ಗಂಡ (Husband) ಯಾವಾಗ್ಲೂ ಆಫೀಸಿಂದ ಲೇಟಾಗಿ ಬರ್ತಾನೆ. ಕೇಳಿದ್ರೆ ಸಿಕ್ಕಾಪಟ್ಟೆ ಕೆಲ್ಸ ಇತ್ತು ಅಂತಾನೆ. ವೀಕೆಂಡ್‌ಗಳಲ್ಲೂ ಮನೆಯಲ್ಲಿ ಇರಲ್ಲ. ಫ್ರೀಯಾಗಿದ್ದಾಗ ಮುಟ್ಟೋಕೆ ಹೋದ್ರೂ ದೂರ ಹೋಗ್ತಾನೆ. ಇಷ್ಟೆಲ್ಲಾ ಆದಾಗ ಗಂಡನಿಗೆ ಅನೈತಿಕ ಸಂಬಂಧ ಇದ್ಯಾ ಅನ್ನೊ ಸಂಶಯ (Doubt) ಮೂಡುವುದು ಸಹಜ. ಗಂಡನಿಗೆ ಅನೈತಿಕ ಸಂಬಂಧ (Extra Marital Affairs) ಇದ್ಯಾ ಅಂತ ತಿಳಿದುಕೊಳ್ಳುವುದು ಹೇಗೆ ?
ಅನೈತಿಕ ಸಂಬಂಧ (Extra Marital Affairs) ಅಥವಾ ವಿವಾಹೇತರ ಸಂಬಂಧ ಇವತ್ತಿನ ದಿನಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಮನೆಯಲ್ಲಿ ಮುದ್ದಿನ ಹೆಂಡತಿ (Wife)ಯಿದ್ದರೂ ಗಂಡಸರು ಪರಸ್ತ್ರೀ ಸಹವಾಸ ಮಾಡುತ್ತಾರೆ. ಹೆಂಡತಿ, ಮಕ್ಕಳ ಜವಾಬ್ದಾರಿಯಿದ್ದರೂ ಮತ್ತೊಬ್ಬಳ ಹಿಂದೆ ಹೋಗುತ್ತಾರೆ. ಕಟ್ಟಿಕೊಂಡವಳನ್ನು ಬಿಟ್ಟು ಇಟ್ಟುಕೊಂಡವಳಿಗೆ ಬೇರೆ ಮನೆ, ಆಸ್ತಿ ಮಾಡಿಕೊಡುತ್ತಿರುತ್ತಾರೆ. ಮನೆಯೊಳಗೇ ಇರುವ ಗೃಹಿಣಿ (Housewife)ಯರಿಗೆ ಅದೆಷ್ಟೋ ಬಾರಿ ಇದು ತಿಳಿಯುವುದೇ ಇಲ್ಲ. ಗೊತ್ತಾಗುವಷ್ಟರಲ್ಲಿ ಇನ್ಯಾರದ್ದೋ ಮಕ್ಕಳು ಅವಕಾಶ ಕೇಳಿಕೊಂಡು ಬಂದು ಬಿಟ್ಟಿರುತ್ತಾರೆ
ದಾಂಪತ್ಯದಲ್ಲಿ ಬಿರುಕು ಮೂಡುತ್ತಿರುವುದನ್ನು ಹೇಗೆ ಕಂಡುಕೊಳ್ಳಬಹುದು ? ಅನೈತಿಕ ಸಂಬಂಧವನ್ನು ಇಟ್ಟುಕೊಂಡಿರುವ ಗಂಡನ ಬಗ್ಗೆ ತಿಳಿದುಕೊಳ್ಳುವುದು ಹೇಗೆ ? ಈ ರೀತಿಯ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಲು, ನೀವು ಗಮನಿಸಬೇಕಾದ ಕೆಲವು ಎಚ್ಚರಿಕೆಯ ಸೂಚನೆಗಳು ಇಲ್ಲಿವೆ.
ಪಾಶವಾಯ್ತು ಜಿಮ್ ನಲ್ಲಿ ಶುರುವಾದ Extra Marital Affair
ನೀವು ಮೊದಲ ಆದ್ಯತೆಯಲ್ಲ
ದಾಂಪತ್ಯವೆಂಬ ಅನುಬಂಧದ ವಿಷಯಕ್ಕೆ ಬಂದಾಗ ಪತಿ ಯಾವಾಗಲೂ ತನ್ನ ಹೆಂಡತಿಗೆ ಹೆಚ್ಚು ಆದ್ಯತೆ ನೀಡುತ್ತಾನೆ. ನಿಮ್ಮ ಪತಿ ಅದನ್ನು ಮಾಡದಿದ್ದರೆ, ಅವನು ತನ್ನ ಹೆಂಡತಿಯಾಗಿ ನಿಮ್ಮ ಸ್ಥಾನವನ್ನು ಸ್ಪಷ್ಟವಾಗಿ ಅಗೌರವ ತೋರುತ್ತಿದ್ದಾನೆ ಎಂದರ್ಥ. ಬೇರೆ ಯಾರಿಗೋ ಆ ಸ್ಥಾನವನ್ನು ನೀಡಲು ಹವಣಿಸುತ್ತಿದ್ದಾನೆ ಎಂದು ಅರ್ಥಮಾಡಿಕೊಳ್ಳಬಹುದು.
ಅಗತ್ಯಗಳನ್ನು ನಿರ್ಲಕ್ಷಿಸುವುದು
ಗಂಡ-ಹೆಂಡತಿ ಪರಸ್ಪರ ಸಹಕಾರ ಅಗತ್ಯ. ಒಬ್ಬರ ಕಷ್ಟಕ್ಕೆ ಇಬ್ಬರು ನೆರವಾಗಬೇಕು. ಆದರೆ ನಿಮ್ಮ ಪತಿ ನಿಮ್ಮ ಅಗತ್ಯತೆಗಳನ್ನು ಪೂರೈಸಲು ಹಿಂಜರಿಯುತ್ತಿದ್ದಾರೆ, ನಿರ್ಲಕ್ಷಿಸುತ್ತಿದ್ದಾರೆ. ಮಾತ್ರವಲ್ಲ ಪದೇ ಪದೇ ಈ ಬಗ್ಗೆ ಕೇಳಿದರೆ ಕಿರುಚಾಡುವುದು, ಬೈಯುವುದು ಮಾಡುತ್ತಿದ್ದಾರೆ ಎಂದರೆ ಅವರು ನಿಮ್ಮ ಬಗ್ಗೆ ಆಸಕ್ತಿಯನ್ನು ಕಳೆದುಕೊಂಡಿದ್ದಾರೆ ಎಂದರ್ಥ.
ಇತರರಿಗೆ ಹೋಲಿಸಿ ಹೀಯಾಳಿಸುವುದು
ಪ್ರತಿಯೊಬ್ಬರಿಗೂ ಅವರದ್ದೇ ಆದ ವ್ಯಕ್ತಿತ್ವವಿರುತ್ತದೆ. ಮತ್ತೊಬ್ಬರ ವ್ಯಕ್ತಿತ್ವ (Personality)ವನ್ನು ದೂಷಿಸುವ, ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಅದರಲ್ಲಿ ಹೋಲಿಕೆ ಮಾಡುವಂಥದ್ದೂ ಏನಿಲ್ಲ. ಅದರಲ್ಲೂ ಮದುವೆಯಾದ ಗಂಡ-ಹೆಂಡತಿಯಲ್ಲಿ ಇಂಥಹಾ ಕಾಂಪ್ಲೆಕ್ಸ್ ಬಂದರೆ ಆ ಸಂಬಂಧಕ್ಕೆ ಅರ್ಥವಿಲ್ಲ. ನಿಮ್ಮ ಗಂಡ ಸೌಂದರ್ಯ, ಬುದ್ಧಿ, ಚುರುಕುತನದ ಬಗ್ಗೆ ಇತರರನ್ನು ಹೋಲಿಸಿ ನಿಮ್ಮನ್ನು ಹೀಯಾಳಿಸುತ್ತಿದ್ದರೆ ಮೊದಲು ಅದನ್ನು ತಡೆಯಿರಿ. ಅವನಿಗೆ ಬೇರೆ ಸಂಬಂಧವಿಲ್ಲದಿದ್ದರೂ ಆತ ನಿಮ್ಮೊಂದಿಗೆ ಸಂಬಂಧದಲ್ಲಿರಲು ಯೋಗ್ಯನಲ್ಲ ತಿಳಿದುಕೊಳ್ಳಿ.
Arranged Marriage: ಮೊದಲ ಭೇಟಿಯಲ್ಲೇ ಈ ಪ್ರಶ್ನೆ ಕೇಳ್ಬೇಡಿ
ಇತರ ಜನರೊಂದಿಗೆ ಹೋಲಿಕೆ ಮಾಡುವುದರಿಂದ ನೀವು ಉತ್ತಮವಾಗಿರಲು ಮತ್ತು ನಿಮ್ಮ ಗುರಿಗಳನ್ನು ವೇಗವಾಗಿ ತಲುಪಲು ಪ್ರೋತ್ಸಾಹಿಸಬಹುದು. ಆದರೆ ಅದರಲ್ಲಿ ಹೆಚ್ಚಿನವು ನಿಜವಾಗಿಯೂ ಅನಾರೋಗ್ಯಕರವಾಗಬಹುದು. ಇಂಥಾ ಟೀಕೆ ನಿಮ್ಮನ್ನು ನಿರುತ್ಸಾಹಗೊಳಿಸಬಹುದು ಮತ್ತು ನಿಮ್ಮನ್ನು ನೀವೇ ಅನುಮಾನಿಸಲು ಕಾರಣವಾಗಬಹುದು. ಆದ್ದರಿಂದ, ನಿಮ್ಮ ಪತಿ ನಿಮ್ಮನ್ನು ಇತರರೊಂದಿಗೆ ನಿರಂತರವಾಗಿ ಹೋಲಿಸುತ್ತಿದ್ದರೆ, ಅವರಿಗೆ ಬೆಟರ್ ಆಪ್ಶನ್ ಜತೆ ಹೋಗಲು ತಿಳಿಸಿ.
ವಿಪರೀತ ಬೇಡಿಕೆಯಿಡುವುದು
ಹಣ, ಲೈಂಗಿಕತೆ ಎಲ್ಲಾ ವಿಷಯದಲ್ಲಿ ವಿಪರೀತ ಬೇಡಿಕೆಯಿಡುವುದು ಅವರ ಬದಲಾದ ಪ್ರವೃತಿಯನ್ನು ತೋರಿಸುತ್ತದೆ. ಅತಿಯಾಗಿ ಬಯಸುವುದರ ಮೂಲಕ ಅವರು ನಿಮ್ಮಿಂದಲೇ ನನ್ನಿಂದಾಗುವುದಿಲ್ಲ ಎಂದು ಕೇಳಲು ಹಾತೊರೆಯುತ್ತಿರುತ್ತಾರೆ. ಯಾಕೆಂದರೆ ಅವರ ಬೇಡಿಕೆಗಳನ್ನು ಆಶ್ರಯಿಸಲು ನೀವು ತುಂಬಾ ಒತ್ತಡವನ್ನು ಅನುಭವಿಸಬೇಕಾಗುತ್ತದೆ. ಇದನ್ನು ಸಹಿಸಲಾಗದೆ ನೀವೇ ಇನ್ನು ಸಾಕು ಈ ಸಂಬಂಧ ಎಂದು ಬಿಡುತ್ತೀರಿ. ಗಂಡನ ಮತ್ತಿನ ದಾರಿ ಸುಗಮವಾಗುತ್ತದೆ.
ಯಾವುದಕ್ಕೂ ರಾಜಿಯಾಗದ ಮನಸ್ಥಿತಿ
ಯಾವುದಕ್ಕೂ ರಾಜಿ ಮಾಡಿಕೊಳ್ಳದ ವ್ಯಕ್ತಿಯೊಂದಿಗೆ ಇರುವುದು ಕಷ್ಟ. ನಿಮ್ಮ ಪತಿ ಯಾವುದೇ ವಿಷಯಕ್ಕೂ ರಾಜಿ ಮಾಡಿಕೊಳ್ಳಲು ಸಿದ್ಧರಿಲ್ಲ ಎಂದರೆ ಅವರು ನಿಮ್ಮ ಕುರಿತು ಡೋಂಟ್ ಕೇರ್ ಮನಸ್ಥಿತಿಯನ್ನು ಹೊಂದಿದ್ದಾರೆ ಎಂದರ್ಥವಾಗುತ್ತದೆ. ನೀವು ಅವರಿಗೆ ಆಪ್ಶನ್ ಆಗಿಯೂ ಬೇಕಿಲ್ಲ. ಹೀಗಾಗಿ ನಿಮ್ಮ ಜತೆ ರಾಜಿ ಮಾಡಿಕೊಂಡು ಅವರಿಗೆ ಏನೂ ಆಗಬೇಕಿಲ್ಲ. ಎಲ್ಲಾ ವಿಷಯದಲ್ಲಿ ರಾಜಿ ಮಾಡದೆ, ಜಗಳವಾಡುತ್ತಿದ್ದರೆ ಅವರಿಗೇ ಅನುಕೂಲವಾಗುತ್ತದೆ.