
ಪ್ರತಿದಿನ, ಪ್ರಾಣಿಗಳ ಅನೇಕ ಮುದ್ದಾದ ವೀಡಿಯೊಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತವೆ. ನಾವು ಅತ್ಯಂತ ಮುದ್ದಾದ ಪ್ರಾಣಿಗಳ ಬಗ್ಗೆ ಮಾತನಾಡುವಾಗ ಜನರ ಮನಸ್ಸಿಗೆ ಬರುವ ಮೊದಲ ಪ್ರಾಣಿಯೆಂದರೆ ಆನೆ. ಏಕೆಂದರೆ ಅದು ತುಂಬಾ ಮುದ್ದಾಗಿರುತ್ತದೆ ಮತ್ತು ತುಂಟತನದಿಂದ ಕೂಡಿರುತ್ತದೆ. ಹಲವು ಬಾರಿ, ಆನೆಗಳ ತಮಾಷೆಯ ವಿಡಿಯೋಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತವೆ. ಅವುಗಳನ್ನು ನೋಡುತ್ತಿದ್ದರೆ ಆ ದಿನವೇ ಸುಂದರವಾಗಿರುತ್ತದೆ. ಅಂತಹ ಒಂದು ತಮಾಷೆಯ ವಿಡಿಯೋ ಈಗ ವೈರಲ್ ಆಗುತ್ತಿದೆ, ಅದನ್ನು ನೋಡಿದರೆ ನಿಮ್ಮ ಮನಸ್ಸೂ ಸಂತೋಷಪಡುತ್ತದೆ. ಅಂದಹಾಗೆ ಈ ವಿಡಿಯೋದಲ್ಲಿ ತಾಯಿ ಆನೆಗಳ ಹಿಂಡು ಎಚ್ಚರದಿಂದ ನಿಂತಿದ್ದರೆ ಅವುಗಳ ಪುಟ್ಟ ಮಕ್ಕಳು ನೀರಿನಲ್ಲಿ ಮೋಜು ಮಾಡುತ್ತಿದ್ದಾರೆ. ಐಎಎಸ್ ಅಧಿಕಾರಿ ಸಂಜಯ್ ಕುಮಾರ್ ಹಂಚಿಕೊಂಡ ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ರಮೇಶ್ ಪಾಂಡೆ ಮರು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಎಕ್ಸ್‌ನಲ್ಲಿ ವೈರಲ್ ಆಗುತ್ತಿದೆ. ಶೀರ್ಷಿಕೆಯ ಪ್ರಕಾರ, ಈ ದೃಶ್ಯಗಳನ್ನು ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿರುವ ಅಮನ್‌ಗಢ ಹುಲಿ ಸಂರಕ್ಷಿತ ಅರಣ್ಯದಲ್ಲಿ (ಎಟಿಆರ್) ಚಿತ್ರೀಕರಿಸಲಾಗಿದೆ.
ಐಎಫ್‌ಎಸ್ ಅಧಿಕಾರಿ ರಮೇಶ್ ಪಾಂಡೆ ಅವರು ಮರು-ಶೇರ್ ಮಾಡಿರುವ ಈ ವಿಡಿಯೋದಲ್ಲಿ, "ಇದು ಆನೆಗಳು ತಮ್ಮ ಮರಿಗಳಿಗೆ ಒದಗಿಸುವ ಮತ್ತೊಂದು ರೀತಿಯ Z-ಪ್ಲಸ್ ಭದ್ರತೆಯಾಗಿದೆ. ನೀರಿನಲ್ಲಿ ಮೋಜು ಮಾಡುತ್ತಿರುವ ಮಕ್ಕಳನ್ನು ಸುತ್ತುವರೆದು ಅದರ ಅಜ್ಜಿ, ತಾಯಿ ಮತ್ತು ಚಿಕ್ಕಮ್ಮ ನೋಡಿಕೊಳ್ಳುತ್ತಾರೆ" ಎಂಬ ಶೀರ್ಷಿಕೆ ಇದೆ.
ಈ ದೃಶ್ಯಾವಳಿಯಲ್ಲಿ, 6 ವಯಸ್ಕ ಆನೆಗಳು ಆರಾಮಾಗಿ ತಮ್ಮ ಬಾಯಾರಿಕೆಯನ್ನು ತಣಿಸಿಕೊಳ್ಳುತ್ತಿರುವುದನ್ನು ಮತ್ತು ನೀರಿನಲ್ಲಿ ತಣ್ಣಗೆ ನಿಂತಿರುವುದನ್ನು ಕಾಣಬಹುದು. ಅದೇ ಸಮಯದಲ್ಲಿ, ಎರಡು ಮರಿ ಆನೆಗಳು ಹತ್ತಿರದಲ್ಲಿ ನೀರು ಚಿಮ್ಮುತ್ತಾ ಜಿಗಿಯುತ್ತಿರುವುದು ಕಂಡುಬರುತ್ತದೆ. ಇವರೆಡನ್ನೂ ಹಿರಿಯಾನೆಗಳು ಗಮನವಿಟ್ಟು ನೋಡುತ್ತಿದ್ದಾರೆ. ನೀರು ವಯಸ್ಸಾದವರಿಗೆ ಮೊಣಕಾಲು ಆಳದಂತೆ ತೋರುತ್ತದೆ, ಆದರೆ ಮರಿಗಳಿಗೆ ಆಳ ಹೆಚ್ಚು ಮತ್ತು ಅಷ್ಟು ಸರಕ್ಷಿತವಲ್ಲ. ಏಕೆಂದರೆ ಅವು ಸಾಕಷ್ಟು ಚಿಕ್ಕದಾಗಿರುತ್ತವೆ.
ಈ ರಕ್ಷಣಾತ್ಮಕ ರಚನೆಯು ಆನೆ ಕುಟುಂಬಗಳಲ್ಲಿನ ಸಹಜ ರಕ್ಷಣಾ ವ್ಯವಸ್ಥೆಯನ್ನು ಪ್ರದರ್ಶಿಸುತ್ತದೆ, ಇಲ್ಲಿ ಪ್ರತಿ ವಯಸ್ಕ ಆನೆಯು ಹಿಂಡಿನಲ್ಲಿರುವ ಕಿರಿಯ ಮಗುವನ್ನು ರಕ್ಷಿಸುವಲ್ಲಿ ಪಾತ್ರ ವಹಿಸುತ್ತದೆ. ಆನೆಯ ನಡವಳಿಕೆಯನ್ನು ಶ್ಲಾಘಿಸುತ್ತಿರುವುದು ಇದೇ ಮೊದಲಲ್ಲ. ತಾಯಿಯ ಎಚ್ಚರಿಕೆಯ ಮಾರ್ಗದರ್ಶನದಲ್ಲಿ ಹುಲ್ಲು ತಿನ್ನಲು ಕಲಿಯುತ್ತಿರುವ ಮರಿ ಆನೆಯ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಕಳೆದ ತಿಂಗಳು ಹಂಚಿಕೊಂಡಿದ್ದರು. ಈ ಹೃದಯಸ್ಪರ್ಶಿ ಕ್ಷಣವನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿತ್ತು.
ವಿಡಿಯೋದಲ್ಲಿ "ಮಗು ತನ್ನ ತಾಯಿಯಿಂದ ಹುಲ್ಲು ತಿನ್ನುವ ಸರಿಯಾದ ಮಾರ್ಗವನ್ನು ಕಲಿಯುತ್ತಿದೆ. ಚಿಕ್ಕ ಪ್ರಮಾಣದ ಕೊಳಕು ಕೂಡ ಹೊಟ್ಟೆಗೆ ಪ್ರವೇಶಿಸಬಾರದು" ಎಂದು ಕಸ್ವಾನ್ ಕ್ಲಿಪ್‌ಗೆ ಶೀರ್ಷಿಕೆ ನೀಡಿದ್ದರು. ಪ್ರಾಣಿ ಸಾಮ್ರಾಜ್ಯದಲ್ಲಿ ಕಲಿಕೆ, ತಾಳ್ಮೆ ಮತ್ತು ತಾಯಿಯ ಆರೈಕೆ ಸರಳ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಹಳ ಜನಪ್ರಿಯವಾಯಿತು. ಸಾಮಾಜಿಕ ಮಾಧ್ಯಮ ಬಳಕೆದಾರರು ಎರಡೂ ವಿಡಿಯೋ ನೋಡಿ ಶ್ಲಾಘಿಸಿದರು ಮತ್ತು ಆನೆಗಳ ಭಾವನಾತ್ಮಕ ಬುದ್ಧಿವಂತಿಕೆ ಮತ್ತು ಬಲವಾದ ಕೌಟುಂಬಿಕ ಮೌಲ್ಯಗಳನ್ನು ಶ್ಲಾಘಿಸಿದರು. ನಿಜ ಹೇಳಬೇಕೆಂದರೆ ಅವು ಕಾಡಿನಲ್ಲಿಯೂ ಅತ್ಯಂತ ಪ್ರೀತಿಪಾತ್ರ ಪ್ರಾಣಿಗಳಲ್ಲಿ ಒಂದಾಗಿವೆ.
ಇವೆರೆಡು ಮಾತ್ರವಲ್ಲದೆ, ಎರಡು ದಿನಗಳ ಹಿಂದಿಯಷ್ಟೇ ಕ್ಯೂಟ್ ವಿಡಿಯೋವೊಂದು ವೈರಲ್ ಆಗುತ್ತಿತ್ತು. ಇದರಲ್ಲಿ ಕೊಳದಲ್ಲಿ ಕುಳಿತಿರುವ ಪುಟ್ಟ ಆನೆಯೊಂದು ತನ್ನ ಸೊಂಡಿಲಿನಲ್ಲಿ ನೀರು ತುಂಬಿಕೊಂಡು ತಾಯಿಯ ಮೇಲೆ ಎಸೆಯುವುದನ್ನು ಕಾಣಬಹುದು. ಮರಿ ಆನೆಯ ಈ ಕೆಲಸ ನೆಟ್ಟಿಗರ ಹೃದಯ ಗೆದ್ದಿತ್ತು. ನೀವು ಕೂಡ ಈ ವಿಡಿಯೋ ನೋಡಲೇಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.