ದಾಂಪತ್ಯ ಮುರಿದು ಬೀಳಲು ಅನೇಕ ಕಾರಣವಿರುತ್ತದೆ. ಸಂಗಾತಿ ಸನಿಹಕ್ಕೆ ಬರದೆ, ಸಮಯ ನೀಡದೆ, ಪತ್ನಿಯನ್ನು ನಿರ್ಲಕ್ಷ್ಯ ಮಾಡಿ ಆಕೆಯನ್ನು ದೂರವಿಟ್ಟಾಗ ಸಂಬಂಧ ವಿಚ್ಛೇದನಕ್ಕೆ ಬಂದು ನಿಲ್ಲುತ್ತದೆ. ಸುಂದರ ಸಂಸಾರ ಒಡೆದ ಮೇಲೆ ನಟಿ ಮಲೈಕಾ ಕೆಲ ಕಿವಿಮಾತು ಹೇಳಿದ್ದಾರೆ.
ಮಲೈಕಾ ಅರೋರಾ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಳ್ದೆ ಹೋದ್ರೂ ಸದಾ ಸುದ್ದಿಯಲ್ಲಿರುವ ನಟಿ. ಮಲೈಕಾ ತಮ್ಮ ಆರೋಗ್ಯ, ಸುಂದರ ಫಿಗರ್ ನಿಂದ ಮಾತ್ರವಲ್ಲ ವಿಚ್ಛೇದನ ವಿಷ್ಯಕ್ಕೆ ಹಾಗೂ ಈ ವಯಸ್ಸಿನಲ್ಲಿ ಎಳೆ ಬಾಯ್ ಫ್ರೆಂಡ್ ಹೊಂದಿರುವ ಸಂಗತಿಗೆ ಸುದ್ದಿಯಾಗ್ತಿರುತ್ತಾಳೆ.
ಮಲೈಕಾ (Malaika) ಮದುವೆಯಾಗಿ 19 ವರ್ಷಗಳ ನಂತ್ರ ವಿಚ್ಛೇದನ (Divorce) ಪಡೆದಿದ್ದಾರೆ. 2017ರಲ್ಲಿ ಅರ್ಬಾಜ್ ರಿಂದ ಡೈವರ್ಸ್ ಪಡೆದ ಮಲೈಕಾ , ಕರೀನಾ (Karina) ಕಪೂರ್ ನಡೆಸ್ತಿದ್ದ ಚಾಟ್ ಶೋ ವಾಟ್ ವುಮೆನ್ ವಾಂಟ್ ನಲ್ಲಿ ವಿಚ್ಛೇದನಕ್ಕೆ ಕಾರಣ ಹೇಳಿದ್ದರು. ವೈವಾಹಿಕ ಜೀವನದಲ್ಲಿ ನೀವು ಸಂತೋಷವಾಗಿರದಿದ್ದರೆ, ಘನತೆ, ಸ್ವಾಭಿಮಾನಕ್ಕೆ ಯಾವುದು ಬೆಸ್ಟ್ ಎನ್ನಿಸುತ್ತೋ ಅದನ್ನೇ ಮಾಡಿ ಎಂದು ಅವರು ಹೇಳಿದ್ದರು. ಯುವ ಭಾರತೀಯರ 7 ನೇ ರಾಷ್ಟ್ರೀಯ ಶೃಂಗಸಭೆ ಟೆಕ್ ಪ್ರಶಸ್ತಿ 2023ರಲ್ಲಿ ಪಾಲ್ಗೊಂಡಿದ್ದ ಮಲೈಕಾ ಈ ವೇಳೆಯೂ ವಿವಾಹಿತ ಪುರುಷರಿಗೆ ಕೆಲ ಸಲಹೆ ನೀಡಿದ್ದಾರೆ. ನಿಮ್ಮ ದಾಂಪತ್ಯ ಕೂಡ ದಾರಿತಪ್ಪುತ್ತಿದೆ ಎಂದಾದ್ರೆ ಅಥವಾ ದಾಂಪತ್ಯ ಉಳಿಸಿಕೊಳ್ಳಬೇಕೆಂದ್ರೆ ಮಲೈಕಾ ಹೇಳುವ ಕೆಲ ರೂಲ್ಸ್ ಫಾಲೋ ಮಾಡಿ. ನಾವಿಂದು ಮಲೈಕಾ, ಗಂಡಸರಿಗೆ ಯಾವ ಕಿವಿ ಮಾತು ಹೇಳಿದ್ದಾರೆ ಅನ್ನೋದನ್ನು ಹೇಳ್ತೆವೆ.
undefined
ಪತ್ನಿ ಸಂತೋಷವಾಗಿದ್ರೆ ಎಲ್ಲ ಸಿಕ್ಕಿಂತೆ : ವೇದಿಕೆ ಮೇಲೆ ಮಾತನಾಡಿದ್ದ ಮಲೈಕಾ, ಪತ್ನಿ ಈಗ ನಿಮ್ಮ ಜೊತೆಗಿರಲಿ ಇಲ್ಲ ಮನೆಯಲ್ಲಿರಲಿ ಆಕೆ ಬಳಿ ಹೋಗೋದನ್ನು ಮರೆಯಬೇಡಿ. ನಿಮ್ಮ ಜೀವನದಲ್ಲಿ ಆಕೆ ಮುಖ್ಯ. ಹಾಗಾಗಿ ಆಕೆಗೆ ಗೌರವ ನೀಡಲು ಮರೆಯಬೇಡಿ. ನಿಮ್ಮ ಪತ್ನಿ ಸಂತೋಷವಾಗಿದ್ದಾಳೆ ಅಂದ್ರೆ ನೀವು ಗೆದ್ದಂತೆ. ನಿಮ್ಮ ಸಾಧನೆಗೆ ಬೇಕಾದ ಎಲ್ಲ ಕೆಲಸವನ್ನು ಆಕೆ ಮಾಡ್ತಾಳೆ ಎಂದು ಮಲೈಕಾ ಹೇಳಿದ್ದಾರೆ.
ನಿಮ್ಮ ಹುಡುಗಿಯಲ್ಲಿ ಪ್ರಾಮಾಣಿಕತೆ ಇದ್ಯಾ? ಅದನ್ನ ಹೇಗೆ ಚೆಕ್ ಮಾಡ್ಬೋದು?
ಪತ್ನಿ ಜೊತೆ ಮಾತನಾಡಿ : ಮಾತುಕತೆ ಮೂಲಕ ಬಹುತೇಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಬಹುದು. ಪತ್ನಿ ಜೊತೆ ಮಾತನಾಡೋದು ಬಹಳ ಮುಖ್ಯ. ಯಾವುದೇ ವಿಷ್ಯಕ್ಕೆ ಪತ್ನಿ ಬೇಸರಗೊಂಡಿದ್ದರೆ ಅಥವಾ ಕೋಪಗೊಂಡಿದ್ದರೆ ಅದು ಆಕೆ ಸ್ವಭಾವವೆಂದು ಅದನ್ನು ನಿರ್ಲಕ್ಷ್ಯ ಮಾಡ್ಬೇಡಿ. ಆಕೆ ಜೊತೆ ಈ ವಿಷ್ಯದ ಬಗ್ಗೆ ಮಾತನಾಡಿ, ಮುಕ್ತವಾಗಿ ಚರ್ಚಿಸಿ.
ಪತ್ನಿಯ ಕೆಲಸಕ್ಕೆ ಶ್ಲಾಘನೆ ಮುಖ್ಯ : ಶುದ್ಧ ಮನಸ್ಸಿನಿಂದ ಸಿಗುವ ಹೊಗಳಿಕೆ ಕೆಲಸ ಮಾಡಲು ಶಕ್ತಿ ನೀಡುತ್ತದೆ. ಪತಿಯಾದವನು ಪತ್ನಿಯ ಕೆಲಸವನ್ನು ಶ್ಲಾಘಿಸೋದಿಲ್ಲ. ಪತಿ ಸೇವೆ ಪತ್ನಿ ಕರ್ತವ್ಯ ಎಂದುಕೊಳ್ತಾನೆ. ಇದು ಕೇವಲ ಪುರುಷರ ತಪ್ಪಲ್ಲ. ಬಾಲ್ಯದಿಂದ ಮಕ್ಕಳಿಗೆ ಇದನ್ನೇ ಕಲಿಸಲಾಗುತ್ತದೆ. ನೀವೂ ಈ ತಪ್ಪನ್ನು ಮಾಡ್ಬೇಡಿ. ಪತ್ನಿ ನಿಮಗಾಗಿ ಇಡೀ ದಿನ ಕೆಲಸ ಮಾಡ್ತಿದ್ದರೆ ಆಕೆಯ ಬೆನ್ನುತಟ್ಟಿ.
ಸಂಗಾತಿ ಮಾತನ್ನು ನಿರ್ಲಕ್ಷ್ಯಿಸಬೇಡಿ : ಬಹುತೇಕ ಪುರುಷರು ಮಾಡುವ ಕೆಲಸ ಇದು. ಪತ್ನಿ ಮಾತನಾಡ್ತಿದ್ದರೆ ಪತಿ ಮೊಬೈಲ್ ಹಿಡಿದು ಕುಳಿತಿರುತ್ತಾನೆ. ಪ್ರದಿ ದಿನ ಆಕೆಯ ಗೋಳು ಇದ್ದಿದ್ದೆ ಎನ್ನುವವರಿದ್ದಾರೆ. ಮತ್ತೆ ಕೆಲವರು ಎಲ್ಲ ವಿಷ್ಯದಲ್ಲೂ ತನ್ನದೇ ಮೇಲುಗೈ ಸಾಧಿಸಬೇಕೆಂದು ಬಯಸ್ತಾರೆ. ಪತ್ನಿ ಒಳ್ಳೆಯ ವಿಷ್ಯ ಹೇಳಿದ್ರೂ ಅದನ್ನು ನಿರ್ಲಕ್ಷ್ಯ ಮಾಡ್ತಾರೆ.
ತಪ್ಪನ್ನು ಒಪ್ಪಿಕೊಳ್ಳೋದು ಮುಖ್ಯ : ಬಹುತೇಕ ಸಂಬಂಧ ಹಳ್ಳಹಿಡಿಯಲು ಇದು ಒಂದು ಕಾರಣ. ತಪ್ಪನ್ನು ಯಾವಾಗ್ಲೂ ಬೇರೆಯವರ ಮೇಲೆ ಹೊರಿಸುವ ಸ್ವಭಾವ ಸಂಬಂಧವನ್ನು ಹಾಳು ಮಾಡುತ್ತದೆ. ನಿಮ್ಮದು ತಪ್ಪಿದೆ ಎಂದಾದ್ರೆ ನೀವದನ್ನು ಒಪ್ಪಿಕೊಂಡು ತಿದ್ದಿಕೊಳ್ಳುವ ಪ್ರಯತ್ನನಡೆಸಿ. ಇದು ದಾಂಪತ್ಯವನ್ನು ಮಾತ್ರವಲ್ಲ ಬೇರೆ ಸಂಬಂಧದಲ್ಲೂ ಪ್ರಯೋಜನಕ್ಕೆ ಬರುತ್ತದೆ.
Relationship Tips: ನೀವಿಬ್ಬರು ಜೊತೆಗಿರಲು ಸಾಧ್ಯಾನೇ ಇಲ್ಲ ಅನ್ನೋ ಸೂಚನೆಯಿದು!
ಪ್ರಾಬ್ಲಂ ಅರ್ಥ ಮಾಡಿಕೊಳ್ಳಿ : ಪತ್ನಿ ನಿಮ್ಮ ಮೇಲೆ ದೂರು ಹೇಳಿದಾಗ ಅದನ್ನು ನಿರ್ಲಕ್ಷ್ಯಿಸಬೇಡಿ. ಸ್ವಲ್ಪ ದಿನದಲ್ಲಿ ಎಲ್ಲ ಸರಿಹೋಗುತ್ತೆ ಎಂಬ ನಿಮ್ಮ ಆಲೋಚನೆ ತಪ್ಪಾಗಬಹುದು. ಪತ್ನಿ ನಿಮ್ಮಿಂದ ದೂರವಾಗಬಹುದು. ಸಂಬಂಧದಲ್ಲಿ ಸಣ್ಣ ಸಮಸ್ಯೆ ಬಂದ್ರೂ ಅದನ್ನು ಅರ್ಥ ಮಾಡಿಕೊಂಡು ಬಗೆಹರಿಸುವ ಪ್ರಯತ್ನ ನಡೆಸಿ.