ಗಂಡನ ಮನೆಯವರ ಮುಂದೆ ಮಾತ್ರ ಡ್ರಿಂಕ್ಸ್ ಮಾಡ್ಬೇಡಿ!

By Suvarna NewsFirst Published Nov 2, 2022, 10:46 AM IST
Highlights

ನಮ್ಮ ಸಮಾಜದಲ್ಲಿ ಕೆಲ ಕಟ್ಟುಪಾಡುಗಳಿವೆ. ಅದನ್ನು ಮೀರಿದ್ರೆ ಎಲ್ಲರು ನಮ್ಮನ್ನು ನೋಡುವ ದೃಷ್ಟಿ ಬದಲಾಗುತ್ತದೆ. ಮಾಡರ್ನ್ ಅಂತಾ ಕೆಲವರು ಕೈನಲ್ಲಿ ಬಾಟಲಿ ಹಿಡಿತಾರೆ. ಆದ್ರೆ ಅದೇ ಅವರನ್ನು ಕಷ್ಟಕ್ಕೆ ನೂಕುತ್ತದೆ.
 

ಹುಡುಗಿಯರು ಮದ್ಯಪಾನ ಹಾಗೂ ಧೂಮಪಾನ ಮಾಡೋದು ಈಗ ಭಾರತದಲ್ಲೂ ಕಾಣಿಸ್ತಿದೆ. ಇದು ಅವರವರ ಆಸಕ್ತಿಗೆ ಬಿಟ್ಟಿದ್ದು. ಮಹಿಳೆಯರು ಬಾಟಲಿ ಹಿಡಿದ್ರೆ ಅದನ್ನು ಕೆಲವರು ಸ್ವಾಗತಿಸಿದ್ರೆ ಮತ್ತೆ ಬಹುತೇಕರು ವಿರೋಧಿಸ್ತಾರೆ. ಕುಟುಂಬಸ್ಥರು ಎಷ್ಟೇ ಮಾಡರ್ನ್ ಆಗಿರಲಿ, ಸೊಸೆಯಾದವಳು ಕೆಲ ಸಂಪ್ರದಾಯ ಪಾಲನೆ ಮಾಡ್ಬೇಕು ಎಂದುಕೊಳ್ಳುವವರೇ ಹೆಚ್ಚು. ಈ ಮಹಿಳೆ ಕೂಡ ಅತ್ತೆ ಮನೆಯವರು ಮಾಡರ್ನ್ ಅಂದ್ಕೊಂಡು ಬಾಟಲಿ ಕೈನಲ್ಲಿ ಹಿಡಿದಿದ್ದಾಳೆ. ಆದ್ರೆ ಅದ್ರ ನಂತ್ರ ಸಾಕಷ್ಟು ಸಮಸ್ಯೆ ಎದುರಾಗಿದೆ. ಮದ್ಯಪಾನ ಮಾಡ್ಲೇಬೇಕು ಎನ್ನುವ ಮಹಿಳೆಯರಿಗೆ ಕೆಲ ಟಿಪ್ಸ್ ಕೂಡ ಆಕೆ ನೀಡಿದ್ದಾಳೆ.

ಮದುವೆ (Marriage) ಯಾದ್ಮೇಲೆ ಸಾಕಷ್ಟು ಬದಲಾವಣೆಯಾಗುತ್ತದೆ. ಮಗಳಾದವಳ ಬೇರೆ ಮನೆಗೆ ಸೊಸೆಯಾಗ್ತಾಳೆ. ಸೊಸೆಯಾಗಿ ಬಂದವಳು ಮನೆ ಜವಾಬ್ದಾರಿ ಜೊತೆ ಮನೆಯವರ ಗೌರವ ಕಾಪಾಡಬೇಕು ಎಂಬುದು ಅಲಿಖಿತ ನಿಯಮ. ಅದನ್ನು ಪಾಲನೆ ಮಾಡದೆ ಹೋದ್ರೆ ಅತ್ತೆ ಮನೆಯಲ್ಲಿ ಸೊಸೆ ಸ್ವಲ್ಪ ಕಷ್ಟ ಎದುರಿಸಬೇಕಾಗುತ್ತದೆ. ಅಲ್ಲಿ ಇಲ್ಲಿಂದ ಒಂದಿಷ್ಟು ಮಾತುಗಳು ಕೇಳಿ ಬರ್ತವೆ. ಈ ಮಹಿಳೆ ಕೂಡ ಆರಂಭದಲ್ಲಿ ಮಾಡಿದ ತಪ್ಪಿಗೆ ಈಗ ಪಶ್ಚಾತಾಪಪಡ್ತಿದ್ದಾಳೆ.

ಮದುವೆಗೆ ಮುನ್ನ ಗಂಡ (Husband) ನ ಮನೆಯವರು ಮಾಡರ್ನ್ ಆಗಿ ವರ್ತನೆ ಮಾಡಿದ್ದರಂತೆ. ಗಂಡನ ಮನೆಯಲ್ಲಿ ಮದ್ಯಪಾನ ಹಾಗೂ ಧೂಮಪಾನ ಮಾಡೋದು ವಿಶೇಷವಾಗಿರಲಿಲ್ಲವಂತೆ. ಎಲ್ಲಿ ಪುರುಷರ ಜೊತೆ ಮಹಿಳೆಯರು ಮದ್ಯಪಾನ ಮಾಡಿದ್ರೆ ಅದನ್ನು ಅಚ್ಚರಿಯಿಂದ ನೋಡ್ತಿರಲಿಲ್ಲವಂತೆ. ಅಲ್ಲಿ ಎಲ್ಲರಿಗೂ ಸ್ವಾತಂತ್ರ್ಯವಿತ್ತು. ಆದ್ರೆ ಇದು ಬರೀ ಮೇಲ್ನೋಟಕ್ಕೆ ಕಾಣ್ತಿದ್ದ ಸ್ವಭಾವವಾಗಿತ್ತು ಎನ್ನುತ್ತಾಳೆ ಮಹಿಳೆ.

ಮೋಸ ಮಾಡೋ ಸಂಗಾತಿ; ಸಮಸ್ಯೆ ಬಗೆಹರಿಸಿ ಮೂವ್ ಆನ್ ಆಗೋದು ಹೇಗೆ ?

ಮದುವೆ ಸಮಯದಲ್ಲಿ ಮೈದುನನೇ ಒಂದು ಪೆಗ್ (Peg) ನೀಡಿದ್ದ. ನಾನೊಂದು ಪೆಗ್ ಕೈಗೆ ಎತ್ತಿಕೊಳ್ತಿದ್ದಂತೆ ಎಲ್ಲರೂ ನನ್ನನ್ನು ನೋಡುವ ದೃಷ್ಟಿ ಬದಲಾಯ್ತು ಎನ್ನುತ್ತಾಳೆ ಮಹಿಳೆ. ಅತ್ತೆ ನನ್ನನ್ನು ಕಣ್ಬಿಟ್ಟು ನೋಡ್ತಿದ್ದಳು. ಅಲ್ಲಿದ್ದ ಮಹಿಳೆಯರು ಅಯ್ಯೋ, ಅಪ್ಪಾ ಅಂದ್ರೆ ಪುರುಷರಿಂದ ಮಿಶ್ರ ಪ್ರಕ್ರಿಯೆ ಬಂದಿತ್ತು ಎನ್ನುತ್ತಾಳೆ ಆಕೆ. ಕೆಲ ಪುರುಷರು ಪೆಗ್ ಗೆ ಆಹ್ವಾನಿಸಿದ್ರೆ ಮತ್ತೆ ಕೆಲವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ನನ್ನ ಮಾವ, ಸೂಕ್ಷ್ಮವಾಗಿ, ಒಂದು ಪೆಗ್ ಸಾಕಾಗಿತ್ತು ಎಂದಿದ್ದ.

ಜೀವನ ಪೂರ್ತಿ ಬೈಗುಳ ಮಾಮೂಲಿ : ಮನೆಯವರು ನನ್ನನ್ನು ನೋಡುವ ದೃಷ್ಟಿ ಬದಲಾಗುತ್ತೆ ಅಂತ ಗೊತ್ತಿದ್ದರೆ ನಾನು ಮದ್ಯಪಾನ ಮಾಡ್ತಾನೆ ಇರಲಿಲ್ಲ ಎನ್ನುತ್ತಾಳೆ ಮಹಿಳೆ. ಆಗ ಮಾಡಿದ ತಪ್ಪಿಗೆ ಈಗಲೂ ಸಂಕಟ ಅನುಭವಿಸ್ತಿದ್ದೇನೆ. ಅತ್ತೆ ನನ್ನನ್ನು ನೋಡುವ ದೃಷ್ಟಿ ಬದಲಾಗಿದೆ. ನನ್ನ ನಡವಳಿಕೆಯ ಮೇಲೆ ಅನುಮಾನಪಡುತ್ತಿದ್ದಾರೆ. ಎಲ್ಲರೂ ನಿಮ್ಮ ಮೇಲೆ ಆರೋಪ ಮಾಡುವಾಗ ನೀವು ತಾಳ್ಮೆಯಿಂದ ವರ್ತಿಸಬೇಕು ಎನ್ನುತ್ತಾಳೆ ಮಹಿಳೆ.

ಕಾಲೆಳೆದ್ರೂ ನಕ್ಕುಬಿಡಿ : ಮದುವೆಯಾಗಿ ವರ್ಷ ಕಳೆಯುತ್ತ ಬಂದ್ರೂ ನನ್ನ ಕಾಲೆಳೆಯೋರು ಕಡಿಮೆಯಾಗಿಲ್ಲ. ದೇಸಿ ಟ್ರೈ ಮಾಡು, ಆ ಬ್ರ್ಯಾಂಡ್ ಟ್ರೈ ಮಾಡು ಅಂತ ನನ್ನನ್ನು ಮುಜುಗರಕ್ಕೀಡು ಮಾಡ್ತಾರೆ. ಇದೆಲ್ಲ ಗೊತ್ತಿದ್ದೂ ನಾನು ನಕ್ಕು ಸುಮ್ಮನಾಗ್ತೇನೆ. ನಾನು ಪ್ರತಿಕ್ರಿಯೆ ನೀಡಿದ್ರೆ ಕುಟುಂಬದ ಶಾಂತಿ ಹದಗೆಡುತ್ತದೆ ಎಂಬುದು ನನಗೆ ತಿಳಿದಿದೆ. ಯಾವುದಕ್ಕೂ ಪ್ರತಿಕ್ರಿಯೆ ನೀಡದೆ ಹೋದ್ರೆ ಸ್ವಲ್ಪ ದಿನದ ನಂತ್ರ ಜನರು ಬದಲಾಗ್ತಾರೆ. ಕುಟುಂಬಸ್ಥರ ಮನಸ್ಥಿತಿ ಅರ್ಥವಾಗಿದೆ. ಹಾಗಾಗಿ ನಾನು ಎಲ್ಲರ ಮುಂದೆ ಮದ್ಯಪಾನ ಮಾಡಬಾರದು ಎಂಬುದನ್ನು ಅರಿತಿದ್ದೇನೆ ಎನ್ನುತ್ತಾಳೆ ಮಹಿಳೆ.

ಮನೆಯಿಂದ ಆಚೆ ಕಾಲಿಟ್ರಾ? ಹೋಮ್ ಸಿಕ್ ಆಗದಂತೆ ಕೇರ್ ತೆಗೆದುಕೊಳ್ಳಿ!

ಕಿವಿ ಮಾತು : ಮದುವೆಯಾದ ಕೆಲವೇ ದಿನಗಳಲ್ಲಿ ಸಾಕಷ್ಟು ಅವಮಾನವಾಗಿದೆ. ಮದ್ಯಪಾನ ಮಾಡ್ತೀರಿ ಎಂದಾದ್ರೆ ಅಪ್ಪಿತಪ್ಪಿಯೂ ಅತ್ತೆ ಮನೆಯವರ ಮುಂದೆ ಮಾಡ್ಬೇಡಿ. ನೀವು ಒಬ್ಬಂಟಿಯಾಗಿ ಅಥವಾ ಪತಿ ಜೊತೆ ಮಾಡಿ ಎನ್ನುತ್ತಾಳೆ ಮಹಿಳೆ. 

click me!