ನಿಮ್ಮ ಸಂಗಾತಿಯಲ್ಲಿ ಪ್ರಾಮಾಣಿಕತೆ ಇದೆಯೇ? ಅದನ್ನು ಹೇಗೆ ಚೆಕ್ ಮಾಡುವುದು ಎನ್ನುವ ಚಿಂತೆ ನಿಮ್ಮದಾಗಿದ್ದರೆ ಬಿಟ್ಟುಬಿಡಿ. ಹೆಣ್ಣುಮಕ್ಕಳಲ್ಲಿರುವ ಪ್ರಾಮಾಣಿಕತೆಯನ್ನು ಈ ಕೆಲವು ಗುಣಲಕ್ಷಣಗಳ ಮೂಲಕ ಅರಿತುಕೊಳ್ಳಬಹುದು. ಬಳಿಕ, ನಿಮ್ಮ ಸಂಗಾತಿಯ ಪ್ರಾಮಾಣಿಕತೆಯ ಬಗ್ಗೆ ಹೆಮ್ಮೆ ಪಡಿ. ಹಾಗೂ ನೀವೂ ಆಕೆಯನ್ನು ಇನ್ನಷ್ಟು ಅರ್ಥೈಸಿಕೊಳ್ಳಿ.
ಸಂಗಾತಿಗಳಲ್ಲಿ ಯಾರಾದರೂ ಒಬ್ಬರು ಅಪ್ರಾಮಾಣಿಕರಾಗಿದ್ದರೆ ಸಾಕು, ಸಂಬಂಧ ಕುಸಿಯತೊಡಗುತ್ತದೆ. ದಾಂಪತ್ಯದಲ್ಲೂ ಅಷ್ಟೆ. ಯಾರಾದರೂ ಒಬ್ಬರಲ್ಲಿ ಪ್ರಾಮಾಣಿಕತೆ ಇಲ್ಲವಾದರೆ ಸಂಬಂಧದಲ್ಲಿ ಆಪ್ತತೆ ಇರುವುದಿಲ್ಲ. ಅನುಮಾನಗಳು ಕಾಡುತ್ತವೆ. ಹೀಗಾಗಿ, ನೆಮ್ಮದಿಯ ಜೀವನಕ್ಕೆ ಪ್ರಾಮಾಣಿಕ ಸಂಗಾತಿ ಅತ್ಯಂತ ಅಗತ್ಯ. ಇಂದಿನ ಯುವಜನತೆ ಸಾಕಷ್ಟು ಜನರೊಂದಿಗೆ ಡೇಟಿಂಗ್ ನಡೆಸುವುದು ಸಾಮಾನ್ಯವಾಗಿದೆ. ಆದರೆ, ಒಬ್ಬರೇ ಪ್ರಾಮಾಣಿಕ ಸಂಗಾತಿಯನ್ನು ಹುಡುಕಿಕೊಳ್ಳಲು ವಿಫಲರಾಗುವುದು ಕಂಡುಬರುತ್ತದೆ. ಹುಡುಗಿಯರು ಪ್ರಾಮಾಣಿಕರಾಗಿದ್ದರೆ ಅವರಲ್ಲಿ ಕೆಲವು ಗುಣಗಳು ಸಾಮಾನ್ಯವಾಗಿರುತ್ತದೆ. ವೃತ್ತಿ, ಗುರಿ ಹಾಗೂ ಇಡೀ ಜೀವನದ ಬಗ್ಗೆ ಅವರ ದೃಷ್ಟಿಕೋನ ಗಂಭೀರವಾಗಿರುತ್ತದೆ ಹಾಗೂ ಪ್ರಾಮಾಣಿಕವಾಗಿರುತ್ತದೆ. ದೀರ್ಘ ಬದುಕಿನ ಕುರಿತು ಅವರು ಚಿಂತನೆ ನಡೆಸಬಲ್ಲರು. ನಿಮ್ಮ ಮಹಿಳಾ ಸಂಗಾತಿ ಪ್ರಾಮಾಣಿಕವಾಗಿದ್ದರೆ ಈ ಕೆಲವು ಗುಣಗಳ ಮೂಲಕ ಅದನ್ನು ಅರಿತುಕೊಳ್ಳಬಹುದು. ಅವರು ಕುಟುಂಬ, ಸ್ನೇಹಿತರು ಹಾಗೂ ಇತರ ಮುಖ್ಯವಾದ ಅಂಶಗಳಲ್ಲಿ ತಮ್ಮದೇ ಆದ ಚಿಂತನಾಕ್ರಮ ಹೊಂದಿರುತ್ತಾರೆ. ನೀವು ಸಿನ್ಸಿಯರ್ ಮಹಿಳೆಯೊಂದಿಗೆ ಇದ್ದೀರಿ ಎನ್ನುವುದನ್ನು ಈ ಕೆಲವು ಲಕ್ಷಣಗಳ ಮೂಲಕ ಅರಿತುಕೊಳ್ಳಿ.
• ಚೆನ್ನಾಗಿ ಕಮ್ಯೂನಿಕೇಟ್ (Good Communicate) ಮಾಡ್ತಾರೆ
ಪ್ರಾಮಾಣಿಕ ಮಹಿಳೆಯರು (Sincere Woman) ಅನುಮಾನಕ್ಕೆ ಎಡೆ ಇಲ್ಲದಂತೆ ಚೆನ್ನಾಗಿ ಸಂವಹನ ನಡೆಸುತ್ತಾರೆ. ಸಂಬಂಧದ (Relation) ಆರೋಗ್ಯಕ್ಕೆ ಉತ್ತಮ ಸಂವಹನ ಅತಿ ಅಗತ್ಯ. ಪ್ರಾಮಾಣಿಕ ಮಹಿಳೆಯರು ಯಾವುದಾದರೂ ವಿಷಯವನ್ನು ಚರ್ಚೆ (Discuss) ಮಾಡಬಲ್ಲರು ಹಾಗೂ ನಿಮ್ಮನ್ನು ಗೊಂದಲಕ್ಕೆ ದೂಡುವುದಿಲ್ಲ. ತಮ್ಮ ಮನದಲ್ಲೇನಿದೆ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸುತ್ತಾರೆ. ಅಧ್ಯಯನಗಳ (Study) ಪ್ರಕಾರ, ಸಂಬಂಧದಲ್ಲಿ ಮನಃಪೂರ್ವಕವಾಗಿ ಮಾತನಾಡುವುದು ಅತ್ಯಂತ ಮುಖ್ಯ. ಇದರಿಂದ ತೃಪ್ತಿ (Satisfaction) ದೊರೆಯುತ್ತದೆ. ಸಂವಹನವಿಲ್ಲದ ಸಂಬಂಧ ಸೊರಗುತ್ತದೆ.
undefined
Relationship Tips: ನೀವಿಬ್ಬರು ಜೊತೆಗಿರಲು ಸಾಧ್ಯಾನೇ ಇಲ್ಲ ಅನ್ನೋ ಸೂಚನೆಯಿದು!
• ತಾಳ್ಮೆ (Patient) ಇರುತ್ತದೆ, ಮೌನದಲ್ಲೂ ಕಂಫರ್ಟ್ (Comfort) ಆಗಿರ್ತಾರೆ
ಕೆಲವು ಮಹಿಳೆಯರು ನಾನ್ ಸ್ಟಾಪ್ ಮಾತುಕತೆ (Talk) ನಡೆಸಲು ಇಷ್ಟಪಡುತ್ತಾರೆ. ನಿಮ್ಮಿಂದಲೂ ಅದನ್ನೇ ನಿರೀಕ್ಷೆ ಮಾಡುತ್ತಾರೆ. ಹಾಗೆಂದು ಅವರಲ್ಲಿ ಪ್ರಾಮಾಣಿಕತೆ ಇಲ್ಲವೆಂದಲ್ಲ. ಆದರೆ, ಸಾಮಾನ್ಯವಾಗಿ, ಪ್ರಾಮಾಣಿಕ ಮಹಿಳೆಯರು ಹೆಚ್ಚು ಮಾತನಾಡಲು ಇಷ್ಟಪಡದೆ ಇರಬಹುದು. ಮೌನದೊಂದಿಗೆ (Silence) ಅವರು ಕಂಫರ್ಟ್ ಆಗಿರುತ್ತಾರೆ. ನೀವು ಹೆಚ್ಚು ಮಾತನಾಡದಿದ್ದರೆ ಸುಮ್ಮನಿರುವ ತಾಳ್ಮೆಯೂ ಅವರಲ್ಲಿ ಇರುತ್ತದೆ. ಆತಂಕ, ದುಗುಡದ ಸಮಯದಲ್ಲೂ ತಾಳ್ಮೆಯಿಂದ ವರ್ತಿಸುತ್ತಾರೆ. ಸಂಘರ್ಷವನ್ನು ನಿಭಾಯಿಸುತ್ತಾರೆ.
• ನಿಮಗೆ ಇನ್ನಷ್ಟು ಬಲ (She is Your Strenth)
ನಿಮ್ಮ ಸಂಗಾತಿ (Partner) ನಿಮ್ಮ ಜತೆಗಿದ್ದರೆ ನಿಮಗೆ ಇನ್ನಷ್ಟು ಬಲ ಬರುತ್ತದೆ ಎನ್ನುವ ಭಾವನೆ ನಿಮಗಿದ್ದರೆ ಆಕೆ ಖಂಡಿತವಾಗಿ ಪ್ರಾಮಾಣಿಕಳಾಗಿರುತ್ತಾಳೆ. ಪ್ರಬುದ್ಧ ಹೆಣ್ಣುಮಕ್ಕಳು ತಮ್ಮ ಸಂಗಾತಿಯನ್ನು ಗುರಿಯೆಡೆಗೆ ಸಾಗುವಂತೆ ಪ್ರೋತ್ಸಾಹ ನೀಡುತ್ತಾರೆಯೇ ಹೊರತು ಕಿರಿಕಿರಿ ಮಾಡುವುದಿಲ್ಲ. ನಿಮ್ಮಲ್ಲಿರುವ ಕೆಟ್ಟ ಅಭ್ಯಾಸಗಳ (Bad Habits) ಬಗ್ಗೆ ನೇರವಾಗಿ ಹೇಳಿ ತಿದ್ದಲು ಯತ್ನಿಸುತ್ತಾಳೆ. ನೀವು ನಿಜಕ್ಕೂ ಖುಷಿಯಾಗಿರಬೇಕೆಂದು ಬಯಸುತ್ತಾಳೆ. ಜತೆಗೆ, ನಿಮ್ಮ ಬಗ್ಗೆ ಗೌರವದ (Respect) ಭಾವನೆ ತಳೆದಿರುತ್ತಾಳೆ. ಹಾಗೆಯೇ, ತನ್ನ ಬಗ್ಗೆ ಗೌರವದಿಂದ ನೀವು ವರ್ತಿಸಿಲ್ಲವಾದರೆ ನೇರವಾಗಿ ಹೇಳುತ್ತಾಳೆ. ಕೋಪ (Angry) ಬಂದಾಗಲೂ ಗೌರವದಿಂದಲೇ ಮಾತನಾಡುತ್ತಾಳೆ. ನಿಮ್ಮ ಖಾಸಗಿತನಕ್ಕೂ ಗೌರವ ನೀಡುತ್ತಾಳೆ.
ಸಂಬಂಧ ಚೆನ್ನಾಗಿರ್ಬೇಕಾ? ಮೂರು ವಿಚಾರಗಳನ್ನ ಕಲಿತುಕೊಳ್ಬೇಡಿ
• ಇತರರ ಬಗ್ಗೆ ಡೋಂಟ್ ಕೇರ್, ನೋ ಮೈಂಡ್ ಗೇಮ್ (No Mind Game)
ತಮ್ಮೊಳಗೆ ತಾವು ಕಂಫರ್ಟ್ ಆಗಿರುವ ಮಹಿಳೆಯರು ಹೊರಗಿನ ಮಂದಿ ಯಾರಾದರೂ ಅನಗತ್ಯವಾಗಿ ಟೀಕೆ ಮಾಡಿದರೆ ಡೋಂಟ್ ಕೇರ್ (Don’t Care) ಭಾವನೆ ಹೊಂದಿರುತ್ತಾರೆ. ಜತೆಗೆ, ನಿಮ್ಮೊಂದಿಗೆ ಮೈಂಡ್ ಗೇಮ್ ಆಡುವುದಿಲ್ಲ. ಕೆಲವು ಮಹಿಳೆಯರು ಸಂಗಾತಿಯನ್ನು ಮಣಿಸಲು ಬೇಕೆಂದೇ ಕೋಪಿಸಿಕೊಳ್ಳುವುದು, ನಾಟಕ (Drama) ಮಾಡುವುದು ಮಾಡುತ್ತಿದ್ದರೆ ಇಂತಹ ಕೃತ್ಯಗಳಿಂದ ಇವರು ದೂರವಿರುತ್ತಾರೆ. ಜತೆಗೆ, ಅಪಾರ ಆತ್ಮವಿಶ್ವಾಸ (Confidence) ಹೊಂದಿದ್ದು, ತಮ್ಮ ವ್ಯಕ್ತಿತ್ವವನ್ನು (Personality) ಅರ್ಥ ಮಾಡಿಕೊಂಡಿರುತ್ತಾರೆ. ತಮ್ಮ ಮೌಲ್ಯದ (Value) ಬಗ್ಗೆ ಅರಿವು ಹೊಂದಿದ್ದು, ಅದಕ್ಕೆ ಇತರರ ದೃಢೀಕರಣ ಬಯಸುವುದಿಲ್ಲ. ಅಂದರೆ, ಹೊಗಳುವಿಕೆ ಇವರಿಗೆ ಬೇಕಾಗಿಲ್ಲ.