Valentine Day 2023 : ಸೆಲಬ್ರೇಷನ್‌ಗೆ ಯಾರೂ ಇಲ್ಲವೆಂದರೆ ಒಂಟಿಯಾಗಿಯೇ ಹೀಗ್ ಆಚರಿಸಿ!

By Suvarna NewsFirst Published Feb 6, 2023, 12:36 PM IST
Highlights

ವ್ಯಾಲಂಟೈನ್ ಡೇಗೆ ತಯಾರಿ ಜೋರಾಗಿದೆ. ಪ್ರೀತಿಸುವ ಜೋಡಿಗಳಿಗೆ ಇದು ಸಂತೋಷದ ವಾರ. ಜಂಟಿಯಾಗದ ಒಂಟಿ ಜನರು ಕೂಡ ಸುಮ್ಮನೆ ಕುಳಿತುಕೊಳ್ಬಾರದು. ನಿಮ್ಮಲ್ಲೂ ಹೃದಯವಿದೆ ಅಂದ್ಮೇಲೆ ನೀವೂ ಪ್ರೇಮಿಗಳ ದಿನವನ್ನು ಸಂಭ್ರಮಿಸುವ ಹಕ್ಕು ಹೊಂದಿದ್ದಿರಿ. 
 

ವ್ಯಾಲಂಟೈನ್ ಡೇಗೆ ಏನ್ ಪ್ಲಾನ್ ಅಂತಾ ಒಂಟಿಯಾಗಿರೋರನ್ನು ಕೇಳಿ ನೋಡಿ, ಅಯ್ಯೋ.. ನಾನು ಒಂಟಿ ಗುರು, ಪ್ಲಾನ್ ಏನು ಇಲ್ಲ. ದಿನದಂತೆ ಆ ದಿನವನ್ನು ಕೂಡ ಕಳೆಯೋದು ಅಷ್ಟೆ ಎಂದಿರುತ್ತಾರೆ. ಪ್ರೇಮಿಗಳ ದಿನ ಪ್ರೀತಿಸುವವರಿಗೆ ಮೀಸಲು ಅಂದ್ಮೇಲೆ ಒಂಟಿಯಾಗಿರೋರು ಯಾಕೆ ಪ್ರೇಮಿಗಳ ದಿನ ಆಚರಿಸಬಾರದು. ನೀವು ನಿಮ್ಮನ್ನು ಪ್ರೀತಿ ಮಾಡ್ತಿರಿ ಎಂದಾದ್ರೆ ವ್ಯಾಲಂಟೈನ್ ಡೇಯನ್ನು ನೀವು ನಿಮಗಾಗಿ ಆಚರಣೆ ಮಾಡಬಹುದು ಅಲ್ವಾ?.

ವ್ಯಾಲಂಟೈನ್ (Valentines)  ಡೇ ದಿನ ಒಂಟಿಯಾಗಿರುವ ಜನರು ಮನೆಯಲ್ಲಿ ನೀರಸವಾಗಿ ದಿನ ಕಳೆಯುತ್ತಾರೆ. ಈಗಾಗಲೇ ಪ್ರೀತಿ (Love ) ಕಳೆದುಕೊಂಡವರು ಹಳೆ ನೆನಪು, ನೋವಿನಲ್ಲಿ ದಿನ ದೂಡುತ್ತಾರೆ. ಜಂಟಿಯಾಗಿರೋರು ಹೇಗೆ ಪ್ರೇಮಿಗಳ ದಿನವನ್ನು ಸಂಭ್ರಮಿಸುತ್ತಾರೋ ಒಂಟಿಯಾಗಿರುವವರು ಕೂಡ ಪ್ರೇಮಿಗಳ ದಿನವನ್ನು ಸಂತೋಷ (Happiness) ದಿಂದ ಕಳೆಯಬೇಕು. ನಿಮ್ಮನ್ನು ನೀವು ಪ್ರೀತಿಸುವ ಕಾರಣ ನಿಮ್ಮೊಳಗಿರುವ ವ್ಯಕ್ತಿಗೆ ವಿಶೇಷ ಟ್ರೀಟ್ ನೀಡಿ, ಉಡುಗೊರೆ ನೀಡಿ ಅವರನ್ನು ಖುಷಿಪಡಿಸಬೇಕು. ನಾವಿಂದು ಒಂಟಿಯಾಗಿರುವ ವ್ಯಕ್ತಿಗಳು ಹೇಗೆಲ್ಲ ವ್ಯಾಲಂಟೈನ್ ಡೇ ಆಚರಿಸಬಹುದು ಅಂತಾ ಹೇಳ್ತೆವೆ.

VALENTINE'S DAY 2023: ಪ್ರೇಮಿಗಳ ವಾರದಲ್ಲಿ ಬಯಸಿದ ಪ್ರೀತಿ ಪಡೆಯಲು ಈ ಪರಿಹಾರ ಮಾಡಿ..

ಒಂಟಿಯಾಗಿರುವ ವ್ಯಕ್ತಿಗಳ ವ್ಯಾಲಂಟೈನ್ ಡೇ ಹೀಗಿರಲಿ : 

ಪ್ರವಾಸಕ್ಕೆ ಹೋಗ್ಬನ್ನಿ : ಪ್ರೇಮಿಗಳಲ್ಲಿ ಸರಿ. ಮದುವೆಯಾಗಿಲ್ಲ ಓಕೆ. ಆದ್ರೆ ನಿಮ್ಮ ಬಳಿ ಸ್ನೇಹಿತರಿದ್ದಾರೆ ಅಲ್ವಾ? ಮದುವೆಯಾಗದ ಅಥವಾ ಪ್ರೇಮಿಗಳಿಲ್ಲದ ಸ್ನೇಹಿತರನ್ನು ಆಯ್ಕೆ ಮಾಡಿಕೊಂಡು ನೀವು ಪ್ರವಾಸಕ್ಕೆ ಹೋಗಿಬರಹುದು. 

ನಿಮಗೆ ನೀವೇ ಉಡುಗೊರೆ ಕೊಟ್ಕೊಳ್ಳಿ : ಸಂಗಾತಿಗೆ ಯಾವ ಉಡುಗೊರೆ ಇಷ್ಟವಾಗುತ್ತೆ ಅಂತಾ ಆಲೋಚನೆ ಮಾಡಿ, ಅದಕ್ಕೊಂದಿಷ್ಟು ಪ್ಲಾನ್ ಮಾಡಿ, ಗಿಫ್ಟ್ ಖರೀದಿ ಮಾಡುವ ತೊಂದರೆ ಇಲ್ಲಿಲ್ಲ. ನಿಮಗೇನು ಇಷ್ಟ ಎಂಬುದು ನಿಮಗೆ ತಿಳಿದಿರುತ್ತದೆ. ಹಾಗಾಗಿ ಉಡುಗೊರೆ ಖರೀದಿ ಸುಲಭ. ನಿಮ್ಮ ಜೇಬಿನಲ್ಲಿ ಹಣವೆಷ್ಟಿದೆ ಎಂಬ ಆಧಾರದ ಮೇಲೆ ನಿಮಗಿಷ್ಟದ ವಸ್ತು ಖರೀದಿ ಮಾಡಿ ಅದನ್ನು ವ್ಯಾಲಂಟೈನ್ ಡೇ ಗಿಫ್ಟ್ ಅಂತಾ ಸಂಭ್ರಮಿಸಿ. 

ನೆಚ್ಚಿನ ಸಿನಿಮಾ ವೀಕ್ಷಣೆ ಮಾಡಿ : ಈ ದಿನವನ್ನು ನಿಮಗಾಗಿ ನೀವು ಮೀಸಲಿಡಿ. ಅವಕಾಶ ಸಿಕ್ಕಿದ್ರೆ ಕೆಲಸಕ್ಕೆ ರಜೆ ಪಡೆದು ಆರಾಮವಾಗಿ ಮನೆಯಲ್ಲಿರಿ. ನಿಮ್ಮಿಷ್ಟದ ಟಿವಿ ಶೋ ಅಥವಾ ಸಿನಿಮಾ ವೀಕ್ಷಣೆ ಮಾಡುವ ಮೂಲಕ ದಿನವನ್ನು ಸಂತೋಷದಿಂದ ಕಳೆಯಿರಿ.

ಕುಟುಂಬದ ಜೊತೆ ವ್ಯಾಲಂಟೈನ್ ಡೇ ಆಚರಣೆ ಮಾಡಿ : ಕುಟುಂಬದ ಸದಸ್ಯರು ಯಾವಾಗ್ಲೂ ನಿಮ್ಮನ್ನು ಪ್ರೀತಿಸುತ್ತಾರೆ. ಅವರ ಪ್ರೀತಿಗೆ ನೀವು ಸಮಯ ನೀಡಲು ಸಾಧ್ಯವಾಗದೆ ಇರಬಹುದು. ಈ ದಿನ ನೀವು ಅವರಿಗೆ ಸಮಯ ನೀಡುವ ಮೂಲಕ ಅವರ ಜೊತೆ ಪ್ರೇಮಿಗಳ ದಿನವನ್ನು ಆಚರಿಸಬಹುದು. ನಿಮ್ಮ ತಂದೆ ಮತ್ತು ತಾಯಿ ಜೊತೆ ವ್ಯಾಲಂಟೈನ್ ಡೇ ಆಚರಿಸಬಹುದು. ಪಾಲಕರಿಬ್ಬರನ್ನು ಒಂದು ಕಡೆ ಸೇರಿಸಿ, ಅವರಿಗಾಗಿ ಕೇಕ್ ತಂದು, ಅವರಿಬ್ಬರಿಗೂ ಗಿಫ್ಟ್ ನೀಡಿ ಅವರ ವ್ಯಾಲಂಟೈನ್ ಡೇಯನ್ನು ನೀವು ಆಚರಿಸಿ ಸಂಭ್ರಮಿಸಬಹುದು. ಈವರೆಗೂ ವ್ಯಾಲಂಟೈನ್ ಡೇ ಆಚರಣೆ ಮಾಡದ ಅದೆಷ್ಟೋ ದಂಪತಿಯಿದ್ದಾರೆ. ಅದ್ರಲ್ಲಿ ನಿಮ್ಮ ಪಾಲಕರೂ ಒಬ್ಬರಾಗಿರಬಹುದು. ಮೊದಲ ಬಾರಿ ಸಂಗಾತಿ ಜೊತೆ ಪ್ರೇಮಿಗಳ ದಿನ ಆಚರಿಸಿ ಅವರ ಮುಖದಲ್ಲಿ ಮೂಡುವ ನಗು ನಿಮಗೆ ನೆಮ್ಮದಿ ನೀಡುತ್ತದೆ. 

ನಿಮಗಾಗಿ ಆಹಾರ ತಯಾರಿಸಿ : ಪ್ರೇಮಿಗಳ ದಿನದಂದು ನಿಮ್ಮ ಕೈನಿಂದಲೇ ಅಡುಗೆ ಮಾಡಿ ಅದನ್ನು ಸೇವಿಸಿ. ಇದು ನಿಮಗೆ ನೀವು ನೀಡ್ತಿರುವ ಉಡುಗೊರೆಯಲ್ಲಿ ಒಂದು. ಮನೆಯಲ್ಲಿ ಮಾಡಿದ ಅಡುಗೆ ಅದ್ರಲ್ಲೂ ನೀವೇ ಮಾಡಿದ ಅಡುಗೆ ಹೆಚ್ಚು ರುಚಿ ಹಾಗೂ ಸಂತೋಷ ನೀಡುತ್ತದೆ. 

Valentine's Day ಬಂತು; ನಿಮ್ಮ ಪ್ರಪೋಸಲ್ ಒಪ್ಪಿಕೊಳ್ಳುತ್ತಾರೋ, ಇಲ್ಲವೋ?

ನಿಮ್ಮ ಸೌಂದರ್ಯ ವರ್ದನೆಗೆ ಅವಕಾಶ ನೀಡಿ : ಸಂಗಾತಿ ಇರಲಿ ಬಿಡಲಿ ನಿಮ್ಮ ಸೌಂದರ್ಯ ನೋಡಲು ನೂರಾರು ಕಣ್ಣುಗಳಿವೆ. ನಿಮ್ಮನ್ನು ತೋರಿಸಲು ಕನ್ನಡಿಯಿದೆ. ಹಾಗಾಗಿ ಪ್ರೇಮಿಗಳ ದಿನದಂದು ನೀವು ನಿಮ್ಮ ಸೌಂದರ್ಯ ವರ್ದನೆ ಕೆಲಸ ಮಾಡ್ತಾ ಈ ದಿನ ಕಳೆಯಬಹುದು. ಪೆಡಿಕ್ಯೂರ್, ಮೆನಿಕ್ಯೂರ್ ಸೇರಿದಂತೆ ನಿಮ್ಮಿಷ್ಟದ ತ್ವಚೆ ಆರೈಕೆಯಲ್ಲಿ ನೀವು ಸಮಯ ಕಳೆಯಬಹುದು. 
 

click me!