Picture and Personality: ಚಿತ್ರ ನೋಡಿದಾಗ ಮೊದಲೇನು ಕಂಡಿತು? ಅದು ನಿಮ್ಮ ವ್ಯಕ್ತಿತ್ವ ಹೇಳುತ್ತೆ!

By Suvarna News  |  First Published Jul 13, 2023, 5:05 PM IST

ಈ ಚಿತ್ರದಲ್ಲಿ ಯಾವ ಪ್ರಾಣಿ ಅಥವಾ ಪಕ್ಷಿಯನ್ನು ನೀವು ಮೊದಲು ಗುರುತಿಸಿದ್ದೀರಿ ಎನ್ನುವ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವವನ್ನು ನಿರ್ಧರಿಸಬಹುದು. 
 


ಇದೊಂದು ಆಪ್ಟಿಕಲ್ ಇಲ್ಯೂಷನ್ ಚಿತ್ರ. ಈ ಚಿತ್ರವನ್ನು ಸರಿಯಾಗಿ ದಿಟ್ಟಿಸಿ ನೋಡಿದರೆ ಕೆಲವು ಪ್ರಾಣಿಗಳ ನೆರಳುಗಳು ಗೋಚರಿಸುತ್ತವೆ. ಅವುಗಳಲ್ಲಿ ಯಾವುದನ್ನು ನೀವು ಮೊದಲು ಗುರುತಿಸುತ್ತೀರೋ ಅದರ ಮೇಲೆ ನಿಮ್ಮ ವ್ಯಕ್ತಿತ್ವವನ್ನು ಅಂದಾಜಿಸಬಹುದು. ಎಲ್ಲರಿಗೂ ಸಹಜವಾಗಿ ತಮ್ಮತನದ ಬಗ್ಗೆ ಹೆಚ್ಚಿನದ್ದೇನನ್ನೋ ತಿಳಿದುಕೊಳ್ಳುವ ಆಸೆ ಇರುತ್ತದೆ. ಈ ಚಿತ್ರದ ಮೂಲಕ ನಿಮ್ಮ ವ್ಯಕ್ತಿತ್ವದ ಕೆಲವು ಮೂಲ ಗುಣಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಹಾಗೆಯೇ ನಿಮ್ಮವರಿಗೂ ಈ ಚಿತ್ರ ತೋರಿಸಿ ಅವರ ವ್ಯಕ್ತಿತ್ವವನ್ನು ಸಹ ಅವರಿಗೆ ತಿಳಿಸಬಹುದು. ಇದು ಆಸಕ್ತಿದಾಯಕ ಚಿತ್ರ. ಒಬ್ಬರು ಇನ್ನೊಬ್ಬರಿಗಿಂತ ಭಾರೀ ಭಿನ್ನವಾಗಿರುತ್ತಾರೆ ಎನ್ನುವುದು ನಿಜವಾದರೂ ಹಲವು ಜನರಲ್ಲಿ ಸಾಮಾನ್ಯ ಗುಣಗಳು ಕಂಡುಬರಬಹುದು. ನೀವು ಯಾವ ಚಿತ್ರವನ್ನು ಮೊದಲು ನೋಡಿದ್ದೀರಿ? 

•    ಆನೆ (Elephant)
ನೀವು ಮೊದಲು ಆನೆಯ ಚಿತ್ರವನ್ನು ಮೊದಲು ಗುರುತಿಸಿದ್ದೀರಿ, ಅದರಿಂದ ಆಕರ್ಷಿತರಾಗಿದ್ದೀರಿ (Attract) ಎಂದಾದರೆ, ನೀವು ಉತ್ತಮ ತಾರ್ತಿಕ ಚಿಂತನೆ (Logical Thinking) ಉಳ್ಳವರು. ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ಭಾರೀ ಎಚ್ಚರಿಕೆಯಿಂದ (Careful) ವರ್ತಿಸುತ್ತೀರಿ, ಅವಸರದ (Quick) ಧೋರಣೆ ತೋರುವುದಿಲ್ಲ. ಭಾವನಾತ್ಮಕ ಸರಪಳಿಯಲ್ಲಿ ಸಿಲುಕುವುದಿಲ್ಲ. ಹಾಗೆಯೇ, ಆನೆ ದೃಢವಿಶ್ವಾಸ, ಶಾಂತವಾದ (Calm) ಗುಣ, ಸಶಕ್ತ ಬೆಂಬಲದ ಗುಣ ಹೊಂದಿರುತ್ತದೆ. ಇವು ನಿಮ್ಮಲ್ಲೂ ಇರುತ್ತವೆ. ಅಗತ್ಯವಿರುವಾಗ ಇತರರ ಸಹಾಯಕ್ಕೆ (Help) ಒದಗುವ ದೊಡ್ಡ ಗುಣ ನಿಮ್ಮಲ್ಲಿರುತ್ತದೆ. ಅತ್ಯುತ್ತಮ ಸಂವಹನ ಸಾಮರ್ಥ್ಯ (Communication Skill) ಹೊಂದಿದ್ದೀರಿ ಹಾಗೂ ಇದರಿಂದ ನೀವು ಅತ್ಯುತ್ತಮ ನಾಯಕರಾಗಬಲ್ಲಿರಿ.

Tap to resize

Latest Videos

ಲವ್‌ ಅಂದ್ರೆ ನಿಮ್ಗೆ ಇಷ್ಟಾನ, ಕಷ್ಟಾನ, ಭಯಾನ; ಫೋಟೋ ನೋಡಿ ನಿಮ್ ಮನಸ್ಥಿತಿ ತಿಳ್ಕೊಳ್ಳಿ

•    ಸಿಂಹ (Lion)
ನೀವು ಒಂದೊಮ್ಮೆ ಸಿಂಹವನ್ನು ಗಮನಿಸಿದ್ದೀರಿ ಎಂದಾದರೆ, ಭಾವನೆಗಳು ಮತ್ತು ಆ ಕ್ಷಣದ ಮನಸ್ಥಿತಿಯನ್ನು (Instinct) ಆಧರಿಸಿ ನೀವು ನಿರ್ಧಾರಗಳನ್ನು (Decision) ಕೈಗೊಳ್ಳುತ್ತೀರಿ. ಎಚ್ಚರಿಕೆಯಿಂದ ಯೋಚನೆ ಮಾಡಿ ತೀರ್ಮಾನ ಕೈಗೊಳ್ಳುವುದು ನಿಮ್ಮಿಂದ ಸಾಧ್ಯವಿಲ್ಲ. ಆದರೆ, ನಿಮ್ಮಲ್ಲಿ ಸಿಕ್ಕಾಪಟ್ಟೆ ಎನರ್ಜಿಯಿದೆ. ಅತ್ಯಂತ ದೃಢವಾದ ಧೈರ್ಯದ (Bold) ನಿಲುವು ಹೊಂದಿದ್ದೀರಿ. ಕೆಲವೊಮ್ಮೆ ದುಡುಕು (Impulsive) ಪ್ರವೃತ್ತಿಯಿಂದ ವರ್ತಿಸುತ್ತೀರಿ. ಸಣ್ಣ ಸಣ್ಣ ವಿಚಾರಗಳ ಬಗ್ಗೆ ನೀವು ಹೆಚ್ಚು ಗಮನ ಹರಿಸುವುದಿಲ್ಲ. ಬದಲಿಗೆ, ಒಟ್ಟಾರೆ ಸನ್ನಿವೇಶ, ವಿದ್ಯಮಾನವನ್ನು ಅರಿಯಲು ಯತ್ನಿಸುತ್ತೀರಿ. ಹೀಗಾಗಿ, ಸಮಸ್ಯೆಗಳನ್ನು ಬಗೆಹರಿಸಲು ನಿಮ್ಮಿಂದ ಸಾಧ್ಯವಾಗುತ್ತದೆ. ಅತ್ಯಂತ ನಂಬಿಕಸ್ಥರಾಗಿದ್ದು, ಸಮಸ್ಯೆ ನಿವಾರಣೆ ಮಾಡಿಕೊಳ್ಳುವಾಗ ದೂರದೃಷ್ಟಿಯಿಂದ ವರ್ತಿಸುತ್ತೀರಿ.

•    ಆಸ್ಟ್ರಿಚ್ (Ostrich) 
ಈ ಚಿತ್ರದಲ್ಲಿ ನೀವು ಆಸ್ಟ್ರಿಚ್ ಅನ್ನು ಮೊದಲು ಕಂಡಿದ್ದರೆ, ನೀವು ಅತ್ಯಂತ ಸಶಕ್ತವಾದ ಅಂತಃಪ್ರಜ್ಞೆಯನ್ನು (Intuition) ಹೊಂದಿದ್ದೀರಿ. ಕೆಲವು ವಿಚಾರಗಳ ಬಗ್ಗೆ ಹೆಚ್ಚು ಯೋಚನೆ ಮಾಡುವುದನ್ನು ಬಿಟ್ಟು ನಿಮ್ಮ ಭಾವನೆಗಳು (Feelings) ಏನು ಹೇಳುತ್ತವೆಯೋ ಅದರಂತೆ ನಡೆದುಕೊಳ್ಳುತ್ತೀರಿ. ಹಾಗೆಯೇ, ಅತ್ಯಂತ ಆತ್ಮವಿಶ್ವಾಸ, ಸ್ಫೂರ್ತಿ ನಿಮ್ಮಲ್ಲಿರುತ್ತದೆ. ಹೊಸ ವಿಷಯಗಳನ್ನು ಕಲಿತುಕೊಳ್ಳುವ ಆಸಕ್ತಿ ನಿಮ್ಮಲ್ಲಿ ಧಾರಾಳವಾಗಿರುತ್ತದೆ. ಮುಕ್ತ ಮನಸ್ಸು ನಿಮ್ಮದು. ಸ್ನೇಹಿತರು ಮತ್ತು ಕುಟುಂಬಸ್ಥರ ನಡುವೆ ಎಂಜಾಯ್ ಮಾಡುತ್ತೀರಿ. ನೀವು ಸುರಕ್ಷಿತವಾಗಿರಬೇಕು ಎಂದಾದರೆ ನಿಮ್ಮ ಅಂತಃಪ್ರಜ್ಞೆಯನ್ನು ಬಲವಾಗಿ ನಂಬಬೇಕು. ಎಷ್ಟೇ ಒತ್ತಡದ ಸನ್ನಿವೇಶದಲ್ಲೂ ಕೂಲಾಗಿ ಇರುವ ಸಾಮರ್ಥ್ಯ ನಿಮ್ಮಲ್ಲಿದೆ. ಗುಂಪಿನಲ್ಲಾದರೂ, ಏಕಾಂಗಿಯಾದರೂ ನೀವು ಒತ್ತಡದ (Stress) ಸಮಯದಲ್ಲೂ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡಬಲ್ಲಿರಿ.

 

ಅವಳು ಜಗಳಗಂಟಿಯೋ, ರೊಮ್ಯಾಂಟಿಕೋ? ಹುಡುಗಿಯರ ಗುಣ ತಿಳಿಯೋದು ಹೇಗೆ?

•    ಹಾರುವ ಪಕ್ಷಿಗಳು (Flying Birds)
ಹಾರುವ ಪಕ್ಷಿಗಳನ್ನು ಮೊದಲು ನೋಡಿದ್ದೀರಿ ಎಂದಾದರೆ, ನೀವು ತಾರ್ಕಿಕವಾಗಿ ಹೆಚ್ಚು ಯೋಚನೆ ಮಾಡುತ್ತೀರಿ. ಭಾವನೆಗಳಿಗೆ ಆದ್ಯತೆ ನೀಡುವ ಬದಲು ಯೋಚನೆ (Think)  ಮಾಡಿ ಮುಂದಡಿ ಇಡುತ್ತೀರಿ. ನಿಮ್ಮ ಸ್ವಾತಂತ್ರ್ಯವನ್ನು ಎಂಜಾಯ್ ಮಾಡುತ್ತೀರಿ ಹಾಗೂ ಸ್ಪಾಂಟೇನಿಯಸ್ ಆದ ವರ್ತನೆಯನ್ನೂ ಹೊಂದಿರುತ್ತೀರಿ. ಅವಸರದಲ್ಲಿ ನಿರ್ಧಾರ ಕೈಗೊಳ್ಳಬೇಕಾದ ಸಮಯದಲ್ಲಿ ವಿಷಯವನ್ನು ಸರಿಯಾಗಿ ಅರಿತುಕೊಳ್ಳುತ್ತೀರಿ. ಕೇರ್ ಫ್ರೀ (Carefree) ಗುಣ ಹೊಂದಿದ್ದೀರಿ ಎನಿಸಿದರೂ ಒಟ್ಟಾರೆ ಚಿತ್ರಣ ಗ್ರಹಿಸುತ್ತೀರಿ. ಹಕ್ಕಿಗಳು ಮೇಲೆ ಹಾರುತ್ತಿದ್ದರೂ ಎಲ್ಲವನ್ನೂ ಗಮನಿಸುವ ಹಾಗೆ. 

click me!