ಉತ್ತರ ಪ್ರದೇಶದ ಅಲಿಗಢದ ಸಣ್ಣ ಪಟ್ಟಣದಲ್ಲಿ ಮದುವೆ ಸಮಾರಂಭ ನಾಟಕೀಯ ಬೆಳವಣಿಗೆಗಳು ನಡೆದಿದೆ. ಮದುವೆಗೆ ಸಿದ್ಧವಾಗಿ ಬಂದಿದ್ದ ವರನಿಗೆ ಅಲ್ಲಿ ವಧುವಿಗೆ ಬದಲು ಮಾವ (ಪೊಲೀಸ್) ಕಾಯ್ತಿದ್ದರು. ಮದುವೆ ಮನೆಗೆ ಬಂದ ವರನನ್ನು ಅಲ್ಲಿಂದಲೇ ಅರೆಸ್ಟ್ ಮಾಡಿಕೊಂಡು ಹೋಗಿದ್ದಾರೆ.
ನವದೆಹಲಿ (ಸೆ.16): ಉತ್ತರಪ್ರದೇಶದ ಅಲಿಗಢ್‌ನ ಪುಟ್ಟ ಗ್ರಾಮ. ಇಡೀ ಊರಿನಲ್ಲಿ ಮದುವೆ ಸಂಭ್ರಮ. ಸಂತೋಷ, ಸಂಭ್ರಮಗಳಿಂದ ತುಂಬಿರಬೇಕಿದ್ದ ಮದುವೆಯ ಹಾಲ್ ಅಂದು ಅಚ್ಚರಿ ಹಾಗೂ ನಾಟಕೀಯ ತಿರುವುಗಳಿಗೆ ಕಾರಣವಾಗಯಿತು. ಸೋಮವಾರದಂದು ವಿವಾಹ ಸಮಾರಂಭ ಭರ್ಜರಿಯಾಗಿ ಸಾಗಿತ್ತು. ಮೆರವಣಿಗೆಯಲ್ಲಿ ವರ ಬರುತ್ತಿರುವ ವೇಳೆಯೇ ಇಡೀ ಮೆರವಣಿಗೆಯನ್ನು ಪೊಲೀಸರು ಅಡ್ಡಿಗಟ್ಟಿದರು. ಯಾವುದೋ ವಿಚಾರಣೆಗೆ ಬಂದಿರಬೇಕು ಎಂದು ಅಲ್ಲಿನ ಜನರು ಅಂದುಕೊಳ್ಳುವ ಹೊತ್ತಿಗಾಗಲೇ ಸೀದಾ, ವರನ ಬಳಿ ಬಂದ ಪೊಲೀಸ್, ಆತನಿಗೆ ಕೈಕೋಳ ಹಾಕಿ ಬಂಧಿಸಿಕೊಂಡು ಹೋದರು. ಇದನ್ನು ನೋಡುತ್ತಿದ್ದ ಸಂಬಂಧಿಕರಿಗೆ ಅಚ್ಚರಿಯ ಮೇಲೆ ಅಚ್ಚರಿ. ಕೊನೆಗೆ ಗೊತ್ತಾಗಿದ್ದೇನೆಂದರೆ, ಸ್ಥಳೀಯ ಕಳ್ಳತನದ ಪ್ರಕರಣವೊಂದರಲ್ಲಿ ವರ ಪ್ರಮುಖ ಆರೋಪಿಯಾಗಿದ್ದ. ಆತನ ಮದುವೆ ಎನ್ನುವುದು ಪೊಲೀಸರಿಗೆ ಗೊತ್ತಾಗಿತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದ ಆತನನ್ನು ಮದುವೆ ಮೆರವಣಿಗೆಯಲ್ಲಿಯೇ ಹಿಡಿದು ಬಂಧಿಸಿದ್ದಾರೆ. ಹೊಸ ಜೋಡಿಯನ್ನು ವೀಕ್ಷಿಸಲು ನೆರೆದಿದ್ದ ಸ್ನೇಹಿತರು ಮತ್ತು ಕುಟುಂಬದವರು, ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿದಾಗ, ಪೊಲೀಸರು ಕಳ್ಳತನದ ವಿವರಗಳನ್ನು ತಿಳಿಸಿದ್ದಾರೆ.
ಇನ್ನೊಂದೆಡೆ ಮದುವೆ ಮನೆಯಲ್ಲಿ ವಧು ಕಾದು ಕಾದು ಸುಸ್ತಾಗಿ ಹೋಗಿದ್ದಳು. ಕೊನೆಗೆ ಕಳ್ಳತನದ ಕೇಸ್‌ನಲ್ಲಿ ತಾನು ಮದುವೆಯಾಗಬೇಕಿದ್ದ ಹುಡುಗ ಬಂಧನವಾಗಿದ್ದಾನೆ ಎಂದು ತಿಳಿದಾಗ ಆಕೆ ಆಘಾತಗೊಂಡಿದ್ದಳು. ಇದರ ಬೆನ್ನಲ್ಲಿಯೇ ನಾಟಕೀಯ ಪ್ರಸಂಗಗಳು ಅಲ್ಲಿ ನಡೆದವು. ವರನ ಕುಟುಂಬದವರು ನಿನ್ನ ಮದುವೆಯಾಗಬೇಕಿದ್ದ ಹುಡುಗನ ಅಣ್ಣ ನಿನ್ನನ್ನು ಮದುವೆಯಾಗಲು ಸಿದ್ಧವಾಗಿದ್ದಾನೆ. ನಿನಗೆ ಒಪ್ಪಿಗೆ ಇದೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ತಕ್ಷಣೇ ಜವಾಬ್ದಾರಿಯುತವಾಗಿ ವರ್ತಿಸಿದ ಹುಡುಗಿ, ಹುಡುಗನ ಅಣ್ಣನನ್ನು ಮದುವೆಯಾಗಲು ಸೈ ಎಂದಿದ್ದಾಳೆ.
Viral Video: ವಿಮಾನದ ಟಾಯ್ಲೆಟ್‌ನಲ್ಲಿಯೇ ನವ ಜೋಡಿಯ ಸೆಕ್ಸ್!
ವರನನ್ನು ಫೈಝಲ್ ಎಂದು ಗುರುತಿಸಲಾಗಿದ್ದು, ಸ್ಥಳೀಯ ಮದ್ಯದಂಗಡಿ ಮತ್ತು ಕ್ಯಾಂಟೀನ್‌ನಿಂದ 35 ಕ್ರೇಟ್‌ಗಳ ಮದ್ಯ ಮತ್ತು ಇತರ ವಸ್ತುಗಳ ಕಳ್ಳತನ ಮಾಡಿದ್ದ ಆರೋಪ ಹೊತ್ತಿದ್ದ. ತನಿಖೆಯ ಸಮಯದಲ್ಲಿ ಪೊಲೀಸ್ ಅಧಿಕಾರಿಗಳು ಅಪರಾಧದ ಸ್ಥಳದಲ್ಲಿ ಫೈಜಲ್‌ನ ಬೈಕ್ ಹಾಗೂ ಮೊಬೈಲ್ ಫೋನ್‌ಅನ್ನು ಪತ್ತೆಯಾಗಿದ್ದವು. ಇದರ ಸೂಕ್ತ ವಿಚಾರಣೆ ನಡೆಸಿದಾಗ, ಈ ಕಳ್ಳತನ ಮಾಡಿದ್ದು ಫೈಜಲ್ ಎನ್ನುವುದು ಗೊತ್ತಾಗಿತ್ತು. ಫೈಜಲ್‌ನನ್ನು ಬಂಧಿಸಿ ವಿಚಾರಣೆ ನಡೆಸಿದ ಪೊಲೀಸರಿಗೆ ಆತ ತನ್ನನ್ನು ಒಪ್ಪಿಕೊಂಡಿದ್ದಾನಲ್ಲದೆ, ಕಳ್ಳತನದಲ್ಲಿ ತಾನು ನೇರವಾಗಿ ಭಾಗಿಯಾಗಿದ್ದೆ ಎಂದು ಹೇಳಿದ್ದಾರೆ.
Video: ಬೀದಿ ನಾಯಿಯ ಮೇಲೆ ಅತ್ಯಾಚಾರ, ದೆಹಲಿ ವ್ಯಕ್ತಿಯ ಮೇಲೆ ಎಫ್ಐಆರ್!