Relationship Tips: ನೀವು ಹೀಗಿದ್ದರೆ ಗಂಡ ಬೇರೆ ಹೆಣ್ಣನ್ನುಕಣ್ಣೆತ್ತಿ ಸಹ ನೋಡಲ್ಲ !

By Suvarna News  |  First Published Mar 11, 2022, 12:48 PM IST

ಅದೇ ಮನೆ, ಅದೇ ಕಾರು, ಅದೇ ಹೆಂಡ್ತಿ. ಲೈಫ್‌ (Life) ಬೋರ್ ಆಗೋಕೆ ಇಷ್ಟೇ ಸಾಕು ಅನ್ನೋದು ಹೆಚ್ಚಿನ ಪುರುಷರ ಮೆಂಟಾಲಿಟಿ. ಹಾಗಾಗಿಯೇ ಹಳೆ ಹೆಂಡ್ತಿ (Wife) ಮುಖ ನೋಡಿ ಬೇಜಾರಾಯ್ತು ಅಂತ ಕಂಡವರ ಸೆರಗಿನ ಹಿಂದೆ ಓಡೋರಿದ್ದಾರೆ. ಹಾಗಿದ್ರೆ ಗಂಡ ಬೇರೆ ಹೆಣ್ಣನ್ನು ನೋಡ್ಬಾರ್ದು ಅಂದ್ರೆ ಹೆಂಡ್ತಿ ಏನ್ಮಾಡ್ಬೋದು ?


ಇವತ್ತಿನ ಕಾಲದಲ್ಲಿ ಎಲ್ಲಾ ರೀತಿಯ ವಸ್ತುಗಳಿಗೂ ಆಯುಷ್ಯ ಕಡಿಮೆ. ಮೊದ ಮೊದಲು ಚೆನ್ನಾಗಿ ಕಂಡಿದ್ದೆಲ್ಲಾ ಮತ್ತೆ ಮತ್ತೆ ಹಿಂಸೆಯೆನಿಸತೊಡಗುತ್ತದೆ. ಹಾಗೆಯೇ ಸಂಬಂಧ (Relationship)ಗಳು ಸಹ ಅತಿ ಬೇಗನೆ ಎಕ್ಸ್‌ಪಯರಿ ಆಗಿ ಬಿಡುತ್ತೇವೆ. ಮೊದ ಮೊದಲು ಚೆನ್ನಾಗಿ ಕಂಡಿದ್ದೆಲ್ಲಾ ಮತ್ತೆ ಮತ್ತೆ ಹಿಂಸೆಯೆನಿಸತೊಡಗುತ್ತದೆ. ಸಂಬಂಧಗಳ ವಿಷಯದಲ್ಲೂ ಇದೇ ಆಗುತ್ತದೆ. ಆರಂಭದಲ್ಲಿ ಚೆನ್ನಾಗಿರುವ ಪ್ರೀತಿ ಮತ್ತೆ ಮತ್ತೆ ಬೋರೆನಿಸಲು ಶುರುವಾಗುತ್ತದೆ. ಪ್ರೀತಿಸಿ ಮದುವೆಯಾದವರು ಸಹ ಮತ್ತೊಬ್ಬರ ಸೆರಗಿನ ಹಿಂದೆ ಓಡುತ್ತಾರೆ. ಏಳೇಳು ಜನ್ಮಕ್ಕೂ ನೀನೆ ನನ್ನ ಗಂಡ (Husband) ಎಂದವರು ಸಹ ಪರಪುರುಷನ ತೆಕ್ಕೆಗೆ ಜಾರುತ್ತಾರೆ.

ಕೆಲವರ ಪ್ರೀತಿಗೆ ಹೆಚ್ಚು ವ್ಯಾಲಿಡಿಟಿ ಇಲ್ಲ. ಕೆಲವೇ ದಿನಗಳು, ಕೆಲವೇ ತಿಂಗಳು ಹೀಗೆ ಬೇಗನೆ ಪ್ರೀತಿ ಛಾರ್ಮ್ ಕಳೆದುಕೊಂಡು ಬಿಡುತ್ತದೆ. ಹೊಸ ಪ್ರೀತಿಗಾಗಿ ಹಾತೊರೆಯುವಂತೆ ಮಾಡುತ್ತದೆ. ಗಂಡಸರೇನೋ ಇಂಥಾ ಸಮಸ್ಯೆಗಳ್ನು ಈಝಿಯಾಗಿ ತೆಗೆದುಕೊಂಡು ಬಿಡುತ್ತಾರೆ. ಮಹಿಳೆ (Women) ಯರು ಮಾತ್ರ ಖಿನ್ನತೆ, ಒತ್ತಡದಿಂದ ಬಳಲುವಂತಾಗುತ್ತದೆ. ಗಂಡ ಯಾವಾಗ ನೋಡಿದ್ರೂ ಹುಡುಗೀರ ಗುಂಪಲ್ಲಿ ಇರ್ತಾರೆ, ಹಲ್ಲು ಕಿಸಿದುಕೊಂಡು ಲಲ್ಲೆ ಹೊಡಿತಿರ್ತಾರೆ ಅನ್ನೋ ಕಂಪ್ಲೇಂಟಾ ? ನಾವು ಕೆಲವೊಂದು ಸೀಕ್ರೆಟ್ಸ್‌ ಟಿಪ್ಸ್ ಹೇಳ್ತೀವಿ. ಹೀಗೆ ಮಾಡಿದ್ರೆ ಗಂಡ ಮತ್ತೆ ಬೇರೆ ಹಣ್ಣನ್ನು ಕಣ್ಣೆತ್ತಿ ಸಹ ನೋಡಲ್ಲ.

Tap to resize

Latest Videos

Relationship Doubts: ಆ ಹುಡುಗಿ ಬಗ್ಗೆ ಮಾತಾಡುವಾಗ ಪತಿಯ ಮುಖ ಹೊಳಪೇರುತ್ತದೆ!

ಗಂಡ ಬೇರೆ ಹುಡುಗಿಯ ಹಿಂದೆ ಬಿದ್ದರೆ ಸಮಸ್ಯೆಯು ನಿಜವಾಗಿಯೂ ನಿಮ್ಮಲ್ಲಿ ಅಥವಾ ನಿಮ್ಮ ಪುರುಷನಲ್ಲಿಲ್ಲ. ಏಕೆಂದರೆ ಪುರುಷರು ಜೀವನದ ಪೂರ್ಣ, ಸ್ವಾಭಾವಿಕ ಮತ್ತು ಉತ್ತೇಜಕ ಗುಣಲಕ್ಷಣಗಳನ್ನು ಹೊಂದಿರುವ ಕೆಲವು ರೀತಿಯ ಮಹಿಳೆಯರತ್ತ ಆಕರ್ಷಿತರಾಗುತ್ತಾರೆ. ನಿಷ್ಪ್ರಯೋಜಕ ವಿಷಯಗಳ ಬಗ್ಗೆ ಅಥವಾ ಯಾವುದೇ ಸಂಬಂಧವಿಲ್ಲದ ವಿಷಯಗಳ ಬಗ್ಗೆ ಮಾತನಾಡುವ ನೀರಸ ವ್ಯಕ್ತಿಯನ್ನು ಯಾರೂ ಇಷ್ಟಪಡುವುದಿಲ್ಲ. ಹೀಗಾಗಿ ನಿಮ್ಮ ವ್ಯಕ್ತಿತ್ವ (Personality) ಯಾವತ್ತೂ ಆಕರ್ಷಕವಾಗಿರಲಿ.

ಸ್ಫೂರ್ತಿ ನೀಡುವ ಮಹಿಳೆಯರು
ಜೀವನದಲ್ಲಿ ನಿರಂತರ ಪ್ರೇರಣೆ ಪ್ರತಿಯೊಬ್ಬ ವ್ಯಕ್ತಿಯೂ ಬಯಸುವ ವಿಷಯ. ಯಾವುದೇ ಕೆಲಸ ಮಾಡುವಾಗಲೂ ಬೆನ್ನು ತಟ್ಟಿ ಪ್ರೋತ್ಸಾಹಿಸುವವರು ಜತೆಗಿರಬೇಕೆಂದೇ ಪ್ರತಿಯೊಬ್ಬರು ಬಯಸುತ್ತಾರೆ. ಅದೇ ರೀತಿ ತಮ್ಮನ್ನು ಬೆಂಬಲಿಸುವ ಗರ್ಲ್‌ಫ್ರೆಂಡ್ ಅಥವಾ ಪತ್ನಿಯ ಜತೆಯಿರಲು ಇಷ್ಟಪಡುತ್ತಾರೆ. ತಮ್ಮ ಸಾಮರ್ಥ್ಯವನ್ನು ಏನೆಂದು ನೆನಪಿಸಿ, ಸಾಧನೆ ಮಾಡುವ ವ್ಯಕ್ತಿಯನ್ನು ಎಂದಿಗೂ ಬಿಡುವುದಿಲ್ಲ.

ಗುಂಪಿನಲ್ಲಿ ಚುರುಕಿನಿಂದ ಮಾತನಾಡುವ ಸ್ವಭಾವ
ಪ್ರತಿಯೊಬ್ಬರ ಗಮನವನ್ನು ಸೆಳೆಯುವ ಸಂಭಾಷಣೆಯನ್ನು ತಮ್ಮ ಮಹಿಳೆ ಮಾಡಿದಾಗ ಪುರುಷರು ಅದನ್ನು ಪ್ರೀತಿಸುತ್ತಾರೆ. ತಮ್ಮ ಬಗ್ಗೆ ಮಾತ್ರ ಮಾತನಾಡುವ ನಾಟಕೀಯ, ಸ್ವ-ಕೇಂದ್ರಿತ ವ್ಯಕ್ತಿಯ ಸುತ್ತಲೂ ಇರಲು ಯಾರೂ ಇಷ್ಟಪಡುವುದಿಲ್ಲ. ಪುರುಷರು ಖಂಡಿತವಾಗಿಯೂ ತಮ್ಮ ಮಹಿಳೆಯರು ಬೌದ್ಧಿಕ, ಆಧ್ಯಾತ್ಮಿಕ ಅಥವಾ ಇತರ ಲೌಕಿಕ ವಿಷಯಗಳ ಬಗ್ಗೆ ಮಾತನಾಡಲು ಸಾಧ್ಯವಾಗುತ್ತದೆ ಎಂದು ಬಯಸುತ್ತಾರೆ.

ಪತಿಯ ಚಿಂತೆಗೆ ಕಾರಣವಾಯ್ತು ಪತ್ನಿಯ ದಿರಿಸು!

ಸ್ನೇಹಿತರನ್ನು ಚೆನ್ನಾಗಿ ನಡೆಸಿಕೊಳ್ಳಿ
ಪುರುಷರು ಖಂಡಿತವಾಗಿಯೂ ಇದನ್ನು ಪ್ರಮುಖ ಅಂಶವೆಂದು ಪರಿಗಣಿಸುತ್ತಾರೆ. ತಮ್ಮ ಸ್ನೇಹಿತರು ಇಷ್ಟಪಡದ ಮಹಿಳೆಯರೊಂದಿಗೆ ಇರಲು ಅವರು ಖಂಡಿತವಾಗಿಯೂ ಹಿಂಜರಿಯುತ್ತಾರೆ. ಮತ್ತು ಅವರ ಸ್ನೇಹಿತರು ನಿಜವಾಗಿಯೂ ತಮ್ಮ ಸಂಗಾತಿಯನ್ನು ಇಷ್ಟಪಟ್ಟರೆ, ಪುರುಷರು ಸಂತೋಷವಾಗಿರುತ್ತಾರೆ. ಅವರು ತಮ್ಮ ಸ್ನೇಹಿತರೊಂದಿಗೆ ಸುಲಭವಾಗಿ ಬೆರೆಯುವ ಮಹಿಳೆಯೊಂದಿಗೆ ಇರಲು ಬಯಸುತ್ತಾರೆ.

ಆರ್ಥಿಕ ಸ್ಥಿರತೆಯ ಬಗ್ಗೆ ಯೋಚಿಸುವವರು
ಜೀವನದಲ್ಲಿ ಪ್ರತಿಯೊಬ್ಬರೂ ಆರ್ಥಿಕ ಸ್ಥಿರತೆಗಾಗಿ ನಿರಂತರವಾಗಿ ಪ್ರಯತ್ನಿಸುತ್ತಲೇ ಇರುತ್ತಾರೆ. ಇಂಥಾ ಪರಿಸ್ಥಿತಿಯಲ್ಲಿ ಮಹಿಳೆಯರು ಸಹ ಸಾಥ್ ನೀಡುವುದು ಅವರಿಗೆ ಇಷ್ಟವಾಗುತ್ತದೆ. ಮಹಿಳೆಯರು ಹಣಕಾಸಿನ ವಿಷಯಗಳ ಬಗ್ಗೆ ತುಂಬಾ ಸುಲಭವಾಗಿ ಮತ್ತು ಸೊಗಸಾಗಿ ಚರ್ಚಿಸಿದಾಗ ಅವರು ಖುಷಿ ಪಡುತ್ತಾರೆ. ಮತ್ತು ಯಾವುದೇ ಸಮಸ್ಯೆಯನ್ನು ಶಾಂತವಾಗಿ ಪರಿಹರಿಸಬಲ್ಲ ಪಾಲುದಾರರನ್ನು ತಮ್ಮ ಪಕ್ಕದಲ್ಲಿ ಹೊಂದಲು ಯಾರು ತಾನೇ ಬಯಸುವುದಿಲ್ಲ.

click me!