಳಿ ಹೋಗುವುದುಂಟು. ಹೀಗೆ ಸೆಕ್ಸ್ ಥೆರಪಿ ನೀಡುವವರು ಸೆಕ್ಷುಯಲ್ ಹಾಗೂ ಸಂಬಂಧಗಳ ಆರೋಗ್ಯ ಕುರಿತು ವಿಶೇಷ ತರಬೇತಿ ಪಡೆದಿರುತ್ತಾರೆ. ಅಮೆರಿಕನ್ ಅಸೋಸಿಯೇಶನ್ ಆಫ್ ಸೆಕ್ಷುಯಾಲಿಟಿ ಎಜ್ಯುಕೇಟರ್ಸ್, ಕೌನ್ಸೆಲರ್ಸ್ ಹಾಗೂ ಥೆರಪಿಸ್ಟ್ಸ್(ಎಎಎಸ್ಇಸಿಟಿ) ಮೂಲಕ ಅವರು ಸರ್ಟಿಫಿಕೇಟ್ ಪಡೆದಿರುತ್ತಾರೆ. ಸೆಕ್ಸ್ ಥೆರಪಿ ಕೂಡಾ ಒಂದು ರೀತಿಯ ಕೌನ್ಸೆಲಿಂಗ್ ಆಗಿದೆ.

ಮದುವೆಯಾಗಲು ಇಷ್ಟವಿಲ್ಲ, ಏನು ಮಾಡಲಿ? 

ಸೆಕ್ಸ್ ಥೆರಪಿಸ್ಟ್ ಹೆಸರು ಕೇಳಿ ಸಾಮಾನ್ಯ ಜನರಲ್ಲಿ ಅವರ ಬಗೆಗೆ ನೂರೊಂದು ಅನುಮಾನಗಳು ಹುಟ್ಟಬಹುದು. ಆದರೆ, ಯಾವುದೇ ಸೆಕ್ಸ್ ಥೆರಪಿಸ್ಟ್  ಕ್ಲೈಂಟ್‌ಗಳ ಮೈ ಮುಟ್ಟುವುದಿಲ್ಲ. ಬಟ್ಟೆ ತೆಗೆಯಬೇಕಿಲ್ಲ, ದೈಹಿಕ ಪರೀಕ್ಷೆ ನಡೆಸುವುದಿಲ್ಲ, ಕಚೇರಿಯಲ್ಲಿ ಏನೂ ನಡೆಯುವುದಿಲ್ಲ. ಅವರು ಪ್ರೊಫೆಶನಲ್ ಆಗಿ ಸಮಸ್ಯೆಯನ್ನು ನಿಭಾಯಿಸುತ್ತಾರೆ. ಎಲ್ಲ ಮಾನಸಿಕ ಸಮಸ್ಯೆಗಳನ್ನು ಪರಿಹರಿಸುವ ರೀತಿಯಲ್ಲೇ ಅವರು ಕೆಲಸ ಮಾಡುತ್ತಾರೆ. ಸಮಸ್ಯೆ ಕುರಿತು ಅರಿವು ಮೂಡಿಸುವ ಜೊತೆಗೆ ಪರಿಹಾರ ಸಾಧ್ಯತೆಗಳನ್ನು ತೆರೆದಿಡುತ್ತಾರೆ. ಮನೆಯಲ್ಲಿ ಇಬ್ಬರೇ ಇದ್ದಾಗ ಏನು ಮಾಡಬಹುದೆಂದು ಸೂಚಿಸುತ್ತಾರೆ. ಲೈಂಗಿಕ ತೃಪ್ತಿಗೆ ಸಂಬಂಧಿಸಿದ ಸಮಸ್ಯೆಗಳಾದ ಕಡಿಮೆ ಲೈಂಗಿಕ ಆಸಕ್ತಿ, ಲೈಂಗಿಕ ದೌರ್ಜನ್ಯ ಹಿನ್ನೆಲೆ, ಅತಿಯಾದ ಲೈಂಗಿಕ ಆಸಕ್ತಿ, ಅಸಹಜ ಲೈಂಗಿಕ ವಾಂಛೆಗಳು, ಎರೆಕ್ಟೈಲ್ ಸಮಸ್ಯೆಗಳು,  ಉದ್ರೇಕಗೊಳ್ಳದಿರುವುದು, ಲೈಂಗಿಕ ಕ್ರಿಯೆ ಕುರಿತ ಭಯ, ದಂಪತಿ ನಡುವೆ ಸಾಮರಸ್ಯ ಕೊರತೆಯಿಂದ ಲೈಂಗಿಕ ಸಮಸ್ಯೆ ಮುಂತಾದ ತೊಂದರೆಗಳಿರುವವರು ಸೆಕ್ಸ್ ಥೆರಪಿಸ್ಟ್ ಸಹಾಯ ಪಡೆಯಬಹುದು. ಈ ಸೆಕ್ಸ್ ಥೆರಪಿಯು ಕೆಲವಾರು ಸೆಶನ್ಸ್ ತೆಗೆದುಕೊಳ್ಳಬಹುದು. 

ಲೈಂಗಿಕ ಸಮಸ್ಯೆಯ ಮಾನಸಿಕ ಮುಖ

ಸೆಕ್ಸ್ ಥೆರಪಿಸ್ಟ್ ಮುಖ್ಯವಾಗಿ ಮಾನಸಿಕ ಸಮಸ್ಯೆಗಳಿಂದ ಲೈಂಗಿಕ ಸಮಸ್ಯೆಗಳಾಗುತ್ತಿವೆಯೇ ಎಂಬುದನ್ನು ಗುರುತಿಸುತ್ತಾರೆ. ಭಯ, ಅಸಹ್ಯ, ಹಳೆಯ ಕೆಟ್ಟ ಅನುಭವಗಳು, ದೇಹದ ಕುರಿತ ಕೀಳರಿಮೆ, ಅನುಮಾನ ಮುಂತಾದ ಕಾರಣಗಳಿಂದಾಗಿ ದಂಪತಿ ಮಧ್ಯೆ ಲೈಂಗಿಕ ಸಮಸ್ಯೆಗಳು ಕಾಣಿಸಿಕೊಂಡಿರಬಹುದೇ ಎಂಬುದನ್ನು ಅರಿಯುತ್ತಾರೆ. ಬಳಿಕ ಈ ಸಂಬಂಧ ಪರಿಹಾರ ಒದಗಿಸುತ್ತಾರೆ. 

ಹೇಗೆ ತಯಾರಿ ನಡೆಸಬೇಕು?

ಸೆಕ್ಸ್ ಥೆರಪಿಸ್ಟನ್ನು ಕಾಣುವ ಮೊದಲು ನಿಮ್ಮ ಸಮಸ್ಯೆಯ ವಿವರ, ಅದು ಯಾವಾಗಲೂ ಇರುತ್ತದೆಯೇ, ಬಂದು ಹೋಗುತ್ತದೆಯೇ, ಯಾರೆಲ್ಲ ವೈದ್ಯರನ್ನು ಇದುವರೆಗೂ ಸಂಪರ್ಕಿಸಿದ್ದೀರಿ, ಅವರು ನೀಡಿದ ಚಿಕಿತ್ಸೆಯ ವಿವರ, ಅವುಗಳ ಫಲಿತಾಂಶ, ನಿಮ್ಮ ದೈಹಿಕ ಸಮಸ್ಯೆಗಳು ಹಾಗೂ ಬದುಕಿನಲ್ಲಿ ಇತ್ತೀಚಿಗಾದ ಪ್ರಮುಖ ಬದಲಾವಣೆಗಳು ನೀವು ತೆಗೆದುಕೊಳ್ಳುತ್ತಿರುವ ಎಲ್ಲ ರೀತಿಯ ಔಷಧಗಳು ಪ್ರತಿಯೊಂದನ್ನೂ ಪಟ್ಟಿ ಮಾಡಿಕೊಳ್ಳಿ. ಇದರಿಂದ ಥೆರಪಿಸ್ಟ್‌ಗೆ ಸಮಸ್ಯೆಯನ್ನು ಬಹಳ ಬೇಗ ಸರಿಯಾಗಿ ಗ್ರಹಿಸಲು ಸಾಧ್ಯವಾಗುತ್ತದೆ. ಈ ಸಮಸ್ಯೆಯಿಂದ ಸಂಬಂಧದಲ್ಲಿ ತೊಡಕಾಗಿದ್ದರೆ ಇಬ್ಬರೂ ಥೆರಪಿಸ್ಟ್ ಬಳಿ ಹೋಗುವುದು ಉತ್ತಮ. 

ಹೋಂವರ್ಕ್

ಥೆರಪಿ ಸಂದರ್ಭದಲ್ಲಿ ನಿಮಗೆ ಹಾಗೂ ನಿಮ್ಮ ಸಂಗಾತಿಗೆ ಕೆಲವೊಂದು ಹೋಂವರ್ಕ್‌ಗಳನ್ನು ಥೆರಪಿಸ್ಟ್ ನೀಡಬಹುದು. ಅವೆಂದರೆ, ಸಂಗಾತಿಯೊಂದಿಗೆ ಸಂವಹನ ಕಸರತ್ತು, ಮೈಂಡ್‌ಫುಲ್ ಟೆಕ್ನಿಕ್ಸ್, ಲೈಂಗಿಕ ಕ್ರಿಯೆ ಸಂದರ್ಭದಲ್ಲಿ ಏನು ಮಾಡುತ್ತಿದ್ದೀರೋ ಅದರತ್ತ ಸಂಪೂರ್ಣ ಗಮನ ಕೇಂದ್ರೀಕರಿಸುವುದು, ಲೈಂಗಿಕ ಭಾಗಗಳನ್ನು ಬಿಟ್ಟು ದೇಹದ ಇತರೆಡೆ ಮಾತ್ರ ಸ್ಪರ್ಶ ಮಾಡುತ್ತಾ ಅದಕ್ಕೆ ದೇಹ ಹೇಗೆ ಪ್ರತಿಕ್ರಿಯಿಸುತ್ತಿದೆ ಎಂದು ಏಕಾಗ್ರತೆಯಿಂದ ಗ್ರಹಿಸುವುದು, ಸೆಕ್ಷುಯಲ್ ಹೆಲ್ತ್ ಕುರಿತ ಶೈಕ್ಷಣಿಕ ವಿಡಿಯೋಗಳನ್ನು ನೋಡುವುದು ಹಾಗೂ ಈ ಸಂಬಂಧ ಪುಸ್ತಕಗಳನ್ನು ಓದುವುದು, ನಿಮ್ಮ ಸಂಗಾತಿಯೊಂದಿಗೆ ನೀವು ಸಂವಹನ ನಡೆಸುವ ರೀತಿ ಬದಲಿಸಿಕೊಳ್ಳುವುದು ಮುಂತಾದ ಹೋಂವರ್ಕ್ ಮಾಡಲು ಥೆರಪಿಸ್ಟ್ ಹೇಳಬಹುದು. 

ಎಲ್ಲರಂಥವನಲ್ಲ ನನ ಗಂಡ, ಬಲ್ಲಿದನು ಪುಂಡ!

ಸಾಮಾನ್ಯವಾಗಿ ಕೆಲವೇ ಸೆಶನ್‌ಗಳಲ್ಲಿ ನಿಮ್ಮ ಸಮಸ್ಯೆಯನ್ನು ಪರಿಹರಿಸಬಲ್ಲ ಚಾಕಚಕ್ಯತೆ ಥೆರಪಿಸ್ಟ್‌ಗಿರುತ್ತದೆ. ಸೆಕ್ಸ್ ಥೆರಪಿಯ ಮೂಲಕ ನಿಮ್ಮ ಹಾಗೂ ಸಂಗಾತಿಯ ಲೈಂಗಿಕ ಅಗತ್ಯಗಳ ಕುರಿತ ಸ್ಪಷ್ಟ ಚಿತ್ರಣ ನಿಮಗೆ ದೊರಕುತ್ತದೆ. ಜೊತೆಗೆ, ನಿಮ್ಮ ಸಮಸ್ಯೆಗಳನ್ನು ಸರಿಯಾಗಿ ವಿವರಿಸಲು ಕಲಿಯುವಿರಿ. ನೆನಪಿರಲಿ,  ಉತ್ತಮ ಸಂವಹನ ಹಾಗೂ ಥೆರಪಿಸ್ಟ್ ಮೇಲೆ ಸಂಪೂರ್ಣ ನಂಬಿಕೆ ಇದ್ದಾಗ ಮಾತ್ರ ಪರಿಣಾಮಕಾರಿ ರಿಸಲ್ಟ್ ಪಡೆಯಲು ಸಾಧ್ಯ.

click me!