ಭಾರತದಲ್ಲಿ ವರದಕ್ಷಿಣೆ ನಿಷೇಧಿಸಲಾಗಿದ್ದರೂ ಇವತ್ತಿಗೂ ಹಲವು ಕಡೆ ವರದಕ್ಷಿಣೆ ಕೊಡುವುದು ಮತ್ತು ಪಡೆದುಕೊಳ್ಳುವ ಅನಿಷ್ಟ ಪದ್ಧತಿ ಚಾಲ್ತಿಯಲ್ಲಿದೆ. ಹಾಗೆಯೇ ವರದಕ್ಷಿಣಿಗೆ ಡಿಮ್ಯಾಂಡ್ ಇಟ್ಟ ವರನನ್ನು ಇಲ್ಲೊಂದೆಡೆ ವಧುವಿನ ಕುಟುಂಬದವರು ಮರಕ್ಕೆ ಕಟ್ಟಿ ಹಾಕಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದೆ.
ಕಾಲ ಅದೆಷ್ಟೇ ಬದಲಾದರೂ, ಜನರು ಅದೆಷ್ಟೇ ವಿದ್ಯಾವಂತರಾದರೂ ತಮ್ಮ ಹಳೇ ಚಾಳಿ ಮಾತ್ರ ಬಿಡೋದಿಲ್ಲ. ಹಾಗಾಗಿಯೇ ಇವತ್ತಿಗೂ ಸಮಾಜದಲ್ಲಿ ಅದೆಷ್ಟೋ ಪಿಡುಗುಗಳು ಹಾಗೆಯೇ ಉಳಿದುಕೊಂಡಿವೆ. ಅದರಲ್ಲೊಂದು ವರದಕ್ಷಿಣೆ. ಜನರು ಅದೆಷ್ಟೇ ಶ್ರೀಮಂತರಾದರೂ, ಮದುವೆಯ ಸಂದರ್ಭದಲ್ಲಿ ವರದಕ್ಷಿಣೆ ಕೇಳೋದನ್ನು ಮಾತ್ರ ಬಿಡೋದಿಲ್ಲ. ಮನೆಯಲ್ಲಿ ಅದೆಷ್ಟೇ ಆಸ್ತಿ-ಪಾಸ್ತಿಯಿದ್ದರೂ ಹುಡುಗನ ಕಡೆಯವರು ವಧುವಿನ ಕಡೆಯಿಂದ ಸಿಗೋ ಚಿನ್ನ, ಬಂಗಲೆ, ಕಾರುಗಳು, ಇನ್ಯಾವುದೋ ವಸ್ತುವಿಗೆ ಡಿಮ್ಯಾಂಡ್ ಇಡ್ತಾರೆ. ಅನೇಕ ಸುಶಿಕ್ಷಿತ ಮತ್ತು ಪ್ರಭಾವಿ ಜನರು ಸಹ ವರದಕ್ಷಿಣೆ ಕೇಳಲು ಹಿಂಜರಿಯುವುದಿಲ್ಲ. ವಧುವಿನ ಕಡೆಯವರು ಸಹ ಸುಮ್ನೆ ಯಾಕೆ ರಗಳೆಯೆಂದು ವರನ ಕಡೆಯವರು ಕೇಳಿದ್ದನ್ನು ಕೊಟ್ಟು ಬಿಡುತ್ತಾರೆ. ಹೀಗೆ ವರದಕ್ಷಿಣೆ ಕೇಳಿದ ವರನನ್ನು ಇಲ್ಲೊಂದೆಡೆ ವಧುವಿನ ಕುಟುಂಬದವರು ಮರಕ್ಕೆ ಕಟ್ಟಿ ಹಾಕಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದೆ.
ಉತ್ತರ ಪ್ರದೇಶದ ಪ್ರತಾಪ್‌ಗಢದಲ್ಲಿ ಈ ಘಟನೆ ನಡೆದಿದೆ. ವಧುವಿನ ಕುಟುಂಬದವರು (Brides family) ವರದಕ್ಷಿಣೆಗೆ ಬೇಡಿಕೆಯಿಟ್ಟ ವರನನ್ನು ಮರಕ್ಕೆ ಕಟ್ಟಿ ಹಾಕಿದ್ದಾರೆ. ಹೂಮಾಲೆ ವಿನಿಮಯಕ್ಕೂ ಮುನ್ನ ಈ ಘಟನೆ ನಡೆದಿದೆ. ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವರ ಅಮರ್‌ಜೀತ್‌ನನ್ನು ಕೆಲವರು ಮರಕ್ಕೆ ಕಟ್ಟಿ ಹಾಕಿರುವುದನ್ನು ನೋಡಬಹುದು.
ತಂಗಿ ಅದ್ಧೂರಿ ಮದುವೆ, ವೇದಿಕೆಯಲ್ಲೇ 8 ಕೋಟಿ ರೂಪಾಯಿ ವರದಕ್ಷಿಣೆ ನೀಡಿದ ಸಹದೋರರು!
ಮದುವೆಗೆ (Marriage) ಎಲ್ಲಾ ಸಿದ್ಧತೆಗಳು ಪೂರ್ಣಗೊಂಡು ಶಾಸ್ತ್ರಗಳು ನಡೆಯುತ್ತಿರುವಾಗಲೇ ವರನ (Groom) ಕಡೆಯವರು, ವಧುವಿನ ಕುಟುಂಬದ ಬಳಿ ವರದಕ್ಷಿಣೆಗೆ ಬೇಡಿಕೆಯಿಟ್ಟಿದ್ದಾರೆ. ಆದರೆ ವಧುವಿನ ಕಡೆಯವರು ಅಶಕ್ತರಾದ ಕಾರಣ ಡೌರಿ ಕೊಡಲು ನಿರಾಕರಿಸಿದ್ದಾರೆ. ಈ ಬಗ್ಗೆ ಚರ್ಚೆ ನಡೆದು ಎರಡೂ ಕುಟುಂಬಗಳು ಒಪ್ಪಂದಕ್ಕೆ ಬರಲು ವಿಫಲವಾದವು. ನಂತರ ವಧುವಿನ ಕಡೆಯವರು ವರನನ್ನು ಕಟ್ಟಿ ಹಾಕಿದರು. ಘಟನೆಯ ಸಮಯದಲ್ಲಿ ಅಮರ್‌ಜೀತ್‌ನ ಸ್ನೇಹಿತರು ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದ್ದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಲು ಕಾರಣವಾಯಿತು ಎಂದು ತಿಳಿದುಬಂದಿದೆ. ಪೊಲೀಸರು ಸ್ಥಳಕ್ಕಾಗಮಿಸಿವರನನ್ನು ಬಿಡುಗಡೆ ಮಾಡಿದರು.
ಪರಿಸ್ಥಿತಿಯನ್ನು ವಿವರಿಸಿದ ಎಸ್‌ಎಚ್‌ಒ ಮಾಂಧತಾ, 'ವರದಕ್ಷಿಣೆಗಾಗಿ (Dowry) ವರ ಅಮರ್‌ಜೀತ್ ಬೇಡಿಕೆ ಇಟ್ಟಿದ್ದರು. ಅದಕ್ಕೆ ವಧುವಿನ ಕಡೆಯವರು ಕಟ್ಟಿ ಹಾಕಿದ್ದಾರೆ. ಎರಡೂ ಕಡೆಯವರು ಪೊಲೀಸ್ ಠಾಣೆಯಲ್ಲಿ ಇದ್ದಾರೆ. ಅವರು ಇನ್ನೂ ಯಾವುದೇ ರಾಜಿ ತೀರ್ಮಾನಕ್ಕೆ ಬಂದಿಲ್ಲ. ಮದುಮಗನ ಸ್ನೇಹಿತರು ಅನುಚಿತವಾಗಿ ವರ್ತಿಸಿದ್ದು, ಇಬ್ಬರ ನಡುವೆ ವಾಗ್ವಾದ ನಡೆದಿದೆ' ಎಂದು ವಿವರಿಸಿದ್ದಾರೆ.
प्रतापगढ की तस्वीरें देखिए
दूल्हे ने किया शादी से इंकार ,दूल्हे को बंधक बनाकर दी गई तालिबानी सज़ा pic.twitter.com/OtqTdzNj5A
ವರದಕ್ಷಿಣೆಯಾಗಿ ಬೈಕ್ ಕೇಳಿದ ಮಗನಿಗೆ ಚಪ್ಪಲಿಯಲ್ಲಿ ಹಿಗ್ಗಾಮುಗ್ಗಾ ಬಾರಿಸಿದ ತಂದೆ!
ಈ ಹಿಂದೆ ಉತ್ತರಪ್ರದೇಶದ ಕನೂಜ್ ಜಿಲ್ಲೆಯಲ್ಲಿ ಇಂಥಹದ್ದೇ ಘಟನೆಯೊಂದು ನಡೆದಿತ್ತು. ಜಯಮಾಲಾ ಸಮಾರಂಭದ ನಂತರ ಮದುವೆಯ ವೇದಿಕೆಯಲ್ಲಿ ವರ, ವಧುವಿಗೆ ಹೊಡೆದಿದ್ದಾನೆ. ಮಾತ್ರವಲ್ಲ ಆಕೆಯನ್ನು ಮಂಟಪದಿಂದ ಕೆಳಕ್ಕೆ ತಳ್ಳಿದ್ದಾನೆ. ವರದಿಯ ಪ್ರಕಾರ, ವಧುವಿನ ಕುಟುಂಬವು ವರದಕ್ಷಿಣೆಯಲ್ಲಿ ಏರ್ ಕಂಡಿಷನರ್ ನೀಡಲು ಒಪ್ಪದ ಕಾರಣ ವರನು ತುಂಬಾ ಅಸಮಾಧಾನಗೊಂಡಿದ್ದನು. ಕೋಪದ ಭರದಲ್ಲಿ, ಅವರು ಜಯಮಾಲಾ ಸಮಾರಂಭದಲ್ಲಿ ವಧುವನ್ನು ಮದುವೆಯ ವೇದಿಕೆಯಿಂದ ತಳ್ಳಿದನು ಎಂದು ಹೇಳಲಾಗಿತ್ತು. ನಂತರ ಎರಡೂ ಕಡೆಯವರು ಪಂಚಾಯಿತಿಗೆ ತೆರಳಿ ಮದುವೆಯನ್ನು ಮಾಡದಿರಲು ತೀರ್ಮಾನಿಸಿದರು. ವರ ಮತ್ತು ಅವನ ಸಂಬಂಧಿಕರು ವಧು ಇಲ್ಲದೆ ವಾಪಾಸ್ ಮರಳಿದರು.