ಲವ್ ಜಿಹಾದ್ ನಂತ್ರ ಪುರುಷರ ಮೇಲೆ ನಂಬಿಕೆ ಹೋಯ್ತು, ಪರಸ್ಪರ ಮದುವೆಯಾದ ಹುಡುಗಿಯರು

Published : May 14, 2025, 04:21 PM ISTUpdated : May 14, 2025, 04:24 PM IST
ಲವ್ ಜಿಹಾದ್ ನಂತ್ರ ಪುರುಷರ ಮೇಲೆ ನಂಬಿಕೆ ಹೋಯ್ತು, ಪರಸ್ಪರ ಮದುವೆಯಾದ ಹುಡುಗಿಯರು

ಸಾರಾಂಶ

ಲವ್ ಜಿಹಾದ್‌ನಿಂದ ಮೋಸ ಹೋದ ಇಬ್ಬರು ಯುವತಿಯರು, ಪುರುಷರ ಮೇಲಿನ ನಂಬಿಕೆ ಕಳೆದುಕೊಂಡು ಬದೌನ್‌ನ ದೇವಸ್ಥಾನದಲ್ಲಿ ಪರಸ್ಪರ ವಿವಾಹವಾಗಿದ್ದಾರೆ. ನ್ಯಾಯ ಸಿಗದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಈ ಘಟನೆ ಸಂಬಂಧಗಳ ಮೇಲಿನ ವಿಶ್ವಾಸ ಕುಸಿತ ಮತ್ತು ಲವ್ ಜಿಹಾದ್ ಬಗ್ಗೆ ಮತ್ತೆ ಚರ್ಚೆ ಹುಟ್ಟುಹಾಕಿದೆ. ಕಾನೂನಿನ ಮಾನ್ಯತೆ ಇಲ್ಲದಿದ್ದರೂ ದೇವರ ಮುಂದೆ ಬಾಳು ಕಟ್ಟಿಕೊಂಡಿದ್ದಾರೆ.

ಮದುವೆ (marriage), ಸಂಬಂಧಗಳ ಮೇಲೆ ಜನರು ವಿಶ್ವಾಸ ಕಳೆದುಕೊಳ್ತಿದ್ದಾರೆ. ಸಂಬಂಧದ ಮೇಲೆ ನಂಬಿಕೆ ಇಡುವ ಜನರ ಸಂಖ್ಯೆ ಕಡಿಮೆ ಆಗ್ತಿದೆ. ಬಾಲ್ಯ ಅಥವಾ ಹದಿಹರೆಯಲ್ಲಾದ ಮೋಸದಿಂದ ಬೇಸತ್ತ ಅನೇಕರು ಮದುವೆ ತೀರ್ಮಾನದಿಂದ್ಲೇ ಹಿಂದೆ ಸರಿಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವಿವಾಹಿತರ ಸಂಖ್ಯೆ ಹೆಚ್ಚಾಗ್ತಿರಲು ಇದು ಒಂದು ಕಾರಣ. ದಾಂಪತ್ಯದಲ್ಲಿ ನಂಬಿಕೆ, ವಿಶ್ವಾಸ ಬಹಳ ಮುಖ್ಯವಾಗುತ್ತದೆ. ಅದಿಲ್ಲದೆ ಜೀವನ ನಡೆಸೋದು ಬಹಳ ಕಷ್ಟ. ಪುರುಷನ ಮೇಲೆ ಅಥವಾ ಮಹಿಳೆ ಮೇಲೆ ನಂಬಿಕೆ ಕಳೆದುಕೊಂಡ ಜನರು ಸಲಿಂಗಿಗಳಿಗೆ ಆಕರ್ಷಿತರಾಗ್ತಿರುವ ಘಟನೆಯೂ ನಡೆಯುತ್ತಿದೆ. ಅದಕ್ಕೆ ಈಗ ಮತ್ತೊಂದು ಘಟನೆ ಸಾಕ್ಷ್ಯವಾಗಿದೆ. ಹುಡುಗ್ರ ಮೇಲೆ ಭರವಸೆ ಕಳೆದುಕೊಂಡ ಇಬ್ಬರು ಹುಡುಗಿಯರು ಪರಸ್ಪರ ಮದುವೆಯಾದ ಘಟನೆ ಉತ್ತರ ಪ್ರದೇಶದ ಬದೌನ್ನಲ್ಲಿ ನಡೆದಿದೆ. ಲವ್ ಜಿಹಾದ್ ಗೆ ಬಲಿಯಾಗಿದ್ದ ಇಬ್ಬರು ಹುಡುಗಿಯರು ಪುರುಷರ ಮೇಲೆ ಭರವಸೆ ಕಳೆದುಕೊಂಡಿದ್ದಾರೆ. ಮೋಸ ಹೋದ ಇಬ್ಬರು, ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ಪರಸ್ಪರ ಮದುವೆಯಾಗಿ ಹೊಸ ಬಾಳು ನಡೆಸುವ ನಿರ್ಧಾರಕ್ಕೆ ಬಂದಿದ್ದಾರೆ. ಬದೌನ್ ಜಿಲ್ಲಾ ಕಚೇರಿ ಬಳಿ ಇರುವ ಶಿವ ದೇವಸ್ಥಾನ (temple)ದಲ್ಲಿ ಘಟನೆ ನಡೆದಿದೆ.   ಇಬ್ಬರೂ ಹುಡುಗಿಯರು ಪರಸ್ಪರ ಹಾರ ಹಾಕಿಕೊಂಡು ಜೀವನದುದ್ದಕ್ಕೂ ಒಟ್ಟಿಗೆ ಇರುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಘಟನೆಗೆ ಕಾರಣ ಏನು? : ಇಬ್ಬರು ಹುಡುಗಿಯರ ಪ್ರಕಾರ, ಹೆಸರು ಬದಲಿಸಿಕೊಂಡಿದ್ದ ಮುಸ್ಲಿಂ ಹುಡುಗರು ಅವರಿಗೆ ಮೋಸ ಮಾಡಿದ್ದಾರಂತೆ. ಹುಡುಗಿಯರನ್ನು ಪ್ರೀತಿಸಿ, ಮದುವೆ ಆಗುವ ಆಸೆ ತೋರಿಸಿದ್ದಾರೆ. ನಂತ್ರ ಕೈಕೊಟ್ಟು ಓಡಿ ಹೋಗಿದ್ದಾರೆ. ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. ಆದ್ರೆ ಕಾನೂನಿನ ಪ್ರಕಾರ, ಆರೋಪಿಗಳಿಗೆ ಯಾವುದೇ ಶಿಕ್ಷೆಯಾಗಿಲ್ಲ. ಇದ್ರಿಂದ ಹುಡುಗಿಯರಿಗೆ ಹುಡುಗರ ಮೇಲಿದ್ದ ಭರವಸೆ ಕಡಿಮೆಯಾಗಿದೆ. ಪುರುಷರನ್ನು ದ್ವೇಷಿಸಲು ಶುರು ಮಾಡಿದ್ದಾರೆ. ಹುಡುಗರ ಮೇಲೆ ನಮಗೆ ನಂಬಿಕೆ ಇಲ್ಲ. ಅವರ ಜೊತೆ ಜೀವನ ಮಾಡಲು ಸಾಧ್ಯವೇ ಇಲ್ಲ. ಪುರುಷರ ಮೋಸಕ್ಕೆ ನಾವು ಬಲಿಯಾಗಿದ್ದೇವೆ. ಮುಂದೆಯೂ ಇಂಥ ಕಷ್ಟ ಅನುಭವಿಸಲು ಸಿದ್ಧರಿಲ್ಲ. ನಾವಿಬ್ಬರೇ ಜೀವನ ಪರ್ಯಂತ ಒಟ್ಟಿಗಿರುವ ನಿರ್ಧಾರ ಮಾಡಿದ್ದೇವೆ. ಇದಕ್ಕೆ ಮನೆಯವರು ಒಪ್ಪಿಗೆ ನೀಡಿದ್ರೆ ಒಳ್ಳೆಯದು. ಒಂದ್ವೇಳೆ ಕುಟುಂಬಸ್ಥರ ವಿರೋಧವಿದ್ರೆ ನಾವಿಬ್ಬರು ಬೇರೆ ವಾಸ ಮಾಡ್ತೇವೆ ಎಂದು ಹುಡುಗಿಯರು ಹೇಳಿಕೆ ನೀಡಿದ್ದಾರೆ.

ವಕೀಲರ ಸಹಾಯ : ದಿವಾಕರ್ ವರ್ಮಾ ಹೆಸರಿನ ವಕೀಲರನ್ನು ಹುಡುಗಿಯರು ಭೇಟಿ ಮಾಡಿದ್ದರಂತೆ. ಮೂರು ತಿಂಗಳಿಂದ ನಾವಿಬ್ಬರು ಒಟ್ಟಿಗೆ ವಾಸ ಮಾಡ್ತಿದ್ದೇವೆ. ನಮಗೆ ಪುರುಷರ ಮೇಲೆ ನಂಬಿಕೆ ಇಲ್ಲ. ನಮ್ಮ ಸಂಬಂಧವನ್ನು ಮುಂದುವರೆಸುವ ನಿರ್ಧಾರಕ್ಕೆ ಬಂದಿದ್ದು, ಮದುವೆ ಆಗ್ತೇವೆ ಎಂದಿದ್ದರಂತೆ.   ಒಂದೇ ಲಿಂಗದವರು ಮದುವೆಯಾದ್ರೆ ಅದಕ್ಕೆ ಭಾರತದ ಕಾನೂನಿನಲ್ಲಿ ಮಾನ್ಯತೆ ಇಲ್ಲ. ಈ ವಿಷ್ಯವನ್ನು ವಕೀಲರಿಂದ ತಿಳಿದ ಹುಡುಗಿಯರು, ದೇವಸ್ಥಾನದಲ್ಲಿ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ. ದೇವಸ್ಥಾನದಲ್ಲಿ ವಿಧಿ – ವಿಧಾನದ ಮೂಲಕ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. 

ವಕೀಲರು ಹೇಳೋದೇನು? : ಹುಡುಗಿಯರು ಪದೇ ಪದೇ ಮೋಸ ಹೋಗಿದ್ದಾಗಿ ನನ್ನ ಬಳಿ ಹೇಳಿದ್ದರು. ದೇವಸ್ಥಾನದಲ್ಲಿ ಮಾಲೆ ಬದಲಿಸಿಕೊಂಡಿದ್ದಾರೆ. ಈ ಘಟನೆ ಲವ್ ಜಿಹಾದ್ ಮತ್ತು ಸಂಬಂಧದ ಮೇಲಿನ ನಂಬಿಕೆ ಬಗ್ಗೆ ಮತ್ತೊಮ್ಮೆ ಚರ್ಚೆಯನ್ನು ಹುಟ್ಟು ಹಾಕುತ್ತದೆ. ನ್ಯಾಯ ಸಿಕ್ಕಿಲ್ಲ ಅಂದ್ರೆ ಜನರು ಇಂಥ ಹೆಜ್ಜೆಯನ್ನಿಡುವ ಸಾಧ್ಯತೆ ಇದೆ ಎಂದು ವಕೀಲರು ಹೇಳಿದ್ದಾರೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಸುಂದರ ದೇಶದಲ್ಲಿ ಬಾಡಿಗೆಗೆ ಸಿಗ್ತಾನೆ ಗಂಡ, ಗಂಟೆಗೆ ಇಷ್ಟಿದೆ ಸಂಬಳ!
ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!