ದುಡ್ಡಿ (Money)ನಿಂದಲೇ ನಡೆಯೋ ದುನಿಯಾದಲ್ಲಿ ನಾವಿದ್ದೇವೆ. ಎಷ್ಟು ದುಡ್ಡಿದ್ರೂ ಮನುಷ್ಯನ ಜೀವನಶೈಲಿಗೆ (Lifestyle) ಸಾಕಾಗಲ್ಲ. ಹೀಗಾಗಿಯೇ ಕೆಲವೊಬ್ಬರು ಮನೆ, ಅಂಗಡಿಗಳನ್ನು ಬಾಡಿಗೆಗೆ (Rent) ಕೊಟ್ಟು ದುಡ್ಡು ಮಾಡಿಕೊಳ್ಳುತ್ತಾರೆ. ಆದ್ರೆ ಇಲ್ಲೊಬ್ಬಾಕೆ ಗಂಡ (Husband)ನನ್ನೇ ಬಾಡಿಗೆಗಿಟ್ಟು ದುಡ್ಡು ಮಾಡಲು ಹೊರಟಿದ್ದಾಳೆ. ಅರೆ, ಇದೇನು ವಿಚಿತ್ರ ಅನ್ಬೇಡಿ. ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಹಣ (Money) ಕಂಡ್ರೆ ಹೆಣಾನೂ ಬಾಯಿ ಬಿಡುತ್ತೆ ಅಂತಾರೆ. ಮನುಷ್ಯನ ಜೀವನದಲ್ಲಿ ದುಡ್ಡಿಗೆ ಆ ಮಟ್ಟಿಗೆ ಪ್ರಾಧಾನ್ಯತೆಯಿದೆ. ದುಡ್ಡು ಮಾಡೋಕೆ ಜನ್ರು ಹಿಡಿಯೋ ದಾರಿಗಳು ಒಂದೆರಡಲ್ಲ. ಹಣದ ಮುಂದೆ ಒಳ್ಳೆಯದು, ಕೆಟ್ಟದ್ದು ಅಂತಾನೂ ಇಲ್ಲ. ಒಟ್ಟಾರೆ ದುಡ್ಡು ಮಾಡಿಕೊಂಡರಾಯಿತು ಅನ್ನೋ ಮನೋಭಾವ. ಕೆಲವೊಬ್ಬರು ದುಡ್ಡು ಮಾಡ್ಕೊಳ್ಳೋಕೆ ಅಂತ ಮನೆ, ಅಂಗಡಿಯನ್ನು ಬಾಡಿಗೆಗೆ (Rent) ಕೊಡ್ತಾರೆ. ಈ ಮೂಲಕ ಹಣ ಸಂಪಾದಿಸ್ತಾರೆ. ಆದ್ರೆ ಇಲ್ಲೊಬ್ಬಾಕೆ ಇದೆಲ್ಲಕ್ಕಿಂತ ವಿಚಿತ್ರವಾಗಿ ಗಂಡ (Husband)ನನ್ನೇ ಬಾಡಿಗೆಗಿಟ್ಟು ದುಡ್ಡು ಮಾಡೋಕೆ ಹೊರಟಿದ್ದಾಳೆ. ಮೂರು ಮಕ್ಕಳ ತಾಯಿಯಾದ ಲಾರಾ ಯಂಗ್, ತನ್ನ ಪತಿಯನ್ನು ಇತರ ಮಹಿಳೆ (Woman)ಯರಿಗೆ ಬಾಡಿಗೆಗೆ ನೀಡುವ ಆಲೋಚನೆಯನ್ನು ಮಾಡಿದ್ದಾಳೆ.
ಲಾರಾ ಯಂಗ್ ಪತಿ ಹಾಸಿಗೆಗಳನ್ನು ತಾನೇ ತಯಾರಿಸುತ್ತಾರೆ, ಕಿಚನ್ ಸೆಟ್ಟಿಂಗ್ ಮಾಡುತ್ತಾರೆ, ಮನೆಗೆ ಪೇಂಟ್ ಮಾಡಿಸುತ್ತಾರೆ, ಡೈನಿಂಗ್ ಟೇಬಲ್ ಸಿದ್ಧಪಡಿಸುತ್ತಾರೆ. ಅಲಂಕಾರ, ಟೈಲಿಂಗ್ ಮತ್ತು ಕಾರ್ಪೆಟ್ ಹಾಕುವಲ್ಲಿಯೂ ನುರಿತರಾಗಿದ್ದಾರೆ. ಹೀಗೆ ಲಾರಾ ಯಂಗ್ಸ್ UK ಬಕಿಂಗ್‌ಹ್ಯಾಮ್‌ಶೈರ್‌ನಲ್ಲಿರುವ ತಮ್ಮ ಕುಟುಂಬದ ಮನೆಯನ್ನು ಗಂಡನ ಕೆಲಸದಿಂದಲೇ ಸಂಪೂರ್ಣವಾಗಿ ಮಾರ್ಪಡಿಸಿದ್ದಾರೆ. ಎಲ್ಲಾ ಕೆಲಸ ಕಾರ್ಯಗಳಲ್ಲೂ ದಿ ಬೆಸ್ಟ್ ಎಂಬಂತಿರುವ ಗಂಡನ ಪ್ರತಿಭೆಗೆ ಲಾರಾ ತುಂಬಾ ಖುಷಿಯಾಗಿದ್ದಾರೆ. ಹೀಗಾಗಿಯೇ ತಮ್ಮ ತಮ್ಮ ಮನೆಯ ಸಂಪೂರ್ಣ ಕೆಲಸಗಳನ್ನು ಮಾಡಿಸಿಕೊಳ್ಳಲು ಗಂಡನನ್ನು ಬಾಡಿಗೆ ಕೊಡೋದಾಗಿ ಹೇಳಿಕೊಂಡಿದ್ದಾರೆ.
ಹೆಸರೇ ತಿಳಿಯದೆ ಲೈಂಗಿಕ ಕ್ರಿಯೆ, ಸಂಗಾತಿ ಎಕ್ಸ್‌ಚೇಂಜ್ ಈ ದೇಶದಲ್ಲಿ ಮಾಮೂಲು
ಗಂಡ ಬಾಡಿಗೆಗಿದ್ದಾನೆ, ಜಾಹೀರಾತು ವೈರಲ್
ಅವರು ಎಲ್ಲಾ ಕೆಲಸದಲ್ಲಿ ಉತ್ತಮರು, ಹಾಗಾಗಿ ಆ ಕೌಶಲ್ಯಗಳನ್ನು ಏಕೆ ದುಡ್ಡು ಗಳಿಸಲು ಬಳಸಿಕೊಳ್ಳಬಾರದು ಮತ್ತು ಅವನನ್ನು ನೇಮಿಸಿಕೊಳ್ಳಬಾರದು ಎಂದು ನಾನು ಯೋಚಿಸಿದೆ ಎಂದು ಲಾರಾ ಹೇಳಿದ್ದಾರೆ. ಹೀಗಾಗಿಯೇ ಅವರು, ಮೈ ಹ್ಯಾಂಡಿ ಹಸ್ಬೆಂಡ್" ವೆಬ್‌ಸೈಟ್ ಅನ್ನು ಪ್ರಾರಂಭಿಸಿದರು ಮತ್ತು ಫೇಸ್‌ಬುಕ್ ಮತ್ತು ಜನಪ್ರಿಯ ನೆಕ್ಸ್ಟ್‌ಡೋರ್ ಅಪ್ಲಿಕೇಶನ್‌ನಲ್ಲಿ ಜಾಹೀರಾತು ಮಾಡಿದರು. 'ಜನರು ಪ್ರಾಮಾಣಿಕವಾಗಿ ಗಂಡನನ್ನು ಬಾಡಿಗೆಗೆ ಪಡೆಯಲು ಆಸಕ್ತಿ ಹೊಂದಿದ್ದಾರೆ. ಆದರೆ ಕೆಲವರು ತಪ್ಪು ಕಲ್ಪನೆಯನ್ನು ಹೊಂದುದ್ದಾರೆ. ನಾನು ಜೇಮ್ಸ್ ಅನ್ನು ಸಂಪೂರ್ಣವಾಗಿ ಬೇರೆ ಯಾವುದೋ ಕೆಲಸಕ್ಕೆ ನೇಮಿಸಿಕೊಳ್ಳುತ್ತಿದ್ದೇನೆ ಎಂದು ಭಾವಿಸಿದ್ದಾರೆ' ಎಂದು ಲಾರಾ ಕಮೆಂಟಿಸಿದ್ದಾರೆ.
ಮಹಿಳೆಯ ಐಡಿಯಾಕ್ಕೆ ಅಚ್ಚರಿಗೊಂಡ ಮಂದಿ
ಹೆಚ್ಚಿನ ಜನರು ಗಂಡನನ್ನು ಬಾಡಿಗೆಗೆ ನೀಡುವ ಐಡಿಯಾ ಅದ್ಭುತವಾಗಿದೆ ಎಂದು ಭಾವಿಸುತ್ತಾರೆ. ಅವರು ಆಸಕ್ತಿಯಿಲ್ಲದ ಕಾರಣ ಬಿಲ್ಡರ್‌ಗಳು ಸಣ್ಣ ಕೆಲಸಗಳಿಗೆ ಉಲ್ಲೇಖಿಸಲು ಕೆಲವೊಮ್ಮೆ ಕಷ್ಟ ಎಂದು ಹೇಳುತ್ತಾರೆ. ಫ್ಲಾಟ್ ನ ಎಲ್ಲಾ ಕೆಲಸಗಳನ್ನು ಒಟ್ಟಿಗೆ ಮಾಡುವುದರಲ್ಲಿ ಜೇಮ್ಸ್ ಪರಿಪೂರ್ಣವಾಗಿದ್ದಾರೆ. ಎಂದು ಲಾರಾ ಹೇಳಿದರು. ಜೇಮ್ಸ್ ಯಾವಾಗಲೂ ನಿರ್ಮಿಸಲು ಮತ್ತು ರಚಿಸುವಲ್ಲಿ ತೀವ್ರವಾದ ಆಸಕ್ತಿಯನ್ನು ಹೊಂದಿದ್ದಾರೆ. ನಾನು ನಮ್ಮ ಸ್ವಂತ ಕುಟುಂಬದ ಮನೆಯನ್ನು ಸ್ಥಾಪಿಸಲು ಮತ್ತು ಸ್ನೇಹಿತರು ಮತ್ತು ಕುಟುಂಬಕ್ಕೆ ಸಹಾಯ ಮಾಡಲು ವರ್ಷಗಳಲ್ಲಿ ಅವನನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡಿದ್ದೇನೆ ಎಂದರು.
ಹೆಂಡ್ತಿ ಪರಪುರುಷನ ಹಿಂದೆ ಹೋಗೋದು ಇದೇ ಕಾರಣಕ್ಕಂತೆ !
ಬಾಡಿಗೆಯು ಮನೆಗೆ ಇಂಥಾ ಕೆಲಸಗಳಿಗೆ ಹೆಚ್ಚು ಶುಲ್ಕ ವಿಧಿಸುತ್ತದೆ. ಆದರೆ ಯಾವುದೇ ಕೆಲಸವು ತುಂಬಾ ಚಿಕ್ಕದಲ್ಲ. ಇದು ಟಿವಿಯನ್ನು ಗೋಡೆಗೆ ಅಳವಡಿಸುವುದು, ಕೌಂಪಾಂಡ್‌ಗೆ ಬಣ್ಣ ಬಳಿಯುವುದು ಯಾವುದೇ ಆಗಿರಲಿ. ಬಜೆಟ್‌ನಲ್ಲಿ ಹೇಗೆ ಇರಬೇಕೆಂದು ನಮಗೆ ತಿಳಿದಿದೆ. ಆದ್ದರಿಂದ ನಾವು ಅಂಗವಿಕಲರಿಗೆ, ಆರೈಕೆದಾರರಿಗೆ, ಯುನಿವರ್ಸಲ್ ಕ್ರೆಡಿಟ್‌ನಲ್ಲಿರುವ ಜನರಿಗೆ ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟವರಿಗೆ ರಿಯಾಯಿತಿಗಳನ್ನು ನೀಡುತ್ತೇವೆ ಎಂದು ಲಾರಾ ಹೇಳಿದ್ದಾರೆ.