Personality Tips: ಕೆಲವರನ್ನ ಬದಲಾಯ್ಸೋಕೆ ಸಾಧ್ಯನೇ ಇಲ್ಲ, ಅದ್ಯಾಕೆ ಗೊತ್ತಾ?

By Suvarna NewsFirst Published Feb 5, 2023, 5:46 PM IST
Highlights

ಪತಿಯ ಕೆಲವು ಧೋರಣೆಗಳನ್ನು ಬದಲಿಸಿಯೇ ಬಿಡುತ್ತೇನೆ ಎಂದು ಜೀವನವಿಡೀ ಅವರನ್ನು ತಿದ್ದುವ ಕಾಯಕ ನಡೆಸುವ ಮಹಿಳೆಯರು, ಮನೆಯಾಕೆಯ ಗುಣವನ್ನು ಬದಲಿಸಲು ಯತ್ನಿಸುವ ಪುರುಷರು ಸಾಮಾನ್ಯವಾಗಿ ಎಲ್ಲೆಡೆ ಕಾಣುತ್ತಾರೆ. ಆದರೆ, ನಿಮಗೆ ಗೊತ್ತೇ? ಯಾವುದೇ ವ್ಯಕ್ತಿಯನ್ನು ಬದಲಾಯಿಸುವುದು ಮನಃಶಾಸ್ತ್ರೀಯವಾಗಿ ಸಾಧ್ಯವಿಲ್ಲ. 
 

“ಇವರಂತೂ ಎಂದಿಗೂ ಬದಲಾಗೋದಿಲ್ಲ, ಎಲ್ಲರೆದುರು ಏನಾದರೂ ಮಾತಾಡಿ ಮುಜುಗರ ಮಾಡ್ತಾರೆ, ಏನು ಮಾತಾಡಬೇಕೆಂದು ತಿಳಿಯೋದೇ ಇಲ್ಲ, ಇವರ ಮಾತುಗಳಿಂದಾಗಿ ಅದೆಷ್ಟು ಸಮಸ್ಯೆ ಆಗುತ್ತೆ ಅಂತ ಅರ್ಥ ಮಾಡಿಕೊಳ್ಳೋದೇ ಇಲ್ಲ, ಎಷ್ಟು ಹೇಳಿದ್ರೂ ಬದಲಾಗೋದಿಲ್ಲ, ನನ್ನಿಂದಾದ ಎಲ್ಲ ರೀತಿಯ ಪ್ರಯತ್ನ ಮಾಡ್ತಾನೇ ಇರ್ತೀನಿʼ ಎನ್ನುವ ಮಾತುಗಳನ್ನು ಕೇಳಿರಬಹುದು. ಸಾಮಾನ್ಯವಾಗಿ ಮಹಿಳೆಯರು ತಮ್ಮ ಪತಿಯ ಬಗ್ಗೆ ಇಂತಹ ಮಾತುಗಳನ್ನಾಡುವುದು ಸಹಜ. ಹಾಗೆಯೇ, ಪುರುಷರೂ ತಮ್ಮ ಪತ್ನಿಯ ಕುರಿತಾಗಿ, ಇವರಿಗೆ ಆಭರಣ ಎಂದರೆ ಆಯ್ತು, ಬೇರೇನೂ ಬೇಕಿಲ್ಲ, ಹೆಂಗಸರಿಗೆ ಬಂಗಾರವೆಂದರೆ ಅದೇನು ಮೋಹʼ ಎಂದು ಸಾರಾಸಗಟಾಗಿ ಎಲ್ಲರನ್ನೂ ಒಂದೇ ತಕ್ಕಡಿಗೆ ಹಾಕುತ್ತಾರೆ. ಒಟ್ಟಿನಲ್ಲಿ ಇವರಿಗೆ ಅವರು ಸರಿ ಇಲ್ಲ, ಇವರಿಗೆ ಅವರು ಸರಿಯಿಲ್ಲ. ಇಬ್ಬರೂ ಒಬ್ಬರನ್ನೊಬ್ಬರು ಬದಲಾಯಿಸಲು ಯತ್ನಿಸುತ್ತಲೇ ಇರುತ್ತಾರೆ. ಈ ವಿಚಾರದಲ್ಲಿ ಮಹಿಳೆಯರು ಒಂದು ಕೈ ಮುಂದೆ. ಮಕ್ಕಳ, ಪತಿಯ ವರ್ತನೆಗಳನ್ನು ಬದಲಿಸಲು, ಸುಧಾರಿಸಲು ನಿರಂತರವಾಗಿ ಶ್ರಮ ಹಾಕುತ್ತಾರೆ. ಪದೇ ಪದೆ ಅವರಿಂದಾಗುವ ಮುಜುಗರ ತಪ್ಪಿಸಲು ಅವರ ಆ ಗುಣವನ್ನೇ ಬದಲಿಸಲು ಶತಪ್ರಯತ್ನ ಮಾಡುತ್ತಾರೆ. ಆದರೆ, ಮನಃಶಾಸ್ತ್ರದ ದೃಷ್ಟಿಕೋನದಿಂದ ನೋಡಿದರೆ ಯಾರನ್ನಾದರೂ ಬದಲಿಸುವುದು ಸಾಧ್ಯವಿಲ್ಲ. ಇದಕ್ಕೆ ಮುಖ್ಯವಾಗಿ ಐದು ಕಾರಣಗಳನ್ನು ಗುರುತಿಸಲಾಗಿದೆ. 

ಬದಲಾವಣೆ (Change) ಅಂತರಾಳದಿಂದ (Within) ಮೂಡಬೇಕು: ಯಾವುದೇ ಗುಣವನ್ನಾದರೂ ಬದಲಾವಣೆ ಮಾಡಿಕೊಳ್ಳಬೇಕೆಂದು ಸ್ವತಃ ಅನಿಸಿದರೆ ಮಾತ್ರ ಬದಲಾವಣೆ ತಂದುಕೊಳ್ಳಲು ಸಾಧ್ಯ. ಬೇರೆಯವರು ಹೇಳಿದರೆಂದು, ಕಿರಿಕಿರಿ (Force) ಮಾಡುತ್ತಾರೆಂದು ಪ್ರಯತ್ನಿಸಿದರೆ ಖಂಡಿತ ಬದಲಾವಣೆ ಬರುವುದು ಸಾಧ್ಯವಿಲ್ಲ. ಆಗ ಅವರ ವರ್ತನೆ ಫೇಕ್‌ (Fake) ಎನಿಸಿಕೊಳ್ಳುತ್ತದೆ. ಅಲ್ಲದೆ, ನಿಜಕ್ಕೂ ಅವರ ವರ್ತನೆಯಲ್ಲಿ (Behaviour) ತಪ್ಪುಗಳಿದ್ದರೆ ಅದನ್ನು ಅವರೇ ಗುರುತಿಸಿಕೊಳ್ಳಲು ಯತ್ನಿಸಬೇಕು.

ಇನ್ನೊಬ್ಬರು ಹೇಳಿದರೆ ಅವರು ಅದನ್ನು ಗುರುತಿಸುವುದಿಲ್ಲ. ಅಥವಾ ಮತ್ತೊಬ್ಬರು ಹೇಳಿದಾಗಲಾದರೂ ಅರ್ಥ ಮಾಡಿಕೊಳ್ಳಲು ಯತ್ನಿಸಬೇಕು. ಹೀಗಾಗಿ, ಆತ್ಮಾವಲೋಕನ (Introspect) ಮಾಡಿಕೊಳ್ಳುವುದು ಅತಿ ಮುಖ್ಯ. ಸಹಜವಾಗಿ ಉತ್ತಮ ಎನಿಸಿಕೊಳ್ಳುವ ಗುಣಗಳು ಯಾವುವು, ನನ್ನಲ್ಲಿ ಅದೇಕಿಲ್ಲ, ಅದನ್ನು ಅಳವಡಿಸಿಕೊಳ್ಳಲು ಏನು ಮಾಡಬೇಕು ಎಂದು ಯೋಚಿಸಿದರೆ ಉತ್ತರ ದೊರೆಯುತ್ತದೆ.

ಹೆಂಡ್ತಿ ಬಗ್ಗೆ ಈ ವಿಷ್ಯ ಒಪ್ಪಿಕೊಂಡ್ರೆ ಸಾಕು, ವಿವಾಹಿತರು ಸಿಕ್ಕಾಪಟ್ಟೆ ಖುಷಿಯಾಗಿರ್ಬಹುದು ನೋಡಿ!

ಕೆಲ ಜನ ಎಂದಿಗೂ (Never) ಬದಲಾಗೋದಿಲ್ಲ!:  “ಎಲ್ಲ ಜನರೂ ಯಾವಾಗ ಬೇಕಿದ್ದರೂ ಬದಲಾಗಬಹುದುʼ ಎನ್ನುವುದು ನಿಮ್ಮ ನಂಬಿಕೆಯಾಗಿದ್ದರೆ (Belief) ತೆಗೆದುಬಿಡಿ. ಮನಃಶ್ಯಾಸ್ತ್ರೀಯವಾಗಿ (Psychologically) ಕೆಲವು ಜನ ಎಂದಿಗೂ ಬದಲಾಗುವುದಿಲ್ಲ. ಏಕೆಂದರೆ, ಅವರು ಅಂತರಾಳದಿಂದ ಬದಲಾಗಲು ಎಂದಿಗೂ ಮನಸ್ಸು ಮಾಡುವುದಿಲ್ಲ. ಸುಧಾರಿಸಲು ಯತ್ನಿಸುವುದರಲ್ಲಿ ತಪ್ಪಿಲ್ಲ. ಆದರೆ, ಅದಕ್ಕಾಗಿ ನಿಮ್ಮ ಎನರ್ಜಿಯನ್ನು (Energy) ವ್ಯರ್ಥ ಮಾಡಿಕೊಳ್ಳಬೇಡಿ. ವ್ಯಸನಿಗಳಿದ್ದರೆ (Addicted) ಸಹಾಯ ಮಾಡಿ, ಆದರೆ, ಬದಲಾಯಿಸಲು ಯತ್ನಿಸುವುದು ಮೂರ್ಖತನವಾಗಬಹುದು. ಈ ಸತ್ಯ ಕೆಲವರಿಗೆ ಅಪಥ್ಯವೆನಿಸಬಹುದು. 

ಸಂಬಂಧದ ಮೇಲೆ ಪರಿಣಾಮ (Effect on Relationship): ಪತಿಯನ್ನೋ, ಪತ್ನಿಯನ್ನೋ ಬದಲಾಯಿಸಲು ತೀವ್ರವಾಗಿ ಯತ್ನಿಸುವುದರಿಂದ ಸಂಬಂಧದ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಹೆಚ್ಚು. ಪ್ರೀತಿಯಿಂದ (Love) ಹೇಳಿದರೂ ಬದಲಾಯಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಕೆಲವರಿಗೆ ಸರಿ, ತಪ್ಪುಗಳ ವಿಮರ್ಶೆ ಮಾಡಲು ಬರುವುದಿಲ್ಲ. ಅವರಿಗೆ ತಿಳಿವಳಿಕೆ ಹೇಳಬಹುದೇ ವಿನಾ ಬದಲಾಯಿಸಲು ಅತಿಯಾಗಿ ಪ್ರಯತ್ನ ಪಟ್ಟರೆ ಕಿರಿಕಿರಿ ಹೆಚ್ಚುತ್ತದೆ.

ಮಿತಿ ಮೀರಿ…(Crosses Boundaries): ಇನ್ನೊಬ್ಬರನ್ನು ಬದಲಾಯಿಸಲು ಅತಿಯಾಗಿ ಯತ್ನಿಸುವುದು ಸಂಬಂಧದ ಮಿತಿಯನ್ನು ಮೀರಿದಂತೆ ಆಗುತ್ತದೆ. ನೀವು ಹೇಳುವುದು ಸತ್ಯವೇ ಇರಬಹುದು, ಅವರ ಸ್ವಭಾವ ಮುಜುಗರದ್ದೇ (Irritate) ಆಗಿರಬಹುದು. ಆದರೆ ಅವರನ್ನು ನೀವು ಪದೇ ಪದೆ ವಿಮರ್ಶೆ ಮಾಡುತ್ತಿರುವುದು ಸರಿಯಲ್ಲ. ಅವರಲ್ಲಿ ಅರಿವು ಮೂಡಿಸುತ್ತೇನೆ ಎನ್ನುವ ಭಾವನೆ (Feel) ನಿಮಗಿರಬಹುದು. ಆದರೆ, ಜನರ ಮಿತಿಯನ್ನು ಮೀರಲು ಯಾರಿಗೂ ಹಕ್ಕು ಇರುವುದಿಲ್ಲ.   

ನಿಮ್ಮ ಗೆಳೆಯ ನಿಮ್ಮನ್ನು ನಿಜಕ್ಕೂ ಕೇರ್ ಮಾಡ್ತಾನಾ?

ನೈತಿಕವಾಗಿ ಸರಿಯೇ?: ಯಾರಾದರೂ ಇನ್ನೊಬ್ಬರನ್ನು ಬದಲಾಯಿಸಲು ಯಾಕೆ ಯತ್ನಿಸುತ್ತಾರೆ? ತಮಗೆ ಸೂಕ್ತವಾದ ಪತಿಯಾಗಲು, ಪತ್ನಿಯಾಗಲು, ಸ್ನೇಹಿತರಾಗಲು, ಸಹೋದರ-ಸಹೋದರಿಯಾಗಲು. ಅಲ್ಲವೇ? ಅಂದರೆ, ಇಲ್ಲಿ ನಮ್ಮ ದೃಷ್ಟಿಕೋನಕ್ಕೆ (View) ಮಾತ್ರ ಆದ್ಯತೆ ಇರುತ್ತದೆ. ಅವರ ವರ್ತನೆಯಲ್ಲಿ ಅದೆಷ್ಟು ಕೊರತೆಯಿದ್ದರೂ ಸಹ, ಇನ್ನೊಬ್ಬರನ್ನು ಬದಲಾಯಿಸುವ ಧೋರಣೆ ತೀರ ಸ್ವಾರ್ಥವೆನಿಸುತ್ತದೆ. ಹೀಗಾಗಿ, ಅವರು ಹೇಗಿದ್ದಾರೋ ಹಾಗೆಯೇ ಒಪ್ಪಿಕೊಂಡು (Accept),  ಸಮಯ ವ್ಯರ್ಥ ಮಾಡಿಕೊಳ್ಳದೆ ಕಾರ್ಯಪ್ರವೃತ್ತರಾಗಿರುವುದು ಉತ್ತಮ ಆಯ್ಕೆ. 

click me!