ರಾಂಗ್ ನಂಬರ್‌ನಿಂದ ಮಹಿಳೆಯರ ಸಲಿಂಗಿ ಪ್ರೀತಿ ಶುರು: ಪತಿ ಬಿಟ್ಟು ಪರಾರಿಯಾದ ಬೆನ್ನಲ್ಲೇ ಟ್ವಿಸ್ಟ್!

By Chethan Kumar  |  First Published Aug 13, 2024, 5:41 PM IST

ರಾಂಗ್ ನಂಬರ್‌ನಿಂದ ಇಬ್ಬರ ಮಹಿಳೆಯರ ನಡುವೆ ಸಲಿಂಗ ಪ್ರೀತಿ ಶುರುವಾಗಿದೆ. ಬರೋಬ್ಬರಿ 7 ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಮಹಿಳೆಯರ ಪ್ರೀತಿ ರೊಮ್ಯಾನ್ಸ್‌ನತ್ತ ತಿರುಗಿತ್ತು. ಗಟ್ಟಿ ನಿರ್ಧಾರ ಮಾಡಿದ ಇಬ್ಬರು ಮಹಿಳೆಯರು ಜೊತೆಯಾಗಿ ಜೀವನ ಸಾಗಿಸಲು ಪರಾರಿಯಾದ ಬೆನ್ನಲ್ಲೇ ಮತ್ತೊಂದು ಟ್ವಿಸ್ಟ್ ಎದುರಾಗಿದೆ.


ಪಾಟ್ನಾ(ಆ.13) ಇಬ್ಬರು ಮಹಿಳೆಯರಿಗೆ ಪರಸ್ಪರ ಪರಿಚಯವೇ ಇರಲಿಲ್ಲ. ಆದರೆ ರಾಂಗ್ ನಂಬರ್ ಇವರಿಬ್ಬರನ್ನು ಕನೆಕ್ಟ್ ಮಾಡಿದೆ. ಇವರ ಸಂಪರ್ಕ ಇಷ್ಟಕ್ಕೆ ಅಂತ್ಯವಾಗಿಲ್ಲ. ರಾಂಗ್ ನಂಬರ್ ಸಂಪರ್ಕ ಆತ್ಮೀಯವಾಗಿದೆ. ಪರಿಚಯ ಸಲಿಂಗ ಪ್ರೀತಿಯಾಗಿ ಗಾಢವಾಗಿದೆ. ವಿಶೇಷ ಅಂದರೆ ಈ ಇಬ್ಬರು ಮಹಿಳೆಯರಿಗೆ ಮದುವೆಯಾಗಿ ಮಕ್ಕಳಿದೆ. ಸಂಸಾರ ಸುಖವಾಗಿ ಸಾಗುತ್ತಿರುವಾಗಲೇ ಇಬ್ಬರ ಸಲಿಂಗ ಪ್ರೀತಿ ರೊಮ್ಯಾನ್ಸ್‌ನತ್ತ ಜಾರಿದೆ. ಪತಿ, ಮಕ್ಕಳ ಬಿಟ್ಟು ಇಬ್ಬರು ಸದ್ದಿಲ್ಲದೆ ಪರಾರಿಯಾಗಿದ್ದಾರೆ. ಆದರೆ ಪೊಲೀಸರು ಇಬ್ಬರು ಮಹಿಳೆಯರನ್ನು ಪತ್ತೆ ಹಚ್ಚಿ ವಾಪಸ್ ಕರೆದುಕೊಂಡು ಅವರವರ ಕುಟುಂಬಕ್ಕೆ ಒಪ್ಪಿಸಿದ ಘಟನೆ ಬಿಹಾರದ ಜಮುಯಿ ಜಿಲ್ಲೆಯಲ್ಲಿ ನಡೆದಿದೆ.

ಕೋಮಲ್ ಕುಮಾರಿ ಹಾಗೂ ಸೋನಿ ಕುಮಾರಿ ಇಬ್ಬರೂ ಬೇರೆ ಬೇರೆ ಜಿಲ್ಲೆಯವರು. 2020ರಲ್ಲಿ ಮದುವೆಯಾಗಿರುವ ಸೋನಿ ಚಾಪ್ರಾ ಜಿಲ್ಲೆಯಲ್ಲಿ ವಾಸವಿದ್ದಾರೆ. ಇತ್ತ ಕೋಮಲ್ ಕುಮಾರಿ ಜಮುಯಿ ಜಿಲ್ಲೆಯ ಲಖಾಪುರಿ ಗ್ರಾಮದವರು. ಇಬ್ಬರಿಗೂ ಮದುವೆಯಾಗಿ ಮಕ್ಕಳಿದ್ದಾರೆ. ಹೀಗಿರುವಾಗ ಒಂದು ದಿನ ರಾಂಗ್ ನಂಬರ್ ಫೋನ್ ಕರೆಯಿಂದ ಇಬ್ಬರು ಸಂಪರ್ಕಕ್ಕೆ ಸಿಕ್ಕಿದ್ದಾರೆ. ಪರಸ್ಪರ ಮಾತನಾಡಿ ಫೋನ್ ಕಟ್ ಮಾಡಿದ್ದಾರೆ.

Tap to resize

Latest Videos

undefined

ಬಿಹಾರದಲ್ಲೊಂದು ಸಲಿಂಗಿ ವಿವಾಹ: ಗಂಡನ ಬಿಟ್ಟು ಸೊಸೆಯ ಮದ್ವೆಯಾದ ಅತ್ತೆ

ಫೋನ್ ಕಟ್ ಮಾಡಿದ ಬಳಿಕ ಇಬ್ಬರಲ್ಲು ಚಡಪಡಿಕೆ ಶುರುವಾಗಿದೆ. ಮತ್ತಷ್ಟು ಮಾತನಾಡಬೇಕು ಎನಿಸಿದೆ. ಹೀಗಾಗಿ ಪ್ರತಿ ದಿನ ಫೋನ್ ಮಾಡಲು ಶುರುಮಾಡಿದ್ದಾರೆ. ಮಹಿಳೆಯರಿಬ್ಬರ ಫೋನ್ ಕಾಲ್ ಕುರಿತು ಗಂಡಂದಿರು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಆದರೆ ಇವರ ಮಾತುಕತೆ ಸಲಿಂಗ ಪ್ರೀತಿಯಾಗಿ ತಿರುಗಿದೆ. ಪ್ರೀತಿ ಆಳವಾಗಿದೆ. ಬಳಿಕ ಪರಸ್ಪರ ಭೇಟಿಯಾಗಲು ನಿರ್ಧರಿಸಿದ್ದಾರೆ. ಒಂದು ದಿನ ಭೇಟಿಯಲ್ಲಿ ಪ್ರೀತಿ ರೊಮ್ಯಾನ್ಸ್‌ಗೆ ತಿರುಗಿದೆ. ಇಲ್ಲಿಗೆ ಇವರ ಸಲಿಂಗ ಪ್ರೀತಿಗೆ ರೊಮ್ಯಾಟಿಕ್ ಬಂಧನವೂ ಅಂಟಿಕೊಂಡಿತ್ತು.

ಇದು ಒಂದಲ್ಲ ಎರಡಲ್ಲ, ಬರೋಬ್ಬರಿ 7 ವರ್ಷ ಹೀಗೆ ಸಾಗಿದೆ. ಇದರ ನಡುವೆ ಇಬ್ಬರು ಜೊತೆಯಾಗಿ ಜೀವನ ಸಾಗಿಸಲು ನಿರ್ಧರಿಸಿದ್ದಾರೆ. ಪತಿ, ಮಕ್ಕಳು, ಕುಟುಂಬಕ್ಕೆ ತಿಳಿಸದೆ ಸದ್ದಿಲ್ಲದೆ ಪರಾರಿಯಾಗಲು ನಿರ್ಧರಿಸಿದ್ದಾರೆ. ಇದಕ್ಕಾಗಿ ತಯಾರಿ ಮಾಡಿಕೊಂಡಿದ್ದಾರೆ. ಬೇರೊಂದು ಪಟ್ಟಣಕ್ಕೆ ತೆರಳಿ ಜೀವನ ಸಾಗಿಸಲು ಎಲ್ಲಾ ತಯಾರಿ ಮಾಡಿದ್ದಾರೆ. ಇದು ಕೋಮಲ್ ಕುಮಾರಿ ಪತಿಗೆ ತಿಳಿದಿದೆ. ಈ ಕುರಿತು ಕೋಮಲ್ ಕುಮಾರಿಗೆ ಎಚ್ಚರಿಕೆ ನೀಡಿದ್ದಾರೆ. 

ಇದರ ನಡುವೆ ಕೋಮಲ್ ಕುಮಾರಿ ಹಾಗೂ ಸೋನಿ ಕುಮಾರ್ ರಾತ್ರೋರಾತ್ರಿ ಪರಾರಿಯಾಗಿದ್ದಾರೆ. ಪತಿ ಮಕ್ಕಳು ಕುಟುಂಬವನ್ನು ತೊರೆದು ಎಸ್ಕೇಪ್ ಆದ ಕೋಮಲ್ ಹಾಗೂ ಸೋನಿ ವಿರುದ್ಧ ಕೋಮಲ್ ಪತಿ ದೂರು ದಾಖಲಿಸಿದ್ದಾರೆ. ಇಷ್ಟೇ ಅಲ್ಲ ಇವರ ಪ್ಲಾನ್, ಪರಾರಿಯಾಗಿರುವ ಸ್ಥಳ ಎಲ್ಲ ಮಾಹಿತಿ ನೀಡಿದ್ದಾರೆ. ಹೀಗಾಗಿ ಪೊಲೀಸರು ದಾಳಿ ಮಾಡಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಇಬ್ಬರನ್ನೂ ಅವರವರ ಕುಟುಂಬಸ್ಥರ ವಶಕ್ಕೆ ನೀಡಿದ್ದಾರೆ.

ಫಸ್ಟ್ ನೈಟ್ ದಿನ ಸೆಕ್ಸ್ ಬದಲು ಶಾಕ್ ನೀಡಿದ ಪತಿ! ಹೆಂಡ್ತಿ ತವರಿಗೆ ಹೋಗುವಂತೆ ಮಾಡಿದ್ದೆಂಥ ಈ ಗಂಡ?
 

click me!