ಟ್ರಕ್‌ ಡ್ರೈವರ್ ಆಗಿದ್ರೂ ಹೆಂಡ್ತೀನ ಓದಿಸಿದ ಗಂಡ, ಕೆಲ್ಸ ಸಿಕ್ಕ ಮೇಲೆ ಅಧಿಕಾರಿ ಜೊತೆ ಆಕೆಯ ಚಕ್ಕಂದ!

By Vinutha Perla  |  First Published Jul 21, 2023, 1:04 PM IST

ಆಕೆಗೆ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಕನಸಿತ್ತು. ಟ್ರಕ್ ಡ್ರೈವರ್ ಆಗಿದ್ದ ಗಂಡ, ಜಮೀನು ಮಾರಿ ಆಕೆಗೆ ಸಾಥ್ ಕೊಟ್ಟಿದ್ದ. ಆದ್ರೆ ಜಿಲ್ಲಾಸ್ಪತ್ರೆಯಲ್ಲಿ ಕೆಲ್ಸ ಸಿಕ್ಕ ನಂತ್ರ ಪತ್ನಿಯ ವರಸೆಯೇ ಬದಲಾಗಿದೆ. ಅಧಿಕಾರಿ ಜೊತೆ ಸಂಬಂಧ ಇಟ್ಕೊಂಡು ಗಂಡನ ಮೇಲೆಯೇ ಹಲ್ಲೆ ನಡೆಸಿದ್ದಾಳೆ.


ಕಷ್ಟಪಟ್ಟು ಓದಿಸಿ ಸರ್ಕಾರಿ ಅಧಿಕಾರಿ ಮಾಡಿದ ಗಂಡನ ಮೇಲೆಯೇ ವರದಕ್ಷಿಣೆ ಆರೋಪ ಮಾಡಿ ಜೈಲಿಗಟ್ಟಿದ SDM ಜ್ಯೋತಿ ಮೌರ್ಯರ ವಿಷಯ ದೇಶಾದ್ಯಂತ ಸುದ್ದಿಯಾಗಿತ್ತು. ಈಗ ಅಂಥದ್ದೇ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಧರಮ್ ಪುರ್ವಾ ಗ್ರಾಮದಲ್ಲಿ ಪ್ರಕರಣ ವರದಿಯಾಗಿದ್ದು, ಅಮಿತ್ ಕುಮಾರ್ ಎಂಬ ವ್ಯಕ್ತಿ ಮೇಲೆ ಆತನ ಪತ್ನಿ ಮತ್ತು ಆಕೆಯ ಪ್ರಿಯಕರ ಹಲ್ಲೆ ನಡೆಸಿದ್ದಾರೆಂದು ವರದಿಯಾಗಿದೆ. ಹೆಂಡತಿಗೆ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕೆಲಸ ಸಿಕ್ಕಿದ ನಂತರ ಈ ಘಟನೆ ನಡೆದಿದೆ ಎಂದು ಗಂಡ ಅಮಿತ್‌ ಕುಮಾರ್ ದೂರಿದ್ದಾರೆ. 

ಹಿಂದೆಯೆಲ್ಲಾ ಪತ್ನಿಯಂದಿರು ತಮ್ಮ ಗಂಡನ ಮೋಸದ ಬಗ್ಗೆ ಕಂಪ್ಲೇಂಟ್ ಮಾಡೋ ಪ್ರಕರಣಗಳು ಹೆಚ್ಚಿದ್ದವು. ಆದರೆ,  ಇತ್ತೀಚೆಗಂತೂ ಗಂಡಂದಿರು ತಮ್ಮ ಪತ್ನಿಯ ದಾಂಪತ್ಯ ದ್ರೋಹದ ಬಗ್ಗೆ ದೂರು ನೀಡುವ ಪ್ರಕರಣಗಳು ಹೆಚ್ಚು ಸುದ್ದಿ ಮಾಡುತ್ತಿವೆ. ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಧರಮ್ ಪುರ್ವಾ ಗ್ರಾಮದಲ್ಲಿಯೂ ಹೀಗೆ ಪತ್ನಿಯೇ, ಪತಿಗೆ ಮೋಸ ಮಾಡಿರೋದು ಬಯಲಾಗಿದೆ.

Tap to resize

Latest Videos

ಜಮೀನು ಮಾರಿ ಪತ್ನಿ ಕಲಿಕೆಗೆ ನೆರವಾಗಿದ್ದ ಗಂಡ, ಕಾನ್ಸ್‌ಟೇಬಲ್‌ ಆದ ನಂತ್ರ ಹೆಂಡ್ತಿ ಮಾಡಿದ್ದೇನು ನೋಡಿ!

ಪತ್ನಿಯನ್ನು ನರ್ಸಿಂಗ್ ಕಾಲೇಜ್‌ಗೆ ಸೇರಿಸಿದ್ದ ಅಮಿತ್‌
ಅಮಿತ್ ಕುಮಾರ್ ಮತ್ತು ಅರ್ಚನಾ ಸಿಂಗ್ 2011 ರಲ್ಲಿ ವಿವಾಹವಾಗಿದ್ದರು. ದಾಂಪತ್ಯ ಜೀವನ (Married life) ಚೆನ್ನಾಗಿಯೇ ಇತ್ತು ಕೆಲವು ವರ್ಷಗಳ ನಂತರ, ದಂಪತಿಗೆ ಹೆಣ್ಣು ಮಗು ಜನಿಸಿದೆ. ಅಮಿತ್ ಕುಮಾರ್ ಪತ್ನಿಗೆ ಮೊದಲಿನಿಂದಲೂ ಓದಲು ಮತ್ತು ಸ್ವಂತವಾಗಿ ಏನಾದರೂ ಮಾಡಬೇಕೆಂಬ ಆಸೆಯಿತ್ತಂತೆ. ಆದರೆ, ಮದುವೆಯ ಆರಂಭದಲ್ಲಿ ಅಮಿತ್‌ನ ಆರ್ಥಿಕ ಸ್ಥಿತಿ ಅಷ್ಟೊಂದು ಚೆನ್ನಾಗಿರಲಿಲ್ಲ. ಸ್ಪಲ್ಪ ಸಮಯದ ಬಳಿಕ ಪರಿಸ್ಥಿತಿ ಸುಧಾರಿಸಿದ ಕಾರಣ ಅಮಿತ್ ಪತ್ನಿಯನ್ನು ಗೋರಖ್‌ಪುರದ ರಾಜ್ ನರ್ಸಿಂಗ್ ಪ್ಯಾರಾ ಮೆಡಿಕಲ್ ಕಾಲೇಜಿಗೆ ಸೇರಿಸಿದನು.

ಪತ್ನಿಯ ವಿದ್ಯಾಭ್ಯಾಸಕ್ಕೆ (Education) ಹಣ ಹೊಂದಿಸಲು ಅಮಿತ್ ಜಮೀನು ಮಾರಬೇಕಾಯಿತು. ಆಕೆ, ಅಧ್ಯಯನದತ್ತ ಗಮನಹರಿಸಲು ಹಾಸ್ಟೆಲ್‌ನಲ್ಲಿ ಉಳಿದುಕೊಂಡಳು. ಇದಕ್ಕೆಲ್ಲಾ ಗಂಡನ (Husband) ಸಂಪೂರ್ಣ ಬೆಂಬಲವಿತ್ತು. ನಂತರ, ಅರ್ಚನಾ ತನ್ನ ನರ್ಸಿಂಗ್ ಕೋರ್ಸ್ ಅನ್ನು ಮುಂದುವರಿಸಲು ಪ್ರಾರಂಭಿಸಿದಳು. ಅಷ್ಟು ದಿನ ಅಮಿತ್ ಆಕೆಯ ಸಂಪೂರ್ಣ ಖರ್ಚನ್ನು ಭರಿಸುತ್ತಿದ್ದರು. ನಂತರದ ದಿನಗಳಲ್ಲಿ ಅರ್ಚನಾ ಸಿಂಗ್, ಕಾಲೇಜು ಅಧಿಕಾರಿಯ ಸೋದರಳಿಯನ ಜೊತೆ ಸಂಬಂಧವಿಟ್ಟುಕೊಳ್ಳಲು ಶುರು ಮಾಡಿದ್ದಾಗಿ ತಿಳಿದುಬಂದಿದೆ.

ಕಸ ಗುಡಿಸೋ ಗಂಡ ಬೇಡ, ಸ್ವೀಟ್‌ ಕಾರ್ನ್ ಅಂತ ಕರೆಯೋ ಪ್ರೇಮಿನೇ ಬೇಕು; ಜ್ಯೋತಿ ಮೌರ್ಯ ಅಸಲಿಯತ್ತೇನು?

ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಸಿಕ್ಕ ನಂತ್ರ ಪತ್ನಿ ವರಸೇನೆ ಬದಲಾಯ್ತು
ಪತ್ನಿ ಓದುತ್ತಿದ್ದ ಸಮಯದಲ್ಲಿ ಕಾಲೇಜು ಅಧಿಕಾರಿಯ ಸೋದರಳಿಯ ಧನಂಜಯ್ ಮಿಶ್ರಾ ಹಾಗೂ ತನ್ನ ಪತ್ನಿ ತುಂಬಾ ಆತ್ಮೀಯರಾಗಿದ್ದರು ಎಂದು ಅಮಿತ್ ದೂರಿನಲ್ಲಿ ತಿಳಿಸಿದ್ದಾರೆ. ಅಮಿತ್ ತನ್ನ ಪತ್ನಿಯನ್ನು ಭೇಟಿಯಾಗುತ್ತಿದ್ದಾಗಲೆಲ್ಲಾ ಅವಳ ಕೋಣೆಯಲ್ಲಿ ಧನಂಜಯ್ ಇರುತ್ತಿದ್ದನಂತೆ. ಇದು ಅಮಿತ್ ಅವರ ಅನುಮಾನವನ್ನು ಹೆಚ್ಚಿಸಿದೆ. ತಾನು ಮತ್ತು ಧನಂಜಯ್ ಕೇವಲ ಸ್ನೇಹಿತರು ಎಂದು ಪತ್ನಿ ಹೇಳಿಕೊಂಡಿದ್ದಾಳೆ. ಅರ್ಚನಾ ಕೋರ್ಸ್ ಮುಗಿದ ಕೂಡಲೇ ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಸಿಕ್ಕಿತು. ಆ ನಂತರ ಧನಂಜಯ್ ಜೊತೆಗಿನ ಆಪ್ತತೆ ಇನ್ನಷ್ಟು ಹೆಚ್ಚಾಯಿತು. ಆತ ಅರ್ಚನಾಳನ್ನು ಪ್ರತಿದಿನ ಭೇಟಿಯಾಗಲು ಪ್ರಾರಂಭಿಸಿದ ಎಂದು ಅಮಿತ್ ದೂರಿದ್ದಾರೆ. 

ಇಬ್ಬರ ಓಡಾಟಕ್ಕೆ ಅಮಿತ್ ಆಕ್ಷೇಪ ವ್ಯಕ್ತಪಡಿಸಿದಾಗ, ಅರ್ಚನಾಗೆ ಕರೆ ಮಾಡುವಂತೆ ಧನಂಜಯ್, ಅಮಿತ್ ಗೆ ಹೇಳಿದ್ದಾರೆ. ಆದರೆ, ಇವೆಲ್ಲಕ್ಕಿನ ಮೊದಲು, ಧನಂಜಯ್ ಅರ್ಚನಾಳನ್ನು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ (Divorce) ಪಡೆಯುವಂತೆ ಮತ್ತು ವರದಕ್ಷಿಣೆ ಕಿರುಕುಳ ಪ್ರಕರಣವನ್ನು ದಾಖಲಿಸುವಂತೆ ಹೇಳಿದ್ದಾನೆ ಎಂದು ತಿಳಿದುಬಂದಿದೆ.

ಧನಂಜಯ್ ಹೇಳಿದಂತೆ ಮಾಡಿದ ಅರ್ಚನಾ, ಪತಿ ವಿರುದ್ಧ ದೂರು ನೀಡಿದಳು. ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಮಧ್ಯಸ್ಥಿಕೆಗೆ ಹೋಗುತ್ತಿದ್ದಾಗ, ಹೆಂಡತಿಯ ಗೆಳೆಯ ಧನಂಜಯ್ ಹಾಗೂ ಆತನ ಸ್ನೇಹಿತರು ಜಗಳವಾಡಿ, ಅಮಿತ್ ನ ಫೋನ್ ಕಸಿದುಕೊಂಡಿದ್ದಾರೆ. ಅಲ್ಲದೆ, ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಅಮಿತ್ ದೂರಿದ್ದಾರೆ. ಸದ್ಯಕ್ಕೆ ಅಮಿತ್ ಕುಮಾರ್ ಕೂಡ ತನ್ನ ಪತ್ನಿ ವಿರುದ್ಧ ಪ್ರತಿ ದೂರು ದಾಖಲಿಸಿದ್ದಾರೆ.

click me!