ಗಂಡ ಹಿಂಗೆಲ್ಲಾ ಮಾಡಿದರೆ ಹೆಂಡತಿ ಸಹಿಸೋದು ಕಷ್ಟ..

By Suvarna NewsFirst Published Aug 13, 2020, 3:57 PM IST
Highlights

ಮಹಿಳೆ ತನ್ನ ಪತಿಯ ಬಗ್ಗೆ ಹೇಟ್ ಮಾಡೋ ಸಾಮಾನ್ಯ ಸಂಗತಿಗಳಿವು. ತಮ್ಮ ಪತಿಯ ಇಂತಹ ಸ್ವಭಾವ ಮಾತ್ರ ಹೆಂಡತಿಗೆ ಚೂರೂ ಇಷ್ಟವಾಗಲ್ಲ. ಏನವು..? ಇಲ್ಲಿ ಓದಿ

ಮಹಿಳೆ ತನ್ನ ಪತಿಯ ಬಗ್ಗೆ ಹೇಟ್ ಮಾಡೋ ಸಾಮಾನ್ಯ ಸಂಗತಿಗಳಿವು. ತಮ್ಮ ಪತಿಯ ಇಂತಹ ಸ್ವಭಾವ ಮಾತ್ರ ಹೆಂಡತಿಗೆ ಚೂರೂ ಇಷ್ಟವಾಗಲ್ಲ. ವೈವಾಹಿಕ ಜೀವನ ಚೆನ್ನಾಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಇದು ಆಸೆ ಅಷ್ಟೇ. ನಿಜ ಬದುಕಿನಲ್ಲಿ ಬಹಳಷ್ಟು ಏರಿಳಿತಗಳಿರುತ್ತವೆ. ದಂಪತಿ ಪರಸ್ಪರ ಕೆಲವೊಂದು ವಿಚಾರಗಳನ್ನು ಸ್ವಲ್ಪವೂ ಇಷ್ಟ ಪಡುವುದಿಲ್ಲ.

ತಮ್ಮ ಪತಿಯ ಕೆಲವೊಂದು ಅಭ್ಯಾಸಗಳು ಮಾತ್ರ ಪತ್ನಿಯರಿಗೆ ಭಾರೀ ಕಿರಿ ಮಾಡುತ್ತವೆ. ಈ ಬಗ್ಗೆ ಕೆಲವೊಂದು ವಿವಾಹಿತ ಮಹಿಳೆಯರು ಬೇರೆ ಬೇರೆ ಅಭಿಪ್ರಯಾ ಕೊಡುತ್ತಾರೆ.

#Feelfree: ನನ್‌ ಗಂಡ ಪ್ಯಾಂಟಿ ಕದೀತಾರೆ..!

ಮನೆಯನ್ನು ಬೇಕಾಬಿಟ್ಟಿಯಾಗಿಟ್ಟುಕೊಳ್ಳುವುದು: ಪ್ರತಿ ದಿನ ಆಪೀಸ್‌ನಿಂದ ಪತಿ ಮನೆಗೆ ಬಂದಾಗ ತಮ್ಮ ವಸ್ತುಗಳನ್ನು ಬೇಕೆಂದಲ್ಲಿ ಬೇಕಾಬಿಟ್ಟಿಯಾಗಿ ಎಸೆಯುತ್ತಾರೆ. ಕನಿಷ್ಢ ತಮ್ಮ ವಸ್ತುಗಳನ್ನು ದಿನವೂ ಒಂದೇ ಸ್ಥಳದಲ್ಲಿಡಬೇಕೆಂಬುದರ ಬಗ್ಗೆಯೂ ತಲೆಕೆಡಿಸಿಕೊಳ್ಳುವುದಿಲ್ಲ. ಟವೆಲ್ ಚೇರ್ ಮೇಲೆ ಬಿದ್ದುಕೊಂಡಿದ್ದರೆ, ಶೂಸ್ ಶೂ ರಾಕ್‌ನಲ್ಲಂತೂ ಕೂರುವುದೇ ಇಲ್ಲ. ಟೋಟಲಿ ಎಲ್ಲವನ್ನೂ ಮೆಸ್ ಅಪ್ ಮಾಡುವ ಸ್ವಭಾವ ಮಾತ್ರ ಪತ್ನಿಯರಿಗೆ ಹಿಡಿಸುವುದೇ ಇಲ್ಲವಂತೆ.

ಬಾಯ್‌ಫ್ರೆಂಡ್‌ಗೆ ಕೇಶವಿನ್ಯಾಸ ಮಾಡಿ ನೆಟ್ಟಿಗರ ಮನ ಗೆದ್ದ ಹೀದಿ!

ಉಗುರು ಕಚ್ಚುವುದು: ಗಂಡ ಉಗುರು ಕಚ್ಚುವುದು ಮಾತ್ರ ಹೆಂಡತಿ ಸಹಿಸುವುದಿಲ್ಲವಂತೆ. ಟಿವಿ ನೋಡುವಾಗಲೋ, ಇನ್ನೇನೋ ಮಾಡುವಾಗ ಜೋರಾಗಿ ಉಗುರು ಕಚ್ಚುವುದನ್ನು ಪತ್ನಿ ಹೇಟ್ ಮಾಡ್ತಾಳೆ. ಎಷ್ಟು ಸಾರಿ ಹೆಳಿದರೂ ಈ ಸ್ವಭಾಗ ಗಂಡಸರು ಬದಲಾಯಿಸಲ್ಲ. ಇನ್ನು ಅತಿಥಿಗಳು ಬಂದಾಗಲಂತೂ ಈ ಸ್ವಭಾವ ಅತೀವ ಮುಜುಗರ ತಂದಿಡುತ್ತದೆ.

ಕೆಲಸಗಳಲ್ಲಿ ಕೈ ಜೋಡಿಸದಿರುವುದು: ಮಹಿಳೆಯರು ಮನೆಯ ಜವಾಬ್ದಾರಿ ತೆಗೆದುಕೊಳ್ಳಬೇಕೆಂಬ ಅಲಿಖಿತ ನಿಯಮವನ್ನು ಗಟ್ಟಿ ಹಿಡಿದು ಕೂರುತ್ತಾರೆ ಗಂಡಸರು. ಮನೆಯಲ್ಲೇ ಇದ್ದರೂ ಸ್ವಲ್ಪವೂ ಸಹಾಯ ಮಾಡದಿರುವುದು ಪತ್ನಿಯರಿಗೆ ಇಷ್ಟವಾಗುವುದಿಲ್ಲ. ಎಲ್ಲದರಲ್ಲೂ ಸಮಾನತೆ ಎನ್ನುವವರು ಮನೆಗೆಲಸದಲ್ಲಿ ಸ್ವಲ್ಪ ಸಹಾಯ ಮಾಡದಿರುವುದರ ಬಗ್ಗೆ ಪತ್ನಿಯರ ಆರೋಪವಿದೆ.

ವಿಜಯ್ ಮಲ್ಯನ ಮೂರನೇ ಪ್ರೀತಿ ಪಿಂಕಿ ಲಾಲ್ವಾನಿ

ಕೇಳುವ ತಾಳ್ಮೆ ಇಲ್ಲ: ಪತಿ ಮಾತನಾಡುವಾ ಪತ್ನಿ ಕೇಳುತ್ತಾಳೆ, ಸ್ವಲ್ಪ ಸಲಹೆ ಕೊಡುತ್ತಾಳೆ. ಆದರೆ ಪತ್ನಿ ಮಾತನಾಡಿದರೆ ಗಂಡ ಕ್ಯಾರೇ ಎನ್ನುವುದಿಲ್ಲ. ತಾವು ಮಾತನಾಡುವದೆಲ್ಲವನ್ನೂ ಮಗಿಸಿ, ಪತ್ನಿ ಮಾತ ಕೇಳದ ಗಂಡಸರ ಸ್ವಭಾವ ಮಾತ್ರ ಪತ್ನಿಯರು ಹೇಟ್ ಮಾಡ್ತಾರೆ. ಏನಾದರೂ ಮಾತನಾಡಿದರೆ ಮಧ್ಯೆ ನಿಲ್ಲಿಸಿ ಮಾತು ಮುಗಿಸ್ತಾರೆ ಎನ್ನೋದು ಪತ್ನಿಯರ ಅಳಲು

ಅಡುಗೆ ಮನೆ ರದ್ದಾಂತ: ಅಪರೂಪಕ್ಕೊಮ್ಮೆ ಅಡುಗೆ ಮಾಡ್ತೀನಿ ಅಂದಾಗ ಕೇಳೋಕೇನೋ ಚೆನ್ನಾಗಿರುತ್ತೆ. ಆದರೆ ಆಮೇಲೆ ಅಡುಗೆ ಮನೆ ಸ್ಥಿತಿ ನೋಡಿದ್ರೆ ಪತ್ನಿಯರಿಗೆ ಕೋಪ ಬರುತ್ತಂತೆ. ಸ್ವಚ್ಛವಾಗಿ ನೀಟಾಗಿದ್ದ ಅಡುಗೆ ಮನೆಯಲ್ಲಿ ಗದ್ದಲವೇ ಆಗಿರುತ್ತೆ. ಇದನ್ನು ಪತ್ನಿ ಇಷ್ಟಪಡುವುದಿಲ್ಲ.

click me!