ಎರಡು ವರ್ಷದ ಈ ಪುಟ್ಟ ಬಾಲೆಗೆ ಆನೆಯೇ ಬೆಸ್ಟ್ ಫ್ರೆಂಡ್..!

Suvarna News   | Asianet News
Published : Aug 14, 2020, 06:34 PM ISTUpdated : Aug 14, 2020, 06:57 PM IST
ಎರಡು ವರ್ಷದ ಈ ಪುಟ್ಟ ಬಾಲೆಗೆ ಆನೆಯೇ ಬೆಸ್ಟ್ ಫ್ರೆಂಡ್..!

ಸಾರಾಂಶ

ಕೇರಳದ ಅದೇ ಪುಟ್ಟ ಹುಡುಗಿ ಆನೆ ಮೇಲೆ ಕೂತು ಸವಾರಿ ಮಾಡೋದು, ಆನೆಗೆ ಆಹಾರ ಹೊಡೋದು, ಆನೆ ಆಕೆಯ ಪುಟ್ಟ ಕೈ ತನ್ನ ಸೊಂಡಿಲಿಗೆ ಬರುವಾಗ ತಾಳ್ಮೆಯಿಂದ ಕಾಯೋದೆಲ್ಲ ವಿಡಿಯೋ ಮೂಲಕ ವೈರಲ್ ಆಗಿದೆ. 2 ವರ್ಷದ ಬಾಲೆಗೆ ಆನೆಯೇ ಬೆಸ್ಟ್ ಫ್ರೆಂಡ್

ಇನ್ನೂ ಸರಿಯಾಗಿ ನಡೆಯಲೂ ಕಲಿಯದ ಪುಟ್ಟ ಬಾಲಕಿಯೊಬ್ಬಳು ಹರಿಯುತ್ತಿರೋ ನೀರಲ್ಲಿ ಮುಂದೆ ನಡೆಯುತ್ತಿದ್ದರೆ, ಅವಳನ್ನು ದೊಡ್ಡ ಆನೆಯೊಂದು ಹಿಂಬಾಲಿಸುತ್ತಿದ್ದ ವಿಡಿಯೋ ವೈರಲ್ ಆಗಿತ್ತು.

ಅದೇನೂ ಉಕ್ಕಿ ಹರಿಯುವ ಹೊಳೆಯಲ್ಲ, ಹಿತವಾಗಿ ನಿಧಾನವಾಗಿ ಮನೆಯ ಪಕ್ಕದಲ್ಲೇ ಪಾದವಷ್ಟೇ ನೆನೆಯುವಷ್ಟು ಸಣ್ಣಗೆ ಹರಿಯುವ ತೊರೆ. ಅರೆ ಯಾರಾದ್ರೂ ಪುಟ್ಟ ಮಗುವನ್ನು ಈ ರೀತಿ ಆನೆ ಹತ್ರ ಬಿಡ್ತಾರಾ ಎಂದು ಅಚ್ಚರಿಯಾಗುವಂತಿದೆ ವಿಡಿಯೋ. 

ಕೊಡಲಿಯಿಂದ ಕಾರಿನ ಕನ್ನಡಿ ಒಡೆದು ನಾಯಿ ರಕ್ಷಿಸಿದ..!

ಇದೀಗ ಕೇರಳದ ಅದೇ ಪುಟ್ಟ ಹುಡುಗಿ ಆನೆ ಮೇಲೆ ಕೂತು ಸವಾರಿ ಮಾಡೋದು, ಆನೆಗೆ ಆಹಾರ ಹೊಡೋದು, ಆನೆ ಆಕೆಯ ಪುಟ್ಟ ಕೈ ತನ್ನ ಸೊಂಡಿಲಿಗೆ ಬರುವಾಗ ತಾಳ್ಮೆಯಿಂದ ಕಾಯೋದೆಲ್ಲ ವಿಡಿಯೋ ಮೂಲಕ ವೈರಲ್ ಆಗಿದೆ.

ಮೊಟ್ಟೆ ಒಡೆದು ಗಿಣಿಮರಿಯ ಹೊರತೆಗೆದು ತುತ್ತು ಕೊಟ್ಟು ಸಾಕಿದ..! ವಿಡಿಯೋ ವೈರಲ್

ಟ್ವೀಟರ್, ಫೇಸ್‌ಬುಕ್‌ ಇನ್‌ಸ್ಟಾಗಳಲ್ಲಿ ಈ ವಿಡಿಯೋ ಭಾರೀ ಮೆಚ್ಚುಗೆ ಪಡೆದಿದೆ. ವೃದ್ಧ ಹೆಣ್ಣಾನೆ ಮತ್ತು ಪುಟ್ಟ ಹುಡಗಿಯ ಪ್ರೆಂಡ್‌ಶಿಪ್‌ಗೆ ಭೇಷ್ ಅಂದಿದ್ದಾರೆ ನೆಟ್ಟಿಗರು.ಅನಿತ್ ಘೋಷ್ ಎಂಬರು ವಿಡಿಯೋ ಶೇರ್ ಮಾಡಿದ್ದು, ಭಾರತದ ದಕ್ಷಿಣ ರಾಜ್ಯ ಕೇರಳದ ಈ ಪುಟ್ಟ ಹುಡುಗಿಗೆ ಆನೆಯೇ ಬೆಸ್ಟ್ ಫ್ರೆಂಡ್ ಎಂದು ಬರೆದಿದ್ದಾರೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ಲೋ ಅರ್ಜುನ, ನಿಂಗೆ ಹಾರ್ಟ್​ ಸರ್ಜನ್​ ಸರ್ಟಿಫಿಕೇಟ್​ ಕೊಟ್ಟವರು ಯಾರು?' Karna Serial ಫ್ಯಾನ್ಸ್​ ಆಕ್ರೋಶ
ಯಾರೂ ಊಹಿಸದ ಸ್ಥಳದಲ್ಲಿ ನಟಿ Sanjana Burli ಹನಿಮೂನ್​: ಸ್ಥಳ ರಿವೀಲ್ ಮಾಡಲ್ಲ ಎಂದಿದ್ದು ಇದಕ್ಕೇನಾ