ಮಧ್ಯರಾತ್ರಿ ನಾಯಿ ಮಾಡಿದ ಕಿತಾಪತಿಗೆ ಬೆಚ್ಚಿ ಬಿದ್ದ ಮಾಲೀಕ: ಆಗಿದ್ದೇನು ನೋಡಿ

Published : May 13, 2025, 04:43 PM IST
ಮಧ್ಯರಾತ್ರಿ ನಾಯಿ ಮಾಡಿದ ಕಿತಾಪತಿಗೆ ಬೆಚ್ಚಿ ಬಿದ್ದ ಮಾಲೀಕ: ಆಗಿದ್ದೇನು ನೋಡಿ

ಸಾರಾಂಶ

ಹಸಿವಾದ ಶ್ವಾನವೊಂದು ತನ್ನ ಮಾಲೀಕನನ್ನು ಎಬ್ಬಿಸಲು ಮಾಡಿದ ಕಿತಾಪತಿಗೆ ಮಾಲೀಕ ಬೆಚ್ಚಿಬಿದ್ದಿದ್ದಾನೆ. ನಾಯಿಯ ಕಳ್ಳಾಟ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸಾಮಾನ್ಯವಾಗಿ ಮಧ್ಯರಾತ್ರಿ ಜೋರಾಗಿ ಹಸಿವಾದ್ರೆ ಏನ್ ಮಾಡ್ತೆವೆ. ಬಹುತೇಕರು ನೀರು ಕುಡಿದು ಮಲಗುತ್ತಾರೆ. ಇಲ್ಲ ಅಡುಗೆ ಮನೆಯಲ್ಲಿ ಏನಾದರೂ ತಿನ್ನೋದಿಕೆ ಇದ್ಯಾ ಅಂತ ನೋಡುತ್ತಾರೆ. ಮತ್ತೆ ಕೆಲವರು ಚಿಪ್ಸ್‌ ಮುಂತಾದ ಜಂಕ್ ಫುಡ್ ತಿನ್ನುತ್ತಾರೆ. ಇನ್ನೂ ಕೆಲವರು ಎದ್ದೇಳೋದು ಯಾರು ಅಂತ ಬೆಡ್‌ಶೀಟ್ ಹೊದ್ದು ಮತ್ತೆ ಮಲಗುತ್ತಾರೆ. ನೀವೇನ್ ಮಾಡ್ತಿರಾ ಆಮೇಲೆ ಕಾಮೆಂಟ್ ಮಾಡಿ. 

ಮನುಷ್ಯರಂತೆ ನಾಯಿಗಳಿಗೂ ಹಸಿವಾಗುತ್ತದೆ. ಅದರಲ್ಲೂ ಕೆಲವು ಕ್ರಾಸ್‌ ಬ್ರಿಡ್ ಶ್ವಾನಗಳು ಹಸಿವು ಆದ್ರಂತೂ ಸುಮ್ಮನೆ ಕುಳಿತುಕೊಳ್ಳೋದೆ ಇಲ್ಲ. ಬೊಬ್ಬೆ ಹಾಕಿ ಜಗಳ ಮಾಡಿ ಮಾಲೀಕರು ಊಟ ಹಾಕುವವರೆಗೆ ಬೊಬ್ಬೆ ಹೊಡೆಯುತ್ತಲೇ ಇರುತ್ತವೆ. ಅದೇ ರೀತಿ ಇಲ್ಲೊಂದು ಕಡೆ ಹಸಿವು ತಡೆದುಕೊಳ್ಳದೇ ಶ್ವಾನವೊಂದು ಏನು ಮಾಡಿದೆ ನೋಡಿ. ಈ ವೀಡಿಯೋ ನೋಡಿದ್ರೆ ನಗು ತಡೆಯಲಾಗದು. 

ಅಂದಹಾಗೆ ಟ್ವಿಟ್ಟರ್‌ನಲ್ಲಿ ಈ 28 ಸೆಕೆಂಡ್‌ನ ವೀಡಿಯೋವನ್ನು Buitengebieden @buitengebieden ಎಂಬ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು, ಶ್ವಾನ ಮಾಡಿದ ಕಿತಾಪತಿಗೆ ನಿದ್ದೆಯಲ್ಲಿದ್ದ ಮಾಲೀಕ ಬೆಚ್ಚಿ ಬಿದ್ದಿದ್ದಾನೆ. ಆತನಿಗೆ ಏನಾಗಿದೆ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಹಲವು ನಿಮಿಷಗಳು ಹಿಡಿದಿವೆ. ಈ ವೀಡಿಯೋವನ್ನು 36 ಮಿಲಿಯನ್‌ಗೂ ಅಧಿಕ ಜನ ವೀಕ್ಷಿಸಿದ್ದಾರೆ. ಹಾಗಂತ ಈ ಶ್ವಾನವೇನು ಅಂತಹ ಅನಾಹುತವೇನು ಮಾಡಿಲ್ಲ, ಕೇವಲ ಘೋರ ನಿದ್ದೆಯಲ್ಲಿದ್ದ ಮಾಲೀಕನನ್ನು ಎಬ್ಬಿಸಿದೆ. ಅದು ಎಬ್ಬಿಸಿದ ಸ್ಟೈಲ್ ಮಾತ್ರ ಸ್ವಲ್ಪ ಡಿಫರೆಂಟ್ ಆಗಿತ್ತು ಅಷ್ಟೇ ಇದೇ ಕಾರಣಕ್ಕೆ ಮಾಲೀಕ ಬೆಚ್ಚಿ ಬಿದ್ದಿದ್ದಾನೆ.

ವೀಡಿಯೋದಲ್ಲಿ ಏನಿದೆ?
ಹಸಿವು ತಡೆಯಲಾಗದ ಶ್ವಾನ ಗಾಢ ನಿದ್ದೆಯಲ್ಲಿದ್ದ ಮಾಲೀಕನನ್ನು ಎದ್ದೇಳಿಸುವ ಪ್ರಯತ್ನ ಮಾಡಿದ್ದು, ಅದಕ್ಕೆ ಕಂಡುಕೊಂಡ ಉಪಾಯ ಎಲ್ಲರ ಮೊಗದಲ್ಲಿ ನಗು ಮೂಡಿಸುತ್ತಿದೆ. ಸೀದಾ ಹೋಗಿ ತನ್ನ ಊಟದ ಬಟ್ಟಲನ್ನು ಬಾಯಿಯಲ್ಲಿ ಕಚ್ಚಿಕೊಂಡು ಬಂದ ಶ್ವಾನ ಅದನ್ನು ಮಾಲೀಕನ ಹಾಸಿಗೆ ಬಳಿಗೆ ತಂದಿದ್ದು, ಬಳಿಕ ಅದನ್ನು ಹಾಸಿಗೆ ಮೇಲೆ ಕುಳಿತು ಕೆಳಗಿನ ನೆಲಕ್ಕೆ ಎತ್ತ ಹಾಕಿದೆ. ಇದರಿಂದ ಮಾಲೀಕ ಬಾಂಬ್ ಏನಾದ್ರೂ ಬಿತ್ತಾ ಎಂಬಂತೆ ಬೆಚ್ಚಿ ಬಿದ್ದು ಎದ್ದು ಕುಳಿತಿದ್ದಾನೆ. ಆತ ಏನಾಗಿರ್ಬಹುದು ಎಂದು ಯೋಚಿಸುತ್ತಿದ್ದರೆ,ಇತ್ತ ಶ್ವಾನ ಮಾತ್ರ ಏನೂ ತಿಳಿಯದರಂತೆ ಅತ್ತಿತ್ತ ಓಡಾಡುತ್ತಾ ಮುಗ್ಧನಂತೆ ಕುಳಿತಿದೆ. ಈ ವೀಡಿಯೋ ನೋಡಿದ ಅನೇಕ ಶ್ವಾನ ಪ್ರೇಮಿಗಳು ತಮಗಾದ ಅನುಭವವನ್ನು ಹೇಳಿಕೊಂಡಿದ್ದಾರೆ. ಜೊತೆಗೆ ಕೆಲವು ವೀಡಿಯೋಗಳನ್ನುಹಂಚಿಕೊಂಡಿದ್ದಾರೆ. ಹಸಿವಾದ್ರೆ ಶ್ವಾನಗಳ ಪ್ರೀತಿ ಜಾಸ್ತಿಯಾಗುತ್ತೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಶ್ವಾನ ತುಂಬಾ ಸ್ಮಾರ್ಟ್ ಆಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅಂದಹಾಗೆ ಶ್ವಾನದ ಈ ಬುದ್ಧಿವಂತಿಕೆಯ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಹೊಸ ವರ್ಷಕ್ಕೆ ಈ ರಾಶಿಗೆ ಹೊಸ ಪ್ರೀತಿ, ಸಂಗಾತಿ ಭಾಗ್ಯ
19ರ ತರುಣನ ಜೊತೆ ಮಗಳ ಮದುವೆಗೆ ನಿರಾಕರಿಸಿದ ಪ್ರೇಯಸಿ ಮನೆಯವರು: ಕರೆಂಟ್ ಟವರ್ ಏರಿ ಪ್ರಿಯಕರನ ಹೈಡ್ರಾಮಾ