ಬಾಯ್‌ಫ್ರೆಂಡ್ ಇದ್ದಾನೆ ಎಂದ ಮಗಳಿಗೆ ಅಟ್ಟಾಡಿಸಿ ಹೊಡೆದ ತಾಯಿ, ಅಳ್ತಾ ಬೇಡಿಕೊಂಡ್ರೂ ಬಿಡ್ಲೇ ಇಲ್ಲ!

Published : Jun 27, 2023, 11:16 AM ISTUpdated : Jun 27, 2023, 11:19 AM IST
ಬಾಯ್‌ಫ್ರೆಂಡ್ ಇದ್ದಾನೆ ಎಂದ ಮಗಳಿಗೆ ಅಟ್ಟಾಡಿಸಿ ಹೊಡೆದ ತಾಯಿ, ಅಳ್ತಾ ಬೇಡಿಕೊಂಡ್ರೂ ಬಿಡ್ಲೇ ಇಲ್ಲ!

ಸಾರಾಂಶ

ಭಾರತದಲ್ಲಿ ಇವತ್ತಿಗೂ ಹಲವು ಮನೆಗಳಲ್ಲಿ ಲವ್ ಮ್ಯಾರೇಜ್‌ಗೆ ಪೋಷಕರು ವಿರೋಧ ವ್ಯಕ್ತಪಡಿಸುತ್ತಾರೆ. ಮಗ, ಮಗಳು ಯಾರನ್ನೋ ಲವ್ ಮಾಡ್ತಿದ್ದಾರೆ ಅಂತ ಗೊತ್ತಾದ್ರೆ ಆಕಾಶ-ಭೂಮಿ ಒಂದ್ ಮಾಡಿಬಿಡ್ತಾರೆ. ಹಾಗೆಯೇ ಇಲ್ಲೊಂದೆಡೆ ಬಾಯ್‌ಫ್ರೆಂಡ್‌ ಇದ್ದಾನೆ ಅಂತ ಗೊತ್ತಾದ ತಕ್ಷಣ ತಾಯಿ, ಮಗಳಿಗೆ ಹಿಗ್ಗಾಮುಗ್ಗಾ ಥಳಿಸಿದ ವಿಡಿಯೋ ವೈರಲ್‌ ಆಗಿದೆ.

ಇವತ್ತಿನ ಕಾಲದಲ್ಲಿ ಎಲ್ಲರಿಗೂ ಬಾಯ್‌ಫ್ರೆಂಡ್, ಗರ್ಲ್‌ಫ್ರೆಂಡ್ ಇದ್ದೇ ಇರ್ತಾರೆ. ಆದ್ರೆ ಹಿಂದೆಲ್ಲಾ ಲವ್ ಮ್ಯಾರೇಜ್‌ ಅನ್ನೋ ಕಾನ್ಸೆಪ್ಟ್‌ ಕಡಿಮೆಯಿತ್ತು. ಅದರಲ್ಲೂ ಭಾರತದಲ್ಲಿ ಸ್ಟ್ರಿಕ್ಟ್‌ ಪೇರೆಂಟಿಂಗ್‌ಗೇ ಹೆಚ್ಚು. ಪೋಷಕರು ತಮ್ಮ ಮಕ್ಕಳು ಹದ್ದುಬಸ್ತಿನಲ್ಲಿ ಬೆಳೆಸ್ತಿದ್ರು. ಗಂಡು ಮಕ್ಕಳು ಕೆಟ್ಟ ಅಭ್ಯಾಸ ಬೆಳೆಸಿಕೊಳ್ಳಬಾರದು, ಹೆಣ್ಣು ಮಕ್ಕಳು ತಲೆಯೆತ್ತಿ ನಡೀಬಾರದು, ಗಂಡು ಮಕ್ಕಳ ಜೊತೆ ಮಾತನಾಡಬಾರದು ಎಂಬೆಲ್ಲಾ ಷರತ್ತನ್ನು ವಿಧಿಸ್ತಿದ್ರು.  . ಮಗ, ಮಗಳು ಯಾರನ್ನೋ ಲವ್ ಮಾಡ್ತಿದ್ದಾರೆ ಅಂತ ಗೊತ್ತಾದ್ರೆ ಆಕಾಶ-ಭೂಮಿ ಒಂದ್ ಮಾಡಿಬಿಡ್ತಿದ್ರು. ಮಕ್ಕಳು ವಯಸ್ಸಿಗೆ ಬಂದಾಗ ಪೋಷಕರೇ ಗಂಡು-ಅಥವಾ ಹೆಣ್ಣನ್ನು ಹುಡುಕಿ ಮದುವೆ ಮಾಡೋದು ರೂಢಿಯಾಗಿತ್ತು. ಆದ್ರೆ ಈಗ ಸಾಮಾನ್ಯವಾಗಿ ಎಲ್ಲಾ ಪೋಷಕರು ಸಹ ಲವ್‌ ಮ್ಯಾರೇಜ್‌ನ್ನು ಒಪ್ಪಿಕೊಳ್ತಿದ್ದಾರೆ. ಅವರೇ ನಿಂತು ಮದುವೆ ಮಾಡಿಕೊಡುತ್ತಾರೆ.

ಪೋಷಕರು ಸಹ ಲವ್‌ ಮ್ಯಾರೇಜ್ ಅಂದ್ರೆ ಗಾಬರಿಗೊಳ್ಳೋದು, ಮಕ್ಕಳಿಗೆ ಬೈಯೋದು, ಮನೆಯಲ್ಲಿ ಕೂಡಿ ಹಾಕೋದು ಮಾಡ್ತಿಲ್ಲ. ಎರಡೂ ಕುಟುಂಬದವರು ಮಾತನಾಡಿ ಮದುವೆ ಮಾಡಿಕೊಡ್ತಾರೆ ಅಷ್ಟೆ. ಆದರೆ ಹೀಗೆ ಬದಲಾಗಿರುವ ಪೋಷಕರ ಮಧ್ಯೆಯೂ ಇಲ್ಲೊಬ್ಬ ತಾಯಿ 
ಬಾಯ್‌ಫ್ರೆಂಡ್ ಇದ್ದಾನೆ ಅನ್ನೋ ಕಾರಣಕ್ಕೆ ತನ್ನ ಮಗಳಿಗೆ ಹಿಗ್ಗಾಮುಗ್ಗಾ ಹೊಡೆದಿದ್ದಾಳೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಹನಿಮೂನ್‌ ಮೂಡ್‌ನಲ್ಲಿದ್ದ ಹುಡುಗ ರಾತ್ರಿ ಬೆಳಗಾಗುವಷ್ಟರಲ್ಲಿ ಅಣ್ಣನಾಗಿ ಹೋದ!

ಮಗಳು ಅಳುತ್ತಿದ್ದರೂ ನೋಡದೆ ಕಪಾಳಕ್ಕೆ ಬಾರಿಸಿದ ತಾಯಿ
ಬಾಯ್‌ಫ್ರೆಂಡ್‌ ಇದ್ದ ಕಾರಣಕ್ಕೆ ಮಗಳನ್ನು (Daughter) ಹೊಡೆಯುತ್ತಿರುವ ತಾಯಿಯ (Mother) ವಿಡಿಯೋ ಟ್ವಿಟರ್‌ನಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಬಾಯ್ ಫ್ರೆಂಡ್ ಇದ್ದಾನೆ ಎಂಬ ಕಾರಣಕ್ಕೆ ಮಹಿಳೆಯೊಬ್ಬರು ತನ್ನ ಮಗಳನ್ನು ಥಳಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದು ಯಾವುದೇ ಕಾರಣಕ್ಕಾಗಿರಲಿ ಪೋಷಕರು (Parents) ತಮ್ಮ ಮಕ್ಕಳನ್ನು ಹೀಗೆ ಹೊಡೆಯುವುದನ್ನು ಎಷ್ಟು ಸರಿ ಎಂದು ಇದು ಕಳವಳವನ್ನು ಹುಟ್ಟುಹಾಕಿದೆ. 

ಮಗಳಿಗೆ ಬಾಯ್‌ಫ್ರೆಂಡ್ ಇದ್ದಾನೆ ಎಂದು ತಿಳಿದ ಕೂಡಲೇ ತಾಯಿ ಮಗಳಿಗೆ ಕಪಾಳಮೋಕ್ಷ (Hitting) ಮಾಡುತ್ತಾಳೆ. ಹೊಡೆಯದಂತೆ ಮಗಳು ಪದೇ ಪದೇ ಕೇಳಿಕೊಂಡರೂ ತಾಯಿ ಮತ್ತೆ ಮತ್ತೆ ಹೊಡೆಯುವುದನ್ನು ನೋಡಬಹುದು. ಮಗಳು ಅಳುತ್ತಾ ಏನನ್ನೋ ವಿವರಿಸುತ್ತಿದ್ದರೂ ತಾಯಿ ತನ್ನ ಮಗಳನ್ನು ನಿರ್ದಯವಾಗಿ ಹೊಡೆಯುತ್ತಲೇ ಇರುತ್ತಾಳೆ. ನಂತರ ಅವಳನ್ನು ಕೋಣೆಯಿಂದ ಹೊರಗೆ ಎಳೆದುಕೊಂಡು ಹೋಗುತ್ತಾಳೆ. ಈ ವಿಡಿಯೋ ಅಪ್ಲೋಡ್ ಆದ ನಂತರ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ (Social media) ಭಾರೀ ಆಕ್ರೋಶ ವ್ಯಕ್ತವಾಗಿದೆ. ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

ಲವ್ ಮಾಡಿ ಮದ್ವೆ ಆದ್ರೂ ಮತ್ತೊಬ್ಬಳ ಬಗ್ಗೆ ಆಕರ್ಷಣೆ! ಇದ್ಯಾಕಾಗುತ್ತೆ ಗೊತ್ತಾ?

ತಾಯಿಯ ವರ್ತನೆಗೆ ನೆಟ್ಟಿಗರ ಕ್ಲಾಸ್
ಒಬ್ಬ ಬಳಕೆದಾರರು 'ಹುಡುಗಿಯರು ತಮ್ಮ ಕುಟುಂಬದ ಸದಸ್ಯರೊಂದಿಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಎಂದಿಗೂ ಮಾತನಾಡುವುದಿಲ್ಲ, ಯಾಕೆಂದರೆ ಪೋಷಕರು ಅವರನ್ನು ಯಾವತ್ತೂ ಅರ್ಥಮಾಡಿಕೊಳ್ಳುವುದಿಲ್ಲ' ಎಂದು ಬರೆದಿದ್ದಾರೆ. ಇನ್ನೊಬ್ಬರು, 'ಇದು ನಿಜವಾದ ಭಾರತೀಯ ಪೋಷಕರ ಮನಸ್ಥಿತಿಯನ್ನು ತೋರಿಸುತ್ತದೆ.  ತಮ್ಮ ಮಗಳು ಯಾರನ್ನಾದರೂ ಪ್ರೀತಿಸುತ್ತಿದ್ದಾಳೆಂದು ತಿಳಿದಾಗ ಅವರ ಪ್ರತಿಕ್ರಿಯೆಯನ್ನು ನೋಡಿ. ಆದ್ದರಿಂದ ಆಘಾತಕಾರಿಯಾಗಿದೆ' ಎಂದು ಕಾಮೆಂಟ್ ಮಾಡಿದ್ದಾರೆ.

ಮತ್ತೊಬ್ಬ ಬಳಕೆದಾರರು 'ಪ್ರೀತಿಸುವುದು ಇಷ್ಟೊಂದು ದೊಡ್ಡ ತಪ್ಪೇ' ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬ ಬಳಕೆದಾರರು 'ಹೀಗೆ ಮಾಡೋದ್ರಿಂದಲೇ ಮಕ್ಕಳು ಕೊನೆಗೆ ಪೋಷಕರನ್ನು ವೃದ್ಧಾಶ್ರಮದಲ್ಲಿ ಬಿಡುತ್ತಾರೆ' ಎಂದಿದ್ದಾರೆ. 'ಇದರ ಬದಲು ಪೋಷಕರು ಆಕೆಯ ಜೊತೆ ಸಮಾಧಾನದಿಂದ ಮಾತನಾಡಬಹುದಿತ್ತು' ಎಂದು ಮತ್ತೊಬ್ಬ ವ್ಯಕ್ತಿ ಕಾಮೆಂಟಿಸಿದ್ದಾರೆ.

ವೈರಲ್ ಆಗಿರುವ ವಿಡಿಯೋ ಇಲ್ಲಿದೆ:

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಸುಂದರ ದೇಶದಲ್ಲಿ ಬಾಡಿಗೆಗೆ ಸಿಗ್ತಾನೆ ಗಂಡ, ಗಂಟೆಗೆ ಇಷ್ಟಿದೆ ಸಂಬಳ!
ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!