
ಹೊಸದಾಗಿರುವಾಗ ಎಲ್ಲವೂ ಖುಷಿ ನೀಡುತ್ತದೆ. ಅದರಲ್ಲಿ ಸಂಬಂಧವೂ ಹೊರತಾಗಿಲ್ಲ. ಸ್ನೇಹ (Friendship) ಸಂಬಂಧವಿರಲಿ ಇಲ್ಲ ದಾಂಪತ್ಯ (Marriage) ವಿರಲಿ, ಆರಂಭದಲ್ಲಿ ಎಲ್ಲವೂ ಇಷ್ಟವಾಗುತ್ತದೆ. ಸಾಮಾನ್ಯವಾಗಿ ಮದುವೆಯಾದ ಆರಂಭದ ದಿನಗಳಲ್ಲಿ ಪತಿ, ಪತ್ನಿ ಜೊತೆ ವಿಶೇಷ ಸಮಯ ಕಳೆಯಲು ಬಯಸ್ತಾನೆ. ಹಾಗೆಯೇ ಪತ್ನಿ ಹೇಳಿದ ಎಲ್ಲ ವಿಷ್ಯಕ್ಕೆ ತಲೆಯಾಡಿಸ್ತಾನೆ. ಆದರೆ ಕ್ರಮೇಣ ಪತಿಗೆ ಸಂಬಂಧಿಸಿದಂತೆ ಕೆಲವು ಅಚ್ಚರಿ ವಿಷ್ಯಗಳು ಮುಂಚೂಣಿಗೆ ಬರುತ್ತವೆ. ಅದರಲ್ಲೂ ಮದುವೆಯಾದ ಕೆಲ ದಿನಗಳ ನಂತ್ರ ಗಂಡ (Husband) ನ ನಡುವಳಿಕೆ ಬದಲಾಗುತ್ತಿರುವುದನ್ನು ಕಂಡು ಹೆಂಡತಿ ಬೆಚ್ಚಿ ಬೀಳ್ತಾಳೆ. ಆಗ್ಲೇ ಆಕೆಗೆ ಗೊತ್ತಾಗೋದು ತನ್ನ ಹುಡುಗ ಅಮ್ಮನ ಮಗನೆಂದು. ಅಮ್ಮನ ಮಗ ಅಂದ್ರೆ ಮತ್ತೇನೂ ಅಲ್ಲ, ಪ್ರತಿ ಬಾರಿ, ಪ್ರತಿ ಕೆಲಸ ಮಾಡುವಾಗ್ಲೂ ತಾಯಿ (Mother) ಯ ಸಲಹೆ ಪಡೆಯುವುದು. ತಾಯಿಯನ್ನು ಅಂಥ ಹುಡುಗ್ರು ಎಷ್ಟು ಪ್ರೀತಿಸ್ತಾರೆಂದ್ರೆ ತಾಯಿ ಹೇಳಿದ್ರೆ ಮಾತ್ರ ಅವರು ಯಾವುದೇ ಕೆಲಸವನ್ನಾದ್ರೂ ಮಾಡ್ತಾರೆ. ತಾಯಿಗೆ ಹೇಳದೆ ಯಾವುದೇ ಕೆಲಸ ಮಾಡೋದಿಲ್ಲ. ಹಾಗೆ ಆಕೆ ಬೇಡವೆಂದ ಕೆಲಸವನ್ನು ಕೂಡ ಮಾಡೋದಿಲ್ಲ. ತನ್ನ ಜೀವನದ ಪ್ರತಿಯೊಂದು ವಿಷ್ಯವನ್ನು ತಾಯಿ ಮುಂದೆ ಹೇಳ್ತಾರೆ. ಅಮ್ಮನನ್ನು ಸದಾ ಮಿಸ್ ಮಾಡಿಕೊಳ್ತಾರೆ. ಪತ್ನಿ ಮಾತಿಗಿಂತ ತಾಯಿಯ ಮಾತಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ನಿಸ್ಸಂಶಯವಾಗಿ, ಇದು ನಿಮ್ಮ ಸಂಬಂಧದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಅಮ್ಮನ ಮಗ ಜೊತೆ ಸಂಸಾರ ನಡೆಸಬೇಕೆಂದ್ರೆ ಪತ್ನಿಯಾದವಳು ಕೆಲವೊಂದು ಬದಲಾಣೆ ಮಾಡಬೇಕಾಗುತ್ತದೆ. ಆಗ್ಲೇ ಸಂಬಂಧ ಗಟ್ಟಿಯಾಗಲು ಸಾಧ್ಯ.
ಅಮ್ಮನ ಮಗನಾಗಿರುವ ನಿಮ್ಮ ಪತಿ ಜೊತೆ ಹೇಗೆ ನಡೆದುಕೊಳ್ಳಬೇಕು ಗೊತ್ತಾ? :
ಅಡುಗೆ ಬಗ್ಗೆ ಇರಲಿ ವಿಶೇಷ ಗಮನ : ಸಾಮಾನ್ಯವಾಗಿ ಎಲ್ಲರೂ ಅಮ್ಮನ ಅಡುಗೆಯನ್ನು ಇಷ್ಟಪಡ್ತಾರೆ. ಆಗಾಗ ಅಮ್ಮನ ಕೈ ರುಚಿಯನ್ನು ನೆನಪು ಮಾಡಿಕೊಳ್ತಾರೆ. ಆದ್ರೆ ಅಮ್ಮನ ಮಗ ಇದ್ರಲ್ಲಿ ಎತ್ತಿದ ಕೈ. ಪ್ರತಿ ಅಡುಗೆಯಲ್ಲೂ ಅಮ್ಮನ ರುಚಿ ಹುಡುಕಲು ಪ್ರಯತ್ನಿಸುತ್ತಾರೆ. ನೀವು ಅಡುಗೆ ಮಾಡಿದಾದ ಅದ್ರ ರುಚಿ ಸರಿಯಾಗಿಲ್ಲವೆಂದು, ಅಮ್ಮನ ಅಡುಗೆ ಮಿಸ್ ಮಾಡಿಕೊಳ್ತಿದ್ದೇನೆಂದು ಆತ ಹೇಳಿದ್ರೆ ಇದಕ್ಕೆ ಕೋಪಗೊಳ್ಳಬೇಡಿ. ಪತಿ ಜೊತೆ ಜಗಳಕ್ಕೆ ಇಳಿಯಬೇಡಿ. ಪತಿಯ ಈ ವರ್ತನೆ ನಿಮಗೆಷ್ಟು ಬೇಸರ ತಂದಿದೆ ಎಂಬುದನ್ನು ಅವರಿಗೆ ವಿವರಿಸುವ ಪ್ರಯತ್ನ ಮಾಡಿ. ಇಬ್ಬರು ಒಂದೇ ರುಚಿ ನೀಡುವುದು ಸಾಧ್ಯವಿಲ್ಲ. ನಿಮಗೆ ಬಂದ ಅಡುಗೆಯನ್ನು ರುಚಿಯಾಗಿ ಮಾಡುವ ಪ್ರಯತ್ನ ನಡೆಸಿದ್ದೇನೆ ಎಂದು ಅವರಿಗೆ ಅರ್ಥೈಸಿ.
ಗಂಡನ್ನೇ ಸರ್ವಸ್ವ ಅನ್ನೋರು ಪತಿರಾಯನನ್ನು ಸರಿಯಾಗಿ ನೋಡ್ಕೊಳ್ಳೋದು ಹೇಗೆ ತಿಳ್ಕೊಳ್ಳಿ
ತಾಳ್ಮೆ ಬಹಳ ಮುಖ್ಯ : ಅಮ್ಮನ ಮಗ, ಪದೇ ಪದೇ ತಾಯಿ ಹಾಗೂ ಪತ್ನಿ ಕೆಲಸವನ್ನು ಹೋಲಿಕೆ ಮಾಡಲು ಶುರು ಮಾಡ್ತಾರೆ. ಇದ್ರಿಂದ ಕೋಪ ಬರುವುದು ಸಾಮಾನ್ಯ. ಮನೆ ಕೆಲಸದಿಂದ ಹಿಡಿದು, ಮನೆ ವಸ್ತುಗಳನ್ನು ಖರೀದಿವರೆಗೆ ಎಲ್ಲದಕ್ಕೂ ಅಮ್ಮನ ಜೊತೆ ಹೋಲಿಕೆ ಮಾಡಿದ್ರೆ ಅಸಮಾಧಾನವಾಗುತ್ತದೆ. ಆದ್ರೆ ಈ ಸಂದರ್ಭದಲ್ಲಿ ತಾಳ್ಮೆ ಬಹಳ ಮುಖ್ಯ. ಪತಿ ಹೋಲಿಕೆ ಮಾಡಿದ ತಕ್ಷಣ ಕೋಪಗೊಂಡು ತಿರುಗಿ ಉತ್ತರ ನೀಡಬೇಡಿ. ತಾಳ್ಮೆಯಿಂದ ಅವರ ಬಳಿ ಹೋಗಿ, ಕೆಲಸದಲ್ಲಿ ವ್ಯತ್ಯಾಸವಿರುತ್ತದೆ. ಅವರು ಕಲಿತ ವಿಧಾನ, ಅವರ ಅನುಭವ ಬೇರೆ, ನನ್ನ ಅನುಭವ ಬೇರೆಯಾಗಿದೆ ಎಂದು ಅವರಿಗೆ ತಿಳಿ ಹೇಳಿ.
ಕೆಲಸ ಮಾಡಲು ಪತಿಗೆ ಬಿಡಿ : ಮದುವೆಗೆ ಮೊದಲು ತಾಯಂದಿರು ಎಲ್ಲ ಕೆಲಸವನ್ನು ಮಾಡಿರ್ತಾರೆ. ಇದ್ರಿಂದ ಅವರಿಗೆ ಎಲ್ಲವೂ ಅಭ್ಯಾಸವಾಗುತ್ತದೆ. ಆದ್ರೆ ಮದುವೆ ನಂತ್ರ ನಿಮ್ಮ ಕೆಲಸ, ಮನೆ ಕೆಲಸದ ಜೊತೆ ಅವರ ಕೆಲ ಕೆಲಸ ಮಾಡುವುದು ನಿಮಗೆ ಕಷ್ಟವಾಗುತ್ತದೆ. ಇದನ್ನು ನೀವು ಅವರಿಗೆ ಹೇಳಬೇಕು. ನಿಧಾನವಾಗಿ ಅವರು ತಮ್ಮ ಕೆಲಸ ಮಾಡಲು ಕಲಿಯುತ್ತಾರೆ. ಅವರಿಗೆ ಜವಾಬ್ದಾರಿ ಕೂಡ ಹೆಚ್ಚಾಗುತ್ತದೆ. ಪ್ರೀತಿಯಿಂದ ನೀವು ಅವರಿಗೆ ಕೆಲಸವನ್ನು ಕಲಿಸಬೇಕಾಗುತ್ತದೆ.
Reason for Divorce: ಜೊತೆಯಾಗಿ ಹಿತವಾಗಿ ನಡೆವ ಆಸೆಯಿದ್ರೂ ದಂಪತಿ ದೂರವಾಗೋದ್ಯಾಕೆ?
ಸಕಾರಾತ್ಮಕ ಭಾವನೆ : ಅಮ್ಮನ ಮಗನನ್ನು ನೀವು ಭಾವನಾತ್ಮಕವಾಗಿ ನಿಭಾಯಿಸಬೇಕಾಗುತ್ತದೆ. ತಾಯಿಗೆ ನೋವುಂಟಾಗುವುದನ್ನು ಅವರು ಸಹಿಸುವುದಿಲ್ಲ. ನೀವು ಎಲ್ಲವನ್ನೂ ಸಕಾರಾತ್ಮಕವಾಗಿ ಭಾವಿಸ್ಬೇಕು. ಅತ್ತೆ ಜೊತೆ ನಿಮ್ಮ ಬಂಧವನ್ನು ಬಲಪಡಿಸಬೇಕು. ಅವರ ಮೂಲಕ ಪತಿಗೆ ಹತ್ತಿರವಾಗಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.