ಹೆಂಡ್ತಿಗೆ ಡಿವೋರ್ಸ್ ನೀಡಿ 4 ವರ್ಷದ ಬಳಿಕ ಗೆಳೆಯನೊಂದಿಗೆ ಎಂಗೇಜ್ ಆದ ಫಾರ್ಮುಲಾ 1 ರೇಸರ್‌

Published : Jul 15, 2024, 06:25 PM IST
ಹೆಂಡ್ತಿಗೆ ಡಿವೋರ್ಸ್ ನೀಡಿ 4 ವರ್ಷದ ಬಳಿಕ ಗೆಳೆಯನೊಂದಿಗೆ ಎಂಗೇಜ್ ಆದ ಫಾರ್ಮುಲಾ 1 ರೇಸರ್‌

ಸಾರಾಂಶ

ಫಾರ್ಮುಲಾ 1 ರೇಸರ್ ಮೈಕೆಲ್ ಶುಮಾಕರ್ ಅವರ ಕಿರಿಯ ಸೋದರ ರಾಲ್ಫ್ ಶುಮಾಕರ್ ಅವರು ತಾವೊಬ್ಬರು ಸಲಿಂಗಿ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ ತಮ್ಮ ಗೆಳೆಯನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ಪೋಸ್ಟ್ ಮಾಡುವ ಮೂಲಕ ಈ ವಿಚಾರವನ್ನು ಅವರು ಬಹಿರಂಗಪಡಿಸಿದ್ದಾರೆ. 

ಫಾರ್ಮುಲಾ 1 ರೇಸರ್ ಮೈಕೆಲ್ ಶುಮಾಕರ್ ಅವರ ಕಿರಿಯ ಸೋದರ ರಾಲ್ಫ್ ಶುಮಾಕರ್ ಅವರು ತಾವೊಬ್ಬರು ಸಲಿಂಗಿ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ ತಮ್ಮ ಗೆಳೆಯನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ಪೋಸ್ಟ್ ಮಾಡುವ ಮೂಲಕ ಈ ವಿಚಾರವನ್ನು ಅವರು ಬಹಿರಂಗಪಡಿಸಿದ್ದಾರೆ.  

ಜರ್ಮನ್ ಮೂಲದ ಮಾಜಿ ಫಾರ್ಮುಲಾ 1 ರೇಸರ್‌ ಆಗಿರುವ ರಾಲ್ಫ್ ಶುಮಾಕರ್(Ralf Schumacher) ತಮ್ಮ ಗೆಳೆಯನೊಂದಿಗಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ರಾಲ್ಫ್ ಶುಮಾಕರ್ ಅವರು 2015ರಲ್ಲಿ ಪತ್ನಿ ಕೋರಾ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದರು. ರಾಲ್ಫ್ ಶುಮಾಕರ್ ಅವರ ಈ ಸೋಶಿಯಲ್ ಮೀಡಿಯಾ ಪೋಸ್ಟ್‌ಗೆ ಅನೇಕರು ಮೆಚ್ಚುಗೆ ಸೂಚಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಜರ್ಮನ್ ನಟಿ ಕಾರ್ಮೆನ್ ಗೀಸ್( Carmen Geiss) ಸೇರಿದಂತೆ ಅನೇಕ ಅಭಿಮಾನಿಗಳು ಕಾಮೆಂಟ್ ಸೆಕ್ಷನ್‌ನಲ್ಲಿ ಖುಷಿ ವ್ಯಕ್ತಪಡಿಸಿದ್ದಾರೆ. 

ಬಂಧನಕ್ಕೊಳಗಾದ ಈ ನಟನನ್ನು ಸಲಿಂಗಕಾಮಿ ಎಂದು ಪತ್ನಿ ವಿಚ್ಚೇದನ ನೀಡಿದ್ದಳು!

ಅಲ್ಲದೇ ತಮ್ಮ ಈ ಸಲಿಂಗತನದ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ  ರಾಲ್ಫ್ ಶುಮಾಕರ್, 'ಜಗತ್ತಿನಲ್ಲಿ ತುಂಬಾ ಸುಂದರವಾದ ವಿಚಾರವೆಂದರೆ  ನೀವು ಪ್ರತಿಯೊಂದನ್ನು ಶೇರ್ ಮಾಡಿಕೊಳ್ಳಬಹುದಾದ,  ನಿಮ್ಮ ಪರ ಇರುವ ಸರಿಯಾದ ಪಾಲುದಾರನನ್ನು ಹೊಂದಿರುವುದು ಎಂದು ಬರೆದುಕೊಂಡಿದ್ದಾರೆ.  ಇದಕ್ಕೆ ಪ್ರತಿಕ್ರಿಯಿಸಿದ ಜರ್ಮನ್ ನಟಿ, ನಾನು ನಿಮ್ಮಿಬ್ಬರನ್ನು ತುಂಬಾ ಪ್ರೀತಿಸುತ್ತಾನೆ ಎಂದು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಆತ ಕೊನೆಗೂ ಎರಡು ವರ್ಷಗಳ ನಂತರ ತನ್ನ ಭಾವನೆಯನ್ನು ಜಗತ್ತಿಗೆ ತಿಳಿಸಿದ ಎಂದು ಬರೆದಿದ್ದಾರೆ. ರಾಲ್ಫ್ ಶುಮಾಕರ್, ಅವರ ಧೈರ್ಯ ಪ್ರಾಮಾಣಿಕತೆ ಹಾಗೂ ಸ್ವಯಂ ಸ್ವೀಕರಿಸುವಿಕೆ ( self-acceptance)ಯ ಬಗ್ಗೆ ತಾನು ಹೆಮ್ಮೆ ಪಡುತ್ತೇನೆ ಎಂದು ನವಜೋಡಿಗೆ ನಟಿ ಶುಭಹಾರೈಸಿದ್ದಾರೆ.

ಫಾರ್ಮುಲಾ ರೇಸ್ ಇತಿಹಾಸದಲ್ಲೇ ಇದು 3ನೇ ಸಲಿಂಗ ಪ್ರೇಮದ  ಪ್ರಕರಣವಾಗಿದೆ.  ರಾಲ್ಫ್ ಶುಮಾಕರ್‌ಗೂ ಮೊದಲು ಲೆಲ್ಲಾ ಲೊಂಬರ್ಡಿ ಹಾಗೂ ಮೈಕ್ ಬ್ಯೂಟ್ಲರ್ ಅವರು ತಾವು ಸಲಿಂಗಿಗಳು ಎಂದು ಹೇಳಿಕೊಂಡಿದ್ದರು. 7 ಬಾರಿ ಫಾರ್ಮುಲಾ 1 ವಿಶ್ವ ಚಾಂಪಿಯನ್‌ ಆಗಿರುವ ಮೈಕೆಲ್ ಶುಮಾಕರ್ ಅವರ ಕಿರಿಯ ಸೋದರನಾಗಿರುವ 49 ವರ್ಷದ  ರಾಲ್ಫ್ ಶುಮಾಕರ್ ಅವರು ಕೋರಾ ಬ್ರಿಂಕ್ಮನ್‌ ಜೊತೆಗಿನ ತಮ್ಮ 14 ವರ್ಷಗಳ ದಾಂಪತ್ಯ ಜೀವನಕ್ಕೆ 2015ರಲ್ಲಿ ವಿದಾಯ ಹೇಳಿದ್ದರು. ಇಬ್ಬರು 2001ರಲ್ಲಿ ಎಂಗೇಜ್ ಆಗಿ ಮದುವೆಯಾಗಿದ್ದರು. ಅಲ್ಲದೇ ಅದೇ ವರ್ಷ ಪುತ್ರ ಡೇವಿಡ್‌ನನ್ನು ಬರಮಾಡಿಕೊಂಡಿದ್ದರು. ಆದರೆ 2015ರಲ್ಲಿ ಅವರಿಬ್ಬರು ವಿಚ್ಛೇದನ ಪಡೆದಿದ್ದರು. 

ಸಲಿಂಗಕಾಮಿ ಸ್ನೇಹಿತೆ ಜೊತೆ ತನ್ನ ಸಲ್ಲಾಪ ನೋಡಿದ ಮಗನನ್ನೇ ಹತ್ಯೆ ಮಾಡಿದ ತಾಯಿ

ಇತ್ತ ತಂದೆಯ ಈ ವಿಭಿನ್ನ ಪ್ರೇಮ ಸಂಬಂಧಕ್ಕೆ 22 ವರ್ಷದ ಮಗ ಡೇವಿಡ್ ಕೂಡ ಬೆಂಬಲ ವ್ಯಕ್ತಪಡಿಸಿದ್ದಾನೆ. ಜರ್ಮನ್ ಮೋಟಾರ್‌ ಸ್ಪೋರ್ಟ್ಸ್‌ ರೇಸಿಂಗ್ ಡ್ರೈವರ್ ಆಗಿರುವ 22 ವರ್ಷದ ಡೇವಿಡ್ ಶುಮಾಕರ್ ತಂದೆಯ ಈ ಹೊಸ ಇನ್ನಿಂಗ್ಸ್‌ ಬಗ್ಗೆ ಖುಷಿಯಾಗಿರುವುದಾಗಿ ಹೇಳಿರುವ ಆತ ಮಾಜಿ ಮೋಟಾರ್‌ ಸ್ಪೋರ್ಟ್ಸ್‌ ಡ್ರೈವರ್‌ಗೆ ಕೊನೆಗೂ ತಾವು ಖುಷಿಯಾಗಿರುವ ಹಾಗೂ ಆರಾಮದಾಯಕವಾಗಿರುವ ವ್ಯಕ್ತಿಯೊಬ್ಬರು ಸಿಕ್ಕಿದರು ಎಂದು ಬರೆದುಕೊಂಡಿದ್ದಾರೆ. 

 

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Commitment Phobia: ನಿಮ್ಮ ಸಂಗಾತಿಗೂ ಇದ್ಯಾ ಚೆಕ್ ಮಾಡ್ಕೊಳ್ಳಿ! ಗುರುತಿಸುವುದು ಹೇಗೆ?
Women Mistakes in Love: ಲವ್ವಲ್ಲಿ ಬಿದ್ದ ಹೆಣ್ಣು ಮಕ್ಕಳ ಹಣೆ ಬರಹವೇ ಇಷ್ಟು, ಮತ್ತದೇ ತಪ್ಪೆಸೆಗುತ್ತಾರೆ!