
ಇವತ್ತಿನ ಸಮಾಜ (Society)ದಲ್ಲಿ ಅನೈತಿಕತೆ ಎಂಬುದು ಅಚ್ಚರಿಪಡುವ ವಿಷಯವಾಗಿ ಉಳಿದಿಲ್ಲ. ಎಲ್ಲರೂ ಇದನ್ನು ಸಾಮಾನ್ಯವಾಗಿ ಕಾಣುತ್ತಿದ್ದಾರೆ. ಮೊದಲ್ಲೆಲ್ಲಾ ಸಂಬಂಧ (Relatioship)ಗಳಿಗೆ ಅತಿ ಹೆಚ್ಚು ಮೌಲ್ಯವಿತ್ತು. ಆದರೆ ಇವತ್ತಿನ ದಿನಗಳಲ್ಲಿ ಯಾವ ಸಂಬಂಧವೂ ನಿಜವಾದ ಅರ್ಥವನ್ನು ಉಳಿಸಿಕೊಂಡಿಲ್ಲ. ಎಕ್ಸ್‌ಟ್ರಾ ಮೆರಿಟಲ್ ಅಫೇರ್ ((Extra Marital Affair) ಅಂತೂ ಸಾಮಾನ್ಯವಾಗಿ ಹೋಗಿದೆ. ಗಂಡ (Husband) ಸುಳ್ಳು ಹೇಳುತ್ತಲೇ ಹೆಂಡತಿ (Wife)ಯನ್ನೂ ಅತ್ತ ಇನ್ನೊಬ್ಬ ಮಹಿಳೆಯನ್ನೂ ಸುಲಭವಾಗಿ ಯಾಮಾರಿಸುತ್ತಿರುತ್ತಾನೆ. ವಿವಾಹಿತ ಪುರುಷನೊಂದಿಗೆ ಸಂಬಂಧವನ್ನು ಇಟ್ಟುಕೊಂಡಿರುವ ಮಹಿಳೆಯರು, ವಿವಾಹಿತ ಪುರುಷರು ಹೇಳುವ ಕೆಲವು ಮಾತುಗಳನ್ನು ನಂಬಿ ಅವರೊಂದಿಗೆ ಸಂಬಂಧ ಇಟ್ಟುಕೊಳ್ಳುತ್ತಾರೆ. ಅವು ಯಾವುವು ?
ಏಕ್ತಾ ಕಪೂರ್ ಅವರ ಲಾಕ್ ಅಪ್ ರಿಯಾಲಿಟಿ ಷೋನಲ್ಲಿ ವಿವಾಹಿತ ಪುರುಷರು ಇತರ ಮಹಿಳೆಯೊಂದಿಗೆ ಇರುವಾಗ ಹೇಳುವ ಸುಳ್ಳುಗಳ ಬಗ್ಗೆ ಕಾರ್ಯಕ್ರಮದ ಹೋಸ್ಟ್ ಕಂಗನಾ ರಣಾವತ್ (Kangana Ranaut ) ಪ್ರಸ್ತಾಪಿಸಿದ್ದಾರೆ. ವಿವಾಹಿತ ಪುರುಷರ ಈ ಸುಳ್ಳುಗಳು ಮಹಿಳೆಯರಲ್ಲಿ ಸಂದಿಗ್ಧತೆಗೆ, ಅನುಕಂಪ ಮೂಡಿಸುವುದಕ್ಕೆ, ವಿವಾಹಿತ ಪುರುಷನ ಮೇಲೂ ಪ್ರೀತಿ ಮೂಡುವುದಕ್ಕೆ ಕಾರಣವಾಗುತ್ತದೆ ಎಂದವರು ಹೇಳಿದ್ದಾರೆ. ಕಂಗನಾ ರಣಾವತ್ ಹೇಳಿದಂತೆ ವಿವಾಹಿತ ಪುರುಷರು ಹೇಳುವ ಆ ಸುಳ್ಳುಗಳು ಯಾವುವೆಲ್ಲಾ ?
Relationship Tips: ಈ ಕಾರಣಕ್ಕೆ ಪತಿಗೆ ವಿಚ್ಛೇದನ ನೀಡ್ತಾಳೆ ಪತ್ನಿ
ನಾನು ಅವಳನ್ನು ಮದುವೆಯಾಗುವಂತೆ ಒತ್ತಾಯಿಸಲಾಯಿತು
ವಿವಾಹಿತ ಪುರುಷರು ಅನುಕಂಪ ಗಿಟ್ಟಿಸಿಕೊಳ್ಳಲು ಈ ಟೆಕ್ನಿಕ್ ಯೂಸ್ ಮಾಡುತ್ತಾರೆ. ನಮ್ಮದು ಒತ್ತಾಯದ ಮದುವೆಯಾಗಿತ್ತೆಂದು ಹೇಳಿಕೊಳ್ಳುತ್ತಾರೆ. ತಮ್ಮನ್ನು ಬಲಿಪಶುಗಳಂತೆ ಕಾಣುವಂತೆ ಮಾಡಲು ಮತ್ತು ನಿಮ್ಮ ಸಹಾನುಭೂತಿಯನ್ನು ಪಡೆಯಲು ಈ ರೀತಿಯ ಮಾತುಗಳನ್ನಾಡುತ್ತಾರೆ. ಮತ್ತೆ ನಾನು ಎಂದಿಗೂ ನನ್ನ ಹೆಂಡತಿಯಂಥಳನ್ನು ಪತ್ನಿಯಾಗಿ ಪಡೆಯಲು ಬಯಸಿರಲ್ಲಿಲ್ಲ ಎಂದು ದೂಷಿಸುತ್ತಾರೆ. ಅದೇ ಹುಡುಗಿಯನ್ನು ಮದುವೆಯಾಗಲು ಹೆತ್ತವರು ಒತ್ತಾಯಿಸಿದರು. ಆದರೆ ನಾನು ನಿನ್ನಂಥಾ ಹುಡುಗಿಯನ್ನು ಮದುವೆಯಾಗಲು ಬಯಸಿದ್ದೆ ಎನ್ನುತ್ತಾರೆ.
ನೀವು ಮಾತ್ರ ನನ್ನನ್ನು ಅರ್ಥಮಾಡಿಕೊಂಡಿದ್ದೀರಿ
ನೀವು ಇನ್ನೊಬ್ಬ ಮಹಿಳೆಯಾಗಿದ್ದರೆ, ಹೆಂಡತಿಗೆ ಮೋಸ ಮಾಡುವ ವಿವಾಹಿತ ಪುರುಷನು ಯಾವಾಗಲೂ ಈ ಮಾತನ್ನು ಹೇಳುತ್ತಾನೆ. ಇದು ಭಾವನಾತ್ಮಕವಾಗಿ ವಶಪಡಿಸಿಕೊಳ್ಳುವ ವಿಧಾನವಾಗಿದೆ. ನೀವು ಮಾತ್ರ ಅವನನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೀರಿ . ಹೆಂಡತಿಗೆ ನನ್ನ ಮನಸ್ಸು ಅರ್ಥವೇ ಆಗುವುದಿಲ್ಲ ಎಂಬಂಥಾ ಮಾತುಗಳನ್ನಾಡುತ್ತಾನೆ. ನಿಮ್ಮ ಗುಣಗಳನ್ನು ಹೊಗಳುತ್ತಾ ನಿಮ್ಮ ಮನಸ್ಸನ್ನು ತನ್ನತ್ತ ತಿರುಗಿಸಿಕೊಳ್ಳುವ ಯತ್ನವಿದು.
ಗಂಡ-ಹೆಂಡ್ತಿ ಮಧ್ಯೆ ಜಗಳ ಆಗೋದು ಇದೇ ಕಾರಣಕ್ಕೆ ! ನೀವೂ ಹೀಗೆ ಮಾಡ್ತಿದ್ದೀರಾ ನೋಡ್ಕೊಳ್ಳಿ
ಅವಳಿಗೂ ಅಫೇರ್ ಇದೆ
ನಾನೇನು ತಪ್ಪು ಮಾಡುತ್ತಿಲ್ಲ ಎಂಬುದನ್ನು ಸಮರ್ಥಿಸಲು ಹೆಚ್ಚಿನ ಪುರುಷರು ಇದೇ ಮಾತು ಹೇಳುತ್ತಾರೆ. ಹೆಂಡ್ತಿಗೆ ಮದುವೆಗೆ ಮೊದಲೇ ಅಫೇರ್ ಇತ್ತು. ಈಗಲೂ ಹಲವು ಹುಡುಗರೊಂದಿಗೆ ಸಂಪರ್ಕವಿದೆ ಎನ್ನುತ್ತಾರೆ. ಈ ಮೂಲಕ ನಾನು ಮಾತ್ರ ತಪ್ಪು ಮಾಡುತ್ತಿಲ್ಲ. ನಾನು ಮಾಡುತ್ತಿರುವುದು ತಪ್ಪೇ ಅಲ್ಲ ಎಂಬುದನ್ನು ಅಫೇರ್ ಇಟ್ಟುಕೊಂಡ ಮಹಿಳೆಗೆ ಮನದಟ್ಟು ಮಾಡಿಸಲು ಯತ್ನಿಸುತ್ತಾನೆ.
ಅವಳು ನನ್ನನ್ನು ಭಾವನಾತ್ಮಕವಾಗಿ ನಿಂದಿಸುತ್ತಾಳೆ
ಪುರುಷರು ತಮ್ಮ ಹೆಂಡತಿಯನ್ನು ಅತ್ಯಂತ ಕೆಟ್ಟ ವ್ಯಕ್ತಿಯಂತೆ ಬಿಂಬಿಸಲು ಯತ್ನಿಸುತ್ತಾರೆ. ತಮ್ಮ ಹೆಂಡತಿಯು ಭಾವನಾತ್ಮಕವಾಗಿ ನಿಂದಿಸುತ್ತಾರೆ ಎಂಬುದು ಇತರ ಮಹಿಳೆಗೂ ನೋವುಂಟು ಮಾಡುವ ವಿಚಾರವಾಗಿರುತ್ತದೆ.
ಮಕ್ಕಳ ಕಾರಣದಿಂದ ನಾನು ಅವಳನ್ನು ಬಿಡಲಾರೆ
ಮಕ್ಕಳ ಉಪಸ್ಥಿತಿಯನ್ನು ಅವರ ಅನುಕೂಲಕ್ಕೆ ಬಳಸುವುದು ತುಂಬಾ ಸಾಮಾನ್ಯವಾಗಿದೆ. ಮೋಸಗಾರನು ತನ್ನ ದಾಂಪತ್ಯದಲ್ಲಿ ತಾನು ಅತೃಪ್ತನಾಗಿದ್ದೇನೆ ಎಂದು ಹೇಳುವ ಸಾಧ್ಯತೆಯಿದೆ. ಆದರೆ ಮಕ್ಕಳ ಕಾರಣದಿಂದಾಗಿ ಅವನು ಅವಳನ್ನು ಬಿಡಲು ಸಾಧ್ಯವಿಲ್ಲ ಎನ್ನುವ ಮೂಲಕ ಅನುಕಂಪ ಗಿಟ್ಟಿಸಲು ಯತ್ನಿಸಬಹುದು.
ಕೆಲವು ಸಂದರ್ಭಗಳು ನಿಜವಾಗಿರುವ ಸಾಧ್ಯತೆಯೂ ಇದೆ. ಹೀಗಾಗಿ ಏನನ್ನಾದರೂ ಮಾಡುವ ಮುನ್ನ ನೀವು ಏನು ಮಾಡುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಇದು ಬಹಳ ವ್ಯಕ್ತಿನಿಷ್ಠ ಚರ್ಚೆ ಆದ್ದರಿಂದ ನಾವು ಯಾರ ಪರವಾಗಿಯೂ ತೆಗೆದುಕೊಳ್ಳುತ್ತಿಲ್ಲ. ಯಾವುದೇ ಕಠಿಣ ಕ್ರಮವನ್ನು ತೆಗೆದುಕೊಳ್ಳುವ ಮೊದಲು ದಯವಿಟ್ಟು ತರ್ಕಬದ್ಧವಾಗಿ ಯೋಚಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.