ಆರು ವರ್ಷವಾದರೂ ಆಗದ ಫರ್ಸ್ಟ್ ನೈಟ್, 2 ತಿಂಗಳ ಒಳಗಾಗಿ ಗಂಡನ ಮನೆಯನ್ನು ಖಾಲಿ ಮಾಡಿ ಎಂದ ಕೋರ್ಟ್!

Published : Jun 03, 2022, 01:38 PM ISTUpdated : Jun 03, 2022, 02:17 PM IST
ಆರು ವರ್ಷವಾದರೂ ಆಗದ ಫರ್ಸ್ಟ್ ನೈಟ್, 2 ತಿಂಗಳ ಒಳಗಾಗಿ ಗಂಡನ ಮನೆಯನ್ನು ಖಾಲಿ ಮಾಡಿ ಎಂದ ಕೋರ್ಟ್!

ಸಾರಾಂಶ

ಒಡಿಶಾದ ಪ್ರಖ್ಯಾತ ಜೋಡಿ ಅನುಭವ್ ಮೊಹಾಂತಿ ಹಾಗೂ ವರ್ಷಾ ಪ್ರಿಯದರ್ಶಿನಿ ಜೋಡಿಯ ನಡುವಿನ ದಾಂಪತ್ಯ ಕಲಹ ಇಡೀ ಭಾರತದಲ್ಲಿ ದೊಡ್ಡ ಚರ್ಚೆಯಾಗಿದೆ. ಆದರೆ, ಇವರಿಬ್ಬರ ಪ್ರಖ್ಯಾತಿಯನ್ನು ಗಮನದಲ್ಲಿಟ್ಟುಕೊಂಡಿರುವ ಕೋರ್ಟ್, ಯಾವುದೇ ಕಾರಣಕ್ಕೂ ನಿಮ್ಮಿಬ್ಬರ ಕುಟುಂಬ ಕಲಹದ ಯಾವುದೇ ವಿಡಿಯೋ ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದು ಎಂದು ಆದೇಶ ನೀಡಿದೆ  

ಕಟಕ್ (ಜೂನ್ 3): ಲೋಕಸಭಾ ಸಂಸದ ಅನುಭವ್ ಮೊಹಾಂತಿ (Anubhav Mohanty) ಹಾಗೂ ಒಡಿಶಾದ ಪ್ರಖ್ಯಾತ ನಟಿ ವರ್ಷಾ ಪ್ರಿಯದರ್ಶಿನಿ  (Varsha Priyadarshini) ನಡುವಿನ ದಾಂಪತ್ಯ ಕಲಹ (Marital Dispute) ಬೀದಿಜಗಳವಾಗಿ ಮಾರ್ಪಟ್ಟಿರುವುದು ಗೊತ್ತಿದೆ. ಪತ್ನಿಯ ಕುರಿತಾಗಿ ಎಲ್ಲಾ ಮಾಹಿತಿಗಳನ್ನು ಅನುಭವ್ ಮೊಹಾಂತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದರ ಬೆನ್ನಲ್ಲಿಯೇ ಕೋರ್ಟ್ ನಲ್ಲಿ ಅನುಭವ್ ಮೊಹಾಂತಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಒಡಿಶಾದ ಕಟಕ್ ಜಿಲ್ಲೆಯ ಉಪ-ವಿಭಾಗ  ಮ್ಯಾಜಿಸ್ಟ್ರೇಟ್ (SDJM) ನ್ಯಾಯಾಲಯ ಗುರುವಾರ ತನ್ನ ತೀರ್ಪು ನೀಡಿದೆ.

ಮುಂದಿನ ಎರಡು ತಿಂಗಳ ಒಳಗಾಗಿ ವರ್ಷಾ ಪ್ರಿಯದರ್ಶಿನಿ ತನ್ನ ಗಂಡನ ಮನೆಯನ್ನು ಖಾಲಿ ಮಾಡಬೇಕು ಎಂದು ತೀರ್ಪು ನೀಡಿದ್ದಲ್ಲದೆ, ಪ್ರತಿ ತಿಂಗಳ 10ಕ್ಕೆ ವರ್ಷಾ ಪ್ರಿಯದರ್ಶಿನಿ ಅವರ ವಾಸದ ಖರ್ಚಿಗಾಗಿ ಅನುಭವ್ ಮೊಹಾಂತಿ 30 ಸಾವಿರ ರೂಪಾಯಿಯನ್ನು ನೀಡಬೇಕು ಎಂದು ತಿಳಿಸಿದೆ. ಅದಲ್ಲದೆ, ಇಬ್ಬರ ಸಂಸಾರದ ಕುರಿತಾಗಿ ಯಾವುದೇ ಚಿತ್ರ ಹಾಗೂ ವಿಡಿಯೋಗಳನ್ನು ಇವರಿಬ್ಬರಲ್ಲಿ ಯಾರೂ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಬಾರದು ಎಂದು ಸೂಚನೆ ನೀಡಿದೆ.

ಹಣಕಾಸು ಪರಿಹಾರ ದೊರೆತ ಎರಡು ತಿಂಗಳ ಒಳಗಾಗಿ ಅಭಿನವ್ ಅವರ ನಿವಾಸವನ್ನು ವರ್ಷಾ ತೊರೆಯಬೇಕು ಎಂದು ತಿಳಿಸಿದೆ. ನಾನು ವರ್ಷಾಗೆ ಹಣಕಾಸು ವ್ಯವಸ್ಥೆ ಮಾಡಲು ಸಿದ್ಧವಿದ್ದು ಆಕೆಗೆ ಮನೆಯನ್ನು ತೊರೆಯುವಂತೆ ಹೇಳಿ ಎಂದು ಅನುಭವ್ ಈ ಮೊದಲು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅದರೊಂದಿಗೆ ವರ್ಷಾ ಅವರ ಆದಾಯ ಮೂಲಗಳೇನು ಎನ್ನುವ ಬಗ್ಗೆಯೂ ತಿಳಿಸಬೇಕು ಎಂದು ಅರ್ಜಿ ಹಾಕಿದ್ದರು. ಇದರಿಂದಾಗಿ ಆಕೆಗೆ ಹಣಕಾಸು ನೆರವು ನೀಡುವ ಬಗ್ಗೆ ನನಗೆ ಸೂಕ್ತ ಮಾಹಿತಿ ಸಿಗಲಿದೆ ಎಂದಿದ್ದರು. ಕಳೆದ ವಾರ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ್ದ ಕೋರ್ಟ್, ಗುರುವಾರ ತೀರ್ಪು ಪ್ರಕಟ ಮಾಡಿದೆ. "ವರ್ಷಾ ಈಗ ಉಳಿದುಕೊಂಡಿರುವ ಮನೆ ಅನುಭವ್ ಅವರ ಅಜ್ಜ ಹಾಗೂ ಸಹೋದರರಿಗೆ ಸೇರಿದ್ದು. ಇದು ಅಜ್ಜನ ಆಸ್ತಿಯಾಗಿರುವ ಕಾರಣ, ಕೋರ್ಟ್ ಆಕೆಗೆ ಮನೆಯನ್ನು ಖಾಲಿ ಮಾಡುವಂತೆ ಹೇಳಿದೆ ಎಂದು ಅನುಭವ್ ಪರ ವಕೀಲ ಅಲೋಕ್ ಕುಮಾರ್ ಮಹಾಪಾತ್ರ ತಿಳಿಸಿದ್ದಾರೆ.

ಏನಿದು ಪ್ರಕರಣ:  ಒಡಿಯಾ ಚಿತ್ರಗಳಲ್ಲಿ ದೊಡ್ಟ ಮಟ್ಟದ ಹೆಸರು ಗಳಿಸಿದ ಬಳಿಕ ಅನುಭವ್ ಮೊಹಾಂತಿ, ರಾಜ್ಯ ಪ್ರಖ್ಯಾತ ನಟಿ ವರ್ಷಾ ಪ್ರಿಯದರ್ಶಿನಿಯನ್ನು 2014ರಲ್ಲಿ ವಿವಾಹವಾಗಿದ್ದರು. ಆದರೆ, ಮದುವೆಯಾದ ಬಳಿಕ ಇಬ್ಬರ ನಡುವೆ ಮನಸ್ತಾಪ ಆರಂಭವಾಗಿತ್ತು. 2016ರಲ್ಲಿ ಅನುಭವ್ ಮೊಹಾಂತಿ ಪತ್ನಿಯ ವಿರುದ್ಧ ಮೊದಲ ಬಾರಿಗೆ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಮದುವೆಯಾಗಿ ಎರಡು ವರ್ಷವಾಗಿದ್ದರೂ, ನನ್ನೊಂದಿಗೆ ಸೆಕ್ಸ್ ನಲ್ಲಿ ಪಾಲ್ಗೊಳ್ಳಲು ವರ್ಷಾ ನಿರಾಕರಿಸುತ್ತಿದ್ದಾಳೆ. ಗಂಡ-ಹೆಂಡತಿಯ ಸಂಬಂಧದಲ್ಲಿ ಇದು ಸಾಮಾನ್ಯ ಕ್ರಿಯೆ. ಆದರೆ, ಆಕೆಯೊಂದಿಗೆ ಲೈಂಗಿಕತೆ ನಡೆಸುವ ಪ್ರತಿ ಪ್ರಯತ್ನಕ್ಕೂ ಆಕೆಯಿಂದಲೇ ವಿರೋಧ ವ್ಯಕ್ತವಾಗುತ್ತಿದೆ' ಎಂದು ಹೇಳಿದ್ದರು.

Divorce Fight ಮದ್ವೆಯಾಗಿ 6 ವರ್ಷವಾದ್ರೂ ನಡೆದಿಲ್ಲ ಫಸ್ಟ್ ನೈಟ್, ಬೀದಿಜಗಳವಾದ ಸೆಲೆಬ್ರೆಟಿ ಡಿವೋರ್ಸ್!

ಇದರ ಬೆನ್ನಲ್ಲಿಯೇ ವರ್ಷಾ ಪ್ರಿಯದರ್ಶಿನಿ ಕೂಡ ಅನುಭವ್ ಮೊಹಾಂತಿ, ನಾನು ತಾಯಿಯಾಗಬೇಕು ಎನ್ನುವ ನಿಟ್ಟಿನಲ್ಲಿ ಅತಿಯಾದ ಒತ್ತಡ ಹೇರುತ್ತಿದ್ದಾನೆ. ಅದಲ್ಲದೆ, ಆತ ನಿತ್ಯವೂ ಕುಡಿಯುತ್ತಾನೆ. ಹಲವು ಹುಡುಗಿಯರ ಜೊತೆ ಸಂಬಂಧವೂ ಇದೆ ಎಂದು ಆರೋಪಿಸಿದ್ದರು. 

ಒಡಿಯಾದ ಸುಪ್ರಸಿದ್ಧ ನಟನಾಗಿದ್ದ ಅನುಭವ್ ಮೊಹಾಂತಿ, 2013ರಲ್ಲಿ ರಾಜಕೀಯದ ಕಣಕ್ಕೆ ಇಳಿದಿದ್ದರು. ಬಿಜು ಜನತಾದಳದ ನಾಯಕರಾಗಿರುವ ಅನುಭವ್ ಮೊಹಾಂತಿ, 2014ರಲ್ಲಿ ರಾಜ್ಯಸಭೆ ಸಂಸದರಾಗಿ ಒಡಿಶಾ ಸರ್ಕಾರದಿಂದ ಆಯ್ಕೆಯಾಗಿದ್ದರು. 2019ರಲ್ಲಿ ಬಿಜು ಜನತಾದಳದಿಂದ ಕೇಂದ್ರಪರ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಅನುಭವ್ ಮೊಹಾಂತಿ ಗೆಲುವು ಸಾಧಿಸಿದ್ದರು. ಆದರೆ, ಕುಟುಂಬದ ಸಮಸ್ಯೆಗಳ ಕಾರಣದಿಂದ ಅವರ ರಾಜಕೀಯ ಭವಿಷ್ಯಕ್ಕೂ ಅಡ್ಡಿಯಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Zodiac Love: ನಿಮ್ಮ ಜನ್ಮರಾಶಿಯ ಪ್ರೀತಿಯ ಭಾಷೆ ಇದು!
Karna Serial: ಆ ಒಂದು ಸತ್ಯ ತೇಜಸ್​ಗೆ ಹೇಳಲು ಬಾಯಿ ಬಿದ್ದೋಗಿತ್ತಾ? ಕರ್ಣನ ಮೇಲೆ ಕಿಡಿಕಾರ್ತಿರೋ ವೀಕ್ಷಕರು