ಸಿಂಗಲ್‌ ಅನ್ನೋ ಬೇಜಾರ್ ಬಿಟ್ಬಿಡಿ, ಈ ರಿಂಗ್ ಹಾಕ್ಕೊಂಡ್ರೆ ಎದ್ದುಬಿದ್ದೂ ಎಲ್ರೂ ಪ್ರಪೋಸ್ ಮಾಡ್ತಾರೆ!

By Suvarna News  |  First Published Jul 6, 2023, 1:25 PM IST

ಸದ್ಯ ಸಿಂಗಲ್​ ಆಗಿರುವವರು ಮಿಂಗಲ್ ಆಗಲು ಇಲ್ಲೊಂದು ಹೊಸ ಟ್ರೆಂಡ್ ಬಂದಿದೆ. ಪೇರಿಂಗ್ ಆಗಲೆಂದೇ ಪಿಯರ್ ರಿಂಗ್ ಅನ್ನೋ ಹೊಸ ಟ್ರೆಂಡ್ ಶುರುವಾಗಿದೆ. ನೀವು ಸಿಂಗಲ್‌ ಆಗಿದ್ದು, ಮಿಂಗಲ್‌ ಆಗಲು ಸಿದ್ಧವಾಗಿದ್ದರೆ ಈ ರಿಂಗ್ ಧರಿಸಬಹುದಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.


ಹುಡುಗೀರು ಮದ್ವೆಯಾದ್ರೆ ಕತ್ತಲ್ಲಿರೋ ತಾಳಿ, ಕಾಲಲ್ಲಿರೋ ಕಾಲುಂಗುರ ನೋಡಿ ಗುರುತಿಸ್ಬೋದು. ಆದ್ರೆ ಹುಡುಗರು ಮ್ಯಾರೀಡ್ ಆದ್ರೆ ಗೊತ್ತಾಗಲ್ಲ ಅನ್ನೋ ಕಂಪ್ಲೇಂಟ್ ಆಲ್‌ರೆಡಿ ಇದೆ. ಹಾಗೆಯೇ ಸಿಂಗಲ್ ಆಗಿರೋರು ಯಾರು, ಕಮಿಟೆಡ್ ಯಾರು ಅಂತಾನೂ ಗೊತ್ತಾಗಲ್ಲ. ಎಷ್ಟೋ ಸಾರಿ ಹುಡುಗಿಯರು ಮ್ಯಾರೀಡ್ ಹುಡುಗರ ಬೆನ್ನು ಬಿದ್ದು, ಮದುವೆಯಾಗಿದೆ ಅಂತ ಗೊತ್ತಾಗಿ ನಿರಾಶೆ ಪಡುತ್ತಾರೆ. ಹಾಗೆಯೇ ಕೆಲವು ಹುಡುಗ, ಹುಡುಗಿಯರು ಇಷ್ಟಪಟ್ಟವರ ಹಿಂದೆ ಹೋಗಿ ಅವರು ಕಮಿಟೆಡ್‌ ಎಂದು ತಿಳಿದು ಬೇಸರ ಪಟ್ಟುಕೊಳ್ಳುತ್ತಾರೆ. ಇನ್ನು ಕೆಲವೊಮ್ಮೆ ಅವರು ಕಮಿಟೆಡ್ ಇರಬಹುದು ಎಂದು ಭಯಪಟ್ಟು ಪ್ರಪೋಸ್ ಮಾಡದೇನೆ ತಮ್ಮ ಪ್ರೀತಿಯನ್ನು ಕಳೆದುಕೊಳ್ಳುತ್ತಾರೆ. ಇಂಥಾ ಕನ್‌ಫ್ಯೂಶನ್‌ನಿಂದ ಸಿಂಗಲ್ ಆಗಿರೋರು ಹಾಗೆಯೇ ಒಂಟಿಯಾಗಿ ಉಳಿದುಬಿಡುತ್ತಾರೆ.

ಸದ್ಯ ಸಿಂಗಲ್​ ಆಗಿರುವವರು ಮಿಂಗಲ್ ಆಗಲು ಇಲ್ಲೊಂದು ಹೊಸ ಟ್ರೆಂಡ್ ಬಂದಿದೆ. ಪೇರಿಂಗ್ ಆಗಲೆಂದೇ ಪಿಯರ್ ರಿಂಗ್ ಅನ್ನೋ ಹೊಸ ಟ್ರೆಂಡ್ ಶುರುವಾಗಿದೆ. ನೀವು ಸಿಂಗಲ್‌ ಆಗಿದ್ದು, ಮಿಂಗಲ್‌ ಆಗಲು ಸಿದ್ಧವಾಗಿದ್ದಾರೆ ಈ ರಿಂಗ್ ಧರಿಸಬಹುದಾಗಿದೆ. ಇದರಿಂದ ವ್ಯಕ್ತಿ ಸಿಂಗಲ್ ಆಗಿದ್ದಾನೆ ಮತ್ತು ಕಮಿಟ್ ಆಗಲು ರೆಡಿಯಿದ್ದಾನೆ ಎಂದು ಮತ್ತೊಬ್ಬರು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. 

Tap to resize

Latest Videos

ಕಷ್ಟ ಕಣ್ರೀ..25 ವರ್ಷ ಆದ್ಮೇಲೆ ಈ ಊರಲ್ಲಿ ಸಿಂಗಲ್ ಆಗಿ ಇರೋ ಹಾಗಿಲ್ಲ!

ಸಿಂಗಲ್​ ಆಗಿರುವವರು ಮಿಂಗಲ್ ಆಗಲು ಸ್ಪೆಷಲ್ ರಿಂಗ್‌
ಫ್ಯಾಷನ್‌ ಲೋಕದಲ್ಲಿ ಒಂದಲ್ಲಾ ಒಂದು ವಿಚಾರ ಟ್ರೆಂಡ್ ಆಗುತ್ತಲೇ ಇರುತ್ತದೆ. ಅದೇ ರೀತಿ ಸದ್ಯ ಹೊಸ ಥರದ ಟ್ರೆಂಡ್​ವೊಂದು ನಡೆಯುತ್ತಿದೆ. ವಿಶೇಷವೆಂದರೆ ಇಂದು ಸಿಂಗಲ್ ಆಗಿರುವವರಿಗೆ ಮಿಂಗಲ್ ಆಗಲು ಅನುಕೂಲವಾಗಲಿ ಎಂದು ನಡೀತಿರೋ ಟ್ರೆಂಡ್‌. ಪಿಯರ್ ರಿಂಗ್ ಎಂದು ಕರೆಯಲಾಗುವ ಈ ರಿಂಗ್ ಪೇರಿಂಗ್​ಗೆಂದೇ ಬಳಕೆ ಆಗುತ್ತಿದೆ. ಸಿಂಗಲ್ ಆಗಿರುವವರು ಈ ರಿಂಗ್ ಧರಿಸಬಹುದು. ಹಸಿರು ಬಣ್ಣದ ಈ ರಿಂಗ್ ಧರಿಸಿಕೊಂಡರೆ ಅದು ಸಿಂಗಲ್ ಆಗಿರುವವರಿಂದ ಮಿಂಗಲ್ ಆಗಲು ಹಸಿರು ನಿಶಾನೆ (Green signal) ಎಂದೇ ಪರಿಗಣಿಸಬಹುದು.

ವಿಶ್ವಾದ್ಯಂತ 1.2 ಶತಲಕ್ಷ ಅವಿವಾಹಿತರಿದ್ದಾರೆ. ಅದರಲ್ಲಿ ಇವರಲ್ಲಿ ಯಾರು ಮ್ಯಾರೀಡ್, ಯಾರು ಅನ್‌ಮ್ಯಾರೀಡ್‌, ಯಾರು ಸಿಂಗಲ್‌, ಯಾರು ಕಮಿಟೆಡ್ ಅನ್ನೋ ಕನ್‌ಫ್ಯೂಶನ್ ಯಾವಾಗಲೂ ಇದ್ದೇ ಇರುತ್ತದೆ. ಹೀಗಾಗಿ  ಅವಿವಾಹಿತರು (Unmarried) ಎಂದು ತೋರಿಸಲು ಬೆರಳಿಗೆ ಈ ಸಣ್ಣ ಹಸಿರು ಉಂಗುರವನ್ನು (Ring) ಧರಿಸಿದರೆ ಆಯಿತು. ಹೀಗೆ ಮಾಡಿದೆ, ಜನರು ಮದುವೆಯಾಗಲು ಡೇಟಿಂಗ್ ಅಪ್ಲಿಕೇಷನ್​ಗಳ ಅಗತ್ಯ ಬೀಳುವುದಿಲ್ಲ ಎಂದೂ ಈ ಸಂಸ್ಥೆ ಹೇಳಿಕೊಂಡಿದೆ. ನೀವು ಈ ರಿಂಗ್ ಖರೀದಿಸಿದರೆ ನಿಮಗೆ ಪಿಯರ್​ ಫೆಸ್ಟ್​ನ ಆಹ್ವಾನ ಬರಲಿದೆ.  

Romance Scam : ಪ್ರೀತಿ ಹೆಸರಿನಲ್ಲಿ ಲಕ್ಷಾಂತರ ಲೂಟಿ! ಎಚ್ಚರ ತಪ್ಪಿದ್ರೆ ಕಥೆ ಮುಗಿದಂತೆ

ರಿಂಗ್‌ ಖರೀದಿಸಿರುವ ವ್ತಕ್ತಿ ಇರುವ ನಗರದಲ್ಲೇ ನಡೆಯುವ ವಿಶೇಷ ಕಾರ್ಯಕ್ರಮಕ್ಕೆ (Programme) ಪ್ರವೇಶವೂ ಸಿಗಲಿದೆ ಎಂದು ಈ ಪಿಯರ್ ರಿಂಗ್ ತಯಾರಿಕಾ ಕಂಪನಿ ಹೇಳಿದೆ. ಆದರೆ ಈ ಕಾರ್ಯಕ್ರಮಗಳು ಯಾವಾಗ ಎಲ್ಲಿ ನಡೆಯುತ್ತವೆ, ಯಾವ್ಯಾವ ನಗರಗಳಲ್ಲಿ (Cities) ನಡೆಯಲಿವೆ ಎಂಬ ಕುರಿತು ಅದು ಸ್ಪಷ್ಟ ಮಾಹಿತಿ ನೀಡಿಲ್ಲ.ಈ ರಿಂಗ್ ಧರಿಸುವುದರಿಂದ ಯಾರೆಲ್ಲಾ ಸಿಂಗಲ್ ಎಂಬುದನ್ನು ಸುಲಭವಾಗಿ ಪತ್ತೆಹಚ್ಚಬಹುದು. ಆದರೆ ಜನರು ಇದನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಯೂ ಇದೆ ಅಂತಿದ್ದಾರೆ ಹಲವರು. 

ಸೂಕ್ತ ಸಂಗಾತಿಯ ಹುಡುಕಾಟದಲ್ಲಿದ್ದೀರಾ? ಹಾಗಾದ್ರೆ ಈ ತಪ್ಪು ಮಾಡ್ಬೇಡಿ

click me!