Behaviour Tips: ಕ್ಲಾಸಿ ಜನ ಎಂದೆನಿಸ್ಬೇಕಾ? ಕ್ಲಾಸಿ ಜನರಲ್ಲಿರೋ ಈ ಗುಣ ಅಳವಡಿಸಿಕೊಳ್ಳಿ

By Suvarna News  |  First Published Feb 5, 2023, 5:20 PM IST

ಕೇವಲ ಬಟ್ಟೆ, ಬ್ರ್ಯಾಂಡೆಡ್‌ ವಸ್ತುಗಳ ಬಳಕೆಯಿಂದ ಕ್ಲಾಸಿ ಜನರೆನಿಸಿಕೊಳ್ಳುವುದು ಸಾಧ್ಯವಿಲ್ಲ. ಕ್ಲಾಸಿ ಜನರಲ್ಲಿ ಹಲವು ಉತ್ತಮ ಗುಣಗಳಿರುತ್ತವೆ. ಅನಗತ್ಯ ಮಾತುಕತೆಗಳಲ್ಲಿ ತೊಡಗದಿರುವುದರಿಂದ ಹಿಡಿದು, ಅತಿಯಾದ ಸ್ಪರ್ಧಾತ್ಮಕತೆ, ಸ್ವಾರ್ಥ ಬುದ್ಧಿಗಳಿಂದ ಅವರು ದೂರವಿರುತ್ತಾರೆ. 


ಕೆಲವರನ್ನು ನೋಡಿದರೆ ಏಕದಂ ಕ್ಲಾಸಿ ಜನ ಎನ್ನುವ ಭಾವನೆ ಮೂಡುತ್ತದೆ. ಯಾವುದಾದರೂ ಸಮಾರಂಭದಲ್ಲಿ ಕೆಲವರು ತಮ್ಮ ಅಸ್ತಿತ್ವದಿಂದಲೇ ಅಲ್ಲೊಂದು ಘನತೆಯನ್ನು ಸೃಷ್ಟಿಸುತ್ತಾರೆ. ಅವರ ಮಾತುಗಳನ್ನು ಎಲ್ಲರೂ ಪಾಲಿಸುತ್ತಾರೆ. ಅವರು ಗರಿಗರಿಯಾದ ಬಟ್ಟೆ, ಬ್ರ್ಯಾಂಡೆಡ್‌ ಕ್ಲೋತ್ಸ್‌ ಧರಿಸಿರಬಹುದು. ಉತ್ತಮ ಮ್ಯಾನರ್ಸ್‌ ಕೂಡ ಅವರಲ್ಲಿರುತ್ತದೆ. ಆದರೆ, ಕೇವಲ ಇವುಗಳೊಂದೇ ಕ್ಲಾಸಿ ಜನರನ್ನು ರೂಪಿಸಿರುವುದಿಲ್ಲ. ದುಬಾರಿ ಬಟ್ಟೆ ಧರಿಸಿವುದರಿಂದ ಕ್ಲಾಸಿ ಎನಿಸಲು ಸಾಧ್ಯವಿಲ್ಲ. ಜತೆಗೆ, ವ್ಯಕ್ತಿತ್ವದಲ್ಲಿ ಹಲವು ಉತ್ತಮ ಗುಣಗಳನ್ನು ಅವರು ಅಳವಡಿಸಿಕೊಂಡಿರುತ್ತಾರೆ. ಅದರಿಂದಾಗಿಯೇ ಅವರು ತಮ್ಮ ಗೌರವವನ್ನು ಹೆಚ್ಚಿಸಿಕೊಂಡಿರುತ್ತಾರೆ. ಪರಿಚಯ ಇಲ್ಲದವರೂ ಅವರ ಬಗ್ಗೆ ಉತ್ತಮ ಭಾವನೆ ಹೊಂದುತ್ತಾರೆ. ಕ್ಲಾಸಿ ಎನಿಸುವ ಜನರು ಕೆಲವು ವಿಚಾರಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಹಾಗೂ ಕೆಲವು ನಡತೆಗಳನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಇಂತಹ ಗುಣದಿಂದಾಗಿಯೇ ಅವರ ವ್ಯಕ್ತಿತ್ವದಲ್ಲಿ ಘನತೆ ಮೇಳೈಸಿರುತ್ತದೆ. ಕ್ಲಾಸಿ ಜನರಾಗಿ ಅವರು ಹೇಗೆ ರೂಪುಗೊಳ್ಳುತ್ತಾರೆ ಎನ್ನುವುದಕ್ಕೆ ಹಲವು ಅಂಶಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಕೆಲವು  ಅಂಶಗಳು ಎಲ್ಲರಲ್ಲೂ ಇರಬಹುದು, ಆದರೆ, ಘನತೆಯುಳ್ಳ ವ್ಯಕ್ತಿತ್ವ ನಿಮ್ಮದಾಗಲು ಎಲ್ಲ ಗುಣಗಳೂ ಇರಬೇಕು.

ಒರಟುತನದಿಂದ (Rudeness) ದೂರ: ಕ್ಲಾಸಿ ಜನ ಯಾವುದೇ ಕಾರಣಕ್ಕೂ ಒರಟುತನವನ್ನು ಒಪ್ಪಿಕೊಳ್ಳುವುದಿಲ್ಲ. ಅಂದರೆ, ಅವರು ಎಂದಿಗೂ ಇನ್ನೊಬ್ಬರನ್ನು ಅಗೌರವದಿಂದ (Disrespectful) ಕಾಣುವುದಿಲ್ಲ. ಮತ್ತೊಬ್ಬರ ಮಾತಿನ ಮಧ್ಯೆ ತಲೆಹಾಕುವುದಿಲ್ಲ. ಇತರರೊಂದಿಗೆ ಒರಟಾಗಿ ನಡೆದುಕೊಳ್ಳುವುದಿಲ್ಲ. ಮೃದುತನ (Kind) ಹಾಗೂ ಗೌರವವೇ ಘನ ವ್ಯಕ್ತಿತ್ವದ ಮೂಲ ಮೌಲ್ಯ (Value) ಎನ್ನುವುದು ಅವರಿಗೆ ತಿಳಿದಿರುತ್ತದೆ. ಎಂತಹ ಸಮಯದಲ್ಲೂ ಸುಲಭವಾಗಿ ಕಿರಿಕಿರಿಗೆ (Frustrate) ಒಳಗಾಗುವುದಿಲ್ಲ. 

Tap to resize

Latest Videos

ನಿಮ್ಮನ್ನು ಇಗ್ನೋರ್ ಮಾಡಿ, ತನ್ನನ್ನೇ ಹೊಗಳಿಕೊಳ್ತಾನಾ ಪತಿ? ಅಂಥವನೊಟ್ಟಿಗೆ ಏಗುವುದು ಹೇಗೆ?

ಸಮಯ ಪಾಲನೆ (Punctuality): ಘನ ವ್ಯಕ್ತಿತ್ವ ಹೊಂದಬೇಕು ಎಂದಾದರೆ, ಸಮಯ ಪಾಲನೆ ಮಾಡುವುದನ್ನು ಕಲಿತುಕೊಳ್ಳಬೇಕು. ಕ್ಲಾಸಿ ಜನ (Classy People) ಎಂದಿಗೂ ಸಮಯಕ್ಕೆ ಬೆಲೆ ನೀಡುತ್ತದೆ. ಅದು ಅವರು ಭೇಟಿಯಾಗುವ ಜನರಿಗೆ ನೀಡುವ ಗೌರವವೂ ಹೌದು ಎನ್ನುವುದನ್ನು ಅರಿತಿರುತ್ತಾರೆ. ನಿಗದಿತ ಸಮಯಕ್ಕೆ ತಡವಾಗಿ ಬರುವುದು ಶಿಸ್ತು (Discipline) ಹಾಗೂ ಸಂಘಟಿತವಾಗಿಲ್ಲದಿರುವುದನ್ನು ತೋರುತ್ತದೆ. 

ಗಾಸಿಪ್‌ (Gossip): ಕ್ಲಾಸಿ ಜನ ಎಂದಿಗೂ ಯಾರೊಂದಿಗೂ ಗಾಸಿಪ್‌ ಮಾತುಕತೆ ನಡೆಸುವುದಿಲ್ಲ. ಇತರರ ಬಗ್ಗೆ ಏನೊಂದೂ ಮಾತನಾಡದಿರುವುದು ಅವರ ಹೆಚ್ಚುಗಾರಿಕೆ. ಗಾಸಿಪ್‌ ಮಾಡುವುದೆಂದರೆ, ಗುಟ್ಟಾಗಿ (Secret) ಮಾಡುವ ಒರಟು ವರ್ತನೆಯೇ ಆಗಿದೆ. ಗಾಳಿಸುದ್ದಿ ಹಬ್ಬಿಸುವುದು, ಒಬ್ಬರು ಹೇಳಿದ್ದನ್ನು ಇನ್ನೊಬ್ಬರ ಬಳಿ ಹೇಳುವುದೆಲ್ಲ ಅವರಿಗೆ ದೂರ. ಬದಲಿಗೆ ಬೇರೆ ಯಾವುದಾದರೂ ಉತ್ತಮ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ.

ನೆಗೆಟಿವ್‌ ಧೋರಣೆ (Negative Attitude) ಇಲ್ಲ: ಕೆಲವೊಮ್ಮೆ ಜೀವನದಲ್ಲಿ ತಪ್ಪು ನಿರ್ಣಯ ತೆಗೆದುಕೊಂಡಾಗ, ಅಂದುಕೊಂಡಿದ್ದು ನಡೆಯದೇ ಇದ್ದಾಗ ನೆಗೆಟಿವ್‌ ಭಾವನೆ ಮೂಡುವುದು ಸಾಮಾನ್ಯ. ಬೇರೊಬ್ಬರನ್ನು ದೂರುವುದು (Complain), ಸ್ವಮರುಕದೊಂದಿಗೆ (Self Pity) ಕುಗ್ಗುತ್ತಾರೆ. ಆದರೆ, ಕ್ಲಾಸಿ ಜನರು ನೆಗೆಟಿವಿಟಿಯನ್ನು ಎಂದಿಗೂ ಹತ್ತಿರ ಸೇರಿಸುವುದಿಲ್ಲ. 

ಕೃತಜ್ಞತೆ (Gratitude): ಕ್ಲಾಸಿ ಜನರಲ್ಲಿ ಇಡೀ ಜಗತ್ತಿನ ಜನ, ಆಗುಹೋಗುಗಳ ಬಗ್ಗೆ ಕೃತಜ್ಞತೆ ಇರುತ್ತದೆ. ನಮಗೆ ಯಾರೂ ಇಲ್ಲ, ನನ್ನ ಜೀವನ ಏಕಿದೆ ಇತ್ಯಾದಿ ಭಾವನೆಗಳಲ್ಲಿ ನಲುಗುವವರಲ್ಲಿ ಕೃತಜ್ಞತಾ ಭಾವನೆಯೇ ಇರುವುದಿಲ್ಲ. ಆದರೆ, ಕ್ಲಾಸಿ ಜನರಲ್ಲಿ ಎಲ್ಲದರ ಬಗೆಗೆ ಕೃತಜ್ಞತೆ ಇರುತ್ತದೆ, ಹೀಗಾಗಿಯೇ ಅವರು ಎಲ್ಲವನ್ನೂ ಸಾಧಿಸುತ್ತಾರೆ.

ಖಿನ್ನತೆ ಯಾರನ್ನ ಬೇಕಾದರೂ ಕಾಡೋ ಮಾನಸಿಕ ಅಸ್ವಸ್ಥತೆ, ಪುರುಷರಲ್ಲಿ ಕಾಣಿಸೋ ಲಕ್ಷಣಗಳಿವು!

ಪ್ರಾಮಾಣಿಕತೆ (Honesty): ಪ್ರಾಮಾಣಿಕ ನಿಲುವು ಉತ್ತಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಸರಿ ಮತ್ತು ತಪ್ಪುಗಳ (Right and Wrong) ಸ್ಪಷ್ಟ ಕಲ್ಪನೆ ಇವರಿಗೆ ಇರುತ್ತದೆ. ಹೀಗಾಗಿ, ಅಪ್ರಾಮಾಣಿಕ (Dishonest) ಭಾವನೆಗಳಿಗೆ ಅಂಟಿಕೊಳ್ಳುವುದಿಲ್ಲ. ಹಾಗೂ ಮೌಲ್ಯವಿಲ್ಲದ ಕಾರ್ಯದಲ್ಲಿ ತೊಡಗುವುದಿಲ್ಲ. 

ಕೆಟ್ಟ ಜೋಕ್‌ (Jokes): ನಾವೆಲ್ಲರೂ ಜೋಕ್‌ ಇಷ್ಟಪಡುತ್ತೇವೆ. ಹೇಗಾದರೂ ಜನರನ್ನು ನಗಿಸಬೇಕೆಂದು ಯತ್ನಿಸಿ ಏನೇನೋ ಮಾತನಾಡುವವರೇ ಹೆಚ್ಚು. ಆದರೆ, ಕ್ಲಾಸಿ ಜನ ಮಾತ್ರ ಕೆಟ್ಟ ಜೋಕ್‌ ಗಳ ಸುದ್ದಿಗೆ ಹೋಗುವುದಿಲ್ಲ. ಅನಗತ್ಯ ಮಾತುಕತೆಗಳಲ್ಲಿ (Talk) ನಿರತವಾಗಿರುವುದಿಲ್ಲ. ಹಾಗೆಂದು ಅವರಲ್ಲಿ ವಿನೋದದ (Funny) ಬುದ್ಧಿ ಇರುತ್ತದೆ. 

ಸ್ವಾರ್ಥ (Selfish), ಅತಿ ಸ್ಪರ್ಧಾತ್ಮಕತೆ (Compititive): ಜನರಲ್ಲಿ ಸ್ವಾರ್ಥ ಇದ್ದೇ ಇರುತ್ತದೆ. ಆದರೆ, ಕ್ಲಾಸಿ ಜನರಲ್ಲಿ ಇದು ಅಲ್ಪ ಪ್ರಮಾಣದಲ್ಲಿರುತ್ತದೆ. ಹಾಗೆಯೇ ಅತಿಯಾದ ಸ್ಪರ್ಧಾತ್ಮಕ ಗುಣವೂ ಇವರಲ್ಲಿರುವುದಿಲ್ಲ.

ಶಿಸ್ತು, ಸ್ವಚ್ಛತೆ (Hygiene): ಗುಡ್‌ ಮ್ಯಾನರ್ಸ್‌, ಶಿಸ್ತು, ಸ್ವಚ್ಛತೆ ಇವರಲ್ಲಿ ಎದ್ದು ಕಾಣುವಂತಿರುತ್ತದೆ. 

click me!