ಸ್ನೇಹಿತೆ ಇಷ್ಟ ಅಂತ ಪತಿ ಜೊತೆ ವಿವಾಹ ಮಾಡಿಸಿದ ಮಡದಿ, 28 ಮಕ್ಕಳ ತಂದೆ ಹೇಳಿದ್ದಾನೆ ಸುಖಿ ಸಂಸಾರದ ಸೀಕ್ರೆಟ್ಸ್!

By Suvarna News  |  First Published Apr 8, 2024, 3:54 PM IST

ಒಂದೆರಡು ಮಕ್ಕಳನ್ನು ಸಂಭಾಳಿಸೋದೇ ಅಮೆರಿಕಾದ ಈಗ ಕಷ್ಟ. ಆದ್ರೆ ಈತ 28 ಮಕ್ಕಳ ತಂದೆ. ಇಬ್ಬರು ಪತ್ನಿಯರು.. ಎಲ್ಲದರಲ್ಲೂ ಸಂತೋಷವಿದೆ ಎನ್ನುತ್ತಾನೆ ಈ ವ್ಯಕ್ತಿ, ಸುಖಿ ಜೀವಿಯಂತೆ


ಬಹುಪತ್ನಿತ್ವ ಪದ್ಧತಿ ಈಗ್ಲೂ ಅನೇಕ ಕಡೆ ಜಾರಿಯಲ್ಲಿದೆ. ಕೆಲವರು ಹೊಂದಾಣಿಕೆ ಜೀವನ ನಡೆಸಿದ್ರೆ ಮತ್ತೆ ಕೆಲವರು ಎಲ್ಲ ಪತ್ನಿ ಜೊತೆ ಸಂತೋಷದ ಜೀವನ ನಡೆಸುತ್ತಾರೆ. ಎರಡು, ಮೂರು ಪತ್ನಿಯರನ್ನು ಹೊಂದಿರುವ ಅನೇಕರು ನಮ್ಮಲ್ಲಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಮಲೇಷ್ಯಾದ ಹಾಡುಗಾರ್ತಿಯೊಬ್ಬಳು ತನ್ನ ವೃತ್ತಿಗೆ ಹೆಚ್ಚು ಆದ್ಯತೆ ನೀಡುವ ಕಾರಣ ಪತಿ ಒಬ್ಬಂಟಿಯಾಗುತ್ತಾನೆಂದು ಇನ್ನೊಂದು ಮದುವೆ ಮಾಡಿರುವುದಾಗಿ ಹೇಳಿದ್ದಳು. ಆಕೆ ಮಾತ್ರವಲ್ಲ ಇನ್ನು ಕೆಲವರು ಒಬ್ಬ ಸಂಗಾತಿಗಿಂತ ಇಬ್ಬರು ಸಂಗಾತಿಗಳಿದ್ದರೆ ಜೀವನದ ಸುಖಕರ ಎಂದು ನಂಬುತ್ತಾರೆ. ಈಗ ಇನ್ನೊಂದು ದಂಪತಿ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಬ್ಬರು ಪತ್ನಿಯರ ಜೊತೆ ಸುಖ ಸಂಸಾರ ಮಾಡ್ತಿರುವ ವ್ಯಕ್ತಿಗೆ ಒಂದಲ್ಲ ಎರಡಲ್ಲ ಇಪ್ಪತ್ತೆಂಟು ಮಕ್ಕಳು. ಎರಡನೇ ಮದುವೆ ಆತನ ಇಷ್ಟದಂತೆ ನಡೆದಿದ್ದಲ್ಲ. ಮೊದಲೇ ಪತ್ನಿಯೇ ತನ್ನ ಪತಿಗೆ ಎರಡನೇ ಮದುವೆ ಮಾಡಿಸಿದ್ದಾಳೆ. ಸ್ನೇಹಿತೆ ಸದಾ ಜೊತೆಗಿರಬೇಕು ಎನ್ನುವ ಕಾರಣಕ್ಕೆ ಈ ಮದುವೆ ನಡೆದಿದೆ. ಈ ದಾಂಪತ್ಯ ಜೀವನದ ಬಗ್ಗೆ ಪತಿ ಸಾಮಾಜಿಕ ಜಾಲತಾಣದಲ್ಲಿ ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾನೆ.

ಇಬ್ಬರು ಪತ್ನಿ (Wife) ಯರ ಜೊತೆ ಸುಖ ಜೀವನ: ಆತನಿಗೆ ಈಗ 49 ವರ್ಷ. ಹೆಸರು ಮೈಕಲ್. ಆತನ ಮೊದಲ ಪತ್ನಿ ವಯಸ್ಸು ಅಲಿಸಿಯಾ ಕೋಲ್ಸ್ ಮತ್ತು ಎರಡನೇ ಪತ್ನಿ ಹೆಸರು ಜಾಸ್ಮಿನ್ ಜೋನ್ಸ್. ವಯಸ್ಸು 35 ವರ್ಷ. ಮೈಕಲ್, ಸಾಮಾಜಿಕ ಜಾಲತಾಣದಲ್ಲಿ ತಾನು ಇಬ್ಬರು ಪತ್ನಿಗಳ ಜೊತೆ ವಾಸಮಾಡುತ್ತಿರೋದಾಗಿ ಹೇಳಿದ್ದಾನೆ. ಆತ ವರ್ಜೀನಿಯಾ (Virginia) ದಲ್ಲಿ ವಾಸವಾಗಿದ್ದಾನೆ. ಆತನ ಮೊದಲ ಪತ್ನಿ ಅಲಿಸಿಯಾ ಭೇಟಿಯಾದಾಗ ಪ್ರಾಮಾಣಿಕನಾಗಿರಲಿಲ್ಲ. ಅಲಿಸಿಯಾ ಪತಿಗೆ ಮೋಸ (Cheating) ಮಾಡಿದ್ದ. ಆದ್ರೆ ಕೊನೆಯಲ್ಲಿ ಎಲ್ಲವೂ ಸರಿಯಾಗಿತ್ತು. ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. 1999ರಲ್ಲಿ ಮೈಕಲ್, ಅಲಿಸಿಯಾ ಮದುವೆಯಾಗಿದ್ದ. ಆ ನಂತ್ರ ಇಬ್ಬರು ಎಂಟು ಮಕ್ಕಳಿಗೆ ಪಾಲಕರಾದ್ರು. ಅಲಿಸಿಯಾಳನ್ನು  ಮದುವೆ ಆಗುವ ಮೊದಲೇ ಮೈಕಲ್ ಹತ್ತು ಮಕ್ಕಳಿಗೆ ತಂದೆಯಾಗಿದ್ದ. ಮೈಕಲ್ ಮತ್ತು ಅಲಿಸಿಯಾ, ವರ್ಜೀನಿಯಾದಲ್ಲಿ ಖಾಸಗಿ ಪೊಲೀಸ್ ಆಗಿ ಕೆಲಸ ಮಾಡುತ್ತಿದ್ದಾರೆ.

Tap to resize

Latest Videos

ವಿವಾಹದಲ್ಲಿ ಕನ್ಯಾದಾನ ಅನಿವಾರ್ಯವಲ್ಲ ಅಂತು ಹೈ ಕೋರ್ಟ್; ಹೆಣ್ಣು ದಾನದ ವಸ್ತುವಲ್ಲ ಎಂಬುದು ಈಗಿನ ಹುಡುಗಿಯರ ಮನದಾಳ ಕೂಡಾ

2010 ರವರೆಗೆ ಮೈಕಲ್ ಮತ್ತು ಅಲಿಸಿಯಾ ಮಾತ್ರ ಇದ್ದರು. 2010 ರಲ್ಲಿ ಇವರ ಜೀವನ ಬದಲಾಯ್ತು. ಇನ್ನೊಬ್ಬರ ಆಗಮನ ಇವರ ಜೀವನದಲ್ಲಾಯ್ತು. ಅಲಿಸಿಯಾ ಕೆಲಸದ ಮೇಲೆ ಹೋದಾಗ ಆಕೆಗೆ ಜಾಸ್ಮಿನ್ ಜೋನ್ಸ್ ಪರಿಚಯವಾಗಿತ್ತು. ಜಾಸ್ಮಿನ್ ಜೋನ್ಸ್ ಳನ್ನು ತುಂಬಾ ಇಷ್ಟಪಟ್ಟಿದ್ದ ಅಲಸಿಯಾ, ಆಕೆ ಜೊತೆ ಇರಲು ಬಯಸಿದ್ದಳು. ಆಕೆಗೆ ಬಹಪತ್ನಿತ್ವ ಪದ್ಧತಿ ಬಗ್ಗೆ ಹೇಳಿದ್ದಲ್ಲದೆ ಆಕೆಯನ್ನು ಒಪ್ಪಿಸುವ ಕೆಲಸ ಮಾಡಿದ್ದಳು. ಮೈಕಲ್ ಕೂಡ ಅಲಸಿಯಾ ಮಾತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ. 

ಇಬ್ಬರ ಮೊದಲ ಭೇಟಿ ಬಗ್ಗೆಯೂ ಮೈಕಲ್ ಹೇಳಿದ್ದಾನೆ. ನಾವು ಮೂವರೂ ಭೇಟಿಯಾದಾಗ ನನಗೆ ಜಾಸ್ಮಿನ್ ಇಷ್ಟವಾದಳು. ನಂತ್ರ ನಾನು ಆಕೆಯನ್ನೂ ಮದುವೆಯಾದೆ. ಆಕೆಗೆ ನನ್ನ ಮದುವೆಗೆ ಮುನ್ನವೇ ಇಬ್ಬರು ಮಕ್ಕಳಿದ್ದರು ಎಂದಿದ್ದಾನೆ. ಮೈಕಲ್ ಮದುವೆ ಆದ್ಮೇಲೆ ಜಾಸ್ಮೀನ್ ಮತ್ತೆ ಎಂಟು ಮಕ್ಕಳ ತಾಯಿಯಾಗಿದ್ದಾಳೆ. ಜಾಸ್ಮಿನ್ ಕೂಡ ಎಲ್ಲರ ಜೊತೆ ಹೊಂದಿಕೊಂಡಿದ್ದಾಳೆ ಎನ್ನುತ್ತಾನೆ. ಅಲಸಿಯಾ ಮತ್ತು ಜಾಸ್ಮಿನ್ ಪತಿ ಮೈಕಲ್, ಜವಾಬ್ದಾರಿಯಿಂದ ವರ್ತಿಸುತ್ತಾನೆ. ಇಬ್ಬರ ಇಷ್ಟಕಷ್ಟಗಳ ಬಗ್ಗೆ ನಾನು ಗಮನ ಹರಿಸುತ್ತೇನೆ ಎನ್ನುತ್ತಾನೆ. 

ಗರುಡ ಪುರಾಣದ ಪ್ರಕಾರ ಈ ತಪ್ಪೆಸಗಿದರೆ ಮುಂದಿನ ಜನ್ಮದಲ್ಲಿ ಹೇಗೇಗೋ ಹುಟ್ಟುತ್ತೀರಿ ಹುಷಾರು!

ಮೈಕಲ್ ಗೆ ಈಗ ಒಂಭತ್ತು ತಿಂಗಳಿಂದ ಮೂವತ್ತು ವರ್ಷದೊಳಗಿನ ಇಪ್ಪತ್ತೆಂಟು ಮಕ್ಕಳಿದ್ದಾರೆ. ಮೈಕಲ್ ನ ಮೊದಲ ಹತ್ತು ಮಕ್ಕಳು, ಅಲಿಸಿಯಾಗೆ ಜನಿಸಿದ ಎಂಟು ಮಕ್ಕಳು ಹಾಗೂ ಜಾಸ್ಮಿನ್ ನ ಮೊದಲ ಇಬ್ಬರು ಮಕ್ಕಳು ಹಾಗೂ ಈಗಿನ ಎಂಟು ಮಕ್ಕಳು. ಮೈಕಲ್, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾನೆ. ನನ್ನಿಷ್ಟದಂತೆ ನಾನು ದೊಡ್ಡ ಕುಟುಂಬವನ್ನು ಹೊಂದಿದ್ದೇನೆ. ನನ್ನ ಜೀವನ ಪೂರ್ಣಗೊಂಡಿದೆ ಎಂದು ಮೈಕಲ್ ಹೇಳಿದ್ದಾನೆ. ದೊಡ್ಡ ಕುಟುಂಬವಾದ್ರೂ ಸಂತೋಷದಿಂದ ಇರೋದು ಹೇಗೆ ಎಂಬುದನ್ನು ಮೈಕಲ್ ನಿಂದ ಕಲಿಯಬೇಕು ಎನ್ನುತ್ತಾರೆ ಬಳಕೆದಾರರು. 
 

click me!