ಸಂಬಂಧ (Relationship)ಗಳೇ ಹಾಗೇ. ಬೆಸೆದುಕೊಳ್ಳಲು ಎಷ್ಟು ಕಡಿಮೆ ಸಮಯ ಸಾಕೋ, ಅದನ್ನು ಕಳಚಿಕೊಳ್ಳಲು ಸಹ ಅಷ್ಟೇ ಕಡಿಮೆ ಸಮಯ ಸಾಕಾಗುತ್ತದೆ. ಒಂದೇ ಜೀವನ (Life), ಒಂದೇ ಆಹಾರ, ಒಂದೇ ಲೈಫ್‌ಸ್ಟೈಲ್ ಬೇಜಾರು ತರುವಂತೆಯೇ ಅದೇ ಸಂಗಾತಿ (Partner) ಬೋರೆನಿಸಿಬಿಡುತ್ತಾರೆ. ಹೀಗಾಗದಂತೆ ಏನ್ಮಾಡ್ಬೋದು ?
ಮದುವೆ (Wedding) ಪ್ರತಿಯೊಬ್ಬರ ಜೀವನದಲ್ಲೂ ವಿಶೇಷ ಘಟ್ಟ. ವಿವಾಹದ ನಂತ್ರ ಪತಿ (Husband) – ಪತ್ನಿ (Wife) ಜೀವನ ಪರ್ಯಂತ ಒಂದಾಗಿರುವ ಕನಸು (Dream) ಕಾಣ್ತಾರೆ. ಒಂದಾಗಿ ಬಾಳ್ವೆ ಮಾಡ್ತೇವೆಂದು ಪ್ರಮಾಣ ಮಾಡ್ತಾರೆ. ಆದ್ರೆ ಅನೇಕರ ಬಾಳಲ್ಲಿ ಮದುವೆಯೇ ಮುಳುವಾಗುತ್ತದೆ. ಕೆಲ ತಿಂಗಳ ನಂತ್ರ ದಾಂಪತ್ಯ (Married life)ದಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತೆ. ಮದುವೆ (Marriage)ಯಾಗೋದು ಸುಲಭ. ಆದರೆ ಆ ಸಂಬಂಧ (Relationship)ವನ್ನು ಸೂಕ್ಷ್ಮವಾಗಿ ನಿಭಾಯಿಸುವುದು ಕಷ್ಟದ ಕೆಲಸ. ಅದೆಷ್ಟೋ ಸಾರಿ ಭಿನ್ನಾಭಿಪ್ರಾಯದಿಂದಲೃ ಗಂಡ-ಹೆಂಡತಿ ದೂರವಾಗಿ ಬಿಡುತ್ತಾರೆ. ಮದುವೆಯ ಮೊದಲ್ಲೆಲ್ಲಾ ವಾವ್ಹ್ ಅನಿಸುವ ಸಂದರ್ಭ ಕಾಲಕ್ರಮೇಣ ನೀರಸವೆನಿಸಲು ಶುರುವಾಗುತ್ತದೆ.
ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಇತರ ಎಲ್ಲಾ ವಸ್ತುಗಳಂತೆ ಸಂಬಂಧಗಳ ವ್ಯಾಲಿಡಿಟಿಯೂ ಕಡಿಮೆಯಾಗಿದೆ. ಯಾರೋ ಒಂದೇ ರಿಲೇಶಿಪ್‌ನಲ್ಲಿ ದೀರ್ಘ ಸಮಯದ ಕಾಲ ಉಳಿಯಲು ಇಷ್ಟಪಡುವುದಿಲ್ಲ. ವಿನಾಕಾರಣ ಸಂಬಂಧಗಳು ರೇಜಿಗೆ ಹುಟ್ಟಿಸಿಬಿಡುತ್ತವೆ. ಹೀಗಾಗಿಯೇ ಡೈವೋರ್ಸ್, ಅಕ್ರಮ ಸಂಬಂಧ ಮೊದಲಾದವುಗಳು ಹೆಚ್ಚಾಗ್ತಿವೆ. ಪತ್ನಿ ಸಾಕೆನಿಸಿದ ಕಂಡ ಆಫೀಸ್ ಕೊಲೀಗ್‌ಗಳಲ್ಲಿ ಪ್ರೀತಿ ಹುಡುಕುತ್ತಾನೆ. ಗಂಡ ಬೋರೆನಿಸಿದ ಹೆಂಡ್ತಿ, ನೆರೆ ಹೊರೆಯ ಮನೆಯಲ್ಲಿ ಪ್ರೀತಿ ಹುಡುಕುತ್ತಾಳೆ. ಹೀಗೆ ಸಂಬಂಧಗಳು ಅರ್ಥವೇ ಇಲ್ಲದಂತೆ ದೂರವಾಗಿ ಬಿಡುತ್ತದೆ.
ಈ ವಿಷ್ಯವನ್ನು ಗರ್ಲ್‌ಫ್ರೆಂಡ್ ಹೇಳಿದರೂ ಪುರುಷರು ಒಪ್ಪೋಲ್ಲ ಬಿಡಿ!
ಆದರೆ ಸಂಬಂಧಗಳು ಕೊನೆಯಾಗಬೇಕೆಂದು ಬಹುತೇಕರು ಬಯಸುವುದಿಲ್ಲ. ಜೀವನದಲ್ಲಿ ಮಾಡುವ ಸಣ್ಣ ಪುಟ್ಟ ತಪ್ಪುಗಳೇ ಸಂಬಂಧ ಕೊನೆಯಾಗಲು ಕಾರಣವಾಗಿ ಬಿಡುತ್ತದೆ. ಎಲ್ಲವನ್ನೂ ಸರಿಮಾಡಬೇಕೆಂಬ ಹಂಬಲವಿದ್ದರೂ ತಡವಾಗಿಬಿಟ್ಟಿರುತ್ತದೆ. ಹೀಗಾಗಿ ಸಂಬಂಧ ಹಳಿ ತಪ್ಪುತ್ತಿದೆ ಎಂಬ ಸೂಚನೆ ಸಿಕ್ಕ ಕೂಡಲೇ ತಕ್ಷಣ ಅದನ್ನು ಸರಿಪಡಿಸಬೇಕು. ಸಂಗಾತಿ ನಿಮ್ಮ ಬಗ್ಗೆ ಗಮನ ಹರಿಸುತ್ತಿಲ್ಲ ಎಂದಾದರೆ ನನ್ನ ಕುರಿತು ಆಕರ್ಷಣೆ ಕಡಿಮೆಯಾಗಿದೆ, ದಾಂಪತ್ಯ ಕೊನೆಯಾಗಬಹುದು ಎಂದು ಭಯ ಹುಟ್ಟಿಕೊಳ್ಳುವುದು ಸಾಮಾನ್ಯ. ಹೀಗಾದಾಗ ಸರಿಯಾದ ಸಮಯದಲ್ಲಿ ಸಂಗಾತಿಯನ್ನು ಗಮನವನ್ನು ಸೆಳೆಯುವ ಕೆಲಸವಾಗಬೇಕು. ಪಾರ್ಟ್‌ನರ್ ಗಮನ ಸೆಳೆಯಲು ಏನು ಮಾಡ್ಬೋದು ? ತಜ್ಞರು ಏನ್ ಹೇಳಿದ್ದಾರೆ ತಿಳಿಯೋಣ.
ಸಂವಹನ ಮತ್ತು ತಿಳುವಳಿಕೆಯಲ್ಲಿ ಸ್ಪಷ್ಟತೆಯ ಕೊರತೆಯಿಂದಾಗಿ ಅನೇಕ ಸಂಬಂಧಗಳು ವಿಫಲಗೊಳ್ಳುತ್ತವೆ. ಇದು ನಿಮ್ಮ ಸಂಗಾತಿಯ ಗಮನವನ್ನು ಕಳೆದುಕೊಳ್ಳುವುದರೊಂದಿಗೆ ಪ್ರಾರಂಭವಾಗುತ್ತದೆ. ನೀವು ನಿಮ್ಮ ಬಗ್ಗೆ ಹೆಚ್ಚು ಜಾಗರೂಕರಾಗಿದ್ದರೆ ಮತ್ತು ನಿಮ್ಮ ಸಂಗಾತಿಗೆ ಆದ್ಯತೆ ನೀಡಿದರೆ, ನಿಮ್ಮ ಸಂಬಂಧವು ಬಲಗೊಳ್ಳುತ್ತದೆ. ಪರಸ್ಪರ ಗಮನ ಸೆಳೆಯಲು ಪರಸ್ಪರ ಗೌರವಿಸುವುದು ಮತ್ತು ಪ್ರಶಂಸಿಸುವುದು ಅತ್ಯುತ್ತಮ ವಿಧಾನವಾಗಿದೆ. ಅದಲ್ಲದೆ ಸಂಗಾತಿಯ ಗಮನ ಸೆಳೆಯಲು ಇನ್ನೆನು ಮಾಡ್ಬೋದು ತಿಳ್ಕೊಳ್ಳೋಣ.
ಹೆಂಡ್ತಿ ಪರಪುರುಷನ ಹಿಂದೆ ಹೋಗೋದು ಇದೇ ಕಾರಣಕ್ಕಂತೆ !
1. ನಿಮ್ಮನ್ನು ತಿಳಿದುಕೊಳ್ಳಿ: ಒಬ್ಬ ವ್ಯಕ್ತಿಯಾಗಿ ಮೊದಲು ತೃಪ್ತರಾಗಿರುವುದು ನಿಮ್ಮ ಸಂಬಂಧವನ್ನು ಬಲಪಡಿಸಲು ಮತ್ತು ನಿಮ್ಮ ಸಂಗಾತಿಯ ಗಮನವನ್ನು ಸೆಳೆಯಲು ಸಹಾಯ ಮಾಡುತ್ತದೆ. ಮೊದಲು ನಿಮ್ಮ ವರ್ತನೆಯ ಬಗ್ಗೆ ಆತ್ಮವಿಶ್ವಾಸ ರೂಢಿಸಿಕೊಳ್ಳಿ. ಉತ್ತಮ ವರ್ತನೆ ನಿಮ್ಮ ಸಂಗಾತಿಯನ್ನು ಸಹ ಸೆಳೆಯುತ್ತದೆ.
2. ಉತ್ತಮ ಕೇಳುಗರಾಗಿರಿ: ಸಂಗಾತಿ ನಿಮಗೆ ಆಪ್ತರಾಗಿ ಇರಬೇಕೆಂದರೆ ಮೊದಲು ಉತ್ತಮ ಕೇಳುಗರಾಗಿ. ಸಂಗಾತಿ ಮಾತನಾಡುವ ಮಾತುಗಳನ್ನು ಗಮನವಿಟ್ಟು ಆಲಿಸುವ ಅಭ್ಯಾಸ ರೂಢಿ ಮಾಡಿಕೊಳ್ಳಿ. ಪ್ರತಿ ಬಾರಿ ಪ್ರತಿಕ್ರಿಯಿಸಬೇಕೆಂದೇನೂ ಇಲ್ಲ. ಆದರೆ ಎಲ್ಲವನ್ನೂ ಆಲಿಸಿ. ಇದು ನಿಮ್ಮ ಸಂಗಾತಿಯ ಮನಸ್ಸನ್ನು ಖುಷಿಗೊಳಿಸುತ್ತದೆ. ಮಾತ್ರವಲ್ಲ, ನಿಮ್ಮ ಪಾಲುದಾರರು ಸಂವಹನ ಮಾಡುವಾಗ ಅವರ ಭಾವನೆಗಳ ಸೂಕ್ಷ್ಮ ವ್ಯತ್ಯಾಸಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
3. ಸಣ್ಣಪುಟ್ಟ ಕೆಲಸವನ್ನೂ ಜೊತೆಯಲ್ಲೇ ಮಾಡಿ: ಸಣ್ಣಪುಟ್ಟ ಕೆಲಸಗಳನ್ನೂ ಜೊತೆಯಾಗಿ ಮಾಡಿ. ಇದು ಇಬ್ಬರ ನಡುವಿನ ಖುಷಿಯನ್ನು ಹೆಚ್ಚಿಸುತ್ತದೆ ಮತ್ತು ಸಂಗಾತಿ ನಿಮ್ಮ ಬಗ್ಗೆ ಸದಾ ಯೋಚಿಸುವಂತೆ ಮಾಡುತ್ತದೆ. ಆದಷ್ಟೂ ಇಬ್ಬರೂ ಜೊತೆಯಾಗಿ ಗುಣಮಟ್ಟದ ಸಮಯವನ್ನು ಕಳೆಯಿರಿ. ಜೊತೆಯಾಗಿ ಅಡುಗೆ ಮಾಡುವುದು, ಸಿನಿಮಾ ನೋಡುವುದು ಮೊದಲಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.
Extra Marital Affairs : ಲವ್ವರ್ ಪತ್ನಿಗೆ ಗೊತ್ತಾಗಿದೆ ಅನೈತಿಕ ಸಂಬಂಧ.. ಮುಂದೇನ್ ಮಾಡ್ಲಿ..?
4. ನಡವಳಿಕೆಯನ್ನು ಪರಿಶೀಲಿಸಿ - ನಿಮ್ಮ ರೀತಿಯಲ್ಲಿ ಕೆಲಸಗಳನ್ನು ಮಾಡದಿದ್ದಾಗ ನೀವು ಇತರರನ್ನು ಟೀಕಿಸುವ ವ್ಯಕ್ತಿಯೇ? ನೀವು ಸಣ್ಣ ವಿಷಯಗಳ ಬಗ್ಗೆ ದೂರು ನೀಡುತ್ತೀರಾ? ನಿಮ್ಮ ಸಂಗಾತಿಯ ಬಗ್ಗೆ ನೀವು ಅಸಡ್ಡೆ ಹೊಂದಿದ್ದೀರಾ? ನಿಮ್ಮನ್ನು ಕೇಳಿಕೊಳ್ಳಿ, ನೀವು ಅವರನ್ನು ಹೇಗೆ ನಡೆಸಿಕೊಳ್ಳುತ್ತೀರೋ ಹಾಗೆಯೇ ಇತರರು ನಿಮ್ಮನ್ನು ನಡೆಸಿಕೊಳ್ಳಬೇಕೆಂದು ನೀವು ಬಯಸುತ್ತೀರಾ? ಹೊಂದಾಣಿಕೆಗಳನ್ನು ಮಾಡಿ. ನೀವು ತಪ್ಪು ಮಾಡಿದಾಗ ಒಪ್ಪಿಕೊಳ್ಳಲು ಸಿದ್ಧರಾಗಿ.
5. ಸಂಗಾತಿಯ ಇಷ್ಟ-ಕಷ್ಟಗಳನ್ನು ಅರಿತುಕೊಳ್ಳಿ: ನಮ್ಮನ್ನು ಅತಿ ಹೆಚ್ಚು ತಿಳಿದುಕೊಂಡಿರುವವರು ಯಾವಾಗಲೂ ನಮ್ಮ ಮನಸ್ಸಿಗೆ ಹತ್ತಿರವಾಗಿರುತ್ತಾರೆ. ಹಾಗಾಗಿ ಸಂಗಾತಿಗೆ ಏನಿಷ್ಟ, ಏನಿಷ್ಟವಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಿ. ಸಂಗಾತಿಯ ಆಯ್ಕೆ, ಅಭಿರುಚಿಗಳಿಗೆ ಆದ್ಯತೆ ನೀಡಿ. ಇದು ಸದಾಕಾಲ ನಿಮ್ಮನ್ನೇ ನೆನಪಿಸಿಕೊಳ್ಳುವಂತೆ ಮಾಡುತ್ತದೆ.