ಹುದ್ದೆ ಜ್ಯೂನಿಯರ್ ಪತ್ನಿ. ಅನುಭವ ಬೇಡವೇ ಬೇಡ, ರಾತ್ರಿ ಬಿರಿಯಾನಿ ಮಾಡಲು ಬರಬೇಕು. 3 ಸುತ್ತಿನ ಸಂದರ್ಶನ ಇರಲಿದೆ. ಇದರ ಜೊತೆಗೆ ಕೆಲ ಅರ್ಹತೆಗಳನ್ನು ಪಟ್ಟಿ ಮಾಡಿ ಜಾಹೀರಾತು ನೀಡಲಾಗಿದೆ. ಲಿಂಕ್ಡ್‌ಇನ್‌ನಲ್ಲಿ ಸಾಫ್ಟ್‌ವೇರ್ ಎಂಜಿನೀಯರ್ ಪೋಸ್ಟ್ ಭಾರಿ ವೈರಲ್ ಆಗಿದೆ.
ನವದೆಹಲಿ(ಏ.09) ಆಕರ್ಷಕ ವೇತನ ಉದ್ಯೋಗವೊಂದು ತೆರೆದುಕೊಂಡಿದೆ. ಹುದ್ದೆ ಜ್ಯೂನಿಯರ್ ಪತ್ನಿ. ಅನುಭವಿಗಳು ಈ ಉದ್ಯೋಗಕ್ಕೆ ಅರ್ಹರಲ್ಲ. ಆದರೆ ಕನಿಷ್ಠ 2 ವರ್ಷ ಅಡುಗೆ ಮಾಡುವಲ್ಲಿ ಅನುಭವ ಇರಬೇಕು. ರಾತ್ರಿ ಖಾರವಾದ ಬಿರಿಯಾನಿ ಮಾಡಲು ಬರಬೇಕು. ಉದ್ಯೋಗದ ರೀತಿ ಜೀವನ ಪರ್ಯಂತ, ಇದರ ಜೊತೆಗೆ ಉತ್ತಮ ಸಂವಹನ ಕೌಶಲ್ಯ, ಪ್ರೀತಿ, ಗೌರವ ನೀಡಬೇಕು ಸೇರಿದಂತೆ ಹಲವು ಅರ್ಹತೆಗಳನ್ನು ಪಟ್ಟಿ ಮಾಡಿದ ಲಿಂಕ್ಡ್‌ಇನ್ ಪೋಸ್ಟ್ ಭಾರಿ ವೈರಲ್ ಆಗಿದೆ. ಈ ಅರ್ಹತೆಗಳು ಇದ್ದಲ್ಲಿ, ಬಯೋಡೇಟಾ ಕಳುಹಿಸಲು ಸೂಚಿಸಲಾಗಿದೆ. ಆದರೆ ಆಸಕ್ತರು ಬಯೋಡೇಟಾ ಕಳುಹಿಸುವ ಮೊದಲು ಈ ಜಾಹೀರಾತು ಪೋಸ್ಟ್ ಪೂರ್ತಿ ಓದುವುದು ಉತ್ತಮ.
ಸಾಫ್ಟ್‌ವೇರ್ ಎಂಜಿನೀಯರ್ ಲಿಂಕ್ಡ್‌ಇನ್‌ನಲ್ಲಿ ಮಾಡಿದ ಪೋಸ್ಟ್ ಭಾರಿ ವೈರಲ್ ಆಗಿದೆ. ಅರ್ಜೆಂಟ್ ಹೈರಿಂಗ್(ತ್ವರಿತ ನೇಮಕಾತಿ) ಎಂದು ಪೋಸ್ಟ್ ಮಾಡಿದ್ದಾರೆ. ಆದರೆ ಈ ಪೋಸ್ಟ್ ಅಂತ್ಯದಲ್ಲಿ ಇದು ಕೇವಲ ಜನರ ಮುಖದಲ್ಲಿ ನಗು ತರಿಸಲು ಹಾಕಿದ ಪೋಸ್ಟ್ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಈ ಎಂಜಿನೀಯರ್ ಹಾಕಿದ ಪೋಸ್ಟ್ ಓದಿದ ಬಳಿಕ ಒಂದು ಕ್ಷಣ ನಗು ಬಾರದೇ ಇರದು.
undefined
ಗರ್ಲ್ ಫ್ರೆಂಡ್ ಬೇಕೆಂದು ಈತ ಎಲ್ಲಿ ಜಾಹೀರಾತು ನೀಡಿದ್ದಾನೆ ಗೊತ್ತಾ?
ಸಾಫ್ಟ್‌ವೇರ್ ಎಂಜಿನೀಯರ್ ಜ್ಯೂನಿಯರ್ ಪತ್ನಿಗಾಗಿ ಜಾಹೀರಾತು ನೀಡಿದ್ದಾರೆ.ನನ್ನ ಬಾಳಿಗೆ ಜ್ಯೂನಿಯರ್ ಪತ್ನಿಯ ಹುಡುಕಾಟದಲ್ಲಿ ಈ ತ್ವರಿತ ನೇಮಕಾತಿ ಜಾಹೀರಾತು ನೀಡುತ್ತಿದ್ದೇನೆ. ದಯವಿಟ್ಟು ಗಮನಿಸಿ, ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಅನುಭವಿಗಳಾಗಿರಬಾರದು. ಅನುಭವಿಗಳಿಗೆ ನಾನು ಪ್ರತ್ಯೇಕ ಸಂದರ್ಶನ ಆಯೋಜಿಸುತ್ತೇನೆ ಎಂದು ಪೋಸ್ಟ್‌ನ ಆರಂಭದಲ್ಲಿ ಹೇಳಲಾಗಿದೆ.
ಉದ್ಯೋಗದ ರೀತಿ ಜೀವನ ಪರ್ಯಂತ. ಅನುಭವ ಇಲ್ಲದ ಅರ್ಹರಿಗೆ ಆದ್ಯತೆ ನೀಡಲಾಗುತ್ತದೆ. ವೇತನ ಗೌಪ್ಯವಾಗಿ ಇಡಲಾಗುತ್ತದೆ. ಒಟ್ಟು ಮೂರು ಸುತ್ತಿನ ಸಂದರ್ಶನ ಇರಲಿದೆ. ಕೊನೆಯ ಹಂತ ಮುಖಾಮುಖಿ ಸಂದರ್ಶನವಾಗಲಿದೆ. ಜ್ಯೂನಿಯರ್ ಪತ್ನಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಆಸಕ್ತರಲ್ಲಿ ಇರಬೇಕಾದ ಅರ್ಹತೆಗಳ ಕುರಿತು ಈ ಪೋಸ್ಟ್‌ನಲ್ಲಿ ಹೇಳಲಾಗಿದೆ.
ಅಡುಗೆಯಲ್ಲಿ ಕನಿಷ್ಠ 2 ವರ್ಷದ ಅನುಭವ ಇರಬೇಕು. ರಾತ್ರಿ ಎದ್ದು ನನಗೆ ಖಾರವಾದ ಬಿರಿಯಾನಿ ಮಾಡುವ ಸಾಮರ್ಥ್ಯ ಇರಬೇಕು. ಉತ್ತಮ ಸಂವಹನ ಕೌಶಲ್ಯವಿರಬೇಕು. ಗೌರವಾನ್ವಿತ ಹಾಗೂ ಯೋಗ್ಯರಾಗಿರಬೇಕು. ಅವರಲ್ಲಿ ವಿಧೇಯ ಹಾಗೂ ಪ್ರೀತಿ ಇರಬೇಕು ಜೊತೆಗೆ ಗೋಲ್ ಒರಿಯೆಂಟೆಡ್(ಗುರಿ ಆಧಾರಿತ) ಆಗಿರಬೇಕು(ನಾನು ಎಲ್ಲಾ ಕೆಲಸಗಳನ್ನು ಮಾಡುತ್ತೇನೆ, ಆದರೆ ಏನು ಮಾಡುತ್ತಿದ್ದೇನೆ ಎಂದ ಅವಳು ಅರ್ಥಮಾಡಿಕೊಳ್ಳಬೇಕು) ಇಷ್ಟು ಅರ್ಹತೆಗಳಿರುವ ಸೂಕ್ತ ಅಭ್ಯರ್ಥಿಗಳು ಬಯೋಡೇಟಾ(ಸಿವಿ) ಕಳುಹಿಸಿ ಎಂದು ಪೋಸ್ಟ್ ಹಾಕಾಲಾಗಿದೆ. ಈ ಪೋಸ್ಟ್ ಕೊನೆಯ ಸಾಲಿನಲ್ಲಿ ಇದು ತಮಾಷೆಗಾಗಿ ಹಾಕಿರುವ ಪೋಸ್ಟ್. ಕೇವಲ ಜನರನ್ನು ನಗಿಸಲು ಹಾಕಲಾಗಿದೆ ಎಂದು ಸ್ಪಷ್ಟವಾಗಿ ಬರೆಯಲಾಗಿದೆ.
ಮನೆಯಲ್ಲಿ ದೆವ್ವವಿದ್ರೆ, ನಮ್ಮನ್ನು ಕರೆಯಿರಿ, ಇವರೇನು ಓಡಿಸ್ತಾರಾ? ಹೊಸ ಬ್ಯುಸಿನೆಸ್ ಟೆಕ್ನಿಕ್ ಇದು!