Penile Fracture: ಶಿಶ್ನ ಮುರಿತಕ್ಕೆ ಕಾರಣವೇನು? ಚಿಕಿತ್ಸೆ ಹೇಗೆ?

By Suvarna News  |  First Published Jun 17, 2023, 12:23 PM IST

ಲೈಂಗಿಕ ಕ್ರಿಯೆ ವೇಳೆ ಶಿಶ್ನ ಮುರಿತದ ಅಪಾಯವನ್ನು ಪುರುಷರು ಎದುರಿಸ್ತಾರೆ. ಅಪರೂಪಕ್ಕೆ ಒಬ್ಬರಿಗೆ ಈ ಸಮಸ್ಯೆ ಕಾಡಿದ್ರೂ ಇದು ಅಪಾಯಕಾರಿ. ಶಿಶ್ನ ಮುರಿತದ ಬಗ್ಗೆ ಪುರುಷರಿಗೆ ಮಾಹಿತಿ ಇದ್ರೆ, ಅದ್ರಿಂದ ರಕ್ಷಣೆ ಸುಲಭವಾಗುತ್ತದೆ.
 


ಪುರುಷರ ಖಾಸಗಿ ಅಂಗ ಶಿಶ್ನದಲ್ಲಿ ಒಂದೇ ಒಂದು ಮೂಳೆ ಇರೋದಿಲ್ಲ.  ಇಲ್ಲಿ ನರಗಳು ಪ್ರಮುಖ ಪಾತ್ರವಹಿಸುತ್ತವೆ. ನರಗಳ ಸಂವೇದನೆಯಿಂದಾಗಿ ನಿಮಿರುವಿಕೆ ಉಂಟಾಗುತ್ತದೆ. ಇದೇ ಸಂದರ್ಭದಲ್ಲಿ ಶಿಶ್ನ ಮುರಿತದ ಅಪಾಯ ಇರುತ್ತದೆ. ಲೈಂಗಿಕ ಚಟುವಟಿಕೆಯ ಸಮಯದಲ್ಲಿ ಶಿಶ್ನ ಗಾಯಗೊಂಡರೆ ಶಿಶ್ನ ಮುರಿಯುವ ಅಪಾಯವುಂಟಾಗುತ್ತದೆ. ಬಲವಂತವಾಗಿ ಲೈಂಗಿಕ ಕ್ರಿಯೆ ನಡೆದ್ರೆ ಅಥವಾ ಅತೀ ಉತ್ಸಾಹದಿಂದಾಗಿ ಈ ಘಟನೆ ಸಂಭವಿಸುತ್ತದೆ ಎಂದು ತಜ್ಞರು ಹೇಳ್ತಾರೆ.  ಶಿಶ್ನ (Penis) ಮುರಿಯುವಿಕೆ ಹತ್ತು ಸಾವಿರ ಅಥವಾ ಒಂದು ಲಕ್ಷದಲ್ಲಿ ಒಬ್ಬ ಪುರುಷನಿಗೆ ಸಂಭವಿಸುತ್ತದೆ. ಶಿಶ್ನ ಮುರಿತದ ಲಕ್ಷಣಗಳು, ಕಾರಣಗಳು ಮತ್ತು ಚಿಕಿತ್ಸೆ (Treatment)ಯ ಬಗ್ಗೆ ನಾವಿಂದು ನಿಮಗೆ ಮಾಹಿತಿ ನೀಡ್ತೇವೆ. 

ಶಿಶ್ನ ಮುರಿತಕ್ಕೆ ಕಾರಣವೇನು? : ಶಿಶ್ನ, ಶಾಫ್ಟ್ ಕಾರ್ಪಸ್ ಕ್ಯಾವರ್ನೋಸಮ್ ಎಂಬ ಎರಡು ಸಿಲಿಂಡರ್ಗಳನ್ನು ಹೊಂದಿರುತ್ತದೆ. ಇದು ರಕ್ತ (Blood) ದಿಂದ ತುಂಬುತ್ತದೆ. ನಿಮಿರುವಿಕೆಯ ಸಮಯದಲ್ಲಿ ಇದು ಶಿಶ್ನವನ್ನು ಬಿಗಿಗೊಳಿಸುತ್ತದೆ. ಕೆಲವೊಮ್ಮೆ ಇದ್ದಕ್ಕಿದ್ದಂತೆ ಅಥವಾ ಬಲವನ್ನು ಅದಕ್ಕೆ ಹೇರಿದರೆ ರಕ್ತದಿಂದ ತುಂಬಿದ ಈ ಸಿಲಿಂಡರ್ ಗಳ ಮೇಲೆ ಇದ್ರ ಪರಿಣಾಮವುಂಟಾಗುತ್ತದೆ. ಇದ್ರಿಂದ ಸಿಲಿಂಡರ್ ಮುರಿಯುತ್ತದೆ. ಯೂನಿವರ್ಸಿಟಿ ಆಫ್ ಮೇರಿಲ್ಯಾಂಡ್ ಮೆಡಿಕಲ್ ಸೆಂಟರ್‌ನ ಮೂತ್ರಶಾಸ್ತ್ರಜ್ಞ ಡಾ. ಆಂಡ್ರ್ಯೂ ಕ್ರಾಮರ್ ನಡೆಸಿದ ಸಂಶೋಧನೆ ಪ್ರಕಾರ, ಶಿಶ್ನ ಮುರಿತಕ್ಕೆ ಮುಖ್ಯ ಕಾರಣವೆಂದರೆ ಆತುರ ಮತ್ತು ಪ್ರತಿಕೂಲ ಪರಿಸ್ಥಿತಿಗಳಲ್ಲಿ ಲೈಂಗಿಕ ಕ್ರಿಯೆ ನಡೆಸುವುದು ಎನ್ನಲಾಗಿದೆ. 

Latest Videos

undefined

Relationship Tips: ಭಾವನೆಗಳ ಸಮತೋಲನಕ್ಕೆ ಸರಳ ಸೂತ್ರ

ಶಿಶ್ನ ಮುರಿತದ ಲಕ್ಷಣಗಳು ಏನು? : ಸಂಭೋಗ ಬೆಳೆಸುವ ವೇಳೆ ನೀವು ಕ್ರ್ಯಾಕ್ಲಿಂಗ್ ಶಬ್ದದ ಜೊತೆಗೆ ತೀಕ್ಷ್ಣವಾದ ನೋವನ್ನು ಅನುಭವಿಸುತ್ತೀರಿ. ನಿಮಿರುವಿಕೆ ತಕ್ಷಣ ಕೊನೆಯಾಗುತ್ತದೆ. ಶಿಶ್ನದ ಸುತ್ತಲೂ ಊತ ಕಾಣಿಸಿಕೊಳ್ಳುತ್ತದೆ. ಶಿಶ್ನದ ಚರ್ಮದ ಅಡಿಯಲ್ಲಿ ರಕ್ತದ ಶೇಖರಣೆ ಕಂಡು ಬರುತ್ತದೆ. ಕೆಲವರಿಗೆ ರಕ್ತಸ್ರಾವವಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಶಿಶ್ನದ ಬಣ್ಣವೂ ಬದಲಾಗುತ್ತದೆ. ಮೂತ್ರ ವಿಸರ್ಜನೆ ವೇಳೆ ನೋವಾಗುತ್ತದೆ. 

ಶಿಶ್ನ ಮುರಿತಕ್ಕೆ ಕಾರಣಗಳು?: ಮುರಿತಗಳಿಗೆ ಸಾಮಾನ್ಯ ಕಾರಣವೆಂದರೆ ಲೈಂಗಿಕ ಸಮಯದಲ್ಲಿ ಶಿಶ್ನ ಗಾಯಗೊಳ್ಳುವುದು. ಕೆಲವೊಮ್ಮೆ ಇದು ವೇಗದ ಹಸ್ತಮೈಥುನದಿಂದಲೂ ಸಂಭವಿಸುತ್ತದೆ.

ಶಿಶ್ನ ಮುರಿತಕ್ಕೆ ಪರಿಹಾರವೇನು?: ಶಿಶ್ನ ಮುರಿತದ ಸಮಸ್ಯೆಯನ್ನು ಎದುರಿಸಿದರೆ ನೀವು ವೈದ್ಯರನ್ನು ಸಂಪರ್ಕಿಸಬೇಕು. ಶಿಶ್ನ ಮುರಿತಗಳಿಗೆ ತ್ವರಿತ ಚಿಕಿತ್ಸೆ ಅಗತ್ಯವಿರುತ್ತದೆ. ಅದರ ತೀವ್ರತೆಯನ್ನು ಅರ್ಥಮಾಡಿಕೊಳ್ಳಲು, ವೈದ್ಯರು ಗಾಯವನ್ನು ಪರಿಶೀಲಿಸುವುದರ ಜೊತೆಗೆ ಶಿಶ್ನದ ಅಲ್ಟ್ರಾಸೋನೋಗ್ರಫಿ ಅಥವಾ ಎಂಆರ್ ಐ (MRI) ಯಂತಹ ಹೆಚ್ಚುವರಿ ಪರೀಕ್ಷೆಗಳನ್ನು ಮಾಡುತ್ತಾರೆ. ಭವಿಷ್ಯದ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಅಥವಾ ಶಿಶ್ನ ವಕ್ರತೆಯ ವಿರೂಪತೆಯ ಅಪಾಯವನ್ನು ಕಡಿಮೆ ಮಾಡಲು, ಮುರಿತ ಸಂಭವಿಸಿದಲ್ಲಿ ಸೂಕ್ತವಾದ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ.  ಚಿಕಿತ್ಸೆಯ ನಂತರ, ನೀವು ಕೆಲವು ವಾರಗಳವರೆಗೆ ಲೈಂಗಿಕತೆಯಿಂದ ಸಂಪೂರ್ಣವಾಗಿ ದೂರವಿರಬೇಕು. ಇದರಿಂದ ಗಾಯ ಚೆನ್ನಾಗಿ ವಾಸಿಯಾಗುತ್ತದೆ. 

Personality Tips: ನಿಮ್ಮಲ್ಲೂ ಇದೆಯೇ ಪುಟಿದೇಳಬಲ್ಲ ಗುಣ? ಕಷ್ಟಕಾಲದಲ್ಲಿ ನೀವು ಹೇಗಿರ್ತೀರಿ?

ಅಧ್ಯಯನ ಹೇಳೋದೇನು? : ಅಧ್ಯಯನವೊಂದರ  ಪ್ರಕಾರ, ವಿವಾಹಿತ ಪುರುಷರು ಇತರ ಮಹಿಳೆಯರೊಂದಿಗೆ ದೈಹಿಕ ಸಂಬಂಧ ಹೊಂದಿರುವವರು ಶಿಶ್ನ ಮುರಿದುಹೋಗುವ ಸಮಸ್ಯೆಯನ್ನು ಎದುರಿಸುತ್ತಾರೆ. ವಿವಾಹಿತ ಪುರುಷರು ಇತರ ಮಹಿಳೆಯರ ಜೊತೆ ರಹಸ್ಯವಾಗಿ ಸಂಭೋಗಿಸುವ ಕಾರಣ, ತರಾತುರಿಯಲ್ಲಿ ಲೈಂಗಿಕ ಕ್ರಿಯೆ ನಡೆಸುತ್ತಾರೆ. ಇದರಿಂದ ಶಿಶ್ನದ ಸ್ನಾಯುಗಳು ಹಾನಿಗೊಳಗಾಗುತ್ತವೆ ಎಂದು ಅಧ್ಯಯನ ಹೇಳುತ್ತದೆ. ಅಧ್ಯಯನವೊಂದರಲ್ಲಿ 16 ಶಿಶ್ನ ಮುರಿದ ರೋಗಿಗಳ ಮೇಲೆ ಅಧ್ಯಯನ ನಡೆದಿತ್ತು. ಅದ್ರಲ್ಲಿ ಅರ್ಧದಷ್ಟು ಜನರು ಅಕ್ರಮ ಸಂಬಂಧ ಹೊಂದಿದ್ದರು ಎಂದು ಅಧ್ಯಯನ ಹೇಳಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಇದು ಹೆಚ್ಚಾಗಿ ಕಾನಣಿಸಿಕೊಳ್ತಿದೆ. ಇದಕ್ಕೆ ಕಾರಣ ಅವರು ಬಳಸುವ ಭಂಗಿ ಎಂದು ನಂಬಲಾಗಿದೆ. 

click me!