ಮನೇಲಿ ಸುಂದರ ಹೆಂಡ್ತಿ ಇದ್ರೂ, ಪಕ್ಕದಮನೆಯವಳ ಮೇಲ್ಯಾಕೆ ಕಣ್ಣು? ಪ್ರೀತಿಯ ಪಾರಿವಾಳ ಹಾರಿಹೋದೀತು!

ಇತ್ತೀಚಿನ ದಿನಗಳಲ್ಲಿ ಅಕ್ರಮ ಸಂಬಂಧದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ. ಅಷ್ಟೇ ಅಲ್ಲದೆ ಅಕ್ರಮ ಸಂಬಂಧಗಳಿಂದ ಸಾಕಷ್ಟು ಸಂಸಾರ ಹಾಳಾಗುತ್ತಿವೆ, ಡಿವೋರ್ಸ್‌ ಆಗುತ್ತಿವೆ. ಅಷ್ಟೇ ಅಲ್ಲದೆ ಕೊಲೆಯೂ ಆಗುತ್ತಿದೆ. 


ಮದುವೆ ಆದವರೇ ಅಕ್ರಮ ಸಂಬಂಧ ಇಟ್ಟುಕೊಳ್ಳೋದು ಯಾಕೆ? ಇದಕ್ಕೆ ಕಾರಣ ಏನು ಎನ್ನೋದನ್ನು ಡಾ ಸೌಜನ್ಯ ವಸಿಷ್ಠ ಅವರು ಹೇಳಿದ್ದಾರೆ. ಈ ಬಗ್ಗೆ ಅವರು ಮುಕ್ತವಾಗಿ ಮಾತನಾಡಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

ಅಕ್ರಮ ಸಂಬಂಧ ಬೆಳೆಯೋದು ಹೇಗೆ? 
ಮದುವೆ ಆದವರು ಒಂದು ಕಮಿಟೆಡ್ ರಿಲೇಷನ್‌ಶಿಪ್‌ನಲ್ಲಿ ಇರ್ತಾರೆ. ಆ ಮದುವೆ ಜೀವನದಲ್ಲಿ ಹಲವಾರು ವರ್ಷಗಳು ಕಳೆದಿರುತ್ತವೆ. ಆಫೀಸ್‌ನಲ್ಲೋ ಅಥವಾ ಆನ್‌ಲೈನ್‌ನಲ್ಲೋ ಒಂದು ಹೊಸ ಸ್ನೇಹ ಬೆಳೆದಿರುತ್ತದೆ. ಆ ಸ್ನೇಹ ಆಮೇಲೆ ನಿಧಾನವಾಗಿ ಒಂದು ಸಲಿಗೆ ಬೆಳೆಯುತ್ತದೆ. ಇದರಿಂದಲೇ ನಮ್ಮ ಮೂಲ ಸಂಬಂಧಗಳು ಹಾಳಾಗುತ್ತವೆ. 

Latest Videos

ಅಕ್ರಮ ಸಂಬಂಧ ಇಷ್ಟ ಆಗುತ್ತವೆ? 
ಯಾಕೆ ಈ ಥರ ಅಕ್ರಮ ಸಂಬಂಧಗಳು ತುಂಬನೇ ಇಷ್ಟ ಆಗುತ್ತವೆ ಎನ್ನೋದಿಕ್ಕೆ ಕಾರಣ ಇದೆ. ಯಾವುದೇ ಒಂದು ಅಫೇರ್ ಆಗಿರಲಿ ಅಥವಾ ಯಾವುದೇ ಒಂದು ಅನೈತಿಕ ಸಂಬಂಧ ಇರಲಿ ಅದಕ್ಕೆ ಆಯಸ್ಸು ತುಂಬ ಕಡಿಮೆ. ಎಷ್ಟೋ ಸಲ ಮದುವೆ ಆಗಿರೋವರ ಮೇಲೆ ಅಟ್ರಾಕ್ಷನ್ ಆಗ್ತಾ ಹೋಗುತ್ತೆ. ಯಾಕೆ ಹೀಗೆ? ನನಗೇನು ಕಮ್ಮಿಯಾಗಿದೆ? ನಾನು ಯಾಕೆ ನನ್ನ ವಯಸ್ಸಿನವರನ್ನೇ ಇಷ್ಟಪಡೋದು? ನನಗೆ ಸರಿಸಮಾನ ಆಗಿರೋವರನ್ನು ಯಾಕೆ ನೋಡ್ತಿದೀನಿ ಅಂದ್ರೆ ಒಂದು ಎಮೋಷನಲ್ ಟ್ರಾಪ್‌ಗೆ ಒಳಗಾಗುತ್ತಿದ್ದೇನೆ ಎಂದರ್ಥ. 

ಅಕ್ರಮ ಸಂಬಂಧ ಶಂಕೆ ಹಿನ್ನೆಲೆ ಶೀಲ ಶಂಕಿಸಿ ಪತ್ನಿ ಕುತ್ತಿಗೆ ಹಿಸುಕಿ ಕೊಂದು ಶರಣಾದ ಪತಿ!


ಪ್ರೀತಿ ಕುರುಡಲ್ಲ, ನಾವು ಕಣ್ಣು ಮುಚ್ಚಿಕೊಂಡಿದ್ದೇವೆ!
ನಿಮಗೆ ಸಿಗಬೇಕಾಗಿರೋ ಎಮೋಷನಲ್ ಬೆಂಬಲ, ಆ ಥರ ತಂದೆ ತಾಯಿಗಳು ಇರಲ್ಲ, ಕೋ ಪೇರೆಂಟಿಂಗ್ ಆಗಿರಲ್ಲ. ನಿಮಗೆ ಬೇಕಾದ ಅಟೆನ್ಶನ್‌ ಸಿಕ್ಕಿರಲ್ಲ. ಎಷ್ಟೋ ಸಲ ಕಣ್ಣು ಮುಚ್ಚಿಕೊಂಡು ಪ್ರೀತಿಯಲ್ಲಿ ಬೀಳ್ತೀವಿ. ಅದಕ್ಕೆ ಪ್ರೀತಿ ಕುರುಡು ಅಂತ ಹೇಳ್ತಾರೆ. ಪ್ರೀತಿ ಕುರುಡಲ್ಲ ಆದ್ರೆ ನಾವು ಕಣ್ಣನ್ನು ಕಟ್ಕೊಂಡಿರ್ತೀವಿ. ನಮಗೆ ಒಂದು ಸ್ಪೆಷಲ್ ವ್ಯಕ್ತಿಯಾಗಿ ಯಾರಾದರೂ ಟ್ರೀಟ್‌ ಮಾಡಬೇಕು. ಯಾವಾಗ ಸಂಬಂಧ ಬೆಳೆಯುತ್ತಾ ಹೋಗತ್ತೋ ಆಗ ನಮ್ಮ ನಿರೀಕ್ಷೆಯನ್ನು ರೀಚ್‌ ಆಗದಿದ್ದಾಗ, ಆಕರ್ಷಣೆ ಕಡಿಮೆ ಆಗುವುದು. ಆ ಸಂಬಂಧದ ಹೊಳಪು ಕಮ್ಮಿ ಆಗುವುದು. ಆದರೆ ಇಂತಹ ಒಂದು ಅಟ್ರಾಕ್ಷನ್‌ನಿಂದ ಹೇಗೆ ದೂರ ಉಳಿಯೋದು? 


ಅವರೆಲ್ಲ ಚೆನ್ನಾಗಿ ಕಾಣೋದು ಯಾಕೆ? 
ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಅಥವಾ ಡೇಟಿಂಗ್ ಆಪ್‌ನಲ್ಲಿ ಇರೋರೆಲ್ಲ ಮದುವೆ ಆಗಿರೋರು. ನಮಗೆ ಹುಷಾರಾಗಿಲ್ಲ ಅಂದಾಗ ನಮ್ಮ ಗಂಡನೋ ಹೆಂಡತಿಯೋ ಬರ್ತಾರೆ. ನೀವು ಅಫೇರ್‌ ಇಟ್ಟುಕೊಂಡಿರೋ ಆ ವ್ಯಕ್ತಿಯ ಜೊತೆ ಇಪ್ಪತ್ನಾಲ್ಕು ಗಂಟೆ ಇದ್ದಾಗ ನಿಮಗೂ ಇನ್ನೊಂದು ವ್ಯಕ್ತಿ ಮೇಲೆ ಆಸಕ್ತಿ ಕಡಿಮೆ ಆಗಬಹುದು. ನೀವು ಭೇಟಿ ಮಾಡುವ ಚೆನ್ನಾಗಿರೋ ಬಟ್ಟೆ ಹಾಕೊಂಡು ಬರ್ತಾರೆ, ಚೆನ್ನಾಗಿರ್ತಾರೆ. ಆದರೆ ನಿಮ್ಮ ಮನೆಯಲ್ಲಿ ಇರತಕ್ಕಂತಹ ನಿಮ್ಮ ಸಂಗಾತಿ ಇಡೀ ಕುಟುಂಬವನ್ನು ನೋಡಿಕೊಳ್ತಾರೆ. ಮೊದಲ ಬಾರಿಗೆ ಮೀಟ್‌ ಮಾಡುವವರ ಮುಂದೆ ನೀವು ಎಮೋಷನ್ಸ್ ಫಿಲ್ಟರ್ ಆಗಿ ಮಾತಾಡ್ತೀರಾ. 

ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ತಾಯಿಗೆ ಕಪಾಳ ಮೋಕ್ಷ ಮಾಡಿದ ಪಿಎಸ್‌ಐ! ಏನಿದು ಪ್ರಕರಣ?

ಏನು ಪರಿಹಾರ ಇವೆ? 
ನಾವು ಬದಲಾಗಬೇಕು. ನಮ್ಮ ಸಂಬಂಧದಲ್ಲಿ ಏನು ಕಡಿಮೆ ಆಗಿದೆ? ಹೇಗಿರಬೇಕು? ಸಂಗಾತಿಗೆ ಎಷ್ಟು ಸಮಯ ಕೊಡಬೇಕು ಅಂತ ಯೋಚಿಸಿ. ಸಂಗಾತಿ ಜೊತೆ ಹೆಚ್ಚಿನ ಸಮಯ ಕಳೆಯಿರಿ. ಮದುವೆಗೂ ಮುಂಚೆ ಹೇಗಿದ್ದರೋ ಮದುವೆ ಆದಬಳಿಕವೂ ಹಾಗೆ ಇರಿ. 

ಚೆನ್ನಾಗಿದ್ದಾಗ ಅಕ್ರಮ ಸಂಬಂಧಗಳು ಚೆನ್ನಾಗಿ ಕಾಣುತ್ತವೆ. ಅದೇ ನಿಮಗೆ ಕಷ್ಟ ಬಂದಾಗ, ಸಾಲ ಆಗಿದ್ದಾಗ ಇರೋದಿಲ್ಲ. ಒಂದು ಅಟ್ರಾಕ್ಷನ್‌ನಿಂದ ನಿಮ್ಮ ಸಂಬಂಧವನ್ನು ಹಾಳು ಮಾಡಿಕೊಳ್ಳಬೇಡಿ. ಇಂತಹ ಸಂಬಂಧದಿಂದ ನಿಮ್ಮನ್ನ ನೀವು ಹಾಳು ಮಾಡಿಕೊಳ್ಳುವುದಲ್ಲದೆ, ನಿಮ್ಮ ಮದುವೆಯನ್ನು ಹಾಳು ಮಾಡ್ಕೋತಿದ್ದೀರಾ. ಮದುವೆ ಅಂದ್ರೆ ಒಂದು ಗಂಡು ಹೆಣ್ಣಿನ ನಡುವೆ ಮಾತ್ರ ಅಲ್ಲ, ಎರಡು ಫ್ಯಾಮಿಲಿಗಳು ಇರುತ್ತೆ.

ಅಕ್ರಮ ಸಂಬಂಧ ಇಟ್ಟುಕೊಂಡ ಹುಡುಗಿ ಜೊತೆ ನನಗೆ ಸೋಲ್ ಕನೆಕ್ಷನ್ ಇದೆ, ನನ್ನ ಸೋಲ್‌ಮೇಟ್ ನನ್ನ ಥರ ಯೋಚನೆ ಮಾಡ್ತಾಳೆ ಅಂತ ನಿಮಗೆ ಅನಿಸಬಹುದು. ಆದರೆ ನೀವು ಅವಳ ಜೊತೆ ಒಂದು ಗಂಟೆ ಸಮಯ ಕಳೆಯಬಹುದು. ಆದರೆ ನಿಮ್ಮ ಸಂಗಾತಿ ಮಾತ್ರ ನಿಮ್ಮ ಏಳು ಬೀಳುಗಳಲ್ಲಿ ಜೊತೆಗೆ ಇರುತ್ತಾಳೆ ಎನ್ನೋದು ಮರೆಯಬೇಡಿ. 
 

click me!