ಒಂದೋ ಎರಡೋ ಮಕ್ಕಳಿರುವ ಪುರುಷ ಬೇಕು ಅಂದ್ರೆ ನಾವೇ ಹುಡುಕಿ ಕೊಡಬಹುದು. ಹತ್ತು ಮಕ್ಕಳ ತಂದೆ ಬೇಕು ಅಂದ್ರೆ ಎಲ್ಲಿಂದ ತರೋದು? ಈಗಾಗಲೇ ಎರಡು ಮದುವೆಯಾಗಿರುವ ಈ ಮಹಿಳೆಗೆ ಇಂಥ ವಿಚಿತ್ರ ಆಸೆಯೊಂದಿದೆ. ಅದು ಏಕೆ ಗೊತ್ತಾ?
ದಿನೇ ದಿನೇ ಏರುತ್ತಿರುವ ಅಗತ್ಯ ವಸ್ತುಗಳ ಬೆಲೆ, ಜನಸಂಖ್ಯೆ ಹೆಚ್ಚಳದಿಂದಾಗಿ ಜೀವನ ನಿರ್ವಹಣೆ ಕಷ್ಟವಾಗ್ತಿದೆ. ಮೂರು ಹೊತ್ತಿನ ಊಟಕ್ಕೆ ಪರದಾಡುವವರ ಸಂಖ್ಯೆ ಹೆಚ್ಚಿದೆ. ಭಾರತದಲ್ಲೇ ಕೋಟ್ಯಾಂತರ ಮಕ್ಕಳು ಊಟವಿಲ್ಲದೆ ಪರದಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಜನರು ದೊಡ್ಡ ಕುಟುಂಬ ಪಡೆಯಲು ಮನಸ್ಸು ಮಾಡ್ತಿಲ್ಲ. ಒಂದು ಇಲ್ಲವೇ ಎರಡು ಮಕ್ಕಳ ಕುಟುಂಬ ಸಾಕು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ದೇಶಗಳು ಜನಸಂಖ್ಯೆ ನಿಯಂತ್ರಣಕ್ಕೆ (Population Control) ಕೆಲ ಕಾನೂನುಗಳನ್ನು ಜಾರಿಗೆ ತಂದಿವೆ. ಭಾರತದಂತ ದೇಶದಲ್ಲೇ ಒಟ್ಟು ಕುಟುಂಬ ಈಗ ಸಿಗ್ತಿಲ್ಲ. ಒಂದು ಮನೆಯಲ್ಲಿ ಎರಡು, ಮೂರು ಸದಸ್ಯರಿರುತ್ತಾರೆ. ಆದ್ರೆ ಇದಕ್ಕೆ ಭಿನ್ನವಾದ ಆಲೋಚನೆ ಹೊಂದಿರುವ ಜನರನ್ನು ನೀವು ಪ್ರಪಂಚದಲ್ಲಿ ನೋಡಬಹುದು. ಹೆಣ್ಣು ಮಗುವಿಗಾಗಿ 9 ಗಂಡು ಮಕ್ಕಳನ್ನು ಹೆತ್ತ ಮಹಾತಾಯಿ ಸುದ್ದಿ ವೈರಲ್ ಆಗಿತ್ತು. ಈಗ 12 ಮಕ್ಕಳಿರುವ ತಾಯಿಯ ವಿಚಿತ್ರ ಆಸೆ ಸುದ್ದಿಗೆ ಬಂದಿದೆ. 12 ಮಕ್ಕಳ ತಾಯಿಯಾಗಿರುವ ಮಹಿಳೆ ಮೂರನೇ ಮದುವೆಯಾಗಲು ಮುಂದಾಗಿದ್ದಾಳೆ. ಆದ್ರೆ ಇದಕ್ಕೊಂದು ಕಂಡಿಷನ್ ಹಾಕಿದ್ದಾಳೆ ಮಹಿಳೆ. ಆಕೆ ಮದುವೆಯಾಗುವ ಮೂರನೇ ಪತಿಗೆ 10 ಮಕ್ಕಳಿರಬೇಕಂತೆ. ಈಗಾಗಲೇ ಹತ್ತು ಮಕ್ಕಳನ್ನು ಹೊಂದಿರುವ ಪುರುಷರಿಗೆ ಈ ಮಹಿಳೆ ಮದುವೆಯಾಗುವ ಅವಕಾಶವಿದೆ ನೋಡಿ.
ಅಷ್ಟಕ್ಕೂ ಆ ಮಹಿಳೆ ಯುನೈಟೆಡ್ ಕಿಂಗ್‌ಡಂ (United Kingdom) ನಿವಾಸಿ. ಆಕೆ ಹೆಸರು ವೆರೋನಿಕಾ. ಆಕೆಗೆ 37 ವರ್ಷ ವಯಸ್ಸಾಗಿದೆ. ಎರಡನೇ ಪತಿಯಿಂದ ದೂರವಾಗಿರುವ ವೆರೋನಿಕಾ (Veronica) ಈಗ ಮೂರನೇ ಪತಿ (Husband) ಹುಡುಕಾಟ ನಡೆಸಿದ್ದಾಳೆ. ನಾನು ಮದುವೆಯಾಗಲಿರುವ ಮೂರನೇ ಪತಿಗೆ ಹತ್ತು ಮಕ್ಕಳು ಇರಲೇಬೇಕು ಎನ್ನುತ್ತಾಳೆ ವೆರೋನಿಕಾ.
ವೆರೋನಿಕಾ 14ನೇ ವರ್ಷದಲ್ಲಿರುವಾಗ ಮೊದಲ ಬಾರಿ ತಾಯಿ ಆಗಿದ್ದಳಂತೆ. ಆ ನಂತ್ರ 12 ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಆಕೆ ಮಕ್ಕಳ ಹೆಸರು ವಿಕ್ಟೋರಿಯಾ, ಆಂಡ್ರ್ಯೂ, ಆಡಮ್, ಮಾರಾ, ಡ್ಯಾಶ್, ಡಾರ್ಲಾ, ಮಾರ್ವೆಲಸ್, ಮಾರ್ಥಾಲ್ಯ, ಅಮೆಲಿಯಾ, ಡೆಲಿಲಾ, ಡೊನೊವನ್ ಮತ್ತು ಮೋದಿ.
ಬಾಲಕಿಯಾಗಿದ್ದಾಗಲೇ ಗೆಳೆಯನಿಂದ ಬಸುರಾಗಿದ್ದ ನಟಿ ಶಕೀಲಾ ದೊಡ್ಡ ದೊಡ್ಡ ಸ್ಟಾರ್ಗಳನ್ನೇ ನಡುಗಿಸಿದ್ದು ಹೇಗೆ?
ವೆರೋನಿಕಾಗೆ ದೊಡ್ಡ ಕುಟುಬವೆಂದ್ರೆ ಇಷ್ಟ. ಆಕೆ ಇನ್ನೂ ಒಂದಿಷ್ಟು ಮಕ್ಕಳನ್ನು ಹೆರಲು ಬಯಸಿದ್ದಾಳೆ. ತನ್ನ ಮಕ್ಕಳ ಬಗ್ಗೆ ಆಲೋಚನೆ ಮಾಡಿದ್ರೆ ಉತ್ಸುಕಳಾಗುವ ವೆರೋನಿಕಾ, ಹೆಚ್ಚು ಮಕ್ಕಳಿರುವ ಪುರುಷರನ್ನು ನೋಡಿದ್ರೆ ಆಕರ್ಷಿತಳಾಗುತ್ತಾಳಂತೆ. ಈಗ ಹತ್ತು ಮಕ್ಕಳಿರುವ ಪುರುಷ ನನಗೆ ಬೇಕು ಎನ್ನುವ ವೆರೋನಿಕಾ, ಆತನನ್ನು ಮದುವೆಯಾದ್ರೆ ಒಂದೇ ಬಾರಿ 22 ಮಕ್ಕಳ ತಾಯಿಯಾಗಬಹುದು ಎನ್ನುತ್ತಾಳೆ. 2022ರಲ್ಲಿಯೇ ವೆರೋನಿಕಾ ತನ್ನ ಎರಡನೇ ಪತಿಯಿಂದ ಬೇರೆಯಾಗಿದ್ದಾಳೆ. ಅಲ್ಲಿಂದ ಮೂರನೇ ಪತಿ ಹುಡುಕಾಟ ನಡೆಯುತ್ತಿದೆ. ಆಕೆ 10 ಮಕ್ಕಳ ತಂದೆಯನ್ನು ಹುಡುಕುತ್ತಿರುವ ಕಾರಣ, ಆಕೆಗೆ ಮೂರನೇ ಪತಿ ಬೇಗ ಸಿಗುತ್ತಿಲ್ಲ.
ನಿಮ್ಮ ಕೈಯಲ್ಲಿ ಈ ರೇಖೆ ಇದ್ಯಾ? ಇದ್ದರೆ ಡಿವೋರ್ಸ್ ಆಗೋದು ಗ್ಯಾರಂಟಿ!
ವೆರೋನಿಕಾಗೆ ಯಾಕೆ 22 ಮಕ್ಕಳು ಬೇಕು? : 22 ಮಕ್ಕಳನ್ನು ಹೊಂದಿರುವ ರಾಡ್‌ಫೋರ್ಡ್ಸ್‌ನಂತಹ ಕುಟುಂಬಗಳ ಬಗ್ಗೆ ಕೇಳಿದಾಗ ವೆರೋನಿಕಾ ಅಸೂಯೆಪಡುತ್ತಾಳೆ. ಅವರಂತೆ ತನಗೂ ಹೆಚ್ಚು ಮಕ್ಕಳು ಬೇಕು ಎಂಬ ಆಸೆ ವೆರೋನಿಕಾಳದ್ದು. ಈಗ 10 ಮಕ್ಕಳನ್ನು ಹೆಸರು ವೆರೋನಿಕಾಗೆ ಸಾಧ್ಯವಿಲ್ಲ. ಹಾಗಾಗಿ 10 ಮಕ್ಕಳನ್ನು ಹೊಂದಿರುವ ಪುರುಷನನ್ನು ಮದುವೆಯಾಗಲು ಹುಡುಕುತ್ತಿದ್ದಾಳೆ. ಮೂರನೇ ಮದುವೆಯಾದ್ಮೇಲೆ ತನ್ನ ಮಕ್ಕಳಾಗಿ ಬರುವ 10 ಮಕ್ಕಳ ಹೆಸರು ಬಣ್ಣಗಳು, ಸಂಖ್ಯೆಗಳು ಅಥವಾ ಯಾವುದೇ ಅನುಕ್ರಮ ಪದಗಳನ್ನು ಆಧರಿಸಿದ್ದರೆ ಮತ್ತಷ್ಟು ಖುಷಿ ಎನ್ನುತ್ತಾಳೆ ವೆರೋನಿಕಾ. ಮನೆಯಲ್ಲಿ ಮಕ್ಕಳಿದ್ದರೆ ತುಂಬಾ ಸಂತೋಷ ಎನ್ನುವ ವೆರೋನಿಕಾ, ತನ್ನ ಕುಟುಂಬ ಯಾವಾಗ ದೊಡ್ಡದಾಗುತ್ತೆ ಎಂದು ಕಾಯುತ್ತಿದ್ದಾಳೆ.