
ತಂದೆ ಮನೆಯಲ್ಲಿ ಸ್ವಚ್ಛಂದವಾಗಿ ಓಡಾಡಿಕೊಂಡಿದ್ದವಳ ತಲೆ ಮೇಲೆ ಒಂದೇ ಬಾರಿ ದೊಡ್ಡ ಭಾರ ಬೀರುತ್ತದೆ. ಅದೇ ಮದುವೆ. ವಿವಾಹ ಬಂಧನದಲ್ಲಿ ಸಿಲುಕಿದ ಮೇಲೆ ಮಹಿಳೆ ಬದಲಾಗಲೇಬೇಕು. ಮನೆ, ಮಕ್ಕಳು, ಅತ್ತೆ – ಮಾವ, ಸಂಬಂಧಿಕರು ಹೀಗೆ ಎಲ್ಲ ಜವಾಬ್ದಾರಿಗಳನ್ನು ಆಕೆ ನಿಭಾಯಿಸಬೇಕು. ಕಚೇರಿಯಿಂದ ಮನೆಗೆ ಬಂದ ನಂತ್ರ ಮನೆ ಕೆಲಸಕ್ಕೆ ಸಿದ್ಧವಾಗ್ಬೇಕು. ಮಕ್ಕಳ ಓದಿನಿಂದ ಹಿಡಿದು ಮನೆ ಸ್ವಚ್ಛಗೊಳಿಸುವವರೆಗೆ ಎಲ್ಲವನ್ನೂ ಆಕೆ ಮಾಡ್ತಾಳೆ. ಮನೆಯಲ್ಲಿದ್ದು ಏನು ಮಾಡ್ತೀಯಾ ಅಂತಾ ಅನೇಕರು ಗೃಹಿಣಿಯರಿಗೆ ಕೇಳ್ತಾರೆ. ಆದ್ರೆ ಅವರ ಕೆಲಸ ಅವರಿಗೆ ತಿಳಿದಿರುತ್ತದೆ. ಸಣ್ಣಪುಟ್ಟ ಕೆಲಸದಲ್ಲಿ ಆಕೆಗೆ ವಿಶ್ರಾಂತಿ ತೆಗೆದುಕೊಳ್ಳಲು ಪುರುಸೊತ್ತಿರೋದಿಲ್ಲ. ಸೂಪರ್ ವುಮೆನ್ ರೀತಿಯಲ್ಲಿ ಇಡೀ ದಿನ ಕೆಲಸ ಮಾಡುವ ಮಹಿಳೆಗೆ ಕೊನೆ ಎಂಬುದೇ ಇಲ್ಲ.
ರಜೆ (Vacation) ಯಿಲ್ಲದೆ, ಅನಾರೋಗ್ಯ (Illness) ಕ್ಕೊಳಗಾದ್ರೂ ಸೌಟು ಹಿಡಿಯುವ ಮಹಿಳೆ ಜೀವನ ಶೈಲಿ (Lifestyle) ಯಾಕಿನ್ನು ಬದಲಾಗಿಲ್ಲ ಎಂಬ ಪ್ರಶ್ನೆಗೆ ಉತ್ತರವೇ ಸಿಗ್ತಿಲ್ಲ. ಇತ್ತೀಚಿಗೆ ಬಾಂಬೆ ಹೈಕೋರ್ಟ್ (Bombay High Court) ಮನೆ ಕೆಲಸ ಮಾಡುವ ಮಹಿಳೆಯರ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದು ಈಗ ಅದು ಸಾಕಷ್ಟು ಚರ್ಚೆಯಾಗ್ತಿದೆ. ಮನೆ ಕೆಲಸ ಮಾಡಲು ಇಷ್ಟವಿಲ್ಲದ ಮಹಿಳೆ ಮದುವೆಗೆ ಮುನ್ನವೇ ಇದನ್ನು ಭಾವಿ ಗಂಡನಿಗೆ ಹೇಳಬೇಕು. ಆಗ ಇಬ್ಬರೂ ಮದುವೆ ಬಗ್ಗೆ ಮರು ಆಲೋಚನೆ ಮಾಡಲು ಸಮಯ ಸಿಗುತ್ತದೆ ಎಂದು ಬಾಂಬೆ ಹೈಕೋರ್ಟ್ (Bombay High Court) ಹೇಳಿದೆ.
ಪ್ರಕರಣವೊಂದರ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ಮನೆ ಕೆಲಸ ಮಾಡು ಎಂದು ಮನೆಯ ಸೊಸೆಗೆ ಹೇಳುವುದು ಯಾವುದೇ ಕೌಟುಂಬಿಕ ದೌರ್ಜನ್ಯವಾಗುವುದಿಲ್ಲ. ಹಾಗೆ ಮನೆ ಕೆಲಸ ಮಾಡಿದ್ರೆ ಅದು ಮನೆ ಕೆಲಸದಾಳುವಿಗೆ ಹೋಲಿಕೆ ಮಾಡಿದಂತಲ್ಲ ಎಂದಿದೆ.
ಆಸೆ ಇಲ್ಲದಿದ್ದರೆ ಹೇಗೆ ಹೇಳಿ ಮನುಷ್ಯನಿಗೆ? ಆದರೆ, ದುರಾಸೆ ಬೇಕಾ?
ಮದುವೆಯಾದ್ಮೇಲೆ ಮನೆ, ಮಕ್ಕಳನ್ನು ನೋಡಿಕೊಳ್ಳೋದು ಮಹಿಳೆ ಜವಾಬ್ದಾರಿ. ಹಿಂದೆ ಗಂಡ ಹೊರಗೆ ದುಡಿಯುತ್ತಿದ್ದರೆ ಹೆಂಡತಿ ಮನೆ ನೋಡಿಕೊಳ್ತಿದ್ದಳು. ಆದ್ರೀಗ ಹೆಂಡತಿ ಕೂಡ ಕೆಲಸಕ್ಕೆ ಹೋಗ್ತಾಳೆ. ಇಬ್ಬರೂ ದುಡಿದು ಆರ್ಥಿಕ ಸ್ಥಿತಿ ಸುಧಾರಿಸುವ ಪ್ರಯತ್ನ ನಡೆಸುತ್ತಾರೆ. ಈ ಸಂದರ್ಭದಲ್ಲಿ ಮನೆಯ ಸಂಪೂರ್ಣ ಜವಾಬ್ದಾರಿ ಪತ್ನಿಯದ್ದು ಅಂದ್ರೆ ಎಷ್ಟು ಸರಿ ಎಂಬ ಪ್ರಶ್ನೆ ಬಗ್ಗೆ ಈ ಚರ್ಚೆ ಶುರುವಾಗಿದೆ.
ಬಾಂಬೆ ಹೈಕೋರ್ಟ್ ಆದೇಶದಲ್ಲಿ ಎರಡು ವಿಷ್ಯ ಅಡಗಿದೆ. ಮೊದಲನೆಯದಾಗಿ ಕಿರುಕುಳದ (Abuse) ಪ್ರಕರಣವನ್ನು ಪ್ರತಿ ಬಾರಿ ಸಾಬೀತುಪಡಿಸಲು ಸಾಧ್ಯವಿಲ್ಲ. ಎರಡನೆಯದಾಗಿ ಮಹಿಳೆಯರು ಮನೆಕೆಲಸ ಮಾಡುವುದನ್ನು ಕಡ್ಡಾಯ. ಅದನ್ನು ತಪ್ಪಿಸಲು ಸಾಧ್ಯವಿಲ್ಲ. ಗಂಡನ ಮನೆಗೆ ಬರ್ತಿದ್ದಂತೆ ನೀನು ಮನೆಯ ಯಜಮಾನಿ ಎನ್ನುತ್ತಾರೆ. ಆದ್ರೆ ಇದು ಬಾಯಲ್ಲಿ ಮಾತ್ರ. ಯಜಮಾನಿಯಾದವಳು ಕೆಲದಾಳಿನಂತೆ ದುಡಿಯೋದು ತಪ್ಪೋದಿಲ್ಲ.
ಕಚೇರಿಯಿಂದ ಬಂದ ಮಹಿಳೆಗೆ ಮನೆ ಕೆಲಸ ಮಾಡಲು ಸಾಧ್ಯವಾಗೋದಿಲ್ವಾ ಅಂತ ಕೆಲವರು ಪ್ರಶ್ನೆ ಮಾಡ್ತಾರೆ. ಮತ್ತೆ ಕೆಲವರು ಆಗಲ್ಲ ಅಂದ್ಮೇಲೆ ಕೆಲಸಕ್ಕೆ ಏಕೆ ಹೋಗ್ಬೇಕು ಎನ್ನುವವರಿದ್ದಾರೆ. ಒಟ್ಟಿನಲ್ಲಿ ಮಹಿಳೆ ಎಲ್ಲವನ್ನೂ ಬಿಟ್ಟು ಕುಟುಂಬಕ್ಕೆ ಸೀಮಿತವಾಗ್ಬೇಕು. ನಾವು ಮಂಗಳ ಗ್ರಹದಲ್ಲಿ ಜೀವನ ನಡೆಸುವ ಬಗ್ಗೆ ಆಲೋಚನೆ ಮಾಡ್ತಿದ್ದೇವೆ,ಚಂದ್ರ ಗ್ರಹಕ್ಕೆ ಹೋಗಿ ಬಂದಿದ್ದೇವೆ, ಮಹಿಳೆ ಪುರುಷನ ಸಮಾನ ಕೆಲಸ ಮಾಡ್ತಿದ್ದಾಳೆ ಆದ್ರೆ ಮನೆ ಕೆಲಸ ಮಾತ್ರ ಆಕೆಯನ್ನು ಬಿಡೋದಿಲ್ಲ.
Love Guru: ಮದ್ವೆಯಾಗಿ ವರ್ಷಗಳೇ ಕಳೆದರೂ ಪ್ರೀತಿ ಹೊಸದರಂತಿರಲು ಇಲ್ಲಿದೆ ಲವ್ ಮೆಡಿಸಿನ್
ಈಗಿನ ಕಾಲಮಾನದಲ್ಲಿ ಪರಿಸ್ಥಿತಿಯನ್ನು ಪುರುಷರು ಅರಿಯಬೇಕಾಗಿದೆ. ಪತ್ನಿಯ ಮನೆ ಕೆಲಸದಲ್ಲಿ ಪತಿಯಾದವನು ಕೈಗೂಡಿಸಿದ್ರೆ ಯಾವುದೇ ಸಮಸ್ಯೆ ಬರೋದಿಲ್ಲ. ಮದುವೆಗೂ ಮುನ್ನ ಮಹಿಳೆ ಈ ವಿಷ್ಯವನ್ನು ಚರ್ಚೆ ಮಾಡೋದು ಒಳ್ಳೆ ದಾರಿ ಎನ್ನಬಹುದು. ಮದುವೆ ನಂತ್ರ ಮನೆ ಜವಾಬ್ದಾರಿ ಬರೀ ನನ್ನದಲ್ಲ. ಇಬ್ಬರು ಸೇರಿ ಮಾಡ್ಬೇಕು ಎಂಬ ನಿರ್ಧಾರವನ್ನು ಭಾವಿ ಪತಿ ಮುಂದಿಟ್ಟು, ಈ ಬಗ್ಗೆ ಒಂದು ತೀರ್ಮಾನಕ್ಕೆ ಬಂದ ಮೇಲೆ ಮದುವೆಯಾದ್ರೆ ಕೋರ್ಟ್ ಮೆಟ್ಟಿಲೇರೋ ಅವಶ್ಯಕತೆ ಬರೋದಿಲ್ಲ. ಇಡೀ ದಿನ ಮನೆ ಕೆಲಸ ಮಾಡೋದು ತಪ್ಪುತ್ತೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.