ಪ್ರಾಣಿಗಳನ್ನು ಅತೀ ಪ್ರೀತಿಸೋದೊಂದು ರೋಗ,! 159 ಪ್ರಾಣಿ ಸಾಕಿ ಸಂಕಷ್ಟಕ್ಕೀಡಾದ ಮಹಿಳೆ

By Suvarna News  |  First Published Apr 8, 2024, 3:48 PM IST

ಪ್ರಾಣಿಗಳನ್ನು ಪ್ರೀತಿಸೋದು ಸಾಮಾನ್ಯ. ಆದ್ರೆ ನಿಮ್ಮ ಅತೀ ಪ್ರೀತಿ ಲಾಭಕ್ಕಿಂತ ನಷ್ಟ ಉಂಟುಮಾಡುತ್ತದೆ. ಈ ಮಹಿಳೆ ಮಿತಿಮೀತಿ ಪ್ರಾಣಿ ಸಾಕಿ ಈಗ ದಂಡ ಕಟ್ಟುವ ಸ್ಥಿತಿಗೆ ಬಂದಿದ್ದಾಳೆ, 
 


ಸಾಕು ಪ್ರಾಣಿಗಳ ಮೇಲೆ ಜನರು ಅಪಾರ ಪ್ರೀತಿಯನ್ನು ಹೊಂದಿರುತ್ತಾರೆ. ಸಾಕು ಪ್ರಾಣಿಗಳನ್ನು ತಮ್ಮ ಮನೆಯ ಸದಸ್ಯರಂತೆ ನೋಡಿಕೊಳ್ತಾರೆ. ಸಾಕು ಪ್ರಾಣಿಗೆ ಏನಾದ್ರೂ ಅನಾರೋಗ್ಯ ಕಾಡಿದ್ರೆ ಅದನ್ನು ವೈದ್ಯರ ಬಳಿ ಕರೆದೊಯ್ಯುತ್ತಾರೆ. ಅದರ ಆರೈಕೆಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡ್ತಾರೆ. ಸಾಕು ಪ್ರಾಣಿಗೆ ವಿಶೇಷ ವ್ಯವಸ್ಥೆ ಮಾಡುವುದಲ್ಲದೆ ಅವರು ಎಲ್ಲಿಗೆ ಹೋದ್ರೂ ಈ ಪ್ರಾಣಿಗಳನ್ನೂ ಕರೆದೊಯ್ಯುವ ಜನರಿದ್ದಾರೆ. 

ಮನೆ (Home) ಯಲ್ಲಿ ಒಂದು ಇಲ್ಲವೆ ಮೂರರಿಂದ ನಾಲ್ಕು ಸಾಕು ಪ್ರಾಣಿಗಳಿರುತ್ತವೆ. ಅಪರೂಪಕ್ಕೆ ಕೆಲವರು ಹತ್ತು ಸಾಕು ಪ್ರಾಣಿ (Pet Animal) ಗಳನ್ನು ಸಾಕುತ್ತಾರೆ. ಅದಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಿ, ಜಾಗ ನಿರ್ಮಾಣ ಮಾಡಿ, ಸೂಕ್ತ ಆರೈಕೆಯಲ್ಲಿ ಸಾಕು ಪ್ರಾಣಿಗಳನ್ನು ಸಾಕುತ್ತಾರೆ. ಆದ್ರೆ ಇಲ್ಲೊಬ್ಬಳು ಒಂದಲ್ಲ ಎರಡಲ್ಲ ಬರೋಬ್ಬರಿ 159 ಸಾಕುಪ್ರಾಣಿಗಳನ್ನು ಸಾಕಿದ್ದಾಳೆ. ಆದ್ರೆ ಈ ಸಾಕು ಪ್ರಾಣಿಗಳೇ ಆಕೆಗೆ ದುಬಾರಿಯಾಗಿದೆ. ಕೋರ್ಟ್ (Court) ಇದಕ್ಕೆ ಬಾರೀ ದಂಡ ವಿಧಿಸಿದೆ.

Tap to resize

Latest Videos

ಹಿಂದೂ ವಿವಾಹಕ್ಕೆ ಕನ್ಯಾದಾನ ಕಡ್ಡಾಯವಲ್ಲ, ಸಪ್ತಪದಿ ಮುಖ್ಯ ಎಂದ ಹೈಕೋರ್ಟ್‌

ಘಟನೆ ನಡೆದಿರೋದು ಫ್ರೆಂಚ್ ನಲ್ಲಿ. ಅಲ್ಲಿನ 68 ವರ್ಷದ ಮಹಿಳೆ, ತನ್ನ 52 ವರ್ಷದ ಸಂಗಾತಿ ಮತ್ತು 159 ನಾಯಿಗಳು ಮತ್ತು ಬೆಕ್ಕುಗಳೊಂದಿಗೆ ಫ್ಲಾಟ್‌ನಲ್ಲಿ ವಾಸವಾಗಿದ್ದಾಳೆ. ಇಷ್ಟೊಂದು ಸಾಕುಪ್ರಾಣಿಗಳನ್ನು ಸಾಕಬೇಕು ಅಂದ್ರೆ ದೊಡ್ಡ ಜಾಗದ ವ್ಯವಸ್ಥೆ ಇರಬೇಕು. ಆದ್ರೆ ಈ ಮಹಿಳೆ ಕೇವಲ 861 ಚದರ ಅಡಿ ಜಾಗದಲ್ಲಿ ಪ್ರಾಣಿಯನ್ನು ಸಾಕುತ್ತಿದ್ದಾಳೆ. ಇದ್ರಿಂದಾಗಿ ಆಕೆಗೆ ಇಷ್ಟೋಂದು ಪ್ರಾಣಿ ಸಾಕೋದು ಕಷ್ಟ. ಮನೆಯಿಂದ ದುರ್ವಾಸನೆ ಬರ್ತಿದೆ.

ಅಪಾರ್ಟ್ಮೆಂಟ್ ನ ಅವರ ಮನೆ ಕೊಳಕಿನಿಂದ ಕೂಡಿದೆ. ಇದು ಅಕ್ಕಪಕ್ಕದವರಿಗೆ ಹಿಂಸೆಯಾಗ್ತಿತ್ತು. ಹಾಗಾಗಿ ನೆರೆಯವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಮಹಿಳೆ ಮನೆಗೆ ಬಂದ ಪೊಲೀಸರು ಅಲ್ಲಿನ ಸ್ಥಿತಿ ನೋಡಿ ದಂಗಾಗಿದ್ದಾರೆ. ಪೊಲೀಸರು ಮನೆಗೆ ಹೋದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಎರಡು ಸತ್ತ ನಾಯಿ ಮನೆಯ ಬಾತ್ ರೂಮಿನಲ್ಲಿತ್ತು. ಅನೇಕ ಪ್ರಾಣಿಗಳಿಗೆ ಸರಿಯಾದ ಆಹಾರ ಸಿಕ್ಕಿರಲಿಲ್ಲ. ಹಾಗಾಗಿ ಅವು ಅನಾರೋಗ್ಯದಿಂದ ಬಳಲುತ್ತಿದ್ದವು. ಕೆಲ ಪ್ರಾಣಿಗಳಿಗೆ ಸೋಂಕು ತಗುಲಿತ್ತು. ಕೆಲವು ಅಸ್ವಸ್ಥವಾಗಿದ್ದವು ಎಂದು ಪೊಲೀಸರು ಹೇಳಿದ್ದಾರೆ.

ಸದ್ಯ ಎಲ್ಲ ಪ್ರಾಣಿಗಳನ್ನು ರಕ್ಷಿಸಲಾಗಿದೆ. ಅವುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗ್ತಿದೆ. ಪ್ರಾಣಿಗಳೆಂದ್ರೆ ನನಗೆ ಪ್ರೀತಿ. ಹಾಗಾಗಿ ಅವುಗಳನ್ನು ನಾನು ರಕ್ಷಣೆ ಮಾಡುತ್ತಿದ್ದೆ ಎಂದು ಮಹಿಳೆ ಹೇಳಿದ್ದಾಳೆ. ಆದ್ರೆ ಇದೊಂದು ಮಾನಸಿಕ ಖಾಯಿಲೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನು ವೈದ್ಯರು ನೋಹಸ್ ಸಿಂಡ್ರೋಮ್ ಎಂದು ಕರೆದಿದ್ದಾರೆ. ಈ ಖಾಯಿಲೆಯಲ್ಲಿ ರೋಗಿ ಪ್ರಾಣಿಗಳ ಮೇಲೆ ಅಪಾರ ಪ್ರೀತಿ ಹೊಂದಿರುತ್ತಾನೆ. ಪ್ರಾಣಿಗಳನ್ನು ರಕ್ಷಿಸಿ ಅವುಗಳನ್ನು ತನ್ನ ಬಳಿ ಇಟ್ಟುಕೊಳ್ಳಲು ಬಯಸ್ತಾನೆ. ಪ್ರಾಣಿಗಳನ್ನು ಆರೈಕೆ ಮಾಡುವ ಸಾಮರ್ಥ್ಯವಿಲ್ಲದೆ ಹೋದ್ರೂ ಅವರು ಪ್ರಾಣಿಯನ್ನು ಸಾಕಲು ಬಯಸ್ತಾರೆ ಎಂದು ವೈದ್ಯರು ಹೇಳಿದ್ದಾರೆ.

Cycling and Firtility: ಸೈಕ್ಲಿಂಗ್ ಮಾಡಿದರೆ ಪುರುಷತ್ವವೇ ಕಡಿಮೆಯಾಗುತ್ತಾ?

ಮಹಿಳೆ ಕೂಡ ನೋಹಸ್ ಸಿಂಡ್ರೋಮ್ ಹೆಸರಿನ ಖಾಯಿಲೆಯಿಂದ ಬಳಲುತ್ತಿದ್ದಳು. 2018ರಲ್ಲಿ ಆಕೆ ಮೂರು ನಾಯಿ ಮತ್ತು ಮೂರು ಬೆಕ್ಕನ್ನು ಸಾಕಿದ್ದಳು. ಆ ನಂತ್ರ  ಬೀದಿ ಬೆಕ್ಕು, ನಾಯಿಗಳನ್ನು ಮನೆಗೆ ತಂದಳು. ಆಗ ಪ್ರಾಣಿಗಳ ಸಂಖ್ಯೆ ಮೂವತ್ತಾಗಿತ್ತು. ಅದೇ ಪ್ರಾಣಿಗಳು ಮರಿ ಹಾಕ್ತಾ ಬಂದಿವೆ. ಹಾಗಾಗಿ ಅದ್ರ ಸಂಖ್ಯೆ 159ಕ್ಕೆ ಬಂದು ನಿಂತಿದೆ. ಸದ್ಯ ಕೋರ್ಟ್ ಮಹಿಳೆ ಕೇಸ್ ಗೆ ತಡೆ ನೀಡಿದೆ. ಪ್ರಾಣಿ ಹತ್ಯೆ ಹಾಗೂ ಆರೈಕೆಯಲ್ಲಿ ನಿರ್ಲಕ್ಷ್ಯ ಮಾಡಿರುವ ಕಾರಣ 1 ಕೋಟಿ 33 ಲಕ್ಷ ರೂಪಾಯಿ ದಂಡ ವಿಧಿಸುವಂತೆ ಕೋರ್ಟ್ ಸೂಚನೆ ನೀಡಿದೆ. 

click me!