Marriage life ಲಿವಿಂಗ್ ಟುಗೆದರ್ ಹೆಚ್ಚಳಕ್ಕೆ ಆತಂಕ, ಡಿವೋರ್ಸ್ ತಿರಸ್ಕರಿಸಿ ಜೊತೆಯಾಗಿರಲು ಸೂಚಿಸಿದ ಹೈಕೋರ್ಟ್!

By Suvarna News  |  First Published Sep 1, 2022, 4:13 PM IST

ಜ್ಞಾನದ ಕುರಿತು ಹೇಳುವಾಗ ಒಂದು ಮಾತಿದೆ ವೈಸ್ ಇನ್ವೆಸ್ಟ್‌ಮೆಂಟ್ ಫಾರ್ ಎವರ್. ಅಂದರೆ ಜ್ಞಾನ ಅನ್ನೋ ಸಂಪತ್ತು ಯಾವತ್ತಿಗೂ ಅತೀ ದೊಡ್ಡ ಹೂಡಿಕೆ. ಆದರೆ ಈಗಿನ ಯುವ ಸಮೂಹ WIFE  ಪದವನ್ನು ವರಿ ಇನ್‌ವೈಟೆಡ್ ಫಾರ್ ಎವರ್ ಎಂದು ಬದಲಿಸಿದ್ದಾರೆ. ಲಿವಿಂಗ್ ಟುಗೆದರ್‌ನಿಂದ ಸಂಸಾರದ ಅರ್ಥ ಕಳೆದುಕೊಂಡಿದೆ ಎಂದು ಹೈಕೋರ್ಟ್ ಆತಂಕ ವ್ಯಕ್ತಪಡಿಸಿದೆ. ಇಷ್ಟೇ ಅಲ್ಲ ವಿಚ್ಚೇದನಕ್ಕೆ ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿ ಜೊತೆಯಾಗಿ ಬಾಳುವಂತೆ ಸೂಚಿಸಿದೆ. 


ಕೇರಳ(ಸೆ.01):  ವಿಚ್ಚೇದನ ಕುರಿತು ಅರ್ಜಿಯೊಂದು ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಪ್ರಕರಣದ ವಿಚಾರಣೆ ಹಲವು ಕುತೂಹಲಕಾರಿ ಅಂಶಗಳು ಹೊರಬಂದಿದೆ. ಇಷ್ಟೇ ಅಲ್ಲ ಸದ್ಯ ಸಮಾಜ ಸಾಗುತ್ತಿರುವ ದಿಕ್ಕು ಆತಂಕ ತಂದಿದೆ ಎಂದು ಅಭಿಪ್ರಾಯಪಟ್ಟಿದೆ. ಇಷ್ಟೇ ಅಲ್ಲ ಉಪಯೋಗಿಸಿ ಬಿಸಾಡುವ ಗ್ರಾಹಕರ ಸಂಸ್ಕೃತಿ ಸಂಸಾರದಲ್ಲಿ ನಡೆಯುವುದಿಲ್ಲ ಎಂದು ಕೋರ್ಟ್ ಛೀಮಾರಿ ಹಾಕಿದೆ. ಒಂದು ವಿಚ್ಚೇದನ ಪ್ರಕರಣ ಭಾರತದಲ್ಲಿ ಮಹಿಳೆ ಮೇಲೆ ನಡೆಯುತ್ತಿರುವ ದೌರ್ಜನ್ಯ ಕುರಿತು ಬೆಳಕು ಚೆಲ್ಲಿದೆ.  51 ವರ್ಷದ ಕೇರಳದ ವ್ಯಕ್ತಿ ಪತ್ನಿಯಿಂದ ವಿಚ್ಚೇದನ ಬೇಕು ಎಂದು ಹೈಕೋರ್ಟ್ ಮೆಟ್ಟಿಲೇರಿದ್ದ. ಪತಿಯ ಅಕ್ರಮ ಸಂಬಂಧ ಬೆಳಕಿಗೆ ಬಂದ ಬೆನ್ನಲ್ಲೇ ಸಿಕ್ಕ ಸಿಕ್ಕ ವಸ್ತುವಿನಲ್ಲಿ ಪತಿಗೆ ಮಂಗಳಾರತಿ ಮಾಡಿದ್ದಳು. ಇದನ್ನೇ ಬಂಡವಾಳವಾಗಿಟ್ಟುಕೊಂಡ ಪತಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ. ಮೂವರು ಮಕ್ಕಳ ಸಂಸಾರದಲ್ಲಿನ ಅತೀ ದೊಡ್ಡ ಬಿರುಕು ಹಾಗೂ ಸಮಸ್ಯೆ ಗಮನಿಸಿದ ಕೋರ್ಟ್ ವಿಚ್ಚೇದನ ನಿರಾಕರಿಸಿ ಮಹತ್ವದ ಆದೇಶ ನೀಡಿದೆ.

ಕೇರಳ ಹೈಕೋರ್ಟ್(Kerala High Court) ದ್ವಿಸದಸ್ಯ ಪೀಠದ ಜಸ್ಟೀಸ್ ಮುಷ್ತಾಕ್ ಹಾಗೂ ಸೋಫಿ ಥೋಮಸ್ ಈ ಮಹತ್ವದ ಆದೇಶ ನೀಡಿದ್ದಾರೆ. 2009ರಲ್ಲಿ ಮದುವೆಯಾದ ಕೇರಳದ ಜೋಡಿ ಸೌದಿ ಅರೆಬಿಯಾದಲ್ಲಿ ವಾಸವಾಗಿದ್ದಾರೆ. ಆದರೆ 2017ರಲ್ಲಿ ಪತಿಯ ಅಕ್ರಮ ಸಂಬಂಧ(extra marital affairs) ಬೆಳಕಿಗೆ ಬಂದಿದೆ. ಇತ್ತ ಪತ್ನಿಯಿಂದ ದೂರವಾಗಿ ಲಿವಿಂಗ್ ಟುಗೆದರ್‌ನಲ್ಲಿರಲು(living together) ಪತಿ ಇಚ್ಚಿಸಿದ್ದಾನೆ. ಅಕ್ರಮ ಸಂಬಂಧ ತಿಳಿದ ಪತ್ನಿ ಸರಿಯಾಗಿ ಮಂಗಳಾರತಿ ಮಾಡಿದ್ದಾಳೆ. ಪತ್ನಿ  ಹಲ್ಲೆ ಮಾಡಿದ್ದಾಳೆ ಅನ್ನೋ ಕಾರಣ ಮುಂದಿಟ್ಟು ಪತಿ ವಿಚ್ಚೇದನಕ್ಕೆ(Divorce) ಕೋರ್ಟ್ ಮೆಟ್ಟಿಲೇರಿದ್ದಾನೆ. ಮೂವರು ಮಕ್ಕಳ ಇವರ ಸಂಸಾರದಲ್ಲಿ(Family Life) ಬಿರುಕು ಮೂಡಿದೆ. ಪತಿ ತನ್ನ ತಪ್ಪನ್ನು ತಿದ್ದಿಕೊಂಡು ಮಕ್ಕಳ ಭವಿಷ್ಯಕ್ಕಾಗಿ ಒಂದಾಗಿ ಬಾಳಲು ಪತ್ನಿ ಒಲವು ತೋರಿದ್ದಾರೆ. ಆದರೆ ಪತಿಗೆ ಸುತಾರಾಂ ಇಷ್ಟವಿಲ್ಲ. 

Tap to resize

Latest Videos

 

ಪತ್ನಿಯನ್ನು ಬೇರೆ ಮಹಿಳೆಯರಿಗೆ ಹೋಲಿಸುವುದು ಕ್ರೌರ್ಯ: ಕೇರಳ ಹೈಕೋರ್ಟ್

ಈ ಪ್ರಕರಣವನ್ನು ಕೈಗೆತ್ತಿಕೊಂಡ ದ್ವಿಸದಸ್ಯ ಪೀಠ, ಯುವ ಸಮೂಹಕ್ಕೆ ಪತ್ನಿ(WIFE is Worry Invited For Ever)  ಅಂದರೆ ಭಯವನ್ನು ಸದಾಕಾಲ ಆಹ್ವಾನಿಸುವುದು ಎಂಬುದಾಗಿ ತಿಳಿದಿಕೊಂಡಿದ್ದಾರೆ. ಲಿವಿಂಗ್ ಟುಗೆದರ್ ಸಂಸ್ಕೃತಿಯಿಂದ ಮದುವೆ ಸಂಸಾರಗಳು(Marriage Life) ಮುರಿದು ಬೀಳುತ್ತಿದೆ. ಇದು ಉತ್ತಮ ಬೆಳವಣಿಗೆಯಲ್ಲ. ಪುರುಷ ಪತ್ನಿಯನ್ನು ಉಪಯೋಗಿಸಿ ಬಿಸಾಡುವ ಉತ್ಪನ್ನವಾಗಿ (Use and throw)ನೋಡಬಾರದು. ಮೂವರು ಮಕ್ಕಳನ್ನು ನೀಡಿದ್ದೀರಿ. ಅದರ ಜವಾಬ್ದಾರಿ ಯಾರು? ವಿಚ್ಚೇದನದಿಂದ ಮಕ್ಕಳ ಮೇಲಾಗುವ ಪರಿಣಾಮದ ಕುರಿತು ಯೋಚನೆ ಮಾಡಿದ್ದೀರಾ? ಅವರಿಗೆ ಆಗುತ್ತಿರುವ ಮಾನಸಿಕ ಹಿಂಸೆ, ಮುಂದಾಗುವ ಆಘಾತದ ಕುರಿತು ಸುಳಿವಾದರೂ ನಿಮಗೆ ಇದೆಯಾ ಎಂದು ವಿಚ್ಚೇದನ ಕೋರಿದ ಪತಿಗೆ ಕೋರ್ಟ್ ಚಾಟಿ ಬೀಸಿದೆ.

ಈ ರೀತಿಯ ಬೆಳವಿಗೆ ಉತ್ತಮವಲ್ಲ. ಕ್ಷುಲ್ಲಕ ಕಾರಣ, ಅಕ್ರಮ ಸಂಬಂಧ ಸೇರಿದಂತೆ ಇತರ ಕಾರಣಗಳಿಗೆ ಕೋರ್ಟ್ ಮೆಟ್ಟಿಲೇರುವ ಬದಲು ಸಮಾಧಾನವಾಗಿ ಚಿಂತಿಸಿ, ಸಮಸ್ಯೆ ಬಗೆ ಹರಿಸಿ ಮುಂದಕ್ಕೆ ಸಾಗಬೇಕು. ಹೀಗಾಗಿ ವಿಚ್ಚೇದನ ಅರ್ಜಿಯನ್ನು ತಿರಿಸ್ಕರಿಸಲಾಗುವುದು. ಮನಸ್ತಾಪ, ಅಕ್ರಮ ಸಂಬಂಧಗಳನ್ನು ಬಿಟ್ಟು ಪತ್ನಿ ಹಾಗೂ ಮಕ್ಕಳ ಜೊತೆ ಬಾಳಲು ಕೋರ್ಟ್ ಸೂಚಿಸಿದೆ.
 

click me!