ಮದುವೆ ಅಂದ್ಮೇಲೆ ಹುಡುಗ–ಹುಡುಗಿ ಇರ್ಲೇಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಹುಡುಗಿ- ಹುಡುಗಿ, ಹುಡುಗ–ಹುಡುಗನ ಮದುವೆ ಕೂಡ ಪ್ರಸಿದ್ಧಿ ಪಡೆಯುತ್ತಿದೆ. ಹಾಗೆಯೇ ಇಲ್ಲೊಂದೆಡೆ ಸಲಿಂಗಕಾಮಿ ದಂಪತಿಗಳು ಅದ್ಧೂರಿ ಸಮಾರಂಭದಲ್ಲಿ ಮದುವೆಯಾಗಿದ್ದಾರೆ.
ಸಲಿಂಗಕಾಮಿ ವಿವಾಹವನ್ನು ಭಾರತದಲ್ಲಿ ಕಾನೂನುಬದ್ಧವಾಗಿ ಗುರುತಿಸಲಾಗಿಲ್ಲ ಮತ್ತುಇದನ್ನು ನೋಂದಾಯಿಸಲಾಗುವುದಿಲ್ಲ. ಹೀಗಿದ್ದೂ ಹಲವಾರು ಮಂದಿ ಲಿವ್ ಇನ್ ರಿಲೇಶನ್ ಶಿಪ್‌ನಲ್ಲಿ ಇದ್ದಾರೆ. ಮತ್ತೆ ಕೆಲವರು ಶಾಸ್ತ್ರೋಕ್ತವಾಗಿ ಮದುವೆಯೂ ಆಗುತ್ತಿದ್ದಾರೆ. ಈ ಹಿಂದೆ ಕೋಲ್ಕತ್ತಾದಲ್ಲಿ ಸಲಿಂಗಕಾಮಿ ಜೋಡಿ ಅದ್ಧೂರಿ ಸಮಾರಂಭದಲ್ಲಿ ಮದುವೆಯಾಗಿದ್ದರು. ಅದೇ ರೀತಿ ಮುಂಬೈನ್ ಅವಿನಾಶ್ ಮತ್ತು ವರುಣ್ ಎಂಬವರು ಸಾಂಪ್ರದಾಯಿವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬ ಸದಸ್ಯರು ಸಹ ಮದುವೆಯಲ್ಲಿ ಭಾಗಿಯಾಗಿ ನೂತನ ದಂಪತಿಗಳಿಗೆ ಶುಭ ಹಾರೈಸಿದರು.
ಇನ್‌ಸ್ಟಾಗ್ರಾಂನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ದಂಪತಿ (Couple), 'ನಾವು ಈ ಕ್ಷಣವನ್ನು ಸಮಯವನ್ನು ಫ್ರೀಜ್ ಮಾಡಲು ಸಾಧ್ಯವಾದರೆ ಎಂದು ಅಂದುಕೊಳ್ಳುತ್ತಿದ್ದೇವೆ. ನಾವು ಇಲ್ಲಿ ಅನುಭವಿಸಿದ ಪ್ರೀತಿಯು ಶಾಶ್ವತವಾಗಿ ಇರಬೇಕೆಂದು ನಾವು ಭಾವಿಸುತ್ತೇವೆ' ಎಂದು ಪೋಸ್ಟ್ ಮಾಡಿದ್ದಾರೆ.
ಅವಳಲ್ಲ ಅವನು: ಮದುವೆಗೆ ಮನೆಯವರಿಂದ ವಿರೋಧ, ಲಿಂಗ ಬದಲಾಯಿಸಿಕೊಂಡ ಯುವತಿ
ಸಾಂಪ್ರದಾಯಿಕ ಮದುವೆಯಲ್ಲಿ ಮನೆ ಮಂದಿಯೂ ಭಾಗಿ
'ನಾನು, ವರುಣ್, ಚಿಕ್ಕ ಹುಡುಗನಾಗಿದ್ದ ಎಲ್ಲಾ ಗುಜರಾತಿನ ಮದುವೆ ಮತ್ತು ಸಮಾರಂಭಗಳಲ್ಲಿ ಪ್ಲೇ ಆಗುವ ಫೇರಾ ಹಾಡನ್ನು ಕೇಳುತ್ತಾ, ನನ್ನ ಮದುವೆಯ ದಿನದ ಕನಸು ಕಾಣುತ್ತಿದ್ದೆ. ಇವತ್ತು ನನ್ನ ಕನಸು ನನಸಾಗುತ್ತಿದೆ' ಎಂದಿದ್ದಾರೆ. ಇನ್ನೊಬ್ಬರು, 'ನಾನು, ಅವಿನಾಶ್, ಎಲ್ಲಾ ಒಡಹುಟ್ಟಿದವರಲ್ಲಿ ಚಿಕ್ಕವನಾದ ನಾನು ಯಾವಾಗಲೂ ನನ್ನ ಹಿರಿಯರು ಹೊಂದಿರುವ ಜೀವನ ಮತ್ತು ಒಡನಾಟದ ಬಗ್ಗೆ ಕನಸು ಕಂಡೆ. ಜೀವನ ಸಂಗಾತಿಯ (Life partner) ಬಗ್ಗೆ ನನ್ನ ಕಲ್ಪನೆಗಳು ಮತ್ತು ಆಲೋಚನೆಗಳು ಬೇರೆಯೇ ಇತ್ತು. ಕೊನೆಗೂ ನಾನು ವರುಣ್‌ನ್ನು ಭೇಟಿಯಾದೆ' ಎಂದಿದ್ದಾರೆ.
'ಸಂತೋಷದ ಹಾದಿಯು ಯಾವಾಗಲೂ ಏರಿಳಿತಗಳೊಂದಿಗೆ ಇರುತ್ತದೆ ಮತ್ತು ನಮ್ಮನ್ನು ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಬಲಪಡಿಸಿದ @maitreya_dadashreeji ಅವರಿಗೆ ನಾವು ಧನ್ಯವಾದ ಹೇಳಲು ಸಾಧ್ಯವಿಲ್ಲ. ಈ ದಿನವನ್ನು ತುಂಬಾ ವಿಶೇಷವಾಗಿಸಿರುವ ನಮ್ಮ ಎಲ್ಲಾ ಸ್ನೇಹಿತರು ಮತ್ತು ಕುಟುಂಬಕ್ಕೆ, ನಾವು ನಿಮಗೆ ಕೃತಜ್ಞತೆ ಸಲ್ಲಿಸುತ್ತೇವೆ' ಎಂದು ನೂತನ ಜೋಡಿ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ.
ಮದುವೆಯಾದ ಗಂಡು ಜೋಡಿಯ ಅಂತರಾಳದ ನೋವಿಗಿಲ್ಲ ಪರಿಹಾರ!
ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್
ಅವಿನಾಶ್ ಹಾಗೂ ವರುಣ್ ದಂಪತಿ ತಾವು ಜೊತೆಯಾಗಿ ಸಮಯ ಕಳೆಯುತ್ತಿರುವ ಸುಂದರವಾದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಆಗಿರುವ ಈ ವಿಡಿಯೋಗೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು, 'ಸಲಿಂಗಕಾಮದ ಮದುವೆ ಜನರ ಮಧ್ಯೆ ಕಾಯಿಲೆಯಂತೆ ಹರಡುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬರು, 'ನಮ್ಮ ಮನೆಗಳಲ್ಲಿ ಬೇರೆ ಜಾತಿಯ ಮದುವೆಯಾಗಲು ಸಹ ಒಪ್ಪುತ್ತಿಲ್ಲ. ಇಲ್ಲಿ ನೋಡಿದರೆ ಇವರ ಪೇರೆಂಟ್ಸ್ ಸೇಮ್ ಜೆಂಡರ್‌ನಿಂದ ಮದ್ವೆಯಾಗಲು ಒಪ್ಪಿಗೆ ಕೊಟ್ಟಿದ್ದಾರಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬ ವ್ಯಕ್ತಿ, 'ಇದು ಸಮಾಜವನ್ನು ಹಾಳು ಮಾಡಲು ಉತ್ತಮ ದಾರಿ' ಎಂದು ಕಮೆಂಟಿಸಿದ್ದಾರೆ. ಇನ್ನೊಬ್ಬರು, 'ಇದು ಲವ್ ಅಲ್ಲ. ಮೆಂಟಲೀ ಡಿಸಾರ್ಡರ್ ಆಗಿದ್ದವರು ಮಾತ್ರ ಹೀಗೆ ಮಾಡುತ್ತಾರೆ' ಎಂದಿದ್ದಾರೆ. ಮತ್ತೊಬ್ಬರು, 'ಈ ಜನರೇಷನ್‌ನ ಸಮಸ್ಯೆಯೇನು' ಎಂದು ಪ್ರಶ್ನಿಸಿದದ್ದಾರೆ. ಇನ್ನೂ ಕೆಲವರು, ಗೇ ಕಪಲ್ ಮ್ಯಾರೇಜ್‌ಗೆ ಸಪೋರ್ಟ್ ಮಾಡಿ ಎಂದು ಕೇಳಿಕೊಂಡಿದ್ದಾರೆ.