Child Education : ಪಾಲಕರ ಹಣ ಮಕ್ಕಳ ಶಿಕ್ಷಣದ ಹೆಸರಿನಲ್ಲಿ ಪೋಲಾಗ್ತಿದೆಯೇ?

By Suvarna News  |  First Published Jun 4, 2022, 11:31 AM IST

ಪಾಲಕರು ಕಷ್ಟಪಟ್ಟು ಮಕ್ಕಳ ಶಿಕ್ಷಣಕ್ಕೆ ಹಣ ಹೊಂದಿಸ್ತಾರೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಪಡೆಯೋದು ದುಬಾರಿಯಾಗಿದೆ. ಆದ್ರೆ ಪಾಲಕರ ಕಷ್ಟ ಮಕ್ಕಳ ಅರಿವಿಗೆ ಬರ್ತಿಲ್ಲ. ಆರಂಭದಲ್ಲಿ ಚುರುಕಾಗಿರುವ ಮಕ್ಕಳ ದೊಡ್ಡವರಾಗ್ತಿದ್ದಂತೆ ಡಲ್ ಆಗ್ತಿದ್ದಾರೆ. ಈ ಬಗ್ಗೆ ಸಮೀಕ್ಷೆಯೊಂದು ಆಘಾತಕಾರಿ ವಿಷ್ಯ ಹೇಳಿದೆ. 
 


ಇತ್ತೀಚಿನ ದಿನಗಳಲ್ಲಿ ಶಿಕ್ಷಣ (Education)ಕ್ಕೆ ಹೆಚ್ಚಿನ ಮಹತ್ವ ನೀಡಲಾಗ್ತಿದೆ. ಪಾಲಕರು (Parents), ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಆದ್ಯತೆ ನೀಡ್ತಿದ್ದಾರೆ. ಮಕ್ಕಳ ಶಿಕ್ಷಣಕ್ಕಾಗಿ ಪಾಲಕರು ಹಣ ಕೂಡಿಡ್ತಿದ್ದಾರೆ. ತಾವು ಸೂಕ್ತ ಶಿಕ್ಷಣ ಪಡೆಯಲು ಸಾಧ್ಯವಾಗದಿದ್ದರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಸಂಸ್ಥೆಗಳು ಮತ್ತು ಜೀವನಶೈಲಿ (Lifestyle) ಯನ್ನು ಒದಗಿಸಲು ಪಾಲಕರು ಬಯಸುತ್ತಿದ್ದಾರೆ. ಆದ್ರೆ ಮಕ್ಕಳಿಗೆ ಪೋಷಕರ ಈ ಉದ್ದೇಶ ಅರ್ಥವಾಗ್ತಿದೆಯೇ ಎಂಬ ಪ್ರಶ್ನೆ ಮೂಡಿದೆ. ಸರ್ವೆಯೊಂದರಲ್ಲಿ ಆಘಾತಕಾರಿ ಸಂಗತಿ ಬಹಿರಂಗವಾಗಿದೆ.
3, 5, 8 ಮತ್ತು 10ನೇ ತರಗತಿಯ ಮಕ್ಕಳು ಮತ್ತು ಶಿಕ್ಷಕರ ಓದುವ ಮತ್ತು ಕಲಿಸುವ ಸಾಮರ್ಥ್ಯ ಸೇರಿದಂತೆ ಶಾಲೆಯ ಶಿಕ್ಷಣ ವ್ಯವಸ್ಥೆಯನ್ನು ಮೌಲ್ಯಮಾಪನ ಮಾಡುವುದು ಸರ್ವೆಯ ಉದ್ದೇಶವಾಗಿತ್ತು. ಈ ಶಿಕ್ಷಣ ಸಮೀಕ್ಷೆಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ 1,18,274 ಶಾಲೆಗಳಲ್ಲಿ 34,01,158 ಲಕ್ಷ ವಿದ್ಯಾರ್ಥಿಗಳು ಮತ್ತು 5,26,824 ಶಿಕ್ಷಕರನ್ನು ಸೇರಿಸಲಾಗಿತ್ತು. ಕೇಂದ್ರ ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ದೇಶಾದ್ಯಂತ ಶಾಲೆಗಳಲ್ಲಿ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಮೀಕ್ಷೆಯನ್ನು ನಡೆಸಿತು. ಇದನ್ನು ರಾಷ್ಟ್ರೀಯ ಸಾಧನೆ ಸಮೀಕ್ಷೆ 2021 ಎಂದು ಕರೆಯಲಾಗುತ್ತದೆ. ಆದರೆ ಈ ಸಮೀಕ್ಷೆಯ ಫಲಿತಾಂಶ ನಮ್ಮೆಲ್ಲರನ್ನು ಚಿಂತೆಗೀಡು ಮಾಡಿದೆ. ರಾಷ್ಟ್ರೀಯ ಸಾಧನೆ ಸಮೀಕ್ಷೆ 2021 ರ ಪ್ರಕಾರ, ಮಕ್ಕಳು ಒಂದು ಕ್ಲಾಸ್ ನಿಂದ ಇನ್ನೊಂದು ಕ್ಲಾಸ್ ಗೆ ಹೋಗ್ತಿದ್ದಂತೆ ಅವರ ಕಾರ್ಯಕ್ಷಮತೆ ಕ್ಷೀಣಿಸುತ್ತಿದೆ ಎಂಬುದು ಬಹಿರಂಗವಾಗಿದೆ. 

ಗಣಿತದಲ್ಲಿ ಮಕ್ಕಳು ಹಿಂದೆ : ಕಳೆದ ವರ್ಷ ಅಂದರೆ ನವೆಂಬರ್ 2021 ರಲ್ಲಿ, ಈ ರಾಷ್ಟ್ರೀಯ ಸಮೀಕ್ಷೆಯನ್ನು ಮೂರನೇ, ಐದನೇ, ಎಂಟನೇ ಮತ್ತು ಹತ್ತನೇ ತರಗತಿಯ ಮಕ್ಕಳಿಗಾಗಿ ಮಾಡಲಾಯಿತು. ಸಮೀಕ್ಷೆಯ ಫಲಿತಾಂಶಗಳ ಪ್ರಕಾರ, ವಿದ್ಯಾರ್ಥಿಗಳ ಸರಾಸರಿ ಕಾರ್ಯಕ್ಷಮತೆ ಕ್ಷೀಣಿಸುತ್ತಲೇ ಇತ್ತು. ಮೂರನೇ ತರಗತಿಯ ಮಗು ಹತ್ತನೇ ತರಗತಿಗೆ ಬರುವಷ್ಟರಲ್ಲಿ ಕಲಿಕಾ ಕೌಶಲ್ಯ ಬಹಳ ಕಡಿಮೆಯಾಗಿತ್ತು. ಕೇಂದ್ರ ಶಿಕ್ಷಣ ಸಚಿವಾಲಯ ಬಿಡುಗಡೆ ಮಾಡಿರುವ ಸಮೀಕ್ಷೆಯ ಫಲಿತಾಂಶಗಳು ಎಲ್ಲಾ ಪೋಷಕರು ಮತ್ತು ಶಿಕ್ಷಕರ ಆತಂಕಕ್ಕೆ ಕಾರಣವಾಗಿವೆ. ಮೂರನೇ  ತರಗತಿಯಲ್ಲಿ ವಿದ್ಯಾರ್ಥಿ ಗಣಿತರಲ್ಲಿ ಶೇಕಡಾ 57ರಷ್ಟು ಅಂಕ ಪಡೆದಿದ್ದರೆ ಐದನೇ ತರಗತಿಯಲ್ಲಿ ಅದು ಶೇಕಡಾ 44ಕ್ಕೆ ಇಳಿದಿದೆ. ಎಂಟನೇ ತರಗತಿಯಲ್ಲಿ ಅದು ಶೇಕಡಾ 36 ಮತ್ತು 10 ನೇ ತರಗತಿಯಲ್ಲಿ ಶೇಕಡಾ 32 ಕ್ಕೆ ಇಳಿದಿದೆ. 
2021 ರ ಸಮೀಕ್ಷೆಯ ಮಕ್ಕಳ ಸಾಧನೆಯು 2017 ರಲ್ಲಿ ನಡೆಸಿದ ರಾಷ್ಟ್ರೀಯ ಸಾಧನೆ ಸಮೀಕ್ಷೆಗಿಂತ ಹೆಚ್ಚು ನಿರಾಶಾದಾಯಕವಾಗಿದೆ. ಈಗ ಇದು ಮತ್ತಷ್ಟು ಇಳಿಮುಖವಾಗಿದೆ.

Tap to resize

Latest Videos

ಕಾಲು ಸ್ವಾಧೀನವಿಲ್ಲ: ಆದರೂ ಈ ಅಪ್ಪ ಕರ್ತವ್ಯ ಮರೆತಿಲ್ಲ: ವಿಡಿಯೋ

ಕೊರೊನಾ ಇದಕ್ಕೆ ಕಾರಣ : ಸಮೀಕ್ಷೆಯ ಪ್ರಕಾರ, ಶಾಲೆಯಲ್ಲಿ ಓದುತ್ತಿರುವ ಶೇಕಡಾ 25 ರಷ್ಟು ಮಕ್ಕಳ ಪ್ರಕಾರ, ಕೊರೊನಾ ಅವರ ಈ ಹಿನ್ನಡೆಗೆ ಮುಖ್ಯ ಕಾರಣ. ಕೊರೊನಾ ಸಂದರ್ಭದಲ್ಲಿ ಅವರು ಅಧ್ಯಯನದಲ್ಲಿ ಪೋಷಕರಿಂದ ಸಹಾಯವನ್ನು ಪಡೆದಿಲ್ಲ. ಶೇಕಡಾ 24 ರಷ್ಟು ಮಕ್ಕಳಿಗೆ ಮನೆಯಲ್ಲಿ ಡಿಜಿಟಲ್ ಸಾಧನದ ಸೌಲಭ್ಯವಿರಲಿಲ್ಲ. ಇದು ಕೋವಿಡ್ ಸಮಯದಲ್ಲಿ ಅವರಿಗೆ ದೊಡ್ಡ ನಷ್ಟವಾಯ್ತು.ಶೇಕಡಾ 38 ರಷ್ಟು ಮಕ್ಕಳು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಅಧ್ಯಯನದಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ. ಶೇಕಡಾ 80 ರಷ್ಟು ಮಕ್ಕಳು, ಸ್ನೇಹಿತರಿಂದ ನೆರವು ಪಡೆದಿದ್ದು, ಅಧ್ಯಯನಕ್ಕೆ ಸಹಾಯವಾಯ್ತು ಎಂದಿದ್ದಾರೆ.

ಹುಡುಗಿಯರೇ ಮುಂದೆ : ಈ ಸಮೀಕ್ಷೆಯಲ್ಲಿ ಹೆಣ್ಣುಮಕ್ಕಳ ಸಾಧನೆ ಉತ್ತಮವಾಗಿದೆ. ಸಮೀಕ್ಷೆಯ ಬಹುತೇಕ ಎಲ್ಲಾ ಹಂತಗಳಲ್ಲಿ ಹುಡುಗಿಯರು ಹುಡುಗರಿಗಿಂತ ಬಹಳ ಮುಂದಿದ್ದಾರೆ.  ಇಂಗ್ಲಿಷ್ ಮತ್ತು ವಿಜ್ಞಾನದಂತಹ ವಿಷಯಗಳಲ್ಲಿ ಅವರು ಹುಡುಗರನ್ನು ಹಿಂದಿಕ್ಕಿದ್ದಾರೆ. ಮೂರನೇ ತರಗತಿಯ ಭಾಷಾ ಪರೀಕ್ಷೆಯಲ್ಲಿ ಹುಡುಗಿಯರ ರಾಷ್ಟ್ರೀಯ ಸರಾಸರಿ ಅಂಕಗಳು 323 ಆಗಿದ್ದರೆ, ಹುಡುಗರದ್ದು 318 ಆಗಿತ್ತು. 10 ನೇ ತರಗತಿ ಇಂಗ್ಲಿಷ್‌ನಲ್ಲಿ ಹುಡುಗಿಯರ ಸರಾಸರಿ ಅಂಕಗಳು 294 ಮತ್ತು ಹುಡುಗರ ಅಂಕಗಳು 288.
ಸಮೀಕ್ಷೆಯ ಪ್ರಕಾರ ಶಾಲೆಗೆ ಹೋಗುವ ಶೇಕಡಾ 18 ರಷ್ಟು ಮಕ್ಕಳ ತಾಯಂದಿರ ಸಾಕ್ಷರತೆ ಅತ್ಯಲ್ಪ. ಶೇಕಡಾ 89ರಷ್ಟು ಮಕ್ಕಳು ಶಾಲೆಯಲ್ಲಿ ಕಲಿಸುವ ಪಠ್ಯಕ್ರಮವನ್ನು ತಮ್ಮ ಪೋಷಕರೊಂದಿಗೆ ಹಂಚಿಕೊಳ್ಳುತ್ತಾರೆ. ಅದೇ ಸಮಯದಲ್ಲಿ ಶೇಕಡಾ 78 ಪ್ರತಿಶತ ಮಕ್ಕಳು, ಶಾಲೆ ಭಾಷೆಯನ್ನೇ ಮನೆಯಲ್ಲೂ ಬಳಸ್ತಾರೆ. 

ಮಕ್ಕಳ ಜೊತೆ ಈ ರೀತಿ ನಡೆದುಕೊಂಡ್ರೆ ಮಾನಸಿಕವಾಗಿ ಕುಗ್ಗಿ ಹೋಗ್ತಾರೆ !

ಸಮೀಕ್ಷೆಯ ಪ್ರಕಾರ, ದೇಶದಲ್ಲಿ ಶೇಕಡಾ 48 ರಷ್ಟು ಮಕ್ಕಳು ಕಾಲ್ನಡಿಗೆಯಲ್ಲಿ ಶಾಲೆಗೆ ಹೋಗುತ್ತಾರೆ. ಅದೇ ಸಮಯದಲ್ಲಿ, ಶೇಕಡಾ 18 ರಷ್ಟು ಮಕ್ಕಳು ಸೈಕಲ್ ಮೂಲಕ ಶಾಲೆಗೆ ಹೋಗುತ್ತಾರೆ. ಶೇಕಡಾ 9ರಷ್ಟು ಮಕ್ಕಳು ಸಾರ್ವಜನಿಕ ಸಾರಿಗೆಯಲ್ಲಿ ಮತ್ತು ಶೇಕಡಾ 9 ರಷ್ಟು ಮಕ್ಕಳು ಕಾರಿನಲ್ಲಿ ಹಾಗೂ ಶೇಕಡಾ 8 ರಷ್ಟು ಮಕ್ಕಳು ದ್ವಿಚಕ್ರ ವಾಹನದಿಂದ ಶಾಲೆಗೆ ಹೋಗುತ್ತಾರೆ ಎಂಬುದನ್ನೂ ಸಮೀಕ್ಷೆಯಲ್ಲಿ ಹೇಳಲಾಗಿದೆ.
 

click me!