ಸರ್ಕಾರಿ ಕೆಲಸವಿರೋ ಹುಡುಗನ ರಿಜೆಕ್ಟ್ ಮಾಡಿ ಪಿಕಪ್ ಚಾಲಕನನ್ನು ಮದ್ವೆಯಾದ ಯುವತಿ

By Vinutha Perla  |  First Published Jul 21, 2023, 11:14 AM IST

ಮದ್ವೆ ಮಾರ್ಕೆಟ್‌ನಲ್ಲಿ ಸದ್ಯ ಇಂಜಿನಿಯರ್, ಡಾಕ್ಟರ್‌ಗಳಿಗಿಂತಲೂ ಸರ್ಕಾರಿ ಕೆಲ್ಸದಲ್ಲಿರುವ ಹುಡುಗರಿಗೆ ಹೆಚ್ಚಿನ ಡಿಮ್ಯಾಂಡ್‌ ಇದೆ. ಆದ್ರೆ ಇಲ್ಲೊಬ್ಬ ಯುವತಿ ಆರಂಕಿ ಸಂಬಳ ಇರೋ ಸರ್ಕಾರಿ ಉದ್ಯೋಗದ ಹುಡುಗನನ್ನು ಬಿಟ್ಟು ಪಿಕಪ್ ಚಾಲಕನನ್ನು ಮದುವೆಯಾಗಿದ್ದಾಳೆ. ಸದ್ಯ ಈ ವಿಚಾರ ಎಲ್ಲೆಡೆ ವೈರಲ್ ಆಗ್ತಿದೆ.


ಸರ್ಕಾರಿ ಕೆಲಸ ಅಂದ್ರೆ ಸಾಕು ಎಲ್ಲರೂ ಬಾಯಿ ಬಾಯಿ ಬಿಡ್ತಾರೆ. ಕೆಲ್ಸ ಅಷ್ಟಕಷ್ಟೆ, ಕೈ ತುಂಬಾ ಸಂಬಳ, ಬೇಕಾದಷ್ಟು ಲೀವ್‌, ಲೈಫ್ ಕಂಪ್ಲೀಟ್ ಆಗಿ ಸೆಟ್ಲ್‌ ಆದಂಗೆ ಅಂತ ಎಲ್ರೂ ಅಂದ್ಕೊಳ್ತಾರೆ. ಹಾಗಾಗಿಯೇ ಮದ್ವೆ ಮಾರ್ಕೆಟ್‌ನಲ್ಲಿ ಸದ್ಯ ಇಂಜಿನಿಯರ್, ಡಾಕ್ಟರ್‌ಗಳಿಗಿಂತಲೂ ಸರ್ಕಾರಿ ಕೆಲ್ಸದಲ್ಲಿರುವ ಹುಡುಗರಿಗೆ ಹೆಚ್ಚಿನ ಡಿಮ್ಯಾಂಡ್‌ ಇದೆ. ಆದ್ರೆ ಇಲ್ಲೊಬ್ಬ ಯುವತಿ ಆರಂಕಿ ಸಂಬಳ ಇರೋ ಸರ್ಕಾರಿ ಉದ್ಯೋಗದ ಹುಡುಗನನ್ನು ಬಿಟ್ಟು ಪಿಕಪ್ ಚಾಲಕನನ್ನು ಮದುವೆಯಾಗಿದ್ದಾಳೆ. ಸದ್ಯ ಈ ವಿಚಾರ ಎಲ್ಲೆಡೆ ವೈರಲ್ ಆಗ್ತಿದೆ.

ಹೌದು, ರಾಜಸ್ಥಾನದ ಮಹಿಳೆ (Woman) ಸರ್ಕಾರಿ ಉದ್ಯೋಗದಲ್ಲಿರುವ ಪುರುಷರನ್ನು ತಿರಸ್ಕರಿಸಿ, ಪಿಕ್-ಅಪ್ ಚಾಲಕನನ್ನು ಮದುವೆಯಾದಳು. 24 ವರ್ಷದ ಯುವತಿಯೊಬ್ಬಳು ರಾಜಸ್ಥಾನದ ಚುರುನಲ್ಲಿ ಪಿಕ್-ಅಪ್ ಡ್ರೈವರ್ ಆಗಿ ಕೆಲಸ ಮಾಡುವ ತನ್ನ ಪ್ರೇಮಿಯನ್ನು ವಿವಾಹವಾಗಲು ಸರ್ಕಾರಿ ಉದ್ಯೋಗಿಗಳಿಂದ (Employee) ಮದುವೆ ಪ್ರಸ್ತಾಪಗಳನ್ನು ತಿರಸ್ಕರಿಸಿದಳು. ಪಾರ್ವತಿ ಶರ್ಮಾ ತನ್ನ ಎಂಟು ವರ್ಷದ ಸಂಬಂಧವನ್ನು (Relationship) ಉಳಿಸಲು ಜುಲೈ 7 ರಂದು ತನ್ನ ಮನೆಯನ್ನು ತೊರೆದು ಅದೇ ದಿನ ತಾರಾನಗರದ ದೇವಸ್ಥಾನದಲ್ಲಿ ಯೋಗೇಂದ್ರನನ್ನು ಮದುವೆಯಾಗಿದ್ದಾಳೆ ಎಂದು ತಿಳಿದುಬಂದಿದೆ. 

Tap to resize

Latest Videos

ವಧುವಿನ ಗಡಿಬಿಡಿಗೆ ವರನ ಜೊತೆ ಮಾತ್ರವಲ್ಲ ಮಾವನ ಜೊತೆನೂ ಮದ್ವೆ ಆಗೋಯ್ತು!

ಯೋಗೇಂದ್ರನನ್ನು ಮದುವೆಯಾಗುವುದಾಗಿ ಹೇಳಿದಾಗ ಮನೆಯವರು ಒಪ್ಪದ ಕಾರಣ ನಾನು ಹೀಗೆ ಓಡಿ ಹೋಗಿ ಮದುವೆಯಾಗುವ ನಿರ್ಧಾರ ತೆಗೆದುಕೊಂಡೆ ಅಂತ ಪಾರ್ವತಿ ತಿಳಿಸಿದ್ದಾರೆ. ಯೋಗೇಂದ್ರನನ್ನು ಮದುವೆಯಾದ ನಂತರ, ಪಾರ್ವತಿ ರಕ್ಷಣೆ ಪಡೆಯಲು ಚುರುವಿನ ದುಧ್ವಾ ಖಾರಾದಲ್ಲಿರುವ ಎಸ್ಪಿ ಕಚೇರಿಯನ್ನು ತಲುಪಿದರು. ಪಾರ್ವತಿ ಅವರು ಮನೆಯಿಂದ ಹೊರಬಂದ ನಂತರ ಅವರ ಮನೆಯವರು ನಾಪತ್ತೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸರ್ಕಾರಿ ಉದ್ಯೋಗದಲ್ಲಿರುವ ಹುಡುಗನನ್ನೇ ಹುಡುಗಿ ರಿಜೆಕ್ಟ್ ಮಾಡಿರುವ ಘಟನೆ ಒಂದೆಡೆಯಾದರೆ ಇನ್ನೊಂದು ಘಟನೆಯಲ್ಲಿ ಇತ್ತೀಚಿಗೆ ಹೆಂಡ್ತಿಯೊಬ್ಬಳು ಕಷ್ಟಪಟ್ಟು ಓದಿಸಿದ್ದ ಗಂಡನನ್ನೇ ಸರ್ಕಾರಿ ಕೆಲ್ಸ ಸಿಕ್ಕ ನಂತರ ಜೈಲಿಗೆ ಸೇರಿಸಿದ ಘಟನೆ ನಡೆದಿತ್ತು. ಜ್ಯೋತಿ ಮೌರ್ಯ ಹಾಗೂ ಅಲೋಕ್ ಮೌರ್ಯ ನಡುವಿನ ಈ ಜಗಳ ಹೆಚ್ಚು ಸುದ್ದಿಯಾಗಿತ್ತು.

ಪತ್ನಿಗೆ ಮಾತ್ರವಲ್ಲ ಮೂರು ಸಾಕುನಾಯಿಗೂ ಜೀವನಾಂಶ ಕೊಡುವಂತೆ ಪತಿಗೆ ಸೂಚಿಸಿದ ಕೋರ್ಟ್‌

ಸರ್ಕಾರಿ ಕೆಲ್ಸ ಸಿಗ್ತಿದ್ದಂತೆ ಗಂಡನನ್ನೇ ಜೈಲಿಗೆ ಕಳಿಸಿದ್ಲು ಹೆಂಡ್ತಿ!
ಕಷ್ಟಪಟ್ಟು ಓದಿಸಿದ ಗಂಡನಿಗೇ ಹೆಂಡ್ತಿ ಮೋಸ ಮಾಡಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿತ್ತು. ಅಲೋಕ್ ಮೌರ್ಯ ಎಂಬಾತ ತನ್ನ ಎಸ್‌ಡಿಎಂ (ಉಪವಿಭಾಗೀಯ ಮ್ಯಾಜಿಸ್ಟ್ರೇಟ್) ಪತ್ನಿ ಜ್ಯೋತಿ ಮೌರ್ಯ ವಿರುದ್ಧ ಈ ಆರೋಪ ಮಾಡಿದ್ದರು. ಅಲೋಕ್ ಹೇಳಿಕೊಂಡಂತೆ, ಮದುವೆ (Marriage) ಬಳಿಕ ಇಬ್ಬರು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದರು. ಆದರೆ, ಅಲೋಕ್‌ ಬಿಡುವಿಲ್ಲದೆ, ತುಂಬಾ ಶ್ರಮವಹಿಸಿ ದುಡಿದು ಪತ್ನಿಗೆ ಶಿಕ್ಷಣ (Education) ಕೊಡಿಸಿದರು. ಪ್ರಯಾಗ್​ರಾಜ್​ನಲ್ಲಿರುವ ಒಳ್ಳೆಯ ಕೋಚಿಂಗ್​ ಕೇಂದ್ರಕ್ಕೆ ದಾಖಲಿಸಿದರು. ಅವರ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದಾಗಿ ಪತ್ನಿ ಜ್ಯೋತಿ 2016ರಲ್ಲಿ ಸಬ್​ ಡಿವಿಷನಲ್​ ಮ್ಯಾಜಿಸ್ಟ್ರೇಟ್​ (ಎಸ್​ಡಿಎಂ) ಆಗಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡರು.

ಸರ್ಕಾರಿ ಕೆಲಸ  ಸಿಕ್ಕಿದ್ದೇ ತಡ ಜ್ಯೋತಿ ಸಂಪೂರ್ಣವಾಗಿ ಬದಲಾದರು. ಯಶಸ್ಸು ಆಕೆಯ ತಲೆಗೆ ಹತ್ತಿತ್ತು. ಮತ್ತೊಬ್ಬ ಅಧಿಕಾರಿಯೊಂದಿಗೆ ಸೇರಿ ನನಗೆ ಮೋಸ ಮಾಡಿದಳು ಎಂದು ಅಲೋಕ್ ಆರೋಪಿಸಿದ್ದಾರೆ. ಜ್ಯೋತಿ ಕಚೇರಿಯಲ್ಲಿ ಕೆಲಸ ಮಾಡುವ ಅಧಿಕಾರಿಯೊಂದಿಗೆ ಅಕ್ರಮ ಸಂಬಂಧ (Extra marital affair) ಹೊಂದಿದ್ದಳು ಎನ್ನಲಾಗಿದೆ. ಆಕೆಯ ಸಂಬಂಧದ ಬಗ್ಗೆ ತಿಳಿದ ನಂತರವೂ, ಅಲೋಕ್ ಅವರ ಮದುವೆಯನ್ನು ಉಳಿಸಿಕೊಳ್ಳಲು ತೀವ್ರವಾಗಿ ಪ್ರಯತ್ನಿಸಿದರು. ಆದರೂ ಆಕೆ ಅಲೋಕ್‌ಗೆ ಎಲ್ಲಾ ರೀತಿಯಲ್ಲಿ ತೊಂದರೆ ನೀಡಿದರು ಎಂದು ತಿಳಿದುಬಂದಿದೆ.

click me!