ಪಾಲಕರನ್ನು ಮುಜುಗರಕ್ಕೊಳಪಡಿಸುತ್ತೆ ಮಕ್ಕಳ ಈ Bad Habits

By Suvarna NewsFirst Published Sep 1, 2022, 12:14 PM IST
Highlights

ತಮ್ಮ ಮಕ್ಕಳು ಏನು ಮಾಡಿದ್ರೂ ಪಾಲಕರಿಗೆ ಇಷ್ಟವಾಗುತ್ತದೆ. ಬೇರೊಂದು ಮಗುವಿಗೆ ತಮ್ಮ ಮಕ್ಕಳು ಹೊಡೆದ್ರೂ ನೋಡಿ ನಗುವ ಪಾಲಕರಿದ್ದಾರೆ. ಆದ್ರೆ ನಿಮ್ಮ ಈ ಅತಿಯಾದ ಮುದ್ದು, ಮಕ್ಕಳ ಜೀವನ ಹಾಳು ಮಾಡುವ ಜೊತೆಗೆ ಪಾಲಕರನ್ನೂ ಸಂಕಷ್ಟಕ್ಕೆ ದೂಡುತ್ತದೆ.

ಮಕ್ಕಳ ಪಾಲನೆ ಮಾತ್ರವಲ್ಲ ಪಾಲಕರಿಗೆ ಇನ್ನೂ ಅನೇಕ ಜವಾಬ್ದಾರಿಗಳಿರುತ್ತವೆ. ಇತ್ತೀಚಿನ ದಿನಗಳಲ್ಲಿ ಪತಿ – ಪತ್ನಿ ಇಬ್ಬರು ದುಡಿದ್ರೂ ತಿಂಗಳ ಕೊನೆಯಲ್ಲಿ ಜೇಬು ಖಾಲಿ ಎನ್ನುವ ಪರಿಸ್ಥಿತಿ ಅನೇಕರಿಗಿರುತ್ತದೆ. ಪಾಲಕರಿಬ್ಬರೂ ಕೆಲಸದಲ್ಲಿ ಬ್ಯುಸಿಯಿರುವ ಕಾರಣ ಮಕ್ಕಳ ಬಗ್ಗೆ ಹೆಚ್ಚು ಗಮನ ನೀಡಲು ಸಾಧ್ಯವಾಗುವುದಿಲ್ಲ. ಮಕ್ಕಳು ಯಾರ ಜೊತೆ ಸ್ನೇಹ ಬೆಳೆಸಿದ್ದಾರೆ ಹಾಗೆ ಮಕ್ಕಳು ಏನೆಲ್ಲ ಅಭ್ಯಾಸಗಳನ್ನು ಕಲಿತಿದ್ದಾರೆ ಎಂಬುದು ಪಾಲಕರಿಗೆ ತಿಳಿದಿರೋದಿಲ್ಲ. ಮತ್ತೆ ಕೆಲ ಪಾಲಕರಿಗೆ ಮಕ್ಕಳ ಕೆಲ ಅಭ್ಯಾಸ ತಿಳಿದಿದ್ರೂ ಆರಂಭದಲ್ಲಿ ಅದನ್ನು ನಿರ್ಲಕ್ಷ್ಯ ಮಾಡ್ತಾರೆ. ಇದನ್ನು ತಮಾಷೆಯಾಗಿ ತೆಗೆದುಕೊಳ್ತಾರೆ. ಆರಂಭದಲ್ಲಿ ತಮಾಷೆ ಎನ್ನಿಸುವ ವಿಷ್ಯ ಮುಂದೆ ಗಂಭೀರವಾಗುವ ಸಾಧ್ಯತೆಯಿರುತ್ತದೆ. ಮಕ್ಕಳು ಕೆಟ್ಟವರ ಸಹವಾಸ ಮಾಡಿ ಕೆಟ್ಟಿರುತ್ತಾರೆ. ಅವರ ಅಭ್ಯಾಸ ಬಿಡಿಸುವುದು ಕಷ್ಟ. ಹಾಗೆ ಮಕ್ಕಳ ಕೆಲ ಅಭ್ಯಾಸ ಪಾಲಕರನ್ನು ಮುಜುಗರಕ್ಕೀಡು ಮಾಡುತ್ತದೆ. ಹಾಗಾಗಿ ಪಾಲಕರು ಎಷ್ಟೇ ಬ್ಯುಸಿಯಿದ್ರೂ ಮಕ್ಕಳ ಮೇಲೆ ಒಂದು ಕಣ್ಣಿಟ್ಟಿರಬೇಕು. ಮಕ್ಕಳ ಕೆಲ ಅಭ್ಯಾಸ ಗೊತ್ತಾದ ತಕ್ಷಣ ಅದನ್ನು ಬಿಡಿಸುವ ಪ್ರಯತ್ನಕ್ಕೆ ಮುಂದಾಗ್ಬೇಕು. ಮಕ್ಕಳ ಯಾವ ಅಭ್ಯಾಸ ಪಾಲಕರನ್ನು ಮುಜುಗರಕ್ಕೀಡು ಮಾಡುತ್ತದೆ ಎಂಬುದನ್ನು ನಾವಿಂದು ಹೇಳ್ತೇವೆ. 

ಸದಾ ಗಲಾಟೆ – ಜಗಳ : ಅನೇಕ ಮಕ್ಕಳು (Children) ಬಾಲ್ಯ (Childhood) ದಲ್ಲಿಯೇ ಆಕ್ರಮಣಕಾರಿ ಪ್ರವೃತ್ತಿ ಹೊಂದಿರುತ್ತಾರೆ. ಸಿಕ್ಕವರಿಗೆಲ್ಲ ಹೊಡೆಯುತ್ತಿರುತ್ತಾರೆ. ಪಾಲಕರಿಗೆ ಇದು ತಮಾಷೆ ಎನ್ನಿಸುತ್ತದೆ. ಆದ್ರೆ ಮಕ್ಕಳು ದೊಡ್ಡವರಾದಂತೆ ಇದು ಮುಂದುವರೆದ್ರೆ ತೊಂದರೆ ಕಟ್ಟಿಟ್ಟಬುಟ್ಟಿ. ಹಾಗಾಗಿ ಮಕ್ಕಳ ಹೊಡೆಯುವ, ಗಲಾಟೆ ಮಾಡುವ ಚಟವನ್ನು ಆರಂಭದಲ್ಲಿಯೇ ಬಿಡಿಸಬೇಕು. ಮಕ್ಕಳಿಗೆ ಇದ್ರಿಂದಾಗುವ ನಷ್ಟವನ್ನು ಹೇಳ್ಬೇಕು. ಜೊತೆಗೆ ಪ್ರೀತಿಯಿಂದ ಮಾತನಾಡುವುದು ಹೇಗೆ ಎಂಬುದನ್ನು ಕಲಿಸಬೇಕು.

Relationship Tips: ಮದ್ವೆ ಮೊದ್ಲು ಇವುಗಳನ್ನು ತಿಳ್ಕೊಂಡ್ರೆ ಮ್ಯಾರೀಡ್ ಲೈಫ್ ಚೆನ್ನಾಗಿರುತ್ತೆ

ಕೆಟ್ಟ ಪದ (Bad Word) ಬಳಕೆ : ಮನೆಯಲ್ಲಿ ಪಾಲಕರು (Parents) ಮಾತನಾಡುವ ಶಬ್ಧಗಳನ್ನು ಅಥವಾ ಸ್ನೇಹಿತರು, ಸುತ್ತಮುತ್ತಲಿನ ಜನರು ಬಳಸುವ ಶಬ್ಧವನ್ನು ಮಕ್ಕಳು ಬೇಗ ಗ್ರಹಿಸ್ತಾರೆ. ನಂತ್ರ ಅವರೂ ಅದರ ಬಳಕೆ ಶುರು ಮಾಡ್ತಾರೆ. ಕೆಲವೊಮ್ಮೆ ಮಕ್ಕಳಿಗೆ ಆ ಪದದ ಅರ್ಥವೇ ತಿಳಿದಿರುವುದಿಲ್ಲ. ನಿಮ್ಮ ಮಕ್ಕಳು ಕೆಟ್ಟ ಭಾಷೆ, ಕೊಳಕು ಪದ ಬಳಕೆ ಮಾಡ್ತಿದ್ದರೆ ಅದನ್ನು ತಪ್ಪಿಸುವ ಕೆಲಸ ಮಾಡಿ. ಮನೆಯಲ್ಲಿ ಮಕ್ಕಳ ಮುಂದೆ ನೀವೂ ಅಸಬ್ಯ ಶಬ್ಧಗಳ ಬಳಕೆ ಮಾಡಬೇಡಿ. ಮಕ್ಕಳ ಮುಂದೆ ಜಗಳವಾಡುವಾಗ ಎಚ್ಚರವಿರಲಿ.

ಕದಿಯುವ ಅಭ್ಯಾಸ (Practice) : ಮಕ್ಕಳಿಗೆ ವಸ್ತುವನ್ನು ಕದಿಯಬೇಕೆಂಬ (Stealing) ಉದ್ದೇಶವಿರುವುದಿಲ್ಲ. ಅವರಿಗೆ ಇಷ್ಟವಾಗ್ತಿದ್ದಂತೆ ಅದನ್ನು ಎತ್ತಿಟ್ಟುಕೊಳ್ತಾರೆ. ಮನೆಯಲ್ಲಿ ಮಾತ್ರವಲ್ಲ ಶಾಲೆಯಲ್ಲೂ ಇದು ರೂಢಿಯಾದ್ರೆ ಇದಕ್ಕೆ ಕಳ್ಳತನ ಎಂಬ ಹೆಸರು ಬರುತ್ತದೆ. ಹಾಗಾಗಿ ಮಕ್ಕಳಿಗೆ ಯಾವುದೇ ವಸ್ತುವನ್ನು ತೆಗೆದುಕೊಳ್ಳುವಾಗ್ಲೂ ಪಾಲಕರನ್ನು ಅಥವಾ ಆ ವಸ್ತುವಿನ ಮಾಲೀಕರನ್ನು ಕೇಳಬೇಕೆಂಬ ಗುಣ ಬೆಳೆಸಿ. ಆಗ ಮಕ್ಕಳು ಸದ್ದಿಲ್ಲದೆ ಎತ್ತಿಟ್ಟುಕೊಳ್ಳುವ ಬದಲು ಕೇಳಿ ಪಡೆಯುತ್ತಾರೆ.

ಕೀಟಲೆ : ಮಕ್ಕಳೆಂದ ಮೇಲೆ ಸಣ್ಣಪುಟ್ಟ ಕೀಟಲೆ ಸಾಮಾನ್ಯ. ಆದ್ರೆ ಇದು ಅತಿರೇಕಕ್ಕೆ ಹೋಗದಂತೆ ನೋಡಿಕೊಳ್ಳಬೇಕು. ಶಾಲೆಯಲ್ಲಿ ಅಥವಾ ಸ್ನೇಹಿತರ ಜೊತೆ ಅತಿಯಾದ ಕೀಟಲೆ ಸಮಸ್ಯೆ ತರುತ್ತದೆ. ಹಾಗಾಗಿ ಮಕ್ಕಳಿಗೆ ಕೀಟಲೆಯಿಂದಾಗುವ ಸಮಸ್ಯೆಗಳು ಏನು ಎಂಬುದನ್ನು ತಿಳಿಸಿ ಹೇಳಬೇಕು. 

ಮಕ್ಕಳು ಹಬ್ಬದ ದಿನ ಹೀಗೆಲ್ಲಾ ಮಾಡಿದ್ರೆ ಮೆದುಳು ಚುರುಕಾಗುತ್ತೆ

ಹಠಮಾರಿ ಬುದ್ಧಿ : ಮಕ್ಕಳ ಮೊಂಡುತನ ಪಾಲಕರಿಗೆ ತಲೆನೋವು ತರಿಸುತ್ತದೆ. ಮಕ್ಕಳು ಚಿಕ್ಕ ಚಿಕ್ಕ ವಿಷ್ಯಕ್ಕೆ ಗಲಾಟೆ ಮಾಡ್ತಾರೆ. ಆರಂಭದಲ್ಲಿ ಮಕ್ಕಳು ಗಲಾಟೆ ಮಾಡ್ತಾರೆ ಎನ್ನುವ ಕಾರಣಕ್ಕೆ ಪಾಲಕರು ಎಲ್ಲವನ್ನೂ ಕೊಡಿಸ್ತಾರೆ. ಆದ್ರೆ ಇದೇ ಮುಂದುವರೆದ್ರೆ ಕಷ್ಟವಾಗುತ್ತದೆ. ಹಾಗಾಗಿ ಮಕ್ಕಳಿಗೆ ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸವನ್ನು ವಿವರಿಸಬೇಕು. ಅವರ ಹಠಮಾರಿ ತನವನ್ನು ಕಡಿಮೆ ಮಾಡಲು ಬೈದು, ಹೊಡೆಯುವ ಬದಲು ಪ್ರೀತಿಯಿಂದ ತಿದ್ದಿ ಹೇಳ್ಬೇಕು.
 

click me!